Blog Archive

ನೇತ್ರಾವತಿ ರಕ್ಷಣೆಗಾಗಿ ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಬಂದ್

Thursday, May 19th, 2016
Bundh

ಮಂಗಳೂರು: ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಎತ್ತಿನ ಹೊಳೆ ಯೋಜನೆಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಮೇ 19ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೆದಿದ್ದ ಸ್ವಯಂ ಘೋಷಿತ ಬಂದ್‌ ಯಶಸ್ವೀಯಾಗಿದೆ. ಬಂದ್‌ ಶಾಂತಿಯುತವಾಗಿದ್ದು ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳು, ಸರ್ಕಾರಿ ಬಸ್‌ಗಳು ಸಂಚರಿಸಿಲ್ಲ. ಕೆಲವೆಡೆ ಹೊರರಾಜ್ಯದಿಂದ ಬಂದ ಪ್ರಯಾಣಿಕರು ಪರದಾಡಬೇಕಾಗಿ ಬಂತು . ಮೆಡಿಕಲ್‌ ಶಾಪ್‌ ಮಾತ್ರ ಬೆಳಗ್ಗಿನಿಂದಲೇ ತೆರೆದಿತ್ತು. ಅಂಬುಲೆನ್ಸ್‌ಗಳು ಹೊರತು ಪಡಿಸಿ ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿದ್ದು ಹೆದ್ದಾರಿ ಸಹಿತ ಮುಖ್ಯ ರಸ್ತೆಗಳು ಬಿಕೋ ಎನ್ನುತ್ತಿತ್ತು. ಜಿಲ್ಲೆಯ […]

ಧರ್ಮಸ್ಥಳ : ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ರಕ್ಷಿಸಿದ ದೇವಳದ ಸಿಬ್ಬಂದಿ

Friday, August 8th, 2014
Dharmasthala River

ಧರ್ಮಸ್ಥಳ : ಧರ್ಮಸ್ಥಳದಲ್ಲಿ ನೇತ್ರಾವತಿ ಸ್ನಾನ ಘಟ್ಟದಲ್ಲಿ ಗುರುವಾರ ಸಂಜೆ ನದಿಗೆ ಹಾರಿ ಆತ್ಮಹತ್ಯೆ ಮಾಡಲು ಯತ್ನಿಸಿದ ಮಹಿಳೆಯನ್ನು ದೇವಳದ ಸಿಬ್ಬಂದಿ ಸಕಾಲಿಕ ಪ್ರಜ್ಷೆಯಿಂದ ರಕ್ಷಿಸಿದ ಘಟನೆ ವರದಿಯಾಗಿದೆ. ಬೆಂಗಳೂರಿನ ನಿವಾಸಿ ಗೀತಾ (ಹೆಸರು ಬದಲಾಯಿಸಲಾಗಿದೆ) ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು ತಂದೆ – ತಾಯಿ ಜೊತೆ ವಾಸ್ತವ್ಯ ಇದ್ದಾರೆ. ಒಬ್ಬ ತಮ್ಮನೂ ಇದ್ದಾನೆ. ಗುರುವಾರ ಅದೇನೋ ಮಾನಸಿಕ ಖಿನ್ನತೆ ಆಕೆಯನ್ನು ಕಾಡಿತು. ಮನೆಯಿಂದ ಬೆಳಿಗ್ಗೆ ಕಚೇರಿಗೆಂದು ಹೊರಟವಳು ಧರ್ಮಸ್ಥಳಕ್ಕೆ ಬರುವ ಬಸ್ ಹತ್ತಿದರು. ಸಂಜೆ 7 ಗಂಟೆಗೆ […]

ಕುಡಿಯುವ ನೀರಿಗಾಗಿ ದ.ಕ. ಜಿಲ್ಲಾಧಿಕಾರಿಗಳನ್ನು ಬೇಟಿ ಮಾಡಿದ ಕಾರ್ಪೊರೇಟರ್‌ಗಳು

Saturday, April 21st, 2012
Congress Corporaters

ಮಂಗಳೂರು : ನಗರದ ಜನರ ಕುಡಿಯುವ ನೀರಿನ ಬವಣೆಯನ್ನು ನೀಗಿಸಲು ಕ್ರಮ ಕೈಗೊಳ್ಳಬೇಕು ಎಂದು ಮಂಗಳೂರು ಮಹಾ ನಗರ ಪಾಲಿಕೆಯ ಕಾರ್ಪೊರೇಟರ್‌ಗಳ ನಿಯೋಗ ದ.ಕ. ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದೆ. ತುಂಬೆ ವೆಂಟೆಡ್‌ ಡ್ಯಾಮ್‌ನಿಂದ ಮೇಲ್ಗಡೆ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳಿಗೆ ಕಟ್ಟಿರುವ ಎಲ್ಲ ಅಣೆಕಟ್ಟುಗಳನ್ನು ಡಿಸೆಂಬರ್‌ ಬಳಿಕ ಮಳೆ ಬರುವ ತನಕ ಜಿಲ್ಲಾಧಿಕಾರಿಯವರು ಸ್ವಾಧೀನಕ್ಕೆ ತಗೆದುಕೊಂಡು ನೀರು ಹಂಚಿಕೆಯ ಬಗ್ಗೆ ಮಹಾನಗರ ಪಾಲಿಕೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿತು. ಮಾಜಿ ಮೇಯರ್‌ಗಳಾದ ಎಂ. ಶಶಿಧರ […]