Blog Archive

ಆಳ್ವಾಸ್ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ವತಿಯಿಂದ ಕಂಕಣ ಸೂರ‍್ಯಗ್ರಹಣ ವೀಕ್ಷಣೆ

Thursday, December 26th, 2019
Alvas

ಮೂಡುಬಿದಿರೆ : ಆಳ್ವಾಸ್ ಪದವಿ ಹಾಗೂ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದವತಿಯಿಂದ ಖಗೋಳ ಕೌತುಕದ ಕಂಕಣ ಸೂರ‍್ಯಗ್ರಹಣವನ್ನು ವೀಕ್ಷಿಸಲು ಕಾಲೇಜಿನ ಸ್ನಾತಕೋತ್ತರ ವಿಭಾಗದಲ್ಲಿ ಗುರುವಾರ ವ್ಯವಸ್ಥೆಯನ್ನು ಮಾಡಲಾಗಿತ್ತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಹಲವಾರು ದಶಕಗಳಿಗೊಮ್ಮೆ ನಡೆಯುವ ಬಾಹ್ಯಕಾಶದ ವಿಸ್ಮಯವನ್ನು ವೀಕ್ಷಿಸಿದರು. ಪ್ರೋಜೆಕ್ಟರ್ ಡಿಸ್‌ಪ್ಲೇಯ ಜತೆಯಲ್ಲಿ ಸೋಲಾರ್ ನೆಬ್ಯೂಲರ್ ಕನ್ನಡಕವನ್ನು ಧರಿಸಿ ವೀಕ್ಷಿಸಿದರು. ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಸಂಯೋಜಕ ಡಾ.ಶಶಿಧರ್ ಭಟ್ ವಿದ್ಯಾರ್ಥಿಗಳಿಗೆ ಸೂರ‍್ಯಗ್ರಹಣ ನಡೆಯುವ ಪರಿಯನ್ನು ಹಂತ ಹಂತವಾಗಿ ವಿವರಿಸಿದರು. ಕಾಲೇಜಿನ ಪ್ರಾಚಾರ‍್ಯ […]

ಆಳ್ವಾಸ್ ಚಿಣ್ಣರಲ್ಲಿ ವಾರ್ಷಿಕೋತ್ಸವದ ಸಂಭ್ರಮ

Saturday, December 14th, 2019
alvas

ಮೂಡಬಿದಿರೆ : ಮಕ್ಕಳ ವಿದ್ಯಾಭ್ಯಾಸದ ತಳಹದಿ ಭದ್ರವಾಗಿದ್ದರೆ ಮಾತ್ರ ಅವರ ಉನ್ನತ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಆಳ್ವಾಸ್ ವಿದ್ಯಾಸಂಸ್ಥೆಯ ಮ್ಯಾನೇಜ್‌ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಅಭಿಪ್ರಾಯಪಟ್ಟರು. ಆಳ್ವಾಸ್ ಕಿಂಡರ್‌ಗಾರ್ಡನ್, ಇಂಗ್ಲಿಷ್ ಮಾಧ್ಯಮದ ಪ್ರಾಥಮಿಕ ಮತ್ತು ಕೇಂದ್ರ ಶಾಲೆಯ ವಾರ್ಷಿಕೋತ್ಸವವನ್ನು ಆಳ್ವಾಸ್ ಕಾಲೇಜಿನ ವಿ.ಎಸ್. ಆಚಾರ್ಯ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಒಬ್ಬ ವ್ಯಕ್ತಿ ಉತ್ತಮವಾಗಿ ಬೆಳೆಯಬೇಕೆಂದರೆ ಆತನಿಗೆ ಒಳ್ಳೆಯ ಪ್ರಾರಂಭ ಸಿಗಬೇಕು ಆಗ ಮಾತ್ರ ಆತ ಉನ್ನತ ಸ್ಥಾನಕ್ಕೆ ಏರಲು ಸಾಧ್ಯ. ಪ್ರಾಥಮಿಕ […]

“ಅಲ್ಪಾವಧಿ ತರಬೇತಿ ಕೋರ್ಸಗಳ” ಉದ್ಘಾಟನೆ

Friday, December 6th, 2019
Alvas

ಮೂಡುಬಿದಿರೆ : ಮಂತ್ರಕ್ಕೆ ಉಪಯೋಗಿಸದ ಅಕ್ಷರವಿಲ್ಲ, ಔಷಧಿಗೆ ಉಪಯೋಗಿಸದ ಎಲೆಗಳಿಲ್ಲ. ಹಾಗೆಯೇ ಯಾವುದಕ್ಕೂ ಉಪಯೋಗಕ್ಕೆ ಬಾರದ ವ್ಯಕ್ತಿಯಿಲ್ಲ. ಎಲ್ಲರಲ್ಲೂ ಸ್ತುಪ್ಥ ಪ್ರತಿಭೆ ಅಡಗಿರುತ್ತದೆ, ಅದನ್ನು ಹೊರತೆಯುವಲ್ಲಿ ನಾವು ಕಾರ‍್ಯ ಪ್ರವೃತ್ತರಾಗಬೇಕು ಎಂದು ಆಳ್ವಾಸ್ ಕಾಲೇಜಿನ ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ ಎಂದು ಹೇಳಿದರು. ಆಳ್ವಾಸ್ ಪದವಿ ಕಾಲೇಜಿನಲ್ಲಿ ನಡೆದ ಅಲ್ಪಾವಧಿ ತರಬೇತಿ ಕೋರ್ಸಗಳ ಉದ್ಘಾಟನಾ ಕಾರ‍್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು. ಹವ್ಯಾಸವನ್ನೇ ವೃತ್ತಿಯನ್ನಾಗಿಸಬೇಕು. ಯಾವ ವೃತ್ತಿಯೂ ನಿಕೃಷ್ಟವುವಲ್ಲ ಹಾಗೆಯೆ ಶ್ರೇಷ್ಠವುವಲ್ಲ. ಎಲ್ಲಾ ವೃತ್ತಿಗೂ ತನ್ನದೇ ಆದ ಗೌರವವಿದೆ. […]

ಆಳ್ವಾಸ್ ಬ್ಲಂಡ್ ಬ್ಯಾಂಕ್ ಕಾರ್ಯಾಗಾರ

Saturday, November 23rd, 2019
Alvas

ಮೂಡುಬಿದಿರೆ: ಆಳ್ವಾಸ್ ಹೆಲ್ತ್ ಸೆಂಟರ್‌ನ ಭಾಗವಾಗಿರುವ ಆಳ್ವಾಸ್ ರೋಟರಿ ಬ್ಲಡ್ ಬ್ಯಾಂಕ್‌ನಿಂದ ಒಂದು ದಿನದ ಕಾರ್ಯಾಗಾರವನ್ನು ಆಳ್ವಾಸ್ ಕಾಲೇಜು ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಾಗಾರವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿದ್ದ ಭಾರತೀಯ ವಾಯು ಸೇನೆಯ ಅಧಿಕಾರಿ ರಾಹುಲ್ ಶಿಂಧೆ ರಕ್ತದಾನ ಒಂದು ಉತ್ತಮ ಸಾಮಾಜಿಕ ಸೇವಾ ಕೈಂಕರ್ಯ ಎಂದರು. ಭಾರತದ ಅಂಗಾಂಗ ದಾನ ಸಂಸ್ಥೆ(ಆರ್ಗನ್ ಡೊನೇಶನ್ ಇಂಡಿಯಾ ಫೌಂಡೇಶನ್)ಯ ಅಧ್ಯಕ್ಷ ಲಾಲ್ ಗೊಯೆಲ್ ಮಾತನಾಡಿ, ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದ ಹಂತದಲ್ಲಿಯೇ […]

ಆಳ್ವಾಸ್ ಕಾಲೇಜಿನಲ್ಲಿ ನೂತನ ಒಡಂಬಡಿಕೆಗೆ ಸಹಿ

Tuesday, November 19th, 2019
Alvas

ಮೂಡುಬಿದಿರೆ : ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಹಾಗೂ ಪದವಿ ಕಾಲೇಜಿನ ಕಾಮರ್ಸ್ ಪ್ರೊಫೆಶನಲ್ ವಿಭಾಗಗಳ ನಡುವೆ ನೂತನ ಒಡಂಬಡಿಕೆಗೆ ಸಹಿ ಹಾಕಲಾಯಿತು. ಒಡಂಬಡಿಕೆಯ ಮೂಲ ಉದ್ದೇಶ ಶೈಕ್ಷಣಿಕ ವಿನಿಮಯವಾಗಿದ್ದು, ಇದು ವಿದ್ಯಾರ್ಥಿಗಳ ವೃತ್ತಿ ಜೀವನ ಹಾಗೂ ಕೌಶಲ್ಯಗಳ ಬೆಳವಣಿಗೆ ಸಹಕಾರಿಯಾಗಲಿದೆ. ಒಡಂಬಡಿಕೆಯ ಪ್ರಕಾರ ಕಾಮರ್ಸ್ ವಿದ್ಯಾರ್ಥಿಗಳಿಗೆ ಅಲ್ಪಾವಧಿ ಪತ್ರಿಕೋದ್ಯಮ ಸಂಬಂಧಿತ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಬೇಸಿಕ್ ಅಕೌಟಿಂಗ್‌ನಂತಹ ವಾಣಿಜ್ಯ ಸಂಬಂಧಿತ ಕೋರ್ಸ್‌ಗಳನ್ನು ನೀಡಲಾಗುತ್ತದೆ. ಇದರೊಂದಿಗೆ ವಿದ್ಯಾರ್ಥಿಗಳಿಗೆ ಫೋಟೋಗ್ರಫಿ, ನಿರೂಪಣೆ, ಡಿಜಿಟಲ್ ಮಾರ್ಕೆಟಿಂಗ್‌ಳಂತಹ ವಾರಾಂತ್ಯ […]

ಆಳ್ವಾಸ್‍ನ ವೈಷ್ಣವಿ ಗೋಪಾಲ್‍ಗೆ ರಾಜ್ಯಮಟ್ಟದ ಎನ್‍ಸಿಸಿ ಚಿನ್ನದ ಪದಕ

Monday, November 11th, 2019
Vaishnavi

ಮೂಡುಬಿದಿರೆ : ಎನ್‍ಸಿಸಿ ಜ್ಯೂನಿಯರ್ ಅಂಡರ್ ಆಫೀಸರ್, ಆಳ್ವಾಸ್ ಕಾಲೇಜಿನ ದ್ವಿತೀಯ ಬಿ.ಎ ವಿದ್ಯಾರ್ಥಿನಿ ವೈಷ್ಣವಿ ಗೋಪಾಲ್ ರಾಜ್ಯಮಟ್ಟದ ಉತ್ತಮ ಎನ್‍ಸಿಸಿ ಕೆಡೆಟ್- ಚಿನ್ನದ ಪದಕವನ್ನು ಪಡೆದಿರುತ್ತಾರೆ. ದೆಹಲಿಯಲ್ಲಿ 2020ರ ಗಣರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಆಯ್ಕೆ ಶಿಬಿರದ ಹಿರಿಯ ವಿಭಾಗದಲ್ಲಿ ಬೆಸ್ಟ್ ಕೆಡೆಟ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದಿರುತ್ತಾರೆ. ಮೂಡುಬಿದಿರೆಯಲ್ಲಿ ನಡೆದ ಮೂರು ಹಂತದ ಶಿಬಿರದಲ್ಲಿ ಪ್ರಥಮ ಸ್ಥಾನ ಪಡೆದು, ಬೆಂಗಳೂರಿನ ಆಯ್ಕೆ ಶಿಬಿರಕ್ಕೆ ಆಯ್ಕೆಯಾಗಿದ್ದರು. ಈಕೆ […]

ಸ್ತನಪಾನದ ಅಗತ್ಯತೆಯನ್ನು ಪ್ರತಿಯೊಬ್ಬ ತಾಯಿಯು ಅರ್ಥಮಾಡಿಕೊಳ್ಳಬೇಕು

Wednesday, August 7th, 2019
brest-feeding

ಮೂಡುಬಿದಿರೆ: ಸ್ತನಪಾನ ಮಾಡಿಸುವುದರಿಂದ ತಾಯಿಯು ತನ್ನ ಮಕ್ಕಳನ್ನು ರೋಗಗಳಿಂದ ದೂರವಿಡಬಹುದು ಎಂದು ಆಳ್ವಾಸ್‌ನ ಕಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ|| ರಮೇಶ ಹೇಳಿದರು. ಅವರು ಆಳ್ವಾಸ್ ಆರೋಗ್ಯ ಕೇಂದ್ರದಿಂದ ಆಯೋಜಿಸಿದ್ದ ಸ್ತನಪಾನ ಜಾಗೃತಿ ವಾರ ಕಾರ‍್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸ್ತನಪಾನದ ಅಗತ್ಯತೆಯನ್ನು ಪ್ರತಿಯೊಬ್ಬ ತಾಯಿಯು ಅರ್ಥಮಾಡಿಕೊಳ್ಳಬೇಕು. ಆಗ ಮಗು ಆರೋಗ್ಯವಾಗಿ ಬೆಳೆಯಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಅತಿಥಿ ಕಸೂತಿ ಹಾಗೂ ಸ್ತ್ರೀ ರೋಗ ತಜ್ಞರಾದ ಡಾ|| ರೇವತಿ ಭಟ್ ಮಾತನಾಡಿ, ತಾಯಿಯ ಹಾಲು […]

ಆಳ್ವಾಸ್‌ : 3,000 ಮಂದಿಗೆ ಉಚಿತ ಆಟಿ ಕಷಾಯ ವಿತರಣೆ

Saturday, August 3rd, 2019
Alvas-Kashaya

ಮೂಡುಬಿದಿರೆ: ಆಳ್ವಾಸ್‌ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ದ್ರವ್ಯಗುಣ ವಿಜ್ಞಾನ ಸ್ನಾತಕೋತ್ತರ ವಿಭಾಗದ ವತಿಯಿಂದ ಗುರುವಾರ ಬೆಳಗ್ಗೆ ಸುಮಾರು 3,000 ಮಂದಿಗೆ ಉಚಿತ ಆಟಿ ಕಷಾಯ ವಿತರಿಸಲಾಯಿತು. ಜೋತಿಷಿ ಪುತ್ತಿಗೆ ಸುಧಾಕರ ತಂತ್ರಿ ಸಾಂಕೇತಿಕವಾಗಿ ಔಷಧ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆಗಮಿಸಿ ಸರ್ವರೋಗ ನಿವಾರಕ ಔಷಧೀಯ ಪಾನೀಯ ಸೇವಿಸಿದರು. ಕಾರ್ಯಕ್ರಮದ ಸಂಯೋಜಕ ಹಾಗೂ ಆತ್ಮ (ಆಳ್ವಾಸ್‌ ಟ್ರೆಡಿಶನಲ್ ಮೆಡಿಸಿನ್‌ ಆರ್ಚೀವ್‌)ರಿಸರ್ಚ್‌ ಸೆಂಟರ್‌ನ ನಿರ್ದೇಶಕ ಡಾ| ಸುಬ್ರಮಣ್ಯ ಪದ್ಯಾಣ […]

ಆಳ್ವಾಸ್‌ನಲ್ಲಿ ’ಆಟಿ ಕಷಾಯ” ವಿತರಣೆ

Wednesday, July 31st, 2019
kashaya

ಮೂಡಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ದ್ರವ್ಯಗುಣ ವಿಜ್ಞಾನ ಸ್ನಾತಕೋತ್ತರ ವಿಭಾಗದ ವತಿಯಿಂದ ಪ್ರತಿ ವರ್ಷದಂತೆ ಆಟಿ ಅಮವಾಸ್ಯೆಯ ವಿಶೇಷವಾದ, ಸರ್ವರೋಗ ನಿರೋಧಕ ಪಾರಂಪರಿಕ ದಿವ್ಯೌಷಧ ”ಆಟಿ ಕಷಾಯ” ವಿತರಣಾ ಕಾರ‍್ಯಕ್ರಮವನ್ನು ದಿನಾಂಕ 01-08-2019ನೇ ಗುರುವಾರ ಬೆಳಿಗ್ಗೆ ಘಂಟೆ 08.30ರಿಂದ 11.00ರತನಕ ವಿದ್ಯಾಗಿರಿ ಆಳ್ವಾಸ್ ಆಯುರ್ವೇದ ಆಸ್ಪತ್ರೆಯ ಆವರಣದಲ್ಲಿ ಉಚಿತವಾಗಿ ವಿತರಿಸುವ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಪಕ ವೃಂದ ಹಾಗೂ ವಿದ್ಯಾರ್ಥಿ ವೃಂದ ಪ್ರಕಟಣೆಯಲ್ಲಿ ತಿಳಿಸಿದೆ.

ಆಳ್ವಾಸ್ ’ವಿಕಿ ಕ್ಯಾಂಪ್’ ಉದ್ಘಾಟನೆ

Saturday, June 8th, 2019
wiki

ಮೂಡುಬಿದಿರೆ: ಪ್ರತಿಯೊಬ್ಬರೂ ಸಂಶೋಧನಾ ಮನೋಭಾವವನ್ನು ಬೆಳಸಿಕೊಂಡು, ಆ ಮೂಲಕ ಬರಹಗಳನ್ನು ಜಾಲಕ್ಕೆ ರವಾನಿಸುವುದರಿಂದ ವಿಕಿಪೀಡಿಯಾದಲ್ಲಿ ವಿಷಯಗಳ ಗುಣಮಟ್ಟ ಹೆಚ್ಚಿಸಲು ಸಾಧ್ಯ. ಆದ್ದರಿಂದ ಶಿಕ್ಷಣದೊಂದಿಗೆ ಸಂಶೋಧನಾ ಪ್ರಕ್ರಿಯೆಗಳ ಅರಿವು ವಿದ್ಯಾರ್ಥಿಗಳಲ್ಲಿರಬೇಕು ಎಂದು ಆಳ್ವಾಸ್ ಕಾಲೇಜಿನ ಪ್ರಾಚಾರ‍್ಯ ಡಾ ಕುರಿಯನ್ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ವಿಕಿಪೀಡಿಯಾ ಅಸೋಸಿಯೇಷನ್ ವತಿಯಿಂದ ನಡೆಯಲಿರುವ 7 ದಿನಗಳ ’ವಿಕಿ ಕ್ಯಾಂಪ್ ಹಾಗೂ ಇಂಟರ್ನಶಿಫ್’ ಕಾರ‍್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಕಾರ‍್ಯಕ್ರಮದಲ್ಲಿ 8 ಜನ ವಿಕಿ ಸಾಧಕರಿಗೆ ಬಹುಮಾನ ರೂಪದಲ್ಲಿ ಪುಸ್ತಕವನ್ನು ನೀಡಲಾಯಿತು. ಉದ್ಘಾಟನಾ ಕಾರ‍್ಯಕ್ರಮದ ಬಳಿಕ ಪದವಿ […]