ಮಾಸಾವಧಿಯ ಯೋಗ ಶಿಬಿರ ಸಮಾರೋಪ

Tuesday, October 19th, 2021
Yoga

ಮಂಗಳೂರು : ಜವಾಹರ್ ನವೋದಯ ವಿದ್ಯಾಲಯ, ಮುಡಿಪು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಯೋಗ ವಿಜ್ಞಾನ ವಿಭಾಗಗಳು ಜಂಟಿಯಾಗಿ ವಿದ್ಯಾಲಯದಲ್ಲಿ ಆಯೋಜಿಸಿದ್ದ ತಿಂಗಳಾವಧಿಯ ಯೋಗ ಶಿಬಿರದ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು. ಮುಖ್ಯ ಅತಿಥಿ ಮಂಗಳೂರು ವಿವಿ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ, ಜೀವನದಲ್ಲಿ ಉನ್ನತ ಸ್ಥಾನ ತಲುಪಲು ಸೂಕ್ತ ಮನೋಭಾವ, ಶಿಸ್ತುಬದ್ಧ ಜೀವನ ಅಗತ್ಯ. ಇದನ್ನು ಸಾಧಿಸಲು ಯೋಗ ಸಹಕಾರಿ, ಎಂದರು. ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗದ ಮುಖ್ಯಸ್ಥ ಕೆ ಕೃಷ್ಣ ಶರ್ಮ, […]

ನರಿಂಗಾನ ಗ್ರಾಮದ ಮರೀಕಳದ ಕಸಾಯಿಖಾನೆಗೆ ಅಕ್ರಮ ದನ ಸಾಗಾಟ, ಒಬ್ಬ ಆರೋಪಿಯನ್ನು ಬಿಟ್ಟ ಪೊಲೀಸರು – ಬಜರಂಗದಳ ಖಂಡನೆ

Friday, September 17th, 2021
Marikkala

ಮಂಗಳೂರು :  ಮುಡಿಪು ಸಮೀಪದ ನರಿಂಗಾನ ಗ್ರಾಮದ ಮೊಂಟೆಪದವು ಸರಕಾರೀ ಶಾಲೆ ಸಮೀಪ ದ ಮರೀಕಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ ಎರಡು ದನಗಳನ್ನು ಹಾಗು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದರು ಕಾಣದ ಕೈಗಳ ಪ್ರಭಾವದಿಂದ ಒಬ್ಬ ಆರೋಪಿಯನ್ನು ಕೇಸು ದಾಖಲಿಸದೆ ಬಿಟ್ಟಿರುವ ಪೊಲೀಸ್ ಇಲಾಖೆಯ ಈ ಕೃತ್ಯ ಖಂಡನೀಯ ಎಂದು ಬಜರಂಗದಳ  ಹೇಳಿದೆ. ನರಿಂಗಾನ ಗ್ರಾಮದ ಮರೀಕಳದಲ್ಲಿ ನಿರಂತರವಾಗಿ ದನಗಳನ್ನು ವಧೆಗೋಸ್ಕರ ಪಿಕ್ ಅಪ್ ವಾಹನ ಸಂಖ್ಯೆ KA 18 8539 ದಲ್ಲಿ ಕಾನೂನು ಬಾಹಿರವಾಗಿ ಸಾಗಿಸುತ್ತಿರುವ ಮಾಹಿತಿ ಪ್ರಕಾರ ಈ ವಾಹನದಲ್ಲಿ […]

ಮಂಗಳೂರು-ಮೊಂಟೆಪದವು ಮಾರ್ಗವಾಗಿ ಮುಡಿಪುವಿಗೆ ಸರಕಾರಿ ಬಸ್ ಸಂಚಾರ ಆರಂಭ

Thursday, August 26th, 2021
ksrtc-bus

ಮಂಗಳೂರು :  ಮಂಗಳೂರು-ಮೊಂಟೆಪದವು ಮಾರ್ಗವಾಗಿ ಮುಡಿಪುವಿಗೆ ಸರಕಾರಿ ಬಸ್ ಸಂಚಾರ ಆರಂಭಿಸಿದ ಹಿನ್ನಲೆಯಲ್ಲಿ ಮೊಂಟೆಪದವು ನಾಗರಿಕರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು. ಮಂಗಳೂರಿನಿಂದ ನಾಟೆಕಲ್-ಮೊಂಟೆಪದವು ಮಾರ್ಗವಾಗಿ ಮುಡಿಪುವಿಗೆ ಸರಕಾರಿ ಬಸ್ ಒದಗಿಸುವಂತೆ ಸುಮಾರು 10 ವರ್ಷಗಳಿಂದ ಈ ಭಾಗದ ಜನರು ಒತ್ತಾಯಿಸುತ್ತಾ ಬಂದಿದ್ದರಲ್ಲದೆ, ಇಲ್ಲಿನ ಸಂಘ ಸಂಸ್ಥೆಗಳು ಹಲವು ಬಾರಿ ಹೋರಾಟವನ್ನೂ ನಡೆಸಿತ್ತು. ಸಂಬಂಧಪಟ್ಟವರಿಗೆ ಮನವಿಯನ್ನೂ ಸಲ್ಲಿಸಿತ್ತು. 10 ವರ್ಷದ ಹೋರಾಟದ ಫಲವಾಗಿ ಸರಕಾರಿ ಬಸ್ ಓಡಾಟ ಆರಂಭಿಸಿದ ಹಿನ್ನೆಲೆಯಲ್ಲಿ ನಾಗರಿಕರು ಸಂಭ್ರಮಿಸಿದರು.

ರಸ್ತೆಗೆ ಬಿದ್ದ ಬೈಕ್ ಸವಾರನ ಮೇಲೆ ಬಸ್ ಹರಿದು, ಸ್ಥಳದಲ್ಲೇ ಸಾವು

Thursday, July 29th, 2021
Mudipu-Accident

ಕೊಣಾಜೆ: ಮುಡಿಪು ಬಳಿ ಸ್ಕೂಟರ್ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿ ರಸ್ತೆಗೆ ಬಿದ್ದ ಬೈಕ್ ಸವಾರನ ಮೇಲೆ ಬಸ್ ಹರಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಮೃತನನ್ನು ಉಪ್ಪಳ ಮೂಲದ ಜೌಹಾರ್ (20) ಎಂದು ಗುರುತಿಸಲಾಗಿದೆ. ಈತ ವಿದ್ಯಾರ್ಥಿಯಾಗಿದ್ದು, ಮುಡಿಪು ಸಮೀಪದ ಸಂಬಂಧಿಕರ ಮನೆಗೆಂದು ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಬಾಳೆಪುಣಿ ಕಡೆಯಿಂದ ಮುಡಿಪು ಕಡೆಗೆ ಹೋಗುತ್ತಿದ್ದ ವೇಳೆ ಮುಡಿಪು ಪೆಟ್ರೋಲ್ ಪಂಪು ಬಳಿ ಅಪಘಾತ ಸಂಭವಿಸಿದೆ. ಸ್ಕೂಟರ್ ಹಾಗೂ ಬೈಕ್ […]

ಮುಡಿಪು ಅಕ್ರಮ ಗಣಿಗಾರಿಕಾ ಪ್ರದೇಶಕ್ಕೆ ಸಚಿವ ಸಿ.ಸಿ. ಪಾಟೀಲ್ ಭೇಟಿ

Thursday, January 7th, 2021
CC Pateel

ಕೊಣಾಜೆ : ಕರ್ನಾಟಕ ಸರ್ಕಾರದ ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಸಿ.ಸಿ. ಪಾಟೀಲ್ ರವರು ಮುಡಿಪು ಸಮೀಪದ ಬಾಳೆಪುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಂಡಿಕಟ್ಟ ಗಣಿಗಾರಿಕೆ ಚಟುವಟಿಕೆ ಪ್ರದೇಶಕ್ಕೆ  ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದು ಗ್ರಾಮೀಣ ಪ್ರದೇಶವಾಗಿದ್ದು, ಈಗಾಗಲೇ ಈ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸಲಾಗಿದೆ. ನೆಲಸಮತಟ್ಟು ಮಾಡಲು ಪರವಾನಿಗೆ ಪಡೆದುಕೊಂಡು ಅದಕ್ಕಿಂತ ವಿಸ್ತಾರವಾದ ಜಾಗದಲ್ಲಿ ಸಮತಟ್ಟು ಮಾಡಿ, ಮಣ್ಣು ಸಾಗಾಟ ಮಾಡಿದ ಆರೋಪ‌ ಕೇಳಿ ಬಂದಿದೆ. ಅದಕ್ಕಾಗಿ ಕಾನೂನು ಕ್ರಮ ತೆಗೆದುಕೊಂಡು […]

ಮುಡಿಪು ಭಾಗದಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದವರು ಶಾಸಕ ಯು.ಟಿ.ಖಾದರ್ ಸಂಬಂಧಿಗಳು !

Monday, October 19th, 2020
Rajesh Naik

ಮಂಗಳೂರು: ಮಾಜಿ ಸಚಿವರಾದ ಬಿ.ರಮಾನಾಥ ರೈ  ಆರೋಪಕ್ಕೆ ಉತ್ತರಿಸಿದ ಬಂಟ್ವಾಳ ಶಾಸಕ ಉಳಿಪಾಡಿಗುತ್ತು ರಾಜೇಶ್ ನಾಯ್ಕ್,  ನಾನು ಕೆಂಪು ಕಲ್ಲು ಗಣಿಗಾರಿಕೆ ಮಾಡುತ್ತಿಲ್ಲ. ನನ್ನ ಸಂಬಂಧಿಕರು ಕೂಡಾ ಅಂತಹ ವ್ಯವಹಾರದಲ್ಲಿ ತೊಡಗಿಸಿಕೊಂಡಿಲ್ಲಎಂದು ಹೇಳಿದ್ದಾರೆ. ಅವರು ಸೋಮವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಡಿಪು ಪ್ರದೇಶ ಬಂಟ್ವಾಳ ತಾಲೂಕು ಸರಹದ್ದಿನಲ್ಲಿದ್ದರೂ ಮಂಗಳೂರು ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ. ಅದು ನನ್ನ ಕ್ಷೇತ್ರದಲ್ಲಿ ಇಲ್ಲ,  ಬಿ.ರಮಾನಾಥ ರೈಯವರು ಸುದ್ದಿಗೋಷ್ಠಿಯಲ್ಲಿ ಆಡಳಿತ ಪಕ್ಷದ ಶಾಸಕರೊಬ್ಬರು ಅಕ್ರಮ ಕೆಂಪು ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. […]

ಬಿಜೆಪಿ ಶಾಸಕರೊಬ್ಬರ ಸಂಬಂಧಿ ಮುಡಿಪು ಬಳಿ ಗಣಿಗಾರಿಕೆ ನಡೆಸುತ್ತಿರುವುದು ವಿಪರ್ಯಾಸ : ರಮಾನಾಥ ರೈ

Sunday, October 18th, 2020
Ramanatha Rai

ಮಂಗಳೂರು: ಮುಡಿಪು ಸಮೀಪ ನಡೆಯುತ್ತಿರುವ ಅಕ್ರಮ ರೆಡ್ ಬಾಕ್ಸೈಟ್ ಗಣಿಗಾರಿಕೆಯ ತನಿಖೆಯನ್ನು ರಾಜ್ಯದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ನೇತೃತ್ವದಲ್ಲಿ ಸಮಿತಿ ರಚಿಸಿ, ತನಿಖೆ ಕೈಗೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಬಿ ರಮಾನಾಥ ರೈ  ಹೇಳಿದ್ದಾರೆ . ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಅವರು  ಮುಡಿಪು, ಬಾಳೆಪುಣಿ, ಇನೋಳಿ ಸೇರಿದಂತೆ ಕೇರಳದ ಗಡಿ ಭಾಗದ ರೆಡ್ ಬಾಕ್ಸೈಟ್ ಗಣಿಗಾರಿಕೆಯಲ್ಲಿ ಸ್ಥಳೀಯರೊಂದಿಗೆ ಕೇರಳ, ತಮಿಳುನಾಡು, ಆಂಧ್ರ ಪ್ರದೇಶದ ಧಂದೆಕೋರರು ಇದ್ದಾರೆ. ಇವರು ಅಧಿಕಾರಿಗಳ ಮೇಲೆ […]

ಮುಡಿಪು ಕೆಂಪು ಬಾಕ್ಸೈಟ್ ದಂಧೆ ಮೇಲೆ ದಾಳಿ ಮಾಡಿದ ಉಪವಿಭಾಗಾಧಿಕಾರಿ ದಿಢೀರ್ ವರ್ಗಾವಣೆ

Wednesday, October 14th, 2020
Madan Mohan

ಮಂಗಳೂರು: ಮುಡಿಪುವಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿದ್ದ ಕೆಂಪು ಬಾಕ್ಸೈಟ್ (ಕೆಂಪು ಕಲ್ಲು)ದಂಧೆ ಮೇಲೆ  ದಾಳಿ ಮಾಡಿದ  ಮಂಗಳೂರು ಉಪವಿಭಾಗಾಧಿಕಾರಿ ಮದನ್ ಮೋಹನ್ ಸಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಕೆಂಪು ಬಾಕ್ಸೈಟ್ ದಂಧೆಯ ಬಗ್ಗೆ ತನಿಖೆ ನಡೆಸಲು ಮಂಗಳೂರು ಉಪವಿಭಾಗಾಧಿಕಾರಿಯಾಗಿದ್ದ ಮದನ್ ಮೋಹನ್ ಸೇರಿದಂತೆ 7 ಅಧಿಕಾರಿಗಳ ವಿಶೇಷ ತಂಡವನ್ನು ಅಕ್ಟೋಬರ್ 10ಕ್ಕೆ ರಚಿಸಿದ್ದರು. ಈ ತಂಡ ಅಕ್ಟೋಬರ್ 20 ರಂದು ವರದಿ ನೀಡಬೇಕಿತ್ತು. ಅದಕ್ಕೂ ಮೊದಲೇ ಮದನ್ ಮೋಹನ್ ಅವರ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಮಂಗಳೂರು […]

ಕಾರಿನಲ್ಲಿ ದಂಪತಿಗಳ ಜೊತೆ ಮುಸ್ಲಿಂ ಯುವತಿ ಇರುವುದನ್ನು ಪ್ರಶ್ನಿಸಿ ಹಲ್ಲೆ

Wednesday, January 30th, 2019
Tausira

ಮಂಗಳೂರು : ದಂಪತಿಗಳ ಜೊತೆ ಮುಸ್ಲಿಂ ಯುವತಿ ಕಾರಿನಲ್ಲಿರುವುದನ್ನು ಗಮನಿಸಿದ ಕೆಲ ಯುವಕರು ವ್ಯಕ್ತಿಗೆ ಹಲ್ಲೆ ಮಾಡಿ ಗೂಂಡಾಗಿರಿ‌ ಮೆರೆದಿರುವ ಘಟನೆ ಮಂಗಳೂರಿನ ಮುಡಿಪುವಿನಲ್ಲಿ ನಿನ್ನೆ ನಡೆದಿದೆ. ಥೋಮಸ್ ಡಿಸೋಜ ಎಂಬವರು ಯುವಕರಿಂದ ಹಲ್ಲೆಗೊಳಗಾದವರು. ಥೋಮಸ್ ಡಿಸೋಜ, ಪತ್ನಿ ಮಲ್ಲಿಕಾ ಡಿಸೋಜ ಹಾಗೂ ನೆರೆಮನೆಯ ಕುಮಾರಿ ತೌಸೀರ ಜೊತೆ ಮುಡಿಪುವಿನಿಂದ ಮಲ್ಲಿಕಾ ಡಿಸೋಜ ಅವರ ತಾಯಿ ಮನೆಯಾದ ಸುರತ್ಕಲ್ನ ತಡಂಬೈಲ್ಗೆ ಹೋಗಿ ವಾಪಸ್ ಕಾರಿನಲ್ಲಿ ಬರುವಾಗ ಈ ಘಟನೆ ನಡೆದಿದೆ. ಕನಚೂರು ಆಸ್ಪತ್ರೆ ಬಳಿ ಅವರ ಕಾರನ್ನು […]

ಮುಡಿಪು-ಮಿತ್ತಕೋಡಿ ಬಳಿ ರಸ್ತೆಗೆ ಗುಡ್ಡಕುಸಿತ ಪರಿಣಾಮ ವಾಹನ ಸಂಚಾರ ಅಸ್ತವ್ಯಸ..!

Tuesday, June 26th, 2018
mudipu-mitthagudi

ಮಂಗಳೂರು: ಕಳೆದೆರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಮಂಗಳೂರಿನಿಂದ ಮುಡಿಪು ಮಾರ್ಗವಾಗಿ ಮೆಲ್ಕಾರ್ ಕಡೆ ಸಂಚರಿಸುವ ರಸ್ತೆಯ ಮಿತ್ತಕೋಡಿ ಎಂಬಲ್ಲಿ ಗುಡ್ಡವೊಂದು ಮುಖ್ಯ ರಸ್ತೆಗೆ ಕುಸಿದು ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ತೊಡಕುಂಟಾದ ಘಟನೆ ಕಳೆದ ತಡರಾತ್ರಿ ನಡೆದಿದೆ. ಮುಡಿಪು ಸಮೀಪದ ಮಿತ್ತಕೋಡಿ ಬಳಿ ಗುಡ್ಡವು ಭಾರೀ ಪ್ರಮಾಣದಲ್ಲಿ ಸಂಪರ್ಕ ರಸ್ತೆಗೆ ಕುಸಿದಿದೆ. ಇದರಿಂದಾಗಿ ಈ ಭಾಗದಲ್ಲಿ ಸಂಚರಿಸುವ ವಾಹನಗಳಿಗೆ ತೊಡಕುಂಟಾಗಿದೆ. ಈ ಹಿನ್ನೆಲೆಯಲ್ಲಿ ಮೆಲ್ಕಾರ್ ಕಡೆಗೆ ಸಂಚರಿಸುವ ವಾಹನವು ಪಜೀರು-ಕಂಬ್ಲಪದವು ಮಾರ್ಗವಾಗಿ ಹಾಗೂ ಕುರ್ನಾಡು ಮಾರ್ಗವಾಗಿ […]