Blog Archive

ಪಿಎಫ್ಐ, ಎಸ್‌ಡಿಪಿಐ ನಿಷೇಧಕ್ಕೆ ಮುಂದಾದ ರಾಜ್ಯ ಸರ್ಕಾರ

Saturday, January 18th, 2020
rajya-sarkara

ಬೆಂಗಳೂರು : ಪಿಎಫ್ಐ (ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ) ಹಾಗೂ ಎಸ್‌ಡಿಪಿಐ (ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್ ಇಂಡಿಯಾ ) ಸಂಘಟನೆಗಳ ನಿಷೇಧಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಸುದೀರ್ಘ‌ ಚರ್ಚೆ ನಡೆದು ಬೇರೆ, ಬೇರೆ ಹೆಸರಿನಲ್ಲಿ ರಾಜ್ಯದಲ್ಲಿ ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿರುವ ಹಾಗೂ ಇತ್ತೀಚೆಗೆ ನಡೆದ ಹಲವು ಕೊಲೆ, ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಎರಡೂ ಸಂಘಟನೆಗಳ ಮೇಲೆ ಕ್ರಮಕ್ಕೆ ತೀರ್ಮಾನಿಸಲಾಗಿದೆ. ಸಂಪುಟ […]

ಗಲಭೆಗೆ ರಾಜ್ಯ ಸರ್ಕಾರದ ವೈಫಲ್ಯ ಕಾರಣ : ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್

Tuesday, December 24th, 2019
dinesh-gundu rao

ಮಂಗಳೂರು : ನಗರದ ಕೆಪಿಸಿಸಿ ಕಚೇರಿಯಲ್ಲಿ ಡಿ.24 ರ ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ಗಲಭೆ ರಾಜ್ಯ ಸರ್ಕಾರದ ವೈಫಲ್ಯ ಎಂದು ಹೇಳಿದ್ದಾರೆ. ” ಗಲಭೆಯಲ್ಲಿ ಎಂಟು ಮಂದಿ ಗಾಯಗೊಂಡು, ಇಬ್ಬರು ಅಮಾಯಕರು ಸಾವನ್ನಪ್ಪಿದ್ದಾರೆ. ನಾನು ಮೃತರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯೂ ದೇಶದಾದ್ಯಂತ 25 ಕ್ಕೂ ಹೆಚ್ಚು ಜೀವಗಳನ್ನು ಬಲಿಪಡೆದಿದೆ. ಗಲಭೆಯ ಘಟನೆಗಳಾದಾಗ ಇಷ್ಟು ತುರ್ತಾಗಿ ಗೋಲಿಬಾರ್ ಮಾಡಿರುವ ಘಟನೆ ರಾಜ್ಯದ ಇತಿಹಾಸದಲ್ಲೇ ಇಲ್ಲ, ಪ್ರತಿಭಟನಾಕಾರರನ್ನು ನಿಯಂತ್ರಿಸಲು […]

ಮಂಗಳೂರು : ಹಿಂಸಾಚಾರ ಪ್ರಕರಣ; ಸಿಐಡಿ ತನಿಖೆ ಸಿದ್ದರಾಮಯ್ಯ ಆಕ್ಷೇಪ

Monday, December 23rd, 2019
Siddaramaiah

ಮಂಗಳೂರು : ನಗರದಲ್ಲಿ ಇತ್ತೀಚೆಗೆ ನಡೆದಿದ್ದ ಹಿಂಸಾಚಾರ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂದು ಮಂಗಳೂರು ನಗರಕ್ಕೆ ಆಗಮಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ವಿಮಾನ ನಿಲ್ದಾಣದಲ್ಲಿ ಮಾತನಾಡಿದರು. ಸಿಐಡಿ ಇಲಾಖೆಯಲ್ಲಿ ಕೆಲಸ ಮಾಡುವವರು ಪೊಲೀಸರೇ. ಈಗ ಪ್ರಕರಣವನ್ನು ಪೊಲೀಸರಿಂದಲೇ ತನಿಖೆ ಮಾಡಿಸುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು. ಅಲ್ಲದೆ, ಹಾಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಈ ಬಗ್ಗೆ ಹಿಂದೆಯೂ ಒತ್ತಾಯಿಸಿದ್ದೇವೆ. ಮುಂದೆಯೂ […]

ರಾಜ್ಯದ ಮೈತ್ರಿ ಸರ್ಕಾರದಲ್ಲಿ ಕಿತ್ತಾಟ ಮುಖ್ಯಮಂತ್ರಿ ಜನರ ಬಳಿ ಕ್ಷಮೆ ಕೇಳಬೇಕು : ಶೋಭಾ ಕರಂದ್ಲಾಜೆ

Wednesday, May 30th, 2018
shobha-karandlaje

ಚಿಕ್ಕಮಗಳೂರು: ಹಾಲು ಕೊಡುವ ಹಸು ಯಾರಿಗೆ ಸೇರಬೇಕೆಂದು ರಾಜ್ಯದ ಮೈತ್ರಿ ಸರ್ಕಾರದಲ್ಲಿ ಕಿತ್ತಾಟ ನಡೆಯುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಖಾತೆಗಳಿಗಾಗಿ ಹಗ್ಗ-ಜಗ್ಗಾಟ ನಡೆಸ್ತಿರೋ ರಾಜ್ಯ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ. ಮುಖ್ಯಮಂತ್ರಿಯಂದ್ರೆ ಓರ್ವ ದೊರೆಯ ಜಾಗ. ಅಂತಹ ಜಾಗದಲ್ಲಿರೋ ಮುಖ್ಯಮಂತ್ರಿ ನಾನು ನಾಡಿನ ಜನರ ಮುಲಾಜಿನಲ್ಲಿ ಇಲ್ಲ, ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ ಎಂದಿರೋದು ರಾಜ್ಯದ ಜನತೆಗೆ ಮಾಡಿರೋ ಅಪಮಾನ. ಕೂಡಲೇ ಅವರು ರಾಜ್ಯದ ಜನರ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ. ಕಾಂಗ್ರೆಸ್ಸಿಗೆ ಎಲ್ಲಾ ಇಲಾಖೆಯಲ್ಲಿ ಭ್ರಷ್ಟಾಚಾರ ಮಾಡಿ ಅಭ್ಯಾಸವಾಗಿದೆ. ಅದೇ […]

ರಾಜ್ಯ ಸರ್ಕಾರ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದೆ: ನಾ.ಸುಬ್ರಹ್ಮಣ್ಯ

Monday, January 29th, 2018
government

ಮಂಗಳೂರು: ಕೋಮು ಗಲಭೆಯಲ್ಲಿ ಮುಗ್ಧ ಅಲ್ಪಸಂಖ್ಯಾತರ ಮೇಲಿನ ಪ್ರಕರಣಗಳನ್ನು ಕೈಬಿಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಹಿಂದೂ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ. ಆದ್ದರಿಂದ ಈ ಆದೇಶವನ್ನು ಸರ್ಕಾರ ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಮಹಾಸಭಾ ರಾಜ್ಯಾಧ್ಯಕ್ಷ ನಾ.ಸುಬ್ರಹ್ಮಣ್ಯ ರಾಜು ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ವೇಳೆ ಎಸ್‌ಡಿಪಿಐ, ಪಿಎಫ್ಐ ಸಂಘಟನೆಗಳ ವಿರುದ್ಧದ 140ಕ್ಕೂ ಅಧಿಕ ಗಂಭೀರ ಪ್ರಕರಣಗಳನ್ನು ಹಿಂದಕ್ಕೆ ಪಡೆದಿತ್ತು. ಇದರಿಂದ ರಾಜ್ಯದಲ್ಲಿ ಕೋಮು ಗಲಭೆಗಳು ಜಾಸ್ತಿಯಾಗಿದೆಯೇ ವಿನಃ […]

ನನ್ನನ್ನು ಬಂಧಿಸಲು ಸರಕಾರ ಕುತಂತ್ರ ರೂಪಿಸುತ್ತಿದೆ: ವಜ್ರದೇಹಿ ಸ್ವಾಮೀಜಿ

Friday, January 19th, 2018
vajra-dehi-mutt

ಮಂಗಳೂರು: ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ವಿರುದ್ಧ ರಾಜ್ಯ ಸರಕಾರ ಕೆಂಗಣ್ಣು ಬೀರಿದೆ. ಮೂರು ವರ್ಷಗಳ ಹಿಂದೆ ನಡೆದ ಉಳಾಯಿಬೆಟ್ಟು ಘರ್ಷಣೆ ಪ್ರಕರಣವನ್ನು ಸರ್ಕಾರ ಮತ್ತೆ ಕೆದಕಿದ್ದು ಸ್ವಾಮೀಜಿಗೆ ನೋಟಿಸ್ ಜಾರಿ ಮಾಡಿದೆ. 2014ರ ಡಿಸೆಂಬರ್ 9 ರಂದು ಮಂಗಳೂರು ಹೊರವಲಯದ ಉಳಾಯಿಬೆಟ್ಟುವಿನಲ್ಲಿ ದತ್ತ ಮಾಲಾಧಾರಿಗಳ ಹಲ್ಲೆ ಖಂಡಿಸಿ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ನಿಷೇಧಾಜ್ಞೆಯ ನಡುವಿನಲ್ಲಿಯೂ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತೆರಳಿ ಘರ್ಷಣೆ ನಡೆದಿತ್ತು. ಈ ವೇಳೆ ಸ್ವಾಮೀಜಿ ಸೇರಿದಂತೆ ಹಿಂದೂ ಸಂಘಟನೆಯ ಮುಖಂಡರ […]

ಮುಸ್ಲಿಂ ತುಷ್ಠೀಕರಣ ನೀತಿಯಿಂದ ಹಿಂದೂಗಳ ಹತ್ಯೆ ಹೆಚ್ಚುತ್ತಿದೆ: ಸಂಸದ ನಳಿನ್‌ ಆರೋಪ

Thursday, January 4th, 2018
Nalin-kumar

ಮಂಗಳೂರು: ರಾಜ್ಯ ಸರ್ಕಾರದ ಮುಸ್ಲಿಂ ತುಷ್ಠೀಕರಣ ನೀತಿಯಿಂದ ಹಿಂದೂಗಳ ಹತ್ಯೆ ಹೆಚ್ಚುತ್ತಿದೆ. ಇದೀಗ ಕಾಟಿಪಳ್ಳದಲ್ಲಿ ದೀಪು ಯಾನೆ ದೀಪಕ್‌ ರಾವ್‌‌ ಹತ್ಯೆ ಕೂಡಾ ನಡೆದಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ. ದಿಲ್ಲಿಯಲ್ಲಿ ಸಂಸತ್‌‌ ಅಧಿವೇಶನದಲ್ಲಿರುವ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಹಿಂದೆ ಜಿಲ್ಲೆಯಲ್ಲಿ ನಡೆದ ಹತ್ಯೆ ಪ್ರಕರಣಗಳ ಆರೋಪಿಗಳನ್ನು ಬಂಧಿಸದೆ, ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳದಿರುವುದರಿಂದಲೇ ಕೊಲೆಗಳು ಹೆಚ್ಚುತ್ತಿದೆ. ಸರ್ಕಾರದ ನಿರ್ಲಕ್ಷ್ಯ ಹಾಗೂ ಮುಸ್ಲಿಂ ತುಷ್ಠೀಕರಣದಿಂದ ಮತ್ತೊಂದು ಹೆಣ ಉರುಳಿದೆ. […]

ನಂತೂರು ವೃತ್ತ ಕಾಮಗಾರಿಗೆ ಸಿಎಂ 60 ಲಕ್ಷ ರೂಪಾಯಿ ಮಂಜೂರು: ಶಾಸಕ ಜೆ.ಆರ್.ಲೋಬೊ

Friday, December 15th, 2017
j-r-lobo

ಮಂಗಳೂರು: ನಂತೂರು ವೃತ್ತದ ಕಾಮಗಾರಿಗೆ ಮುಖ್ಯಮಂತ್ರಿಗಳು 60 ಲಕ್ಷ ರೂಪಾಯಿ ನೀಡಿದ್ದು ಈ ಕೆಲಸವನ್ನು ಮುಂದಿನ ಜನವರಿಯಲ್ಲಿ ಆರಂಭಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು. ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ ಈ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು ಡಿಸೆಂಬರ್ 24 ಕ್ಕೆ ಟೆಂಡರ್ ತೆಗೆದು ತಕ್ಷಣ ಕಾಮಗಾರಿಯನ್ನು ಒಪ್ಪಿಸಲಾಗುವುದು ಎಂದರು. ರಾಜ್ಯ ಸರ್ಕಾರದ ವತಿಯಿಂದ ಇಲ್ಲಿ ಬಸ್ ನಿಲ್ದಾಣ ತೆರವು ಮಾಡಿಸಿ ವ್ಯವಸ್ಥಿತವಾಗಿ ಬಸ್ ಗಳು ನಿಲ್ಲುವುದಕ್ಕೆ ಮತ್ತು ಪ್ರಯಾಣಿಕರು ಬಸ್ ಹತ್ತುವುದಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದರು. […]

ಕಲ್ಲಡ್ಕ: ಧನ ಸಹಾಯವನ್ನು ನಿಲ್ಲಿಸಿದ ಸರ್ಕಾರಕ್ಕೆ ಅನ್ನ ಸೃಷ್ಟಿಸುವ ಪಾಠ

Tuesday, October 24th, 2017
kalladka

ಮಂಗಳೂರು: ಅನ್ನ ಕಿತ್ತುಕೊಂಡ ಸರ್ಕಾರಕ್ಕೆ ಅನ್ನ ಸೃಷ್ಟಿಸುವ ಪಾಠ ಹೇಳಿಕೊಟ್ಟಿದ್ದಾರೆ. ಕಲ್ಲಡ್ಕ ಶಾಲೆಗೆ ಮಧ್ಯಾಹ್ನ ಊಟಕ್ಕಾಗಿ ಬರುತ್ತಿದ್ದ ಧನ ಸಹಾಯವನ್ನು ನಿಲ್ಲಿಸಿದ ರಾಜ್ಯ ಸರ್ಕಾರಕ್ಕೆ ಕಲ್ಲಡ್ಕ ಶಾಲೆಯ ಮಕ್ಕಳು ಸೆಡ್ಡು ಹೊಡೆದಿದ್ದಾರೆ. ಸುದೇಕಾರು ಎಂಬಲ್ಲಿನ ಶಾಲೆಯ ಗದ್ದೆಯಲ್ಲಿ ಶಾಲಾ ಮಕ್ಕಳು ಶುದ್ಧ ಸಾವಯವ ಬಂಗಾರದ ಬೆಳೆ ಬೆಳೆದಿದ್ದಾರೆ. ಕಲ್ಲಡ್ಕ ಶಾಲೆಯ ಮಕ್ಕಳೇ ನಾಟಿ ಮಾಡಿ ಗೊಬ್ಬರ ಹಾಕಿ ಪೋಷಿಸಿದ್ದಾರೆ. ಮಕ್ಕಳ ಬೆವರು ಈಗ ಭತ್ತವಾಗಿ ಪರಿವರ್ತನೆಗೊಂಡಿದೆ. ಸುಮಾರು ಎರಡು ಎಕರೆ ಗದ್ದೆಯಲ್ಲಿ ಶಾಲಾ ಮಕ್ಕಳು ಸೇರಿ ಭತ್ತ […]

ನೀರುಪಾಲಾಗಿದ್ದ ಅರ್ಚಕ ವಾಸುದೇವ ಭಟ್ ಅವರ ಕುಟುಂಬಕ್ಕೆ ಪರಿಹಾರ ಘೋಷಣೆ :ರಾಜ್ಯ ಸರ್ಕಾರ

Saturday, October 14th, 2017
Vasudeva bhat

ಬೆಂಗಳೂರು: ಶುಕ್ರವಾರ ಸುರಿದ ಭಾರಿ ಮಳೆಯಲ್ಲಿ ನೀರುಪಾಲಾಗಿದ್ದ ಅರ್ಚಕ ವಾಸುದೇವ ಭಟ್ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ ಶನಿವಾರ ಪರಿಹಾರ ಘೋಷಣೆ ಮಾಡಿದೆ.ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದು, ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿರುವ ಅರ್ಚಕ್ ವಾಸುದೇವ್ ಅವರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ವಾಸುದೇವ್ ಅವರ ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನೂ ಕೂಡ ಸರ್ಕಾರವೇ ಭರಿಸಲಿದೆ ಎಂದು ಹೇಳಿದ್ದಾರೆ. ಇಂದು ಬೆಳಗ್ಗೆ ಘಟನೆ ನಡೆದಿದ್ದ ಕುರುಬರ ಹಳ್ಳಿಗೆ […]