Blog Archive

ದುರಹಂಕಾರ ಬಿಟ್ಟರೆ ಸಿದ್ದರಾಮಯ್ಯ ಉಳೀತಾರೆ: ಬಿ ಜನಾರ್ದನ ಪೂಜಾರಿ

Wednesday, May 9th, 2018
janardhan-poojary

ಮಂಗಳೂರು: ಪತ್ರಿಕಾಗೋಷ್ಠಿಗಳಿಂದ ದೂರ ಉಳಿದಿದ್ದ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೆಪಿಸಿಸಿ ಅಧ್ಯಕ್ಷ ಬಿ ಜನಾರ್ದನ ಪೂಜಾರಿ ಮತ್ತೆ ಮೈಕ್ ಎತ್ತಿಕೊಂಡಿದ್ದಾರೆ. ಕಾಂಗ್ರೆಸ್ ಕಚೇರಿಗಳಿಂದ ದೂರ ಉಳಿದಿದ್ದ ಪೂಜಾರಿ ಇಂದು ಕಾಂಗ್ರೆಸ್ ಕಚೇರಿಯಲ್ಲೇ ಮಾಧ್ಯಮಗೋಷ್ಠಿ ನಡೆಸಿದರು. ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಜನಾರ್ದನ ಪೂಜಾರಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಿವಿಮಾತು ಹೇಳಿದರು. “ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಾನು ಸಲಹೆಗಳನ್ನು ಕೊಟ್ಟಿದ್ದು ನಿಜ. ದುರಹಂಕಾರಿ ಮನೋಭಾವ ಬದಲಿಸದಿದ್ದರೆ ಸೋಲುತ್ತಾರೆ ಎಂದು ಹೇಳಿದ್ದೆ. ಪಕ್ಷಕ್ಕಿಂತ ತಾನೇ ದೊಡ್ಡವನೆಂದು ನಡೆದುಕೊಂಡರೆ ಉಳಿಗಾಲವಿಲ್ಲ ಎಂದಿದ್ದೆ. ಈಗಲೂ ಹೇಳುತ್ತೇನೆ, […]

ಉಭಯ ಜಿಲ್ಲೆಗಳಲ್ಲಿ ಕಳೆದ ಬಾರಿಗಿಂತ ಎರಡು ಸ್ಥಾನ ಜಾಸ್ತಿ -ಡಿ.ಕೆ. ಶಿವಕುಮಾರ್

Thursday, May 3rd, 2018
vasanth-bangera

ಬೆಳ್ತಂಗಡಿ: ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು ಉಭಯ ಜಿಲ್ಲೆಗಳಲ್ಲಿ ಕಳೆದ ಬಾರಿಗಿಂತ ಎರಡು ಸ್ಥಾನ ಜಾಸ್ತಿ ಗಳಿಸಲಿದ್ದೇವೆ ಎಂದು ಇಂಧನ ಸಚಿವ ಹಾಗೂ ರಾಜ್ಯ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು. ಅವರು ಬುಧವಾರ ಬೆಳ್ತಂಗಡಿ ಅಂಬೇಡ್ಕರ್ ಭವನದ ಬಳಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಾಗೂ ಮಾಜಿ ಸಚಿವ ಕೆ. ಗಂಗಾಧರ ಗೌಡ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕತರರ್ನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿ […]

ಬೆಳ್ತಂಗಡಿ ಕ್ಷೇತ್ರದ ಅಭ್ಯರ್ಥಿಯಾಗಿ ಕೆ.ವಸಂತ ಬಂಗೇರ ನಾಮಪತ್ರ ಸಲ್ಲಿಕೆ

Friday, April 20th, 2018
vasanth-bangera

ಬೆಳ್ತಂಗಡಿ : ಬೆಳ್ತಂಗಡಿ ಕ್ಷೇತ್ರದ ಅಭ್ಯರ್ಥಿಯಾಗಿ ಕೆ.ವಸಂತ ಬಂಗೇರ ರವರು ಇಂದು ನಾಮಪತ್ರವನ್ನು ಸಲ್ಲಿಸಿದರು. ಬಿ. ಜನಾರ್ದನ ಪೂಜಾರಿ ಯವರನ್ನು ಭೇಟಿಯಾಗಿ ಅವರ ಆಶಿರ್ವಾದವನ್ನು ಪಡೆದರು. ಈ ಸಂಧರ್ಭ, ನಿಮ್ಮ ಗೆಲುವು ನಿಶ್ಚಿತ, ಆ ದೇವರು ಸಚಿವನಾಗಿ ಜನಸೇವೆ ಗೈಯುವ ಅವಕಾಶ ನಿಮಗೆ ನೀಡಲಿ, ಎಂದು ಜನಾರ್ದನ ಪೂಜಾರಿ ಹರಸಿದರು. ಮಾನ್ಯ ಶಾಸಕರೊಂದಿಗೆ ಬೆಳ್ತಂಗಡಿ ನಗರ ಪಂಚಾಯತ್ ಅಧ್ಯಕ್ಷರಾದ ಮುಗುಳಿ ನಾರಾಯಣ ಭಟ್, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷರಾದ ಶ್ರೀನಿವಾಸ್ ಕಿಣಿ, ಯುವ ಕಾಂಗ್ರೆಸ್ ಬೆಳ್ತಂಗಡಿ […]

ಕಲ್ಲಡ್ಕ ಪ್ರಭಾಕರ್‌ ಭಟ್‌ ವಿರುದ್ಧ ಕಾಂಗ್ರೆಸ್‌ನಿಂದ ದೂರು

Saturday, April 7th, 2018
prabhakar-bhat

ಮಂಗಳೂರು: ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಆರ್‌ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ದೂರು ದಾಖಲಿಸಿದೆ. ಚುನಾವಣಾಧಿಕಾರಿ ವೈಶಾಲಿಗೆ ದ.ಕ. ಜಿಲ್ಲಾ ಕಾಂಗ್ರೆಸ್ ಮುಖಂಡರು ದೂರು ನೀಡಿದ್ದಾರೆ. ಬಿಜೆಪಿ ಮುಖಂಡ ರಾಜಾರಾಂ ಭಟ್ ಆಯೋಜಿಸಿದ್ದ ಉಪವಾಸ ಸತ್ಯಾಗ್ರಹ ಪ್ರತಿಭಟನೆಯಲ್ಲಿ ಕಲ್ಲಡ್ಕ ಪ್ರಭಕರ್ ಭಟ್‌ ಕೋಮು ದ್ವೇಷದಿಂದ ಕೂಡಿದ ಭಾಷಣ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ದೂರಿದ್ದಾರೆ. ಚುನಾವಣೆ ಮುಗಿಯುವವರೆಗೆ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸಬೇಕು ಎಂದು ಕಾಂಗ್ರೆಸ್ […]

ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿ ಎಸಿಬಿ ಬಲೆಗೆ

Friday, April 6th, 2018
harish-kumar

ಮಂಗಳೂರು: 94 ಸಿ ಅಡಿ ಜಾಗ ಮಂಜೂರಾತಿಗೆ ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಲೆಕ್ಕಾಧಿಕಾರಿಯನ್ನು ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ. ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಮಹಿಳೆಯೊಬ್ಬರ ದೂರಿನ ಮೇರೆಗೆ ಪುತ್ತಿಲ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಹರೀಶ್ ಕುಮಾರ್ ಮಹಿಳೆಯಿಂದ 5000 ರೂ. ಲಂಚದ ಹಣವನ್ನು ಸ್ವೀಕರಿಸುವಾಗ ಎಸಿಬಿ ಪೊಲೀಸರಿಗೆ ರೆಡ್ ಹಾಂಡ್ ಆಗಿ ಟ್ರ್ಯಾಪ್ ಆಗಿದ್ದಾರೆ. ಮಹಿಳೆಯು 94-ಸಿ ಅಡಿಯಲ್ಲಿ ಜಾಗ ಮಂಜೂರಿಗಾಗಿ ಅರ್ಜಿ ಸಲ್ಲಿಸಿದ್ದು ಸುಮಾರು ಒಂದೂವರೆ ವರ್ಷ ಆದರೂ ಅವರ ಅರ್ಜಿಯನ್ನು ಗ್ರಾಮ ಲೆಕ್ಕಾಧಿಕಾರಿಯವರು […]

ಸುಳ್ಳು ಹೇಳುವುದು ಬಿಜೆಪಿಯವರ ಹುಟ್ಟು ಗುಣ: ರಾಮಲಿಂಗಾರೆಡ್ಡಿ ವಾಗ್ದಾಳಿ

Tuesday, March 6th, 2018
ramlinga-reddy

ಮಂಗಳೂರು: ಬಿಜೆಪಿಯವರು ವಿನಾಕಾರಣ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಬಿಜೆಪಿಯವರಿಗೆ ಸುಳ್ಳು ಹೇಳುವುದು ಹುಟ್ಟು ಗುಣವೆಂದು ರಾಜ್ಯದ ಗೃಹ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು. ಮುಲ್ಕಿ -ಹಳೆಯಂಗಡಿಯ ಓಂ ಅಪಾರ್ಟ್‌ಮೆಂಟ್‌ ಸಭಾಂಗಣದಲ್ಲಿ ಜರುಗಿದ ಮೂಡಬಿದ್ರಿ ಕ್ಷೇತ್ರದ ಮೂಲ್ಕಿ ಬ್ಲಾಕ್ ಕಾಂಗ್ರೆಸ್ಸಿನ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಳೆದ ಐದು ವರ್ಷಗಳಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ ಶಿಕ್ಷಣ, ರಸ್ತೆ, ನೀರಾವರಿ ಸೇರಿದಂತೆ […]

ಜನ ಸುರಕ್ಷಾ ಯಾತ್ರೆ ಜನರ ದಾರಿ ತಪ್ಪಿಸುವ ಯಾತ್ರೆ: ಸಚಿವ ರೈ

Monday, March 5th, 2018
ramanath-rai

ಮಂಗಳೂರು: ಬಿಜೆಪಿಯು ಜನ ಸುರಕ್ಷಾ ಯಾತ್ರೆಯನ್ನು ಪ್ರಚೋದನಾಕಾರಿ ಭಾಷಣ ಮಾಡುವ ಉದ್ದೇಶದಿಂದ ನಡೆಸಲಾಗುತ್ತಿದ್ದು, ಇದು ಜನರ ದಾರಿ ತಪ್ಪಿಸುವ ಯಾತ್ರೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಆರೋಪಿಸಿದ್ದಾರೆ. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಸಾಮಾಜಿಕ ಸಾಮರಸ್ಯವನ್ನು ಕದಡುವವರು, ಬಿಜೆಪಿಗೆ ಸುರಕ್ಷಾ ಯಾತ್ರೆ ಕೈಗೊಳ್ಳುವ ಯೋಗ್ಯತೆ ಇಲ್ಲ ಎಂದವರು ಹೇಳಿದರು. ಜಿಲ್ಲೆಯಲ್ಲಿ ಎರಡು ಮತೀಯ ಸಂಘಟನೆಗಳೇ ಘರ್ಷಣೆ, ಹತ್ಯೆ ಹಾಗೂ ಅಹಿತಕರ ಘಟನೆಗಳಿಗೆ ಕಾರಣವಾಗುತ್ತಿವೆ. ಯಾವುದೇ ಪ್ರಕರಣಗಳಲ್ಲಿ […]

ಬೆಂಗರೆಯಲ್ಲಿ ಗಲಭೆ ಸೃಷ್ಟಿಸಿದ್ದೇ ಬಿಜೆಪಿಗರು: ಕಾಂಗ್ರೆಸ್‌ ಆರೋಪ

Friday, February 23rd, 2018
congress

ಮಂಗಳೂರು: ಬಿಜೆಪಿ ಯಾವತ್ತೂ ಹೇಳಿದ್ದನ್ನು ಮಾಡುವುದಿಲ್ಲ. ಹೇಳದೆ ಮಾಡಿ ಅದನ್ನು ಕಾಂಗ್ರೆಸ್ಸಿಗರ ತಲೆಗೆ ಕಟ್ಟುತ್ತಾರೆ. ಬೆಂಗರೆಯಲ್ಲಿ ಮೊನ್ನೆ ಗಲಭೆ ಸೃಷ್ಟಿಸಿದ್ದೇ ಬಿಜೆಪಿಗರು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಜಿಲ್ಲೆಯ ಅಭಿವೃದ್ಧಿ ಪರ ಕಿಂಚಿತ್ತೂ ಕೆಲಸ ಮಾಡದ ಸಂಸದ ನಳಿನ್ ಕುಮಾರ್ ಕಟೀಲ್ ನಂ.1 ಸಂಸದರಾದರೆ ದೇಶದ ಉಳಿದ 523 ಸಂಸದರ ಪಾಡೇನು? ಎರಡನೇ ಬಾರಿ ಜಿಲ್ಲೆಯನ್ನು ಪ್ರತಿನಿಧಿಸುವ ನಳಿನ್ ಅಭಿವೃದ್ಧಿ ಪರ ಯೋಚಿಸುತ್ತಿಲ್ಲ, ಕೆಲಸ ಮಾಡುತ್ತಿಲ್ಲ. […]

ಕೋಮು ಗಲಭೆ ಬಿಜೆಪಿಯ ಚುನಾವಣಾ ತಂತ್ರ: ವೆಂಕಟೇಶ್

Thursday, February 15th, 2018
congress

ಮಂಗಳೂರು: ರಾಜ್ಯ ಸರ್ಕಾರ ಮಾಡಿರುವ ಸಾಧನೆಗಳ ಮೂಲಕವೇ ಪಕ್ಷ ಜನರ ಬಳಿಗೆ ತೆರಳಲಿದ್ದು, ಕೆಲ ತಿಂಗಳುಗಳಿಂದೀಚೆಗೆ ದ.ಕ. ಜಿಲ್ಲೆಯಲ್ಲಿ ನಡೆದ ಕೋಮು ಗಲಭೆ ಬಿಜೆಪಿಯ ಚುನಾವಣಾ ತಂತ್ರವಾಗಿದೆ. ಆದರೆ ಅದು ಸಫಲವಾಗುವುದಿಲ್ಲ. ಅದಕ್ಕೆ ಉತ್ತರ ಮುಂದಿನ ಎರಡು ತಿಂಗಳಲ್ಲಿ ದೊರೆಯಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ.ವೆಂಕಟೇಶ್ ಹೇಳಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದ.ಕ. ಜಿಲ್ಲೆ ಕಾಂಗ್ರೆಸ್‌ನ ತವರೂರು. ಇದು ಹಾಗೆಯೇ ಮುಂದುವರಿಯಲಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಂಟೂ ಕ್ಷೇತ್ರಗಳಲ್ಲಿ […]

5 ಬಾರಿಯ ಶಾಸಕ ವಸಂತ ಬಂಗೇರ ಸ್ಪರ್ಧೆಯ ನಿರ್ಧಾರವೇ ಹೈಲೈಟ್

Monday, February 5th, 2018
belthangadi

ಮಂಗಳೂರು: ಪಶ್ಚಿಮ ಘಟ್ಟದ ತಪ್ಪಲು, ಹಸಿರು ಸಿರಿಯಿಂದ ಕಂಗೊಳಿಸುವ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರುತ್ತದೆ. ಪ್ರಸ್ತುತ ಈ ಕ್ಷೇತ್ರವನ್ನು ಕಾಂಗ್ರೆಸ್ ನ ವಸಂತ ಬಂಗೇರ ಶಾಸಕರಾಗಿದ್ದಾರೆ. 5 ಬಾರಿ ಬೆಳ್ತಂಗಡಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ವಸಂತ ಬಂಗೇರರು ಕಳೆದ 2 ಚುನಾವಣೆಗಳಲ್ಲಿ ಸತತ ಗೆಲುವು ಸಾಧಿಸಿದ್ದಾರೆ. 2013 ನೇ ಸಾಲಿನ ಚುನಾವಣೆಯಲ್ಲಿ ವಸಂತ ಬಂಗೇರರು ಎದುರಾಳಿ ಬಿಜೆಪಿಯ ರಂಜನ್ ಜಿ. ಗೌಡ ರನ್ನು 15741 ಮತಗಳ ಅಂತರದಿಂದ ಸೋಲಿಸಿದ್ದರು. ವಸಂತ ಬಂಗೇರ ಕಳೆದ ಬಾರಿ […]