Blog Archive

ಕುಸಿದು ಬಿದ್ದ ಭಟ್ಕಳ ಬಸ್ ನಿಲ್ದಾಣದ ಕಟ್ಟಡ

Monday, July 16th, 2018
bhatkal bus stand

ಭಟ್ಕಳ : ಸುಮಾರು 40  ವರ್ಷಗಳ ಹಳೆಯದಾದ ಭಟ್ಕಳ ಬಸ್ ನಿಲ್ದಾಣದ ಕಟ್ಟಡ ಕುಸಿದು ಬಿದ್ದ ಘಟನೆ ಸೋಮವಾರ ನಡೆದಿದೆ. ಈ ಹಿಂದೆಯೆ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಅಲ್ಲಿನ ಮಳಿಗೆಗಳನ್ನು ಖಾಲಿ ಮಾಡುವಂತೆ ಭಟ್ಕಳ ಬಸ್ ಘಟಕದಿಂದ ಅಂಗಡಿಕಾರರಿಗೆ ನೋಟಿಸ್ ನೀಡಲಾಗಿತ್ತು. ಹಲವು ದಿನಗಳ ಹಿಂದೆ ಅಂಗಡಿಕಾರರು ಅಂಗಡಿಗಳನ್ನು ಖಾಲಿ ಮಾಡಿದ್ದರು . ರವಿವಾರ ಕಟ್ಟಡದ ಗೋಡೆಯೊಂದು ಕುಸಿದಿತ್ತು. ಇದನ್ನು ಕಂಡ ಡಿಪೋ ಮ್ಯಾನೇಜರ್ ಅಲ್ಲಿ ಜನಸಂಚಾರವನ್ನು ನಿಷೇಧಿಸಿದ್ದರು.  ಸದ್ಯ ಕಟ್ಟಡ ಕುಸಿಯುಯುತ್ತಿರುವ ವೀಡಿಯೊ ವೈರಲ್ ಆಗಿದೆ. […]

ಫಲ್ಗುಣಿ ನದಿ : ತಪ್ಪು ಮಾಡಿದವರ ಮೇಲೆ ಎಫ್‌ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ : ತಹಶೀಲ್ದಾರ್

Friday, May 26th, 2017
TP meeting

ಮಂಗಳೂರು  : ಗುರುಪುರದ ಫಲ್ಗುಣಿ ನದಿ ನೀರು ಕಪ್ಪಾಗಿರುವ ಬಗ್ಗೆ ಕಾಲಮಿತಿಯೊಳಗೆ ಸಮರ್ಪಕ ವರದಿ ಸಲ್ಲಿಸುವಂತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಇತರ ಸಂಬಂಧಿತ ಅಧಿಕಾರಿ ಗಳಿಗೆ ಜಿಲ್ಲಾಧಿಕಾರಿ ಇತ್ತೀಚೆಗೆ ಸಭೆ ಕರೆದು ಸೂಚಿಸಿದ್ದಾರೆ. ತಪ್ಪು ಮಾಡಿದವರ ಮೇಲೆ ಎಫ್‌ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಹಶೀಲ್ದಾರ್ ಮಹದೇವಯ್ಯ ಭರವಸೆ ನೀಡಿದ್ದರು. ಫಲ್ಗುಣಿ ನದಿಗೆ ಕಟ್ಟಲಾಗಿರುವ ಮರವೂರು ಡ್ಯಾಂ ನೀರು ಕಲುಷಿತಗೊಳ್ಳಲು ಕಾರಣರಾದವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ […]

ಗರೋಡಿಯ ಮನೆಯೊಂದರಲ್ಲಿ ಅಕ್ರಮವಾಗಿ ಗ್ಯಾಸ್ ತುಂಬುವ ಘಟಕ ಪತ್ತೆ

Friday, July 26th, 2013
Illigal Gas Fill

ಮಂಗಳೂರು: ಗರೋಡಿಯಲ್ಲಿ ಮನೆಯೊಂದಕ್ಕೆ ದಾಳಿ ಮಾಡಿದ ತಹಶೀಲ್ದಾರ್ ಮತ್ತು ಗ್ರಾಮಾಂತರ ಪೊಲೀಸರು, ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ತುಂಬಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ತಾರನಾಥ(50) ಬಂಧಿತ ವ್ಯಕ್ತಿಯಾಗಿದ್ದು ಈತ ಗ್ಯಾಸ್ ಸಿಲಿಂಡರ್ ಗಳನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದ ಎಂದು  ಪೊಲೀಸರು ತಿಳಿಸಿದ್ದಾರೆ. ಆತನ ಮನೆಯಿಂದ 15.6 ಕೆ.ಜಿ.ಯ 16 ಸಿಲಿಂಡರ್ ಮತ್ತು 14.2 ಕೆ.ಜಿಯ 22 ಸಿಲಿಂಡರ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಮೂರು ಎಚ್ ಪಿ ಮೋಟರ್, ತೂಕಯಂತ್ರ ಮತ್ತು ಐದು ಸಿಲಿಂಡರ್ ಗಳನ್ನು ವಶಪಡಿಸಿಕೊಂಡಿದ್ದಾರೆ. […]