Blog Archive

ಮುಡಿಪು-ಮಿತ್ತಕೋಡಿ ಬಳಿ ರಸ್ತೆಗೆ ಗುಡ್ಡಕುಸಿತ ಪರಿಣಾಮ ವಾಹನ ಸಂಚಾರ ಅಸ್ತವ್ಯಸ..!

Tuesday, June 26th, 2018
mudipu-mitthagudi

ಮಂಗಳೂರು: ಕಳೆದೆರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಮಂಗಳೂರಿನಿಂದ ಮುಡಿಪು ಮಾರ್ಗವಾಗಿ ಮೆಲ್ಕಾರ್ ಕಡೆ ಸಂಚರಿಸುವ ರಸ್ತೆಯ ಮಿತ್ತಕೋಡಿ ಎಂಬಲ್ಲಿ ಗುಡ್ಡವೊಂದು ಮುಖ್ಯ ರಸ್ತೆಗೆ ಕುಸಿದು ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ತೊಡಕುಂಟಾದ ಘಟನೆ ಕಳೆದ ತಡರಾತ್ರಿ ನಡೆದಿದೆ. ಮುಡಿಪು ಸಮೀಪದ ಮಿತ್ತಕೋಡಿ ಬಳಿ ಗುಡ್ಡವು ಭಾರೀ ಪ್ರಮಾಣದಲ್ಲಿ ಸಂಪರ್ಕ ರಸ್ತೆಗೆ ಕುಸಿದಿದೆ. ಇದರಿಂದಾಗಿ ಈ ಭಾಗದಲ್ಲಿ ಸಂಚರಿಸುವ ವಾಹನಗಳಿಗೆ ತೊಡಕುಂಟಾಗಿದೆ. ಈ ಹಿನ್ನೆಲೆಯಲ್ಲಿ ಮೆಲ್ಕಾರ್ ಕಡೆಗೆ ಸಂಚರಿಸುವ ವಾಹನವು ಪಜೀರು-ಕಂಬ್ಲಪದವು ಮಾರ್ಗವಾಗಿ ಹಾಗೂ ಕುರ್ನಾಡು ಮಾರ್ಗವಾಗಿ […]

ಮುಡಿಪು-ಮೂಳೂರು ರಸ್ತೆ ಅವ್ಯವಸ್ಥೆ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ

Tuesday, March 13th, 2018
protest

ಮಂಗಳೂರು: ಮುಡಿಪು ಚೆಕ್‌ಪೋಸ್ಟ್‌ನಿಂದ ಮೂಳೂರುವರೆಗಿನ ರಸ್ತೆ ದುರವಸ್ಥೆಯ ವಿರುದ್ಧ ಮಂಗಳೂರು ಕ್ಷೇತ್ರ ಎಸ್‌ಡಿಪಿಐ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಹಾರೀಶ್ ಮಲಾರ್ ಅವರು, ನಾವು ಪ್ರತಿಭಟನೆ ಮಾಡಿದರೆ ರಾಜಕೀಯ ಎಂದು ಆರೋಪಿಸಲಾಗುತ್ತದೆ, ಆದರೆ ಎಂದಿಗೂ ರಾಜಕೀಯಕ್ಕಾಗಿ ಯಾವುದೇ ಹೋರಾಟ ಮಾಡಿಲ್ಲ. ಈಗ ಮಾಡುತ್ತಿರುವ ಪ್ರತಿಭಟನೆಯೂ ಸಮಸ್ಯೆಯ ವಿರುದ್ಧ ಆಗಿದೆ ಎಂದು ಹೇಳಿದರು. ಮುಡಿಪು ಮೂಳೂರು ರಸ್ತೆಯು ಮಂಚಿ, ಕಲ್ಲಡ್ಕ ಸಂಪರ್ಕಿಸುವ […]

ಚೈಲ್ಡ್‌ಲೈನ್: ಮುಡಿಪು ಭಾರತಿ ಶಾಲೆಯಲ್ಲಿ ’ ತೆರೆದ ಮನೆ ’ ಕಾರ್ಯಕ್ರಮ

Friday, October 27th, 2017
child line

ಮಂಗಳೂರು  : ಮಕ್ಕಳ ಹಕ್ಕುಗಳ ರಕ್ಷಣೆಗಾಗಿ, ದೂರವಾಣಿ ಮೂಲಕ ಸೇವೆಯನ್ನು ನೀಡುತ್ತಿರುವ, ಚೈಲ್ಡ್‌ಲೈನ್-1098 ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವರೇ ತೆರೆದ ಮನೆ ಎಂಬ ಕಾರ್ಯಕ್ರಮ ಮುಡಿಪು ಶ್ರೀ ಭಾರತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. ಮಕ್ಕಳು ಹಾಗೂ ಅತಿಥಿಗಳಿಂದ ಚೈಲ್ಡ್‌ಲೈನ್‌ನ ಭಿತ್ತಿ ಪತ್ರವನ್ನು ಪ್ರದರ್ಶಿಸುವ ಮೂಲಕ ಉದ್ಘಾಟಿಸಲಾಯಿತು, ಚೈಲ್ಡ್‌ಲೈನ್-1098 ನಗರ ಸಂಯೋಜಕ ಯೋಗೀಶ್ ಮಲ್ಲಿಗೆಮಾಡು ಪ್ರಸ್ತಾವಿಕವಾಗಿ ಮಾತುಗಳನ್ನಾಡುತ್ತಾ, ತೊಂದರೆಯಲ್ಲಿರುವ ಮಕ್ಕಳ ರಕ್ಷಣೆಗಾಗಿ ಚೈಲ್ಡ್‌ಲೈನ್ ದಿನದ 24ಗಂಟೆಯೂ ಕಾರ್ಯನಿರತವಾಗಿರುತ್ತದೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ ಆನೇಕ ತೆರೆದ ಮನೆ […]

ನಾಟೆಕಲ್ ಬಳಿ ಉರುಳಿ ಬಿದ್ದ ಸಿಮೆಂಟ್ ಮಿಕ್ಸರ್ ವಾಹನ, ಅಪಾಯದಿಂದ ಪಾರಾದ ಚಾಲಕ

Thursday, May 30th, 2013
Cement mixer truck accident near Natikal

ಮಂಗಳೂರು : ಗುರುವಾರ ಬೆಳಗಿನ ಜಾವ ಮಂಗಳೂರಿನಿಂದ ಮುಡಿಪು ಕಡೆಗೆ ತೆರಳುತ್ತಿದ್ದ ಸಿಮೆಂಟ್ ಮಿಕ್ಸರ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ನಗರದ ಹೊರವಲಯದ ನಾಟೆಕಲ್ ಬಳಿ ಸಂಭವಿಸಿದೆ. ಗುರುವಾರ ಬೆಳಗ್ಗೆ ಸುಮಾರು 2.30 ರ ವೇಳೆಗೆ ಕಾಂಕ್ರೀಟ್ ಮಿಕ್ಸರ್ ವಾಹನವು ಮಂಗಳೂರಿನಿಂದ ಮುಡಿಪು ಬಳಿ ಇರುವ ಇನ್ಫೋಸಿಸ್ ಕಡೆಗೆ ತೆರಳುತ್ತಿದ್ದಾಗ ನಾಟೆಕಲ್ ಬಳಿ ಇರುವ ಅಪಾಯಕಾರಿ ತಿರುವಿನಲ್ಲಿ ಚಾಲಕನ  ನಿಯಂತ್ರಣ ತಪ್ಪಿದ ಕಾರಣದಿಂದಾಗಿ ಉರುಳಿ ಬಿದ್ದಿದೆ. ಘಟನೆಯಿಂದ ವಾಹನವು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ  […]

ಮುಡಿಪು : ಹೆಚ್ಚಿನ ಸರಕಾರಿ ಬಸ್ ಗೆ ಒತ್ತಾಯಿಸಿ ಪ್ರತಿಭಟನೆ

Friday, December 28th, 2012
Bundh in Mudipu

ಮಂಗಳೂರು : ಮುಡಿಪು ಸರಕಾರಿ ಬಸ್ ಹೋರಾಟ ಸಮಿತಿ ವತಿಯಿಂದ ಗುರುವಾರ ಮಂಗಳೂರಿನಿಂದ ಕೊಣಾಜೆ -ಮುಡಿಪು ಮತ್ತು ಆ ಮಾರ್ಗವಾಗಿ ಇತರೆಡೆಗಳಿಗೆ ಹೆಚ್ಚಿನ ಸರಕಾರಿ ಬಸ್ ಗಳನ್ನು ಒದಗಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆಯನ್ನುಹಮ್ಮಿಕೊಳ್ಳಲಾಗಿತ್ತು. ಹೋರಾಟ ಸಮಿತಿಯ ಅದ್ಯ್ಹಕ್ಷ, ಜಿಲ್ಲಾ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್ ಮಾತನಾಡಿ ಮುಡಿಪು ಪರಿಸರದ ಜನರ ಬಹುಕಾಲದ ಬೇಡಿಕೆಗೆ ಸ್ಪಂದಿಸಿದ ಸಾರಿಗೆ ಸಚಿವರು ಕೆಲ ತಿಂಗಳ ಹಿಂದೆಯಷ್ಟೆ 3 ಬಸ್ ಗಳನ್ನು ಮಂಜೂರು ಮಾಡಿದರು ಆದರೆ ಖಾಸಗಿ ಬಸ್ ಮಾಲಕರ ಲಾಭಿಯಿಂದಾಗಿ […]

ಮುಡಿಪು: ರಾಜಧಾನಿ ಜುವೆಲ್ಲರ್ ಶಾಪ್ ಗೆ ನುಗ್ಗಿದ ಕಳ್ಳರು ಸಾವಿರಾರು ಮೌಲ್ಯದ ಆಭರಣಗಳ ಕಳವು

Monday, November 5th, 2012
Rajadani Jewellers

ಕೊಣಾಜೆ :ಮುಡಿಪು ಜಂಕ್ಷನ್‌ನಲ್ಲಿರುವ ನವಾಝ್ ಎಂಬವರಿಗೆ ಸೇರಿದ ‘ರಾಜಧಾನಿ ಜುವೆಲ್ಲರ್ ಶಾಪ್ ಗೆ ನುಗ್ಗಿರುವ ಕಳ್ಳರು ಸುಮಾರು ಎರಡು ಕೆ.ಜಿ. ಬೆಳ್ಳಿಯ ಆಭರಣಗಳನ್ನು ಕಳವುಗೈದ ಘಟನೆ ರವಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಶಾಪ್ ನ ಕಬ್ಬಿಣದ ಕಿಟಕಿಯ ಸರಳುಗಳನ್ನು ಕಳ್ಳರು ಎಕ್ಸೆಲ್ಬ್ಲೇಡ್ ಮೂಲಕ ಮುರಿದು ಒಳನುಗ್ಗಿದ್ದಾರೆ ಎನ್ನಲಾಗಿದೆ. ಚಿನ್ನಾಭರಣವನ್ನೇ ಗುರಿಯಾಗಿಟ್ಟುಕೊಂಡು ಕಳ್ಳತನಕ್ಕೆ ಯತ್ನಿಸಿದ್ದ ಇವರಿಗೆ ಅಲ್ಲಿ ಯಾವುದೇ ಚಿನ್ನದ ಅಭರಣಗಳು ಸಿಗದೇ ಇದ್ದಾಗ ಅಲ್ಲಿದ್ದ ಸುಮಾರು ಎರಡು ಕೆಜಿಯಷ್ಟು ಬೆಳ್ಳಿಯ ಆಭರಣಗಳನ್ನು ಕಳವುಗೈದಿದ್ದಾರೆ. ಕಳವಾದ ಬೆಳ್ಳಿಯ ಆಭರಣಗಳ […]