Blog Archive

ರಾಹುಲ್ ಜನಾಶೀರ್ವಾದ ಯಾತ್ರೆಗೆ ಸಿಕ್ಕ ಬೆಂಬಲದಿಂದ ಬಿಜೆಪಿಗೆ ನಿರಾಶೆ: ಐವನ್‌ ಡಿಸೋಜಾ

Monday, March 5th, 2018
ivan-desouza

ಮಂಗಳೂರು: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರ ಜನಾಶೀರ್ವಾದ ಯಾತ್ರೆಗೆ ರಾಜ್ಯದಲ್ಲಿ ಸಿಗುತ್ತಿರುವ ಜನಬೆಂಬಲದಿಂದ ಬಿಜೆಪಿಗೆ ನಿರಾಸೆಯಾಗಿದ್ದು, ಸೋಲಿನ ಭೀತಿ ಕಾಡಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ, ರಾಜ್ಯ ಕಾಂಗ್ರೆಸ್ ವಕ್ತಾರ ಐವನ್ ಡಿಸೋಜಾ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಯಾತ್ರೆಗೆ ಅಭೂತಪೂರ್ವ ಜನಬೆಂಬಲ ದೊರೆತಿದೆ. ರಾಜ್ಯ ಸರ್ಕಾರದ ಅಭಿವೃದ್ಧಿ ಕೆಲಸಗಳಿಗೂ ಜನ ಮನ್ನಣೆ ದೊರೆತಿದೆ. ಆದರೆ ಮೋದಿಯವರು ಬೆಂಗಳೂರು, ದಾವಣಗೆರೆಯಲ್ಲಿ ನಡೆಸಿದ ಸಭೆಗೆ ನಿರೀಕ್ಷಿತ ಪ್ರಮಾಣದಲ್ಲಿ ಜನೋತ್ಸಾಹ ಕಂಡಿಲ್ಲ. ಇದರಿಂದ ಕಂಗೆಟ್ಟಿರುವ ಬಿಜೆಪಿ […]

ದೇಶದ ಉನ್ನತ್ತಿಗೆ ವಿಜ್ಞಾನ ತಂತ್ರಜ್ಞಾನ ಅಗತ್ಯ : ಬಿ.ಆರ್. ಗುರುಪ್ರಸಾದ್

Friday, March 2nd, 2018
guruprasad

ಮಂಗಳೂರು: ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಂಡು ಜನರಿಗೆ ಅರಿವು ನೀಡುವುದು ಎಲ್ಲರ ಜವಾಬ್ದಾರಿಯಾಗಿದ್ದು, ದೇಶದ ಅಭಿವೃದ್ಧಿಗೆ ಇದು ಅತ್ಯಗತ್ಯ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಿಜ್ಞಾನಿ ಬಿ.ಆರ್. ಗುರುಪ್ರಸಾದ್ ಹೇಳಿದರು. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೊ ಸೊಸೈಟಿ ಮತ್ತು ಪಿಲಿಕುಳ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ನಗರದ ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭೂಮಿಯಲ್ಲಿರುವ ಪ್ರತಿಯೊಂದು ವಸ್ತುವು ಮುಂದಿನ ಮನುಕುಲಕ್ಕೆ ದೊರೆಯುವಂತಾಗಬೇಕು. […]

‘ರಾಹುಲ್ ಗೆ ಕೊನೆ ದಿಕ್ಕು ಕರ್ನಾಟಕ, ಉಳಿದೆಡೆ ಮಾತನಾಡೋರು ಗತಿಯಿಲ್ಲ’

Wednesday, February 21st, 2018
yedeyurappa

ಮಂಗಳೂರು : ರಾಹುಲ್ ಗಾಂಧಿ ಅವರು ಬಂದರೆ ಕರ್ನಾಟಕಕ್ಕೆ, ಬೆಂಗಳೂರಿಗೆ ಬರಬೇಕು. ಏಕೆಂದರೆ ಬೇರೆಲ್ಲೂ ಕಾಂಗ್ರೆಸ್ ಅಧಿಕಾರದಲ್ಲಿಲ್ಲ. ಇವರು ಹೋದರೆ ಮಾತನಾಡಿಸುವವರು ಸಹ ಗತಿ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಂಗಳೂರಿನಲ್ಲಿ ಶಕ್ತಿ ಕೇಂದ್ರ ಪ್ರಮುಖರ ಸಮಾವೇಶದಲ್ಲಿ ಬುಧವಾರ ವ್ಯಂಗ್ಯವಾಡಿದರು. ಉತ್ತರಪ್ರದೇಶದಲ್ಲಿ ಬಿಜೆಪಿ ಮೂನ್ನೂರಾ ಇಪ್ಪತ್ತೈದು ಸ್ಥಾನ ಗೆಲ್ಲುತ್ತದೆ ಅಂತ ಯಾವ ಮಾಧ್ಯಮದ ಬಂಧುಗಳು ನಿರೀಕ್ಷೆ ಮಾಡಿರಲಿಲ್ಲ. ಉತ್ತರ ಪ್ರದೇಶದಲ್ಲಿ ಕ್ರಾಂತಿಯಾಯಿತು. ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು, ರಾಹುಲ್ ಗಾಂಧಿಯವರು ಇಲ್ಲೂ ಕಾಲಿಡದಂತೆ ಮಾಡಬೇಕು ಎಂದರು. […]

‘ಕಲ್ಲಡ್ಕ ಕೆಟಿ’ಯಿಂದಲೇ ರಾಹುಲ್‌ ಯಾತ್ರೆ ಶುರು

Monday, February 19th, 2018
rahul-gandhi

ಮಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಮೂರನೇ ಹಂತದ ಜನಾಶೀರ್ವಾದ ಯಾತ್ರೆ ಕರಾವಳಿ ಭಾಗದಲ್ಲಿ ಮಾರ್ಚ್‌ ಮೊದಲ ವಾರದಲ್ಲಿ ಆರಂಭವಾಗಲಿದ್ದು, ಬಂಟ್ವಾಳ ವಿಧಾನಸಭಾ ಕ್ಷೇತ್ರದ ‘ಕಲ್ಲಡ್ಕ ಕೆಟಿ’ಯಿಂದಲೇ ಶುರುವಾಗುವುದು ಬಹುತೇಕ ನಿಶ್ಚಿತವಾಗಿದೆ. ಈಗಾಗಲೇ ಹೈದರಾಬಾದ್ ಕರ್ನಾ ಟಕದಲ್ಲಿ ಜನಾಶೀರ್ವಾದ ಯಾತ್ರೆಯ ಯಶಸ್ಸಿನಿಂದ ಬೀಗುತ್ತಿರುವ ರಾಜ್ಯ ಕಾಂಗ್ರೆಸ್‌ ನಾಯಕರು, ಕರಾವಳಿ ಭಾಗದಲ್ಲಿಯೂ ಅದೇ ರೀತಿಯ ಯಾತ್ರೆ ಆಯೋಜಿಸಲು ಭರದ ಸಿದ್ಧತೆ ನಡೆಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಗಮನ ಸೆಳೆದಿದ್ದ ಕಲ್ಲಡ್ಕದಿಂದಲೇ ರಾಹುಲ್‌ ಯಾತ್ರೆ ಆರಂಭಿಸಲು ಕಾಂಗ್ರೆಸ್‌ ನಾಯಕರು […]

ಕರಾವಳಿಯಲ್ಲಿ ರಂಗೇರಿದ ಚುನಾವಣಾ ಕದನ: ಕೈ-ಕಮಲದಿಂದ ಭರ್ಜರಿ ತಯಾರಿ

Saturday, February 17th, 2018
election

ಮಂಗಳೂರು: ಕರಾವಳಿಯಲ್ಲಿ ವಿಧಾನಸಭಾ ಚುನಾವಣೆ ರಂಗೇರುತ್ತಿದೆ. ಒಂದು ಕಡೆ ಪಕ್ಷೇತರ ಅಭ್ಯರ್ಥಿಗಳು ವೈಯಕ್ತಿಕವಾಗಿ ಈಗಾಗಲೇ ಪ್ರಚಾರದಲ್ಲಿ ತೊಡಗಿದರೆ, ಮತ್ತೊಂದಡೆ ಬಿಜೆಪಿ ಮತ್ತು ಕಾಂಗ್ರೆಸ್‌‌ ಪಕ್ಷಗಳು ತಮ್ಮ ರಾಷ್ಟ್ರಮಟ್ಟದ ನಾಯಕರನ್ನು ಇಲ್ಲಿಗೆ ಬರಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಪರವಾಗಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಎರಡು ಬಾರಿ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದರೆ, ಇದೀಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌‌‌‌ ಶಾ ಅವರ ಸರದಿಯಾಗಿದೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಲಿರುವ ಅಮಿತ್‌‌‌ ಶಾ, ಫೆ. 19ರಿಂದ ಮೂರು ದಿನಗಳ ಕಾಲ ಕರಾವಳಿ […]

ಪ್ರಶ್ನೆಗಳಿಗೆ ಉತ್ತರಿಸಿ, ಆರೋಪಗಳು ಬೇಡ: ಪ್ರಧಾನಿಗೆ ರಾಹುಲ್ ತಿರುಗೇಟು

Wednesday, February 7th, 2018
rahul-gandhi

ನವದೆಹಲಿ: “ಪ್ರಶ್ನೆಗಳಿಗೆ ಉತ್ತರ ನೀಡಿ. ನಿಮ್ಮ ಆರೋಪಗಳು ಬೇಕಾಗಿಲ್ಲ,” ಎಂದು ಲೋಕಸಭೆಯಲ್ಲಿ ದೀರ್ಘ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಫೆಲ್ ಡೀಲ್, ರೈತರು ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕು ಎಂದು ರಾಹುಲ್ ಆಗ್ರಹಿಸಿದರು. ರಾಹುಲ್ ಗಂಭೀರ ಆರೋಪ “ನಾನು ವಿರೋಧ ಪಕ್ಷದ ನಾಯಕ ಅಲ್ಲ, ಪ್ರಧಾನಿ ಎಂಬುದನ್ನು ಅವರು ಮರೆತಂತೆ ಕಾಣಿಸುತ್ತಿದೆ,” ಎಂದು ವರದಿಗಾರರಿಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದರು. “ಪ್ರಧಾನಿಗೆ […]

4ನೇ ವಿಶ್ವಕಪ್‌‌ಗೆ ಮುತ್ತಿಕ್ಕಿದ ರಾಹುಲ್‌ ಸೈನ್ಯಕ್ಕೆ ಬಹುಮಾನ ಘೋಷಿಸಿದ ಬಿಸಿಸಿಐ

Saturday, February 3rd, 2018
world-cup

ನವದೆಹಲಿ: ನಾಲ್ಕು ಬಾರಿ ಐಸಿಸಿ ಅಂಡರ್-19 ವಿಶ್ವಕಪ್‌‌ ಗೆದ್ದು ಇತಿಹಾಸ ನಿರ್ಮಿಸಿರುವ ಟೀಂ ಇಂಡಿಯಾಕ್ಕೆ ಬಿಸಿಸಿಐ ನಗದು ಬಹುಮಾನ ಘೋಷಿಸಿದೆ. ಇಂದು ನ್ಯೂಜಿಲೆಂಡ್‌ನ ಓವಲ್‌ ಮೈದಾನದಲ್ಲಿ ಫೈನಲ್‌‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪೃಥ್ವಿ ಶಾ ಪಡೆ 8 ವಿಕೆಟ್‌ಗಳಿಂದ ಭರ್ಜರಿ ಗೆಲವು ಸಾಧಿಸಿದೆ. ಈ ಮೂಲಕ ನಾಲ್ಕು ಬಾರಿ ವಿಶ್ವಕಪ್‌ ಎತ್ತಿ ಹಿಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಟೀಂ ಇಂಡಿಯಾ ಪಾತ್ರವಾಗಿದೆ. ಫೈನಲ್‌ ಪಂದ್ಯದಲ್ಲಿ ಪೃಥ್ವಿ ಶಾ ಪಡೆ ಜಯ ದಾಖಲಿಸುತ್ತಿದ್ದಂತೆ ಭಾರತೀಯ ಕ್ರಿಕೆಟ್‌ ನಿಯಂತ್ರಣ […]

ಭಾರತ ಆತಂಕದಲ್ಲಿದೆ…ಬಹ್ರೇನ್‌ನಲ್ಲಿ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

Tuesday, January 9th, 2018
rahul-gandhi

ಬಹ್ರೇನ್: ವಿದೇಶ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬಹ್ರೇನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಹ್ರೇನ್‌ನ ಮನಮ್‌ನಲ್ಲಿರುವ ಅನಿವಾಸಿ ಭಾರತೀಯರನ್ನು ರಾಹುಲ್ ಭೇಟಿಯಾಗಿ ಸಂವಾದ ನಡೆಸಿದರು. ಬಹ್ರೇನ್ ಬಳಿಕ ಕಾಂಗ್ರೆಸ್ ಯುವರಾಜ ಕೆನಡಾ ಹಾಗೂ ಸಿಂಗಪೂರ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಅನಿವಾಸಿ ಭಾರತಿಯರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಮೋದಿ ಸರ್ಕಾರದ ಜಿಎಸ್‌ಟಿ ಹಾಗೂ ನೋಟ್ ಬ್ಯಾನ್ ನಿರ್ಧಾರದಿಂದ ದೇಶದ ಆರ್ಥಿಕತೆ ಹದಗೆಟ್ಟಿದೆ ಎಂದು ದೂರಿದರು. ದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಮೋದಿ ಸರ್ಕಾರ […]