Blog Archive

ಕಾರಂತ ಪ್ರಶಸ್ತಿಗೆ ಲೀಲಾ ಉಪಾಧ್ಯಾಯ ಆಯ್ಕೆ

Thursday, October 6th, 2016
leela-upadyaya

ಮಂಗಳೂರು: ಕಲ್ಕೂರ ಪ್ರತಿಷ್ಠಾನದಿಂದ ವರ್ಷಂಪ್ರತಿ “ಕಾರಂತ ಹುಟ್ಟು ಹಬ್ಬ” ಸಂದರ್ಭದಲ್ಲಿ ನೀಡುವ ಕಾರಂತ ಪ್ರಶಸ್ತಿಗೆ ಈ ಬಾರಿ ಡಾ. ಲೀಲಾ ಉಪಾಧ್ಯಾಯ ಆಯ್ಕೆಯಾಗಿದ್ದಾರೆ. ಅ. 13ರ ಸಂಜೆ ನಗರದ ಡಾನ್ಬಾಸ್ಕೋ ಹಾಲ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಕಾರಂತ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕದ್ರಿ ದೇವಸ್ಥಾನದ ಪ್ರಾಂಗಣದಲ್ಲಿ ಕಲ್ಕೂರ ಪ್ರತಿಷ್ಠಾನದ “ಶ್ರೀ ಕೃಷ್ಣ ವೇಷ ಸ್ಪರ್ಧೆ’

Friday, August 26th, 2016
Shree-Krishna

ಮಂಗಳೂರು : ಕಲ್ಕೂರ ಪ್ರತಿಷ್ಠಾನದ ವತಿಯಿಂದ ಆಯೋಜಿಸುತ್ತಿರುವ ರಾಷ್ಟ್ರ ಮಟ್ಟದ ಮಕ್ಕಳ ಉತ್ಸವ “ಶ್ರೀ ಕೃಷ್ಣ ವೇಷ ಸ್ಪರ್ಧೆ’ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಪ್ರಾಂಗಣದಲ್ಲಿ ಬುಧವಾರ ನಡೆಯಿತು. ಬೆಳಗ್ಗಿನಿಂದ ಸಂಜೆ ವರೆಗೆ ಒಟ್ಟು 8 ವೇದಿಕೆಗಳಲ್ಲಿ 27 ವಿಭಾಗಗಳ ಸ್ಪರ್ಧೆ ಜರಗಿದವು. ರಾಷ್ಟ್ರ ಮಟ್ಟದ ಮಕ್ಕಳ ಉತ್ಸವವನ್ನು ಎ.ಜೆ. ಸಮೂಹ ಸಂಸ್ಥೆಯ ಅಧ್ಯಕ್ಷ ಎ.ಜೆ. ಶೆಟ್ಟಿ ಉದ್ಘಾಟಿಸಿ, ಶುಭ ಕೋರಿದರು. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಧಿಸ್ಥಾನದ ವೇ| ಮೂ| ಲಕ್ಷ್ಮಿನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿದರು. ಕದ್ರಿ […]

ಮಾನವೀಯತೆಗಿಂತ ಜೀವನ ದರ್ಶನ ಬೇರೊಂದಿಲ್ಲ: ರುದ್ರಪ್ಪ ಮಾನಪ್ಪ ಲಮಾಣಿ

Monday, August 22nd, 2016
Badiyadka

ಬದಿಯಡ್ಕ: ಮಾನವೀಯತೆಗಿಂತ ಜೀವನ ದರ್ಶನ ಬೇರೊಂದಿಲ್ಲ.ಲಭ್ಯ ಸಂಪತ್ತನ್ನು ಸ್ವಂತಕ್ಕೆ ಸೀಮಿತವಾಗಿ ಬಳಸಿ,ಪರೋಪಕಾರವಾಗುವಂತೆ ಉಳಿದವುಗಳನ್ನು ಮೀಸಲಿಡುವ ಮನೋಭಾವ ದೈವತ್ವಕ್ಕೇರಿಸುತ್ತದೆಯೆಂದು ಕರ್ನಾಟಕ ಜವಳಿ ಮತ್ತು ಮುಜರಾಯಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಅಭಿಪ್ರಾಯ ವ್ಯಕ್ತಪಡಿಸಿದರು. ಹಿರಿಯ ಗಾಂಧೀವಾದಿ,ದೀನಬಂಧು ಸಾಯಿರಾಂ ಗೋಪಾಲಕೃಷ್ಣ ಭಟ್ ರವರಿಗೆ ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಕೊಡಮಾಡಿದ ಜೀವಮಾನ ಸಾಧನಾ ಪ್ರಶಸ್ತಿಯನ್ನು ಶನಿವಾರ ಸಂಜೆ ಕಿಳಿಂಗಾರಿನಲ್ಲಿ ವಿತರಿಸಿ ಅವರು ಮಾತನಾಡುತ್ತಿದ್ದರು. ಸಾಯಿರಾಂ ಗೋಪಾಲಕೃಷ್ಣ ಭಟ್ಟರ ಒಟ್ಟು ಜೀವನ ಮಾದರಿ ವ್ಯಕ್ತಿತ್ವದ ರೂಪಕವಾಗಿದ್ದು ಅಳಿದು ಹೋಗುತ್ತಿರುವ ಮೌಲ್ಯಗಳ ಪುನರುತ್ಥಾನದಲ್ಲಿ ನಕ್ಷತ್ರದಂತೆ […]

ಗಡಿನಾಡ ಕನ್ನಡಿಗರ ಕನ್ನಡ ಸೇವೆಗೆ ಸಾವಿರ ಸಲಾಮ್

Monday, February 15th, 2016
Kayyara Smaramanjali

ಬದಿಯಡ್ಕ: ಕಾಸರಗೋಡು ಕನ್ನಡದ ಗಡಿಭಾಗ. ಇಲ್ಲಿ ಕನ್ನಡದ ಉಳಿವಿಗಾಗಿ, ಬೆಳೆವಿಗಾಗಿ ನಿರಂತರ ಹೋರಾಟದ ಜೀವನವನ್ನೇ ನಡೆಸಿ ಕನ್ನಡದ ಬಾವುಟವನ್ನು ಹಾರಿಸಲು ಶ್ರಮವಹಿಸಿದವರು ಕಯ್ಯಾರ ಕಿಂಞಣ್ಣ ರೈಗಳು. ಇವರು ಕೃಷಿಕರಾಗಿದ್ದುಕೊಂಡೇ ಕನ್ನಡ ತಾಯಿಯ ಸೇವೆ ಮಾಡಿದ್ದು ಗಡಿನಾಡು ಕಾಸರಗೋಡು ಪ್ರದೇಶದಲ್ಲಿರುವುದು ಇಲ್ಲಿಯ ಕನ್ನಡಿಗರಿಗೆ ಹೆಮ್ಮೆ ಮತ್ತು ಕನ್ನಡದ ಬದುಕು ನಡೆಸಲು ಸಾಧ್ಯವಾಗಿದೆ ಎಂದು ಕರ್ನಾಟಕ ಮಾರುಕಟ್ಟೆ ನಿಗಮದ ಅಧ್ಯಕ್ಷ ಎಲ್.ಎನ್.ಮೂರ್ತಿ ಅವರು ಅಭಿಪ್ರಾಯಪಟ್ಟರು. ಇವರು ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಹಾಗೂ ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ […]

ಲೋಕಕಲ್ಯಾಣಾರ್ಥವಾಗಿ ಕದ್ರಿ ಶ್ರೀ ಮಂಜುನಾಥದೇವರಿಗೆ ಸಾಮೂಹಿಕ ಸೀಯಾಳಾಭಿಷೇಕ

Tuesday, June 24th, 2014
siyala abhisheka

ಮಂಗಳೂರು : ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ಆಶ್ರಯದಲ್ಲಿ ಲೋಕಕಲ್ಯಾಣಾರ್ಥವಾಗಿ ಕದ್ರಿ ಶ್ರೀ ಮಂಜುನಾಥದೇವರಿಗೆ ಸಾಮೂಹಿಕ ಸೀಯಾಳಾಭಿಷೇಕವು ದೇವಳದ ಮೊಕ್ತೇಸರ ಶ್ರೀ ಎ.ಜೆ. ಶೆಟ್ಟಿ ಅವರ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ ನಡೆಯಿತು. ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮಹಾಬಲ ಮಾರ್ಲ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಕಾರ್ಪೋರೇಟರ್ಗಳಾದ ಅಶೋಕ್ಡಿ.ಕೆ.,ರೂಪಾ ಡಿ. ಬಂಗೇರ, ಜಿ.ಎಸ್.ಬಿ. ಸಮಾಜದ ವಿನೋದ್ ಶೆಣೈ, ದೇವಳದ ವ್ಯವಸ್ಥಾಪನಾ ಸಮಿತಿಯಸದಸ್ಯರು, ಕದ್ರಿ ವಿಶ್ವನಾಥಆಚಾರ್ಯ, ದಿನೇಶ್ದೇವಾಡಿಗ, ಸಾಮಾಜಿಕ ಮುಖಂಡ ಎಂ.ಬಿ. ಪುರಾಣಿಕ್, ಉದಯವಾಣಿ ಬಳಗದ […]

ಕದ್ರಿ ಶ್ರೀ ಮಂಜುನಾಥ ದೇವಳದಲ್ಲಿ ಕಂಡ ಕೃಷ್ಣ ವೈಭವ

Monday, August 22nd, 2011
Kadri Krishan Vesha Spardhe/ಕೃಷ್ಣ ವೇಷ ಸ್ಪರ್ಧೆ

ಮಂಗಳೂರು : ಕಲ್ಕೂರ ಪ್ರತಿಷ್ಠಾನ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ರವಿವಾರ ಕದ್ರಿ ಶ್ರೀ ಮಂಜುನಾಥ ದೇವಳದ ಪ್ರಾಂಗಣದಲ್ಲಿ ಆಯೋಜಿಸಿದ ಕೃಷ್ಣ ವೇಷ ಸ್ಪರ್ಧೆ-ರಾಷ್ಟ್ರೀಯ ಮಕ್ಕಳ ಉತ್ಸವವನ್ನು ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಜಯರಾಮ ಭಟ್‌ ಹಾಗೂ ಹಿರಿಯ ಗಮಕ ವಿಧ್ವಾಂಸ ಹೊಸಬೆಟ್ಟು ವಾಗೀಶ್‌ ಆಚಾರ್‌ ಉದ್ಘಾಟಿಸಿದರು. ಮಾತೆಯರು ಕಡೆಗೋಲಿನಿಂದ ಮೊಸರು ಕಡೆದು ಬೆಣ್ಣೆ ತೆಗೆಯುವ ಹಾಗೂ ಗೋ ಪೂಜೆ ನೆರವೇರಿಸುವ ಮೂಲಕ ಸಾಂಪ್ರದಾಯಿಕವಾಗಿ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಹಿನ್ನೆಲೆಯಲ್ಲಿ ವಿದ್ವಾನ್‌ ಸತ್ಯವತಿ ಮುಡಂಬಡಿತ್ತಾಯ ಅವರ ಬಳಗ ಹಾಗೂ […]

ಹಿರಿಯ ಸಾಹಿತಿ ಡಾ| ಕೋಟ ಶಿವರಾಮ ಕಾರಂತರ 109ನೇ ಹುಟ್ಟು ಹಬ್ಬ. ಅ 10ಕ್ಕೆ.

Tuesday, October 5th, 2010
ಕೋಟ ಶಿವರಾಮ ಕಾರಂತರ 109ನೇ ಹುಟ್ಟು ಹಬ್ಬ

ಮಂಗಳೂರು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲ್ಕೂರ ಪ್ರತಿಷ್ಠಾನ ಇದರ ಆಶ್ರಯದಲ್ಲಿ ಅ. 10ನೇ ರವಿವಾರ ಮಂಗಳೂರು ಪುರಭವನದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ದಿವಂಗತ ಡಾ| ಕೋಟ ಶಿವರಾಮ ಕಾರಂತ ಅವರ 109 ಹುಟ್ಟು ಹಬ್ಬವನ್ನು ಆಚರಿಸಲಾಗುವುದು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣಪಾಲೇಮಾರ್ ಅ 10ರ ಸಂಜೆ ಐದು ಗಂಟೆಗೆ […]