Blog Archive

ಕೇಂದ್ರ ಸರಕಾರ ಮೂರು ವರ್ಷಗಳ ಸಾಧನೆ ಬಗ್ಗೆ ಸಚಿವ ರಮಾನಾಥ ರೈ ಟೀಕೆ

Saturday, May 27th, 2017
Rai

ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮೂರು ವರ್ಷಗಳಲ್ಲಿ ಯಾವುದೇ ಸಾಧನೆಯನ್ನು ಮಾಡದೇ ಕಳಪೆ ಯೋಜನೆಗಳ  ಮೂಲಕ  ಬಾಯಿ ಬಡಾಯಿ ಸಾಧನೆಯನ್ನು ಮಾತ್ರವೇ ಮಾಡಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಟೀಕಿಸಿದ್ದಾರೆ. ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಯುಪಿಎ ಸರಕಾರ ಜಿಎಸ್‌ಟಿ ಜಾರಿಗೆ ತಂದಾಗ ಅದನ್ನು ವಿರೋಧಿಸಲಾಯಿತು. ಇದೀಗ ನಾವೇ ಅದನ್ನು ಜಾರಿಗೊಳಿಸಿರುವುದಾಗಿ ಎನ್‌ಡಿಎ ಸರಕಾರ ಕೊಚ್ಚಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಧಾರ್ ಬಗ್ಗೆಯೂ ಅಪಸ್ವರ […]

ನೋಟು ಅಮಾನ್ಯಗೊಳಿಸಿದ ಬಳಿಕ ದೇಶದ ಆರ್ಥಿಕ ಸ್ಥಿತಿ ಪ್ರಗತಿಯಾಗಿದೆ – ಮೆಘಾವಲ್

Thursday, May 18th, 2017
meghaval

ಮಂಗಳೂರು : ಕೇಂದ್ರ ಸರಕಾರದ ಕ್ರಾಂತಿಕಾರಿ ಆರ್ಥಿಕ ನೀತಿಯಿಂದ ನೋಟು ಅಮಾನ್ಯಗೊಳಿಸಿದ ಬಳಿಕ ದೇಶದ ಜಿಡಿಪಿಯಲ್ಲಿ ಕುಸಿತವಾಗಲಿದೆ, ಅಭಿವೃದ್ಧಿ ಕುಸಿತವಾಗಲಿದೆ ಎಂಬ ಟೀಕೆಗಳು ಕೆಲವರಿಂದ ಕೇಳಿ ಬಂತು. ಆದರೆ ಅದಕ್ಕೆ ಅಪವಾದ ಎನ್ನುವಂತೆ ದೇಶದ ಆರ್ಥಿಕ ಪ್ರಗತಿ ಸಾಧ್ಯವಾಗಿದೆ, ದೇಶದ ಅಭಿವೃದ್ಧಿ ಸೂಚ್ಯಂಕ ಶೇ.10ಕ್ಕೆ ಏರಿಕೆಯಾಗಲಿದೆ ಎಂದು ಕೇಂದ್ರ ವಿತ್ತ, ಕಾರ್ಪೋ ರೇಟ್ ವ್ಯವಹಾರ ಸಚಿವ ಅರ್ಜುನ್ ರಾಮ್ ಮೆಘಾವಲ್ ತಿಳಿಸಿದ್ದಾರೆ. ಅಡ್ಯಾರಿನ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಬಗ್ಗೆ ದ.ಕ ಜಿಲ್ಲಾ […]

ಕಟೀಲು ದೇವಿಗೆ ಅವಹೇಳನ ಮಾಡಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಶೀಘ್ರ ಕಾರ್ಯಾಚರಣೆ ನಡೆಸಬೇಕು: ಐವನ್‌ ಡಿ’ಸೋಜಾ

Monday, September 12th, 2016
ivan-dsouza

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕಟೀಲು ದೇವಿಗೆ ಅವಹೇಳನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಶೀಘ್ರ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸಬೇಕು ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಹೇಳಿದರು. ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ಆತ ಪ್ರಕರಣದ ಪ್ರಮುಖ ಆರೋಪಿಗಳ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ. ಆದುದರಿಂದ ಪೊಲೀಸ್‌ ಇಲಾಖೆ ಆರೋಪಿಗಳನ್ನು ಬಂಧಿಸುವಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಈ ಬಗ್ಗೆ ನಾನು ಈಗಾಗಲೇ ಮುಖ್ಯಮಂತ್ರಿ […]

ಮಹದಾಯಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ: ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಿಂದ ಪ್ರತಿಭಟನೆ

Thursday, August 4th, 2016
AAP

ಮಂಗಳೂರು: ಮಹದಾಯಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದು, ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮಹದಾಯಿ ನೀರು ಹಂಚಿಕೆ ವಿಚಾರವು ಕರ್ನಾಟಕ ಮತ್ತು ಗೋವಾದ ನಡುವೆ ಉದ್ಭವಿಸಿರುವ ವಿವಾದವಾಗಿರುವುದರಿಂದ ಕೇಂದ್ರ ಸರಕಾರ ಕೂಡಲೇ ಮಧ್ಯಪ್ರವೇಶಿಸಬೇಕೆಂದು ಆಮ್ ಆದ್ಮಿಯ ರಾಜ್ಯ ವಕ್ತಾರೆ ಶಾಂತಲಾ ದಾಮ್ಲೆ ಆಗ್ರಹಿಸಿದರು. ಮಹದಾಯಿ ನೀರನ್ನು ಕರ್ನಾಟಕಕ್ಕೆ ಕೊಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಈ ದಿಸೆಯಲ್ಲಿ ಕರ್ನಾಟಕದ ಎಲ್ಲಾ ಸಂಸದರು ಈ […]

ದೇಶದಲ್ಲಿ ಸಂಭವಿಸುವ ಅಪಘಾತ ಪ್ರಕರಣಗಳನ್ನು ಪರಿಗಣಿಸಿ ಕಠಿಣ ಕಾನೂನು ಕ್ರಮ ಜಾರಿ

Thursday, August 4th, 2016
drink-and-drive

ಹೊಸದಿಲ್ಲಿ: ದೇಶದಲ್ಲಿ ವಾರ್ಷಿಕ ಸಂಭವಿಸುವ 5 ಲಕ್ಷ ಅಪಘಾತ ಪ್ರಕರಣಗಳಲ್ಲಿ 1.5 ಲಕ್ಷ ಜನ ಸಾವನ್ನಪ್ಪುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ, ರಸ್ತೆ ಅಪಘಾತಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಠಿನ ಕಾನೂನುಗಳನ್ನು ಒಳಗೊಂಡ ಮೋಟಾರು ಕಾಯ್ದೆ (ತಿದ್ದುಪಡಿ) ಮಸೂದೆ 2016ಕ್ಕೆ ಬುಧವಾರ ಅನುಮೋದನೆ ನೀಡಿದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರಿಗೆ 10,000 ರೂ. ವರೆಗೆ ದಂಡ, ಹಿಟ್‌ ಆ್ಯಂಡ್‌ ರನ್‌ ಕೇಸಲ್ಲಿ ಸಂತ್ರಸ್ತರಿಗೆ 2 ಲಕ್ಷ ರೂ. ಪರಿಹಾರ, ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರಿಗೆ 10 ಲಕ್ಷ ರೂ. […]

ಕೇಂದ್ರ ಸರಕಾರದ ಬೆಲೆಯೇರಿಕೆ ವಿರುದ್ದ ಕುಂಬಳೆಯಲ್ಲಿ ಕಾಂಗ್ರೆಸ್ಸ್ ಪ್ರತಿಭಟನೆ

Tuesday, January 12th, 2016
congress Protest

ಕುಂಬಳೆ: ನರೇಂದ್ರಮೋದಿಯವರ ನೇತೃತ್ವದ ಕೇಂದ್ರ ಸರಕಾರ ನೀಡಿರುವ ಆಶ್ವಾಸನೆಗಳನನು ಹುಸಿಗೊಳಿಸಿ ಜನದ್ರೋಹ ಕಾರ್ಯತಂತ್ರಗಳನ್ನು ಹೆಣೆದು ಜನ ಸಾಮಾನ್ಯರ ಬದುಕನ್ನು ಹತಾಶೆಗೆ ತಳ್ಳುತ್ತಿದೆಯೆಂದು ಜಿಲ್ಲಾ ಕಾಂಗ್ರೆಸ್ಸ್ ಉಪಾಧ್ಯಕ್ಷ ಹಕೀಂ ಕುನ್ನಿಲ್ ಅಭಿಪ್ರಾಯ ವ್ಯಕ್ತಪಡಿಸಿದರು. ಮಂಡಲ ಕಾಂಗ್ರೆಸ್ಸ್ ನೇತೃತ್ವದಲ್ಲಿ ಕೇಂದ್ರ ಸರಕಾರದ ಬೆಲೆಯೇರಿಕೆ ಕ್ರಮಗಳ ವಿರುದ್ದ ಮಂಗಳವಾರ ಕುಂಬಳೆ ಅಂಚೆ ಕಚೇರಿಗೆ ನಡೆಸಿದ ಪ್ರತಿಭಟನೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮೋದಿ ಜನರನ್ನು ಮರುಳುಗೊಳಿಸುವ ಹೇಳಿಕೆಗಳನ್ನಷ್ಟೇ ನೀಡುತ್ತಿದ್ದಾರೆ. ಕಾರ್ಯಕ್ಷಮತೆಯ ಯಾವುದೇ ಯೋಜನೆಗಳನ್ನು ಜನ ಸಾಮಾನ್ಯರಿಗೆ ನೀಡುವಲ್ಲಿ ವಿಫಲವಾಗಿದೆಯೆಂದು ಅವರು ಟೀಕಿಸಿದರು. ಮಂಡಲ […]

ದಕ್ಷಿಣ ಕನ್ನಡ ಜಿಲ್ಲಾ ಅಭಿವೃದ್ದಿ ಕಾರ್ಯಕ್ರಮಗಳ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

Monday, September 30th, 2013
yettina-hole

ಮಂಗಳೂರು : ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಅಭಿವೃದ್ದಿ ಕಾರ್ಯಕ್ರಮಗಳ ಪರಿಶೀಲನಾ ಸಭೆಯಲ್ಲಿ, ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಚರ್ಚೆ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಆಡಳಿತಕ್ಕೆ ಬಂದಮೇಲೆ ಕಣ್ಣಿಗೆ ಕಾಣುವ ರೀತಿಯಲ್ಲಿ ಬಲಾವಣೆ ನಡೆಯಬೇಕಾಗಿದೆ. ಕಾನೂನು ಸುವ್ಯವಸ್ಥೆ, ಜನರಿಗೆ ನ್ಯಾಯ ಒದಗಿಸುವಂತಹದು ಹಾಗೂ ಇಂತಹ ಹಲವಾರು ಜನಪರ ಕಾರ್ಯಗಳ ಫಲಿತಾಂಶವನ್ನು ಜನಸಾಮಾನ್ಯರಿಗೆ ನೀಡುವಲ್ಲಿ ಡಿಸಿ, ಸಿ‌ಒ, ಹಾಗೂ ಪೊಲೀಸ್ ಅಧಿಕಾರಿಗಳು ಪ್ರಾಮಾಣಿಕವಾಗಿ, ಪರಿಣಾಮಕಾರಿಯಾಗಿ ಕೆಲಸ ಮಾಡಿದರೆ ಜನರ ಸಮಸ್ಯೆ ಪರಿಹಾರ ಮಾಡಲು ಸಾಧ್ಯ ತಿಳಿಸಿದರು. […]

ಉದಾರ ಆರ್ಥಿಕ ನೀತಿಯಿಂದ ಒಳ್ಳೆಯದು ಮಾತ್ರ ಆಗೋದಿಲ್ಲ !

Wednesday, February 13th, 2013
Invest

ಮಂಗಳೂರು : ಕೇಂದ್ರ ಸರಕಾರ ಇತ್ತೀಚಿನ ವರ್ಷಗಳಲ್ಲಿ ಅನುಸರಿಸಿದ ಉದಾರ ಆರ್ಥಿಕ ನೀತಿಗಳಿಂದ ಒಳ್ಳೆಯದೇ ಆಗಿದೆಯೆಂದು ಹೇಳುವಂತಿಲ್ಲ. ಕೆಟ್ಟದ್ದೂ ಆಗಿದೆ. ಕೈಗಾರಿಕೆ ಮತ್ತು ಸೇವಾ ಕ್ಷೇತ್ರವನ್ನು ಸರ್ಕಾರಿ ಏಕಸ್ವಾಮ್ಯದಿಂದ ಬಿಡುಗಡೆ ಗೊಳಿಸಿದ್ದರಿಂದ ಮಾರುಕಟ್ಟೆ ಮುಕ್ತವಾಗಿ ಉದ್ಯಮಕ್ಷೇತ್ರಕ್ಕೆ ಮತ್ತು ಗ್ರಾಹಕರಿಗೆ ಒಳ್ಳೆಯದೇ ಆಯಿತು. ಆದರೆ ಉದಾರವಾದಿ ನೀತಿಯನ್ನು ಜಾರಿಗೆ ತರುವ ಸಂದರ್ಭದಲ್ಲಿ ಸರಕಾರಿ ಸ್ವಾಮ್ಯದ ಉದ್ಯಮ, ಸೇವಾ ಕ್ಷೇತ್ರಗಳು ಖಾಸಗಿ ವಲಯದಿಂದ ಪೈಪೋಟಿ ಎದುರಿಸಲು ಅಗತ್ಯವಾದ ಬದಲಾವಣೆ ತರುವಲ್ಲಿ ಕೇಂದ್ರ ಸರಕಾರ ವಿಫಲವಾದದ್ದರಿಂದ ಅವೆಲ್ಲ ಇಂದು ನಷ್ಟಕ್ಕೆ ಒಳಗಾಗಿ […]

ಕೇಂದ್ರ ಮಾನವ ಸಂಪದ ಸಚಿವ ಪಲ್ಲಂರಾಜು ರವರಿಂದ ಕೇರಳದ ನೂತನ ಕೇಂದ್ರೀಯ ವಿಶ್ವವಿದ್ಯಾನಿಲಯ ಸಮುಚ್ಚಯಕ್ಕೆ ಶಿಲಾನ್ಯಾಸ

Monday, January 7th, 2013
Pallam Raju

ಕಾಸರಗೋಡು : ಕೇಂದ್ರ ಸರ್ಕಾರ ಗುಣಮಟ್ಟದ ಶಿಕ್ಷಣಕ್ಕೆ ವಿಶೇಷ ಆದ್ಯತೆ ಯನ್ನು ನೀಡುತ್ತಿದ್ದು, ಶಿಕ್ಷಣದಲ್ಲಿ ಯುವ ಪೀಳಿಗೆಯ ವಿಶೇಷ ಶಿಕ್ಷಣದ ಅಗತ್ಯತೆಯನ್ನು ಕೇಂದ್ರ ಸರಕಾರ ಮನಗಂಡು ಆದ್ಯತೆಯನ್ನು ನೀಡಲಾಗುತ್ತಿದೆ. ಎಂದು ಜನವರಿ 5 ಶನಿವಾರದಂದು ಕೇಂದ್ರ ಮಾನವ ಸಂಪದ ಸಚಿವರಾದ ಪಲ್ಲಂರಾಜು ಕಾಸರಗೋಡು ಜಿಲ್ಲೆಯ ಪೆರಿಯಾದಲ್ಲಿ ಕೇಂದ್ರೀಯ ವಿಶ್ವವಿದ್ಯಾನಿಲಯ ಕೇರಳದ ನೂತನ ಸಮುಚ್ಚಯಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಸ್ಥಳೀಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುವುದನ್ನು ತಪ್ಪಿಸಲು ಹೆಚ್ಚಿನ ಕಡೆಗಳಲ್ಲಿ ವಿ.ವಿ. ಆರಂಭಿಸಲಾಗುವುದು, ಅದರಲ್ಲೂ ಕಾಸರಗೋಡು ಜಿಲ್ಲೆಯ […]

ಕೇಂದ್ರ ಸರಕಾರದ ಬ್ಯಾಂಕಿಂಗ್ ಕಾನೂನು ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ

Friday, December 21st, 2012
Banking Bill

ಮಂಗಳೂರು :ಗುರುವಾರ ಬಲ್ಮಠದಲ್ಲಿರುವ ಕೆನರಾ ಬ್ಯಾಂಕ್‌ ಎದುರು ಅಖಿಲ ಭಾರತ ಬ್ಯಾಂಕ್ ನೌಕರರರ ಸಂಘ, ಅಖಿಲ ಭಾರತೀಯ ಬ್ಯಾಂಕ್ ಅಧಿಕಾರಿಗಳ ಅಸೋಸಿಯೇಶನ್ ಮತ್ತು ಬ್ಯಾಂಕ್ ನೌಕರರ ಒಕ್ಕೂಟ ಜಂಟಿಯಾಗಿ ಬೃಹತ್ ಪ್ರತಿಭಟನೆ ನಡೆಸಿದರು. ಲೋಕಸಭೆಯಲ್ಲಿ ಮಂಡಿಸಿದ ಬ್ಯಾಂಕಿಂಗ್ ತಿದ್ದುಪಡಿ ವಿಧೇಯಕ, ಬ್ಯಾಂಕ್‌ಗಳ ವಿಲೀನ, ದೊಡ್ಡ ಉದ್ದಿಮೆದಾರರಿಗೆ ಖಾಸಗಿ ಬ್ಯಾಂಕ್ ಸ್ಥಾಪಿಸಲು ಪರವಾನಗಿ ನೀಡುವ ವಿರುದ್ಧ ಈ ಪ್ರತಿಭಟನೆಯನ್ನು ನಡೆಸಲಾಯಿತು. ಈ ಸಂದರ್ಭ ಮಾತನಾಡಿದ ಕರ್ನಾಟಕ ಬ್ಯಾಂಕಿಂಗ್ ನೌಕರರ ಸಂಘದ ಕಾರ್ಯದರ್ಶಿ ಪಿ.ಆರ್.ಕಾರಂತ್ ಮಾತನಾಡಿ, ಬ್ಯಾಂಕಿಂಗ್ ಕಾನೂನು ತಿದ್ದುಪಡಿಯಿಂದ […]