ವಿಳಂಬಧೋರಣೆ ಭ್ರಷ್ಟಾಚಾರಕ್ಕೆ ಸಮಾನ: ಜಿಲ್ಲಾಧಿಕಾರಿ
Monday, October 27th, 2014ಮಂಗಳೂರು : ಸಾರ್ವಜನಿಕ ಕರ್ತವ್ಯ ನಿರ್ವಹಣೆಯಲ್ಲಿ ನಿಧಾನಗತಿ ಅನುಸರಿಸುವುದು ಮತ್ತು ಸೇವೆಯನ್ನು ಒದಗಿಸುವುದರಲ್ಲಿ ವಿಳಂಭವಾಗಿಸುವುದು ಭ್ರಷ್ಟಾಚಾರಕ್ಕೆ ಸಮಾನವಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಹೇಳಿದ್ದಾರೆ. ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಭ್ರಾಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಅಕ್ಟೋಬರ್ 27ರಿಂದ ನವೆಂಬರ್ 1ರವರೆಗೆ ನಡೆಯಲಿರುವ ಜಾಗೃತಿ ಅರಿವು ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು. ದಕ್ಷ ಆಡಳಿತ ಮತ್ತು ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಭ್ರಷ್ಟಾಚಾರವು ದೊಡ್ಡ ಪಿಡುಗಾಗಿದೆ. ಆದರೆ, ಭ್ರಷ್ಟಾಚಾರದೊಂದಿಗೆ ಹೊಂದಾಣಿಕೆಯು ಉತ್ತಮ ಸಮಾಜ ನಿರ್ಮಾಣಕ್ಕೆ […]