Blog Archive

ಯಕ್ಷಗಾನ ಕಲಾವಿದ ಕಟೀಲು ಸೀತಾರಾಮ ಕುಮಾರ್​ಗೆ ರಾಜ್ಯೋತ್ಸವ ಪ್ರಶಸ್ತಿ

Thursday, November 29th, 2018
award

ಮಂಗಳೂರು: ಯಕ್ಷರಂಗದ ಚಾರ್ಲಿ ಚಾಪ್ಲಿನ್ ಎಂದು ಬಿರುದಾಂಕಿತರಾದ, ತೆಂಕು-ಬಡಗು ಉಭಯ ತಿಟ್ಟುಗಳ ಪ್ರಸಿದ್ಧ ಹಾಸ್ಯಗಾರ, ಹಲವಾರು ವರ್ಷಗಳಿಂದ ಯಕ್ಷಗಾನದಲ್ಲಿ ಸೇವೆ ಸಲ್ಲಿಸುತ್ತಿರುವ ಸೀತಾರಾಮ ಕುಮಾರ್ ಕಟೀಲು ಈ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸುಮಾರು ನಾಲ್ಕು ದಶಕಗಳಿಗೂ ಅಧಿಕ ಕಾಲ ಯಕ್ಷಗಾನ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಇವರು, ರಂಗಸ್ಥಳದಲ್ಲಿ ಪಾದರಸದಂತೆ ಚುರುಕಾಗಿ ನಟಿಸುತ್ತಾ, ಸದಾ ಹೊಸತನ್ನು ಅನ್ವೇಷಿಸುತ್ತಾ ಹಾಸ್ಯದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದವರು‌. ಸಂಭಾಷಣೆ-ಸಂವಾದಗಳಲ್ಲಿ ಅರಳು ಹುರಿದಂತೆ ಮಾತನಾಡುವ ಇವರು, ಪ್ರಕೃತಿ ವರ್ಣನೆ, ಸೌಂದರ್ಯ […]

ಕಟೀಲು ದುರ್ಗಾಪರಮೇಶ್ವರಿಯ ಯಕ್ಷಗಾನ ಕಲಾವಿದರಿಗೆ ಈ ಬಾರಿಯೂ ಬಾಗಿಲು ಬಂದ್!

Wednesday, June 27th, 2018
kateelu

ಮಂಗಳೂರು: ಮಂಗಳೂರಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಯಕ್ಷಗಾನ ಮೇಳದಿಂದ ಕಳೆದ ಬಾರಿ ಕೈಬಿಡಲಾದ ಏಳು ಮಂದಿಗೆ ಈ ಬಾರಿಯೂ ಅವಕಾಶ ಸಿಕ್ಕಿಲ್ಲ. ಕಟೀಲು ದೇವಸ್ಥಾನದಲ್ಲಿ ಆರು ಮೇಳಗಳಿದ್ದು, ಇದರಲ್ಲಿ ಐದನೇ ಮೇಳದಲ್ಲಿ ಪ್ರಸಿದ್ಧ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರನ್ನು ಒಂದನೇ ಮೇಳಕ್ಕೆ ವರ್ಗಾಯಿಸಲಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಐದನೇ ಮೇಳದ ಕಲಾವಿದರು ಮೇಳಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಡೆದ ಬೆಳವಣಿಗೆಯಲ್ಲಿ ಏಳು ಕಲಾವಿದರನ್ನು ಹೊರತುಪಡಿಸಿ ಇತರ ಕಲಾವಿದರನ್ನು ಮೇಳಕ್ಕೆ ಸೇರಿಸಲಾಗಿತ್ತು. ಆದರೆ ಏಳು ಮಂದಿ ಕಲಾವಿದರನ್ನು ಮೇಳಕ್ಕೆ ಸೇರಿಸಿಕೊಂಡಿರಲಿಲ್ಲ. […]

ಯಕ್ಷಗಾನದಲ್ಲಿ ‘ಇವನರ್ವ’ ಪದ ಬಳಕೆ ವಿವಾದ… ಕಲಾವಿದ ಹೇಳಿದ್ದೇನು?

Wednesday, April 4th, 2018
yakshagana

ಮಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಇತ್ತೀಚೆಗೆ ಬಸವಣ್ಣನವರ ವಚನವನ್ನು ತಪ್ಪಾಗಿ ಹೇಳಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಅಲ್ಲದೆ, ಇದನ್ನು ಯಕ್ಷಗಾನದಲ್ಲಿ ಬಳಸಿದ್ದು ವಿವಾದಕ್ಕೆ ಕಾರಣವಾಗಿದೆ. ಇವನರ್ವ ಇವನರ್ವ ಎನ್ನುವ ಹೇಳಿಕೆಯನ್ನು ಯಕ್ಷಗಾನದಲ್ಲಿ ಬಳಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮೂಡಬಿದ್ರೆ ಚುನಾವಣಾ ಆಯೋಗ ಮುಜರಾಯಿ ಇಲಾಖೆ ಮೂಲಕ ಕಟೀಲು ದುರ್ಗಾಪರಮೆಶ್ವರಿ ದೇವಸ್ಥಾನದ ಮಂಡಳಿಗೆ ಕಲಾವಿದ ಪೂರ್ಣೇಶರನ್ನು ಯಕ್ಷಗಾನದಲ್ಲಿ ಮುಂದುವರಿಸದಂತೆ ನೋಟೀಸ್ ಜಾರಿಗೊಳಿಸಿದೆ. ಹಾಸ್ಯಕ್ಕೀಡುಮಾಡಿದ ರಾಗಾ ವಚನ ಉವಾಚ…ಯಕ್ಷಗಾನದಲ್ಲೂ ಫುಲ್ ಹಿಟ್! ಈ ಕುರಿತು ಮಾತನಾಡಿರುವ ಕಲಾವಿದ ಪೂರ್ಣೇಶ್‌, […]

ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ಅಗತ್ಯವಿಲ್ಲ: ಜಿಲ್ಲಾಧಿಕಾರಿ

Tuesday, April 3rd, 2018
sesikanth-senthil

ಮಂಗಳೂರು: ವಿಧಾನಸಭಾ ಚುನಾವಣಾ ನೀತಿ ಸಂಹಿತಿ ಜಾರಿಯಲ್ಲಿದ್ದರೂ, ಖಾಸಗಿ ಸ್ಥಳಗಳಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ಪಡೆಯಲು ಸಾರ್ವಜನಿಕರು ಅರ್ಜಿ ಸಲ್ಲಿಸಬೇಕಾದ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಚುನಾವಣಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮದುವೆ, ಹುಟ್ಟುಹಬ್ಬ ಆಚರಣೆ ಸೇರಿದಂತೆ ರಾಜಕೀಯ ಉದ್ದೇಶವಿಲ್ಲದ ಖಾಸಗಿ ಕಾರ್ಯಕ್ರಮಗಳಿಗೆ ಚುನಾವಣಾಧಿಕಾರಿಗಳ ಅನುಮತಿ ಪಡೆಯಬೇಕಾಗಿಲ್ಲ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮಗಳಾದರೆ ಧ್ವನಿವರ್ಧಕ ಸೇರಿದಂತೆ […]

ದೆಹಲಿಯಲ್ಲಿ ಕೇಂದ್ರ ಯಕ್ಷಗಾನ ಅಕಾಡೆಮಿ ಸ್ಥಾಪನೆಯಾಗಲಿ :ವಸಂತ ಶೆಟ್ಟಿ ಬೆಳ್ಳಾರೆ

Friday, January 26th, 2018
yakshagana

ಮಂಗಳೂರು: ಯಕ್ಷಗಾನ ರಂಗಭೂಮಿಯಲ್ಲಿ 67 ವರ್ಷಗಳ ಕಾಲ ಸಕ್ರಿಯರಾಗಿದ್ದು, ಎಲ್ಲ ಪಾತ್ರಗಳಲ್ಲಿ ಸೈ ಎನಿಸಿಕೊಂಡು ಪರಿಪೂರ್ಣ ಹಾಗೂ ಶ್ರೇಷ್ಠ ಕಲಾವಿದರಾಗಿ ಮೆರೆದವರು ಹಿರಿಯರು ಸಾಧಕರು, ನಮ್ಮವರೇಆದ ಸೂರಿಕಮೇರು ಕೆ.ಗೋವಿಂದ ಭಟ್ಟರು.ಇಂದು ಅವರಿಗೆ ದೊರೆತ ಗೌರವ ಯಕ್ಷಗಾನದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ. ಜಗತ್ತಿನ ಇಂತಹ ಶ್ರೀಮಂತ ಕಲೆಯಾದ ಯಕ್ಷಗಾನವು ಉತ್ತರ ಭಾರತೀಯರಿಗೆ, ವಿದೇಶಿಯರಿಗೆ ಪರಿಚಯಿಸುವ ನಿಟ್ಟಿನಲ್ಲಿ ದೆಹಲಿಯಲ್ಲಿ ಕೇಂದ್ರ ಯಕ್ಷಗಾನ ಅಕಾಡೆಮಿ ಸ್ಥಾಪನೆಯಾಗಲಿ. ಈ ಕಾರ್ಯಕ್ಕಾಗಿ ಸರಕಾರವು ಪ್ರಯತ್ನಿಸಬೇಕು ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್ (ರಿ) ದೆಹಲಿ ಘಟಕದ […]

ಯಕ್ಷಗಾನಕ್ಕೆ ಗಣೇಶ್‌ ಕೊಲೆಕಾಡಿ ಕೊಡುಗೆ ಅನನ್ಯ

Thursday, January 25th, 2018
yakshagana

ಮೂಲ್ಕಿ: ಯಕ್ಷಗಾನದ ಹೊಸ ಅವಿಷ್ಕಾರದ ಪ್ರಯೋಗಗಳಿಂದ ಯಕ್ಷಗಾನದ ಮೂಲ ವಸ್ತುವಿನ ಸ್ವರೂಪಕ್ಕೆ ಧಕ್ಕೆ ಉಂಟಾಗಬಹುದು ಎಂಬ ಆತಂಕದ ವಾತಾವರಣ ಜನರಲ್ಲಿ ನಿರ್ಮಾಣವಾಗಿದೆ ಎಂದು ಹವ್ಯಾಸಿ ಯಕ್ಷಗಾನ ಕಲಾವಿದ ಡಾ| ಭಾಸ್ಕರಾನಂದ ಕುಮಾರ್‌ ಹೇಳಿದರು. ಅವರು ಮೂಲ್ಕಿಯ ಕುಂಜಾರುಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಯಕ್ಷಗಾನ ಸಾಧಕ,ಕವಿ ಹಾಗೂ ಛಂದಸ್ಸು ಪ್ರವೀಣಾ ಯಕ್ಷಗುರು ಗಣೇಶ್‌ ಕೊಲೆಕಾಡಿಯವರಿಗೆ ಅವರ ಅಭಿಮಾನಿಗಳಿಂದ ನಡೆದ ಸಮ್ಮಾನ ಹಾಗೂ ಗೌರವಾರ್ಪಣೆಯ ಸಮಾರಂಭದಲ್ಲಿ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಿ ಮಾತನಾಡಿದರು. ಗಣೇಶ್‌ ಕೊಲೆಕಾಡಿ ಅವರು ಯಕ್ಷಗಾನ […]

ಶ್ರೀ ಶಾರದಾ ಯಕ್ಷಗಾನ ಮಂಡಳಿಯ ನೂತನ ಸಭಾಂಗಣದ ಉದ್ಘಾಟನೆ

Wednesday, January 24th, 2018
yakshagana

ಬಜ್ಪೆ : ಸದಾಚಾರ ಹಾಗೂ ನಿಸ್ವಾರ್ಥವಾಗಿ ಮಾಡುವ ಸಾಮಾಜಿಕ ಕಳಕಳಿಯ ಸೇವೆಗೆ ಭಗವಂತನ ಅನುಗ್ರಹ ಪ್ರಾಪ್ತಿಯಾಗುವುದು ಖಚಿತ. ನಮ್ಮ ಗಳಿಕೆಯ ಸಂಪನ್ಮೂಲ ಸದ್ವಿನಿಯೋಗವಾಗಬೇಕು ಎಂದು ಕಟೀಲು ಶ್ರೀದುರ್ಗಾ ಪರಮೇಶ್ವರಿ ದೇವಾಲಯದ ಅನುವಂಶಿಕ ಅರ್ಚಕ ವೇದಮೂರ್ತಿ ಅನಂತ ಪದ್ಮನಾಭ ಅಸ್ರಣ್ಣ ಅವರು ಹೇಳಿದರು. ಅವರು ಪೆರ್ಮುದೆ-ಸೋಮನಾಥಧಾಮ- ಶ್ರೀ ಶಾರದಾ ಯಕ್ಷಗಾನ ಮಂಡಳಿಯ ನೂತನ ಸಭಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಚಿತ್ರನಟ, ಉದ್ಯಮಿ ಗಿರೀಶ್ ಎಂ. ಶೆಟ್ಟಿ ಕಲ್ಪವೃಕ್ಷ ಅವರು ಸೇವಾ ರೂಪದಲ್ಲಿ ಸಮರ್ಪಿಸಿದ ನೂತನ ಸಭಾಂಗಣವನ್ನು ಅವರ […]

ಯಕ್ಷಗಾನದಲ್ಲೂ ಡಬ್ಲ್ಯೂಡಬ್ಲ್ಯೂಇ: ಹಿರಿಯ ಕಲಾವಿದರ ಅಸಮಾಧಾನ

Wednesday, January 17th, 2018
yakshagana

ಮಂಗಳೂರು: ಇತ್ತೀಚೆಗೆ ಕರಾವಳಿಯ ಗಂಡುಕಲೆ ಹಾಗೂ ಸಾಂಪ್ರದಾಯಿಕ ಕಲೆ ಯಕ್ಷಗಾನದಲ್ಲೂ ಕೂಡಾ ವಿಭಿನ್ನ ಪ್ರಯೋಗಗಳು ಕಂಡುಬರುತ್ತಿದ್ದು, ಕೆಲವು ಸನ್ನಿವೇಶಗಳು ವಿವಾದವನ್ನೇ ಸೃಷ್ಟಿಸಿವೆ. ಇದೀಗ ಮತ್ತೊಂದು ಪ್ರಸಂಗದ ದೃಶ್ಯಾವಳಿಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಡಗುತಿಟ್ಟಿನ ಡೇರೆ ಮೇಳವೊಂದು ಪ್ರದರ್ಶಿಸಿರುವ ‘ಪುಷ್ಪ ಚಂದನ’ದ ದೃಶ್ಯ ಇದು ಎನ್ನಲಾಗಿದ್ದು ಪಾತ್ರಧಾರಿಯೊಬ್ಬ ಡಬ್ಲ್ಯೂಡಬ್ಲ್ಯೂಇ ಮಾದರಿಯಲ್ಲಿ ಯುದ್ಧ ಮಾಡುವ ದೃಶ್ಯ ಚರ್ಚೆಗೆ ಗ್ರಾಸವಾಗಿದೆ. ಪ್ರಬುದ್ಧ ಕಲೆಗಳಲ್ಲೊಂದಾದ ಯಕ್ಷಗಾನ ಹಲವು ವೈಶಿಷ್ಟ್ಯಗಳಿಗೆ ಹೆಸರಾಗಿದೆ. ಇಲ್ಲಿನ ನೃತ್ಯ, ಹಾಡು, ಮಾತುಗಾರಿಕೆ, ವೇಷಭೂಷಣಕ್ಕೆ ಅದರದ್ದೇ ಪರಂಪರೆಯಿದೆ. ಇಲ್ಲಿ […]

ಯಕ್ಷಗಾನಕ್ಕೂ ಕೋಮು ಬಣ್ಣ- ದ್ವೇಷ ಹಬ್ಬೋದು ನಿಲ್ಲಿಸ್ರಣ್ಣ

Friday, January 12th, 2018
yakshagana

ಮಂಗಳೂರು: ಯಕ್ಷಗಾನ ಪ್ರದರ್ಶನದ ಪ್ರಸಂಗ ಒಂದರಲ್ಲಿ ಮುಸ್ಲಿಂ ಸಮುದಾಯವನ್ನು ಅವಹೇಳನ ಮಾಡಲಾಗಿದೆ, ಕೀಳಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿ, ಹಳೆಯ ವಿಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ. ಇದಕ್ಕೆ ಮುಸ್ಲಿಂ ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿರೋಧ ವ್ಯಕ್ತ ಪಡಿಸುತ್ತಿವೆ. ಈ ಯಕ್ಷಗಾನ ಪ್ರಸಂಗವನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ಪ್ರಸಂಗದಲ್ಲಿ ಅಭಿನಯಿಸಿದ ಕಲಾವಿದರು ದಾರಿ ಹೆಣವಾಗುವುದನ್ನು ತಪ್ಪಿಸಲು ಯಾರಿಂದಲೂ ಸಾದ್ಯವಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾದ ಪೋಸ್ಟ್ ಗಳು ಹರಿದಾಡುತ್ತಿವೆ. ಉಡುಪಿಯ ಸಾಲಿಗ್ರಾಮ ಗುರುಪ್ರಸಾಧಿತ ಯಕ್ಷಗಾನ […]

ರಾಷ್ಟ್ರೀಯ ಕಲೋತ್ಸವ ಸ್ಪರ್ಧೆಯಲ್ಲಿ ಯಕ್ಷಗಾನಕ್ಕೆ ಪ್ರಥಮ ಸ್ಥಾನ

Thursday, January 11th, 2018
kalostava

ಬಂಟ್ವಾಳ: ಶಂಭೂರು ಗ್ರಾಮದ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು 2017-18ನೇ ಸಾಲಿನ ರಾಷ್ಟ್ರೀಯ ಕಲೋತ್ಸವ ಸ್ಪರ್ಧೆಯ ರಂಗಭೂಮಿ ವಿಭಾಗದಲ್ಲಿ ಪ್ರದರ್ಶಿಸಿದ ಕಿಷ್ಕಿಂದಾ ಕೌತುಕ ಯಕ್ಷಗಾನವು ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಕೊಂಡಿದ್ದು, ಈ ವಿದ್ಯಾರ್ಥಿಗಳನ್ನು ಮಂಗಳವಾರ ಶಾಲೆಗೆ ಆಗಮಿಸಿದಾಗ ಅದ್ದೂರಿಯಿಂದ ಸ್ವಾಗತಿಸಲಾಯಿತು. ಈ ಸಂದರ್ಭ ಶಾಲಾ ಮೇಲುಸ್ತುವಾರಿ ಕಾರ್ಯಾಧ್ಯಕ್ಷ ಹಾಗೂ ಬೊಂಡಾಲ ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕ ಕಮಲಾಕ್ಷ ಕಲ್ಲಡ್ಕ, ದೈಹಿಕ ಶಿಕ್ಷಣ ಶಿಕ್ಷಕ ಚೆನ್ನಪ್ಪ ಕೆ. […]