ತುಳು ಎಂಟನೇ ಪರಿಚ್ಛೇದಕ್ಕೆ ಸೇರಿದರೆ ಲಾಭ ಕರ್ನಾಟಕಕ್ಕೆ : ಮಲ್ಲಿಕಾರ್ಜುನಯ್ಯ ಸ್ವಾಮಿ ಮಹಾಮನೆ
Wednesday, February 19th, 2020ಮಂಗಳೂರು : ಈಗಾಗಲೇ ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ತುಳುವರು ನಿರಂತರ ಹೋರಾಟ ಮಾಡುತ್ತಾರೆ. ಅವರ ಹೋರಾಟಕ್ಕೆ ಕನ್ನಡಿಗರಾದ ನಾವೆಲ್ಲರೂ ಕೈಜೋಡಿಸಬೇಕು. ಈಗಾಗಲೇ ಕೇರಳ ಸರಕಾರವು ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಪ್ರಯತ್ನ ಪಡುತ್ತಿದೆ. ತುಳು ಕರ್ನಾಟಕದಲ್ಲಿ ಅಧಿಕೃತ ಭಾಷೆಯಾದರೆ ಭಾಷೆಗೆ ಸಿಕ್ಕುವ ಎಲ್ಲಾ ಸವಲತ್ತುಗಳು ಕರ್ನಾಟಕದ ಪಾಲಾಗುತ್ತದೆ. ಈ ಭಾಷೆಗೆ ಸಿಕ್ಕುವ ಆರ್ಥಿಕ ಬೆಂಬಲದಿಂದ ಕರ್ನಾಟಕದ ಸಾಹಿತಿಗಳಿಗೆ ಕಲಾವಿದರಿಗೆ ಮತ್ತು ಸಂಸ್ಕೃತಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ನಮ್ಮ ಸಂಸ್ಕೃತಿ ಭಾಷೆ ಅನ್ಯರ ಪಾಲು ಆಗುವುದಕ್ಕಿಂತ […]