Blog Archive

ಶಬರಿಮಲೆಗೆ ಮಹಿಳೆಯರ ಪ್ರವೇಶ: ಮಂಗಳೂರಿನ ಅಯ್ಯಪ್ಪ ಸೇವಾ ಸಮಿತಿ ಪ್ರತಿಭಟನೆ ನಡೆಸಲು ನಿರ್ಧಾರ

Tuesday, October 9th, 2018
ayyappa-swami

ಮಂಗಳೂರು: ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಮಂಗಳೂರಿನ ಅಯ್ಯಪ್ಪ ಸೇವಾ ಸಮಿತಿ ಬೃಹತ್ ಹೋರಾಟ ನಡೆಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಕದ್ರಿ ಮೈದಾನದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸೇರಿ ಸಭೆ ನಡೆಸಲು ತೀರ್ಮಾನಿಸಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ತಿನ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿದರು. ಸಭೆಯ ಬಳಿಕ ಭಜನೆಯ ಮೂಲಕ ಶ್ರೀಕ್ಷೇತ್ರ ಕದ್ರಿಗೆ ತೆರಳಿ ಪ್ರಾರ್ಥನೆ ನಡೆಸಲು ಸಮಿತಿ ನಿರ್ಧರಿಸಿದೆ. ಈ ಸಭೆಯಲ್ಲಿ ವಿವಿಧ ಕಡೆಗಳಿಂದ […]

ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದರೆ ಆಭರಣ ಪೆಟ್ಟಿಗೆ ಸನ್ನಿಧಾನಕ್ಕೆ ತರುವುದಿಲ್ಲ: ಅರಮನೆ ಘೋಷಣೆ

Friday, October 5th, 2018
tiruvabharanam

ಕಾಸರಗೋಡು: ಶಬರಿ ಮಲೆ ದೇವಸ್ಥಾನದ ಹದಿನೆಂಟು ಮೆಟ್ಟಿಲುಗಳನ್ನು ದಾಟಿ ಒಂದೇ ಒಂದು ಹೆಣ್ಣು ಒಳನಡೆದರೂ ಪಂದಳ ರಾಜರ ಅರಮನೆಯಲ್ಲಿರುವ ಆಭರಣದ ಪೆಟ್ಟಿಗೆ ಮುಂದೆಂದೂ ಶಬರಿ ಮಲೆಯ ಸನ್ನಿಧಾನಕ್ಕೆ ಬರುವುದಿಲ್ಲ ತರವುದಿಲ್ಲ ಎಂದು ಅರಮನೆ ಮೂಲಗಳು ಸುತ್ತೋಲೆ ಹೊರಡಿಸಿದೆ. ದೇವಸ್ಥಾನವು ಸರಕಾರದ ಸೊತ್ತಾಗಿರಬಹುದು. ಆದರೆ ಅಯ್ಯಪ್ಪನಿಗೆ ಸಂಬಂಧಪಟ್ಟ ಆಭರಣಗಳು ನಮ್ಮ ಕುಟುಂಬದ ಸ್ವತ್ತಾಗಿರುತ್ತದೆ. ಅದನ್ನ ಬಲವಂತವಾಗಿ ಯಾರೂ ತರಿಸಿಕೊಳ್ಳಲಾಗುವುದಿಲ್ಲ. ಹೆಂಗಸರು ಪ್ರವೇಶಿಸುವ ಶಬರಿಮಲೆಗೆ ಇನ್ನು ಮುಂದೆ ಪಂದಳ ರಾಜಮನೆತನದವರು ಕಾಲಿಡುವುದಿಲ್ಲ ಎಂಬ ಪ್ರಕಟಣೆಯ ಮೂಲಕ ಕರಾರಾಗಿ ಪ್ರಕಟಿಸುತ್ತೇವೆ ಎಂದು […]

ಭಾರತ ಸರ್ಕಾರವು ಶಬರಿಮಲೆಯಲ್ಲಿ ಹಿಂದೂ ಪರಂಪರೆಯನ್ನು ರಕ್ಷಿಸಬೇಕು!

Saturday, September 29th, 2018
trupti-desai

ಮಂಗಳೂರು: ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಎಲ್ಲಾ ವಯಸ್ಸಿನ ಮಹಿಳೆಯರು ದೇವಸ್ಥಾನವನ್ನು ಪ್ರವೇಶಿಸುವಬಹುದೆಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದೆ. ನಾವು ಸರ್ವೋಚ್ಚ ನ್ಯಾಯಾಲಯವನ್ನು ಗೌರವಿಸುತ್ತೇವೆ; ಆದರೆ ನ್ಯಾಯಾಲಯದ ಈ ತೀರ್ಪು ದುರ್ದೈವಿಯಾಗಿದೆ. ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ದೇವಿಯ ಸ್ಥಾನವನ್ನು ನೀಡಿದ್ದು ಅವಳನ್ನು ಪೂಜಿಸಲಾಗುತ್ತದೆ. ಹೀಗಿರುವಾಗ ‘ಇಂಡಿಯನ್ ಯಂಗ್ ಲಾಯರ‍್ಸ್ ಅಸೋಸಿಯೇಷನ್’ನ ಅಧ್ಯಕ್ಷರಾದ ನೌಶಾದ್ ಉಸ್ಮಾನ್ ಖಾನ್ ಇವರು ಹಿಂದೂ ಧರ್ಮಕ್ಕೆ ಸಂಬಂಧಿಸಿ ಸಲ್ಲಿಸಿದ ಅರ್ಜಿಯಿಂದಾಗಿ ಹಿಂದೂಗಳ 800 ವರ್ಷಗಳ ಪರಂಪರೆಯನ್ನು ಭಂಗಗೊಳಿಸಲಾಗಿದೆ, ಇದು ಬುದ್ದಿಗೆ ನಿಲುಕದ್ದಾಗಿದೆ. ಅರ್ಜಿದಾರರು ಸ್ವಧರ್ಮದಲ್ಲಿಯ ಮುಸ್ಲೀಮ್ […]

ಶಬರಿಮಲೆ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅವಕಾಶ ನೀಡಿರುವುದು ಸಂತಸ ತಂದಿದೆ: ಸಚಿವೆ ಜಯಮಾಲ

Friday, September 28th, 2018
jayamala

ಬೆಂಗಳೂರು: ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನಿರಾಕರಿಸುವುದರ ವಿಚಾರವಾಗಿ ಇಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ದೊರೆತ ಹಿನ್ನೆಲೆ ಸಚಿವೆ ಜಯಮಾಲ ಪ್ರತಿಕ್ರಿಯೆ ನೀಡಿದ್ದಾರೆ. ಸುಪ್ರೀಂ ಕೋರ್ಟ್ನಿಂದ ಬಂದ ತೀರ್ಪು ಸ್ವಾಗತಾರ್ಹವಾಗಿದ್ದು, ಹೆಣ್ಣು ಕುಲಕ್ಕೆ ಸುಪ್ರೀಂ ಕೋರ್ಟ್ ನ್ಯಾಯ ನೀಡಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ನಾನು ಸ್ಮರಿಸುತ್ತಿದ್ದೇನೆ. ಮಹಿಳೆಯರಿಗೆ ಸಾಮಾಜಿಕ ನ್ಯಾಯದ ಹೋರಾಟಕ್ಕೆ ಇಂದು ಫಲ ಸಿಕ್ಕಿದೆ ಎಂದರು. ಇನ್ನು ಈ ಬಾರಿ ಮಹಿಳಾ ಸಮುದಾಯಕ್ಕೆ […]

ಬರೋಬ್ಬರಿ 176 ಸಲ ಶಬರಿಮಲೆ ಯಾತ್ರೆ ಕೈಗೊಂಡ ಸುಳ್ಯದ ಶಿವಪ್ರಕಾಶ್‌‌!

Tuesday, January 16th, 2018
shabarimale

ಮಂಗಳೂರು: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವರ ದರ್ಶನಕ್ಕೆ ಏನೇನೋ ಹರಕೆ ಹೊತ್ತವರು, ಇನ್ನು ಕೆಲವರು ವರ್ಷಕ್ಕೊಮ್ಮೆ ವ್ರತದಂತೆ ಹೋಗುವವರೂ ಇದ್ದಾರೆ. 18 ವರ್ಷ ಇರುಮುಡಿ ಹೊತ್ತು ‘ಪದಿನೆಟ್ಟಾಂಪಡಿ’ ಏರಿ ಸ್ವಾಮಿ ದರ್ಶನ ಮಾಡಿ ಗುರುಸ್ವಾಮಿ ಎನಿಸಿಕೊಳ್ಳುತ್ತಾರೆ. ಆದರೆ, ಇಲ್ಲೊಬ್ಬರು ಬರೋಬ್ಬರಿ 176 ಬಾರಿ ಶಬರಿಮಲೆ ಯಾತ್ರೆ ಕೈಗೊಂಡು ದಾಖಲೆ ಮಾಡಿದ್ದಾರೆ. ಧನುರ್ಮಾಸದಲ್ಲಿ ಕಪ್ಪು ಶಾಲು ಧರಿಸಿ, ಹಣೆಯಲ್ಲಿ ವಿಭೂತಿ ಹಚ್ಚಿ, ಕೊರಳಲ್ಲಿ ರುದ್ರಾಕ್ಷಿ ಧರಿಸಿಕೊಂಡ ಅಯ್ಯಪ್ಪ ಭಕ್ತಾದಿಗಳನ್ನು ಅಲ್ಲಲ್ಲಿ ಕಾಣುತ್ತೇವೆ. ಅದರೆ, ಪುತ್ತೂರು ತಾಲೂಕು ಪಂಚಾಯತ್ ಕಚೇರಿಯಲ್ಲಿ […]

ಶಬರಿಮಲೆ ಸೇವಾ ಮತ್ತು ಪ್ರಸಾದಗಳ ಬೆಲೆ ಏರಿಕೆಯನ್ನು ಖಂಡಿಸಿ ರಾಜ್ಯ ಸರಕಾರದ ವಿರುಧ್ದ ಪ್ರತಿಭಟನೆ

Tuesday, August 23rd, 2016
Shabarimale protest

ಪೆರ್ಲ: ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದ ಪೆರ್ಲ ಇದರ ನೇತೃತ್ವದಲ್ಲಿ ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದ ವಠಾರದಲ್ಲಿ ಶಬರಿಮಲೆ ಸೇವಾ ಮತ್ತು ಪ್ರಸಾದಗಳ ಬೆಲೆ ಏರಿಕೆಯನ್ನು ಖಂಡಿಸಿ ರಾಜ್ಯ ಸರಕಾರದ ವಿರುಧ್ದ ಪ್ರತಿಭಟನಾ ಸಭೆ ಭಾನುವಾರ ನಡೆಯಿತು. ಶಬರಿಮಲೆ ದೇಶವ್ಯಾಪಿ ಪ್ರಸಿಧ್ಧಿ ಪಡೆದ ಕ್ಷೇತ್ರವಾಗಿದ್ದು ಸರಕಾರದ ಖಜಾನೆಗೆ ಕೋಟಿ ಆದಾಯ ಬರುತ್ತಿದೆ. ಹಾಗಿದ್ದರೂ ಮತ್ತೂ ಬೆಲೆ ಏರಿಕೆ ನಡೆಸಿದ್ದು ರಾಜ್ಯಸರಕಾರದ ನಿಲುವು ಖಂಡನೀಯ. ಈ ಬಗ್ಗೆ ಹಿಂದೂ ಸಂಘಟನೆಗಳು, ಅಯ್ಯಪ್ಪ ಭಕ್ತವೃಂದಗಳು ರಾಜಕೀಯ ಬೇಧ ಮರೆತು ಪ್ರತಿಭಟಿಸಬೇಕಾದ […]

ಟಿ.ಡಿ.ಪಿ.ಯ ಅಧ್ಯಕ್ಷ ಎಮ್.ರಾಜಗೊಪಾಲನ್ ನಾಯರ್ ಅಮಾನತಿಗಾಗಿ ಶ್ರೀ ರಾಮ ಸೇನೆ ಪ್ರತಿಭಟನೆ

Tuesday, February 8th, 2011
ಶ್ರೀ ರಾಮ ಸೇನೆ ಪ್ರತಿಭಟನೆ

ಮಂಗಳೂರು: ಶ್ರೀ ರಾಮ ಸೇನೆ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ಜಿಲ್ಲಾಧಿಕಾರಿ ಕಛೇರಿ ಮಂಗಳೂರು ಇದರ ಮುಂಭಾಗದಲ್ಲಿ ಶಬರಿಮಲೆ ದೇವಸ್ವಂ ಮಂಡಳಿ ಮತ್ತು ಟಿ.ಡಿ.ಪಿ.ಯ ಅಧ್ಯಕ್ಷ ಎಮ್.ರಾಜಗೊಪಾಲನ್ ನಾಯರ್ ಹೇಳಿಕೆಯನ್ನು ವಿರೋಧಿಸಿ ಸೋಮವಾರ ಬೆಳಿಗ್ಗೆ ಪ್ರತಿಭಟನೆಯನ್ನು ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ರಾಮ ಸೇನೆ ಜಿಲ್ಲಾಧ್ಯಕ್ಷ ಕುಮಾರ್ ಮಾಲೆಮಾರ್, ಶಬರಿಮಲೆ ಮಕರ ಜ್ಯೋತಿ ಮಾನವ ನಿರ್ಮಿತ ಎಂದು ದೇವಸ್ವಂ ಮಂಡಳಿ ಮತ್ತು ಟಿ.ಡಿ.ಪಿ.ಯ ಅಧ್ಯಕ್ಷ ಎಮ್.ರಾಜಗೊಪಾಲನ್ ನಾಯರ್ ಸ್ಪಷ್ಟನೆ ನೀಡಿರುವುದನ್ನು ಶ್ರೀ ರಾಮಸೇನೆ […]