Blog Archive

‘ಕಾಂಗ್ರೆಸ್ ಅಧಿಕಾರಕ್ಕೇರಿದರೆ ರಾಜ್ಯದಲ್ಲಿ ಜಿಹಾದಿ, ಗೂಂಡಾ ಕೇಂದ್ರ’: ಯೋಗಿ ಆದಿತ್ಯನಾಥ್

Wednesday, May 9th, 2018
yogi-2

ಮಂಗಳೂರು: ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ಮತ್ತೆ ಜಿಹಾದಿ, ಗೂಂಡಾ ಹಾಗೂ ಮಾಫಿಯಾಗಳ ಕೇಂದ್ರವನ್ನಾಗಿ ಮಾಡಲಿದ್ದಾರೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಿಡಿಕಾರಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಅಂಗಾರ ಪರ ಮಂಗಳವಾರ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.”ಸಿದ್ಧರಾಮಯ್ಯರಿಗೆ ನಾನು ರಾಜ್ಯಕ್ಕೆ ಬರುವುದು ಇಷ್ಟವಿಲ್ಲ. ನನ್ನ ಪ್ರಚಾರ ಕಾರ್ಯವನ್ನು ವಿರೋಧಿಸುತ್ತಾರೆ. ಸಿದ್ಧರಾಮಯ್ಯ ಜಾತಿ-ಜಾತಿಗಳನ್ನು […]

ನಾನು ಹಿಂದೂಗಳ ಮತ ಬೇಡ ಅಂತ ಹೇಳಿಲ್ಲ : ರಮಾನಾಥ್ ರೈ

Tuesday, May 8th, 2018
ramanath-rai

ಮಂಗಳೂರು: ರಾಜ್ಯ ವಿಧಾನಸಭೆ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ ಪ್ರಬಲ ಶಕ್ತಿಯಾಗಿ ಹೊರಹೊಮ್ಮುವ ಸೂಚನೆ ಸಿಕ್ಕಿದೆ ಎಂದು ಸಚಿವ ರಮಾನಾಥ್ ರೈ ಹೇಳಿದ್ರು. ನಗರದಲ್ಲಿಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ನಮ್ಮ ಸಾಧನೆಯನ್ನು ಜನರು ಒಪ್ಪಿಕೊಂಡಿದ್ದಾರೆ. ಆದರೆ, ಬಿಜೆಪಿಗೆ ಅಪಪ್ರಚಾರವೇ ಚುನಾವಣಾ ಅಸ್ತ್ರ. ಇದಕ್ಕೆ ಕಿವಿಗೊಡಬೇಡಿ. ಅಭಿವೃದ್ಧಿಗೆ ಬೆಂಬಲ ಕೊಡಿ, ನಮಗೆ ಮತ ನೀಡಿ ಎಂದು ಮನವಿ ಮಾಡಿದರು. ಇನ್ನು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಾನು ಹಿಂದೂಗಳ ಮತ […]

ಕಾಂಗ್ರೆಸ್ ಗೆ ಸೇರ್ಪಡೆಯಾದ ವ್ಯಕ್ತಿಯ ಮನೆಗೆ ಕಲ್ಲು ಎಸೆದು, ಹಲ್ಲೆಗೆ ಯತ್ನ…!

Tuesday, May 8th, 2018
congress-party

ಉಡುಪಿ: ಕಾಂಗ್ರೆಸ್ ಗೆ ಸೇರ್ಪಡೆಯಾದ ವ್ಯಕ್ತಿಯ ಮನೆಗೆ ಕಲ್ಲು ಎಸೆದು, ಹಲ್ಲೆಗೆ ಯತ್ನಿಸಿದ ಘಟನೆ ಕುಂದಾಪುರ ತಾಲೂಕಿನ ಮಡಾಮಕ್ಕಿಯಲ್ಲಿ ನಡೆದಿದೆ. ಕಾಂಗ್ರೆಸ್ ಗೆ ಸೇರ್ಪಡೆಯಾದ ಮಡಾಮಕ್ಕಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜು ಕುಲಾಲ್ ಮನೆಗೆ ಕಲ್ಲು ಎಸೆದು, ಹಲ್ಲೆಗೆ ಯತ್ನಿಸಿದ ಘಟನೆ ಸಂಭವಿಸಿದ್ದು, ಅಮಾಸೆಬೈಲು ಠಾಣೆಯಲ್ಲಿ ದೂರು ಈ ಬಗ್ಗೆ ದೂರು ದಾಖಲಾಗಿದೆ. ರಾತ್ರಿ ಮನೆಗೆ ಬಂದ ದುಷ್ಕರ್ಮಿಗಳಿಂದ ಕೃತ್ಯ ನಡೆದಿದ್ದು, ಮೊದಲು ಮನೆ ಪಕ್ಕ ಬಂದು ವಿದ್ಯುತ್ ಕಡಿತ ಮಾಡಿದ ದುಷ್ಕರ್ಮಿಗಳು, ಕೃತ್ಯದ ಬಳಿಕ ಕತ್ತಲಲ್ಲಿ […]

ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸಿಪಿಐ ರಾಜ್ಯ ಕಾರ್ಯದರ್ಶಿ ಪತ್ರಿಕಾಗೋಷ್ಠಿ!

Tuesday, May 8th, 2018
congress

ಮಂಗಳೂರು: ರಾಜಕೀಯ ಪಕ್ಷಗಳು ತಮ್ಮ ತಮ್ಮ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸುವುದು ಮಾಮೂಲಿ. ಆದರೆ ಮಂಗಳೂರಿನಲ್ಲಿ ಇಂದು ಸಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅಚ್ಚರಿ ಮೂಡಿಸಿದರು. ಸಿಪಿಐ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ಮಂಗಳೂರಿಗೆ ಬಂದಿದ್ದ ಸಿಪಿಐ ರಾಜ್ಯ ಕಾರ್ಯದರ್ಶಿ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಾಗೇಪಲ್ಲಿ ಮತ್ತು ಗುಲ್ಬರ್ಗಾದಲ್ಲಿ ಸಿಪಿಎಂ ಪಕ್ಷಕ್ಕೆ ಸಿಪಿಐ ಬೆಂಬಲ‌ ಸೂಚಿಸಿದೆ. ಸಿಪಿಐ […]

ಕಾಂಗ್ರೆಸ್‌ ಅನ್ನು ಕರ್ನಾಟಕದ ಜನತೆ ತಿರಸ್ಕರಿಸುವುದು ನಿಶ್ಚಿತ : ನರೇಂದ್ರ ಮೋದಿ

Sunday, May 6th, 2018
modi mangaluru

ಮಂಗಳೂರು : ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ದೋಷಿಗಳಿಗೆ ಮರಣ ದಂಡನೆ ವಿಧಿಸುವ ಸುಗ್ರೀವಾಜ್ಞೆಗೆ ನಾವು ಅನುಮೋದನೆ ನೀಡಿದ್ದೇವೆ. ನಮ್ಮ ಸರ್ಕಾರ ಬಡವರು ಮತ್ತು ನಿರ್ಲಕ್ಷಿತರ ಸೇವೆಗೆ ಸಮರ್ಪಿತವಾಗಿದೆ. ಅವರ ಬ್ಯಾಂಕ್‌ ಖಾತೆಗಳನ್ನು ತೆರೆಯುವ ಮೂಲಕ ಅವರನ್ನು ಸಬಲೀಕರಣಗೊಳಿಸುವಲ್ಲಿ ಮಹತ್ವದ ಹೆಜ್ಜೆಯಿಟ್ಟಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಶನಿವಾರ  ಮಂಗಳೂರಿನ ನೆಹರೂ ಮೈದಾನಿನಲ್ಲಿ  ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನೋಟು ಅಮಾನ್ಯೀಕರಣದ ಆಘಾತದಿಂದ ಕಾಂಗ್ರೆಸ್‌ ಇನ್ನೂ ಹೊರ ಬಂದಿಲ್ಲ. ಕಾಂಗ್ರೆಸ್‌ ಸುಳ್ಳನ್ನೇ ಹಬ್ಬಿಸುತ್ತದೆ. ಯಾರಾದರೂ ಸತ್ಯ […]

ಕಾಂಗ್ರೆಸ್ ಬಿಜೆಪಿಗೆ ವ್ಯತ್ಯಾಸ ಇಲ್ಲ: ಸುನೀಲ್ ಕುಮಾರ್ ಬಜಾಲ್

Saturday, May 5th, 2018
sunil Kumar

ಮಂಗಳೂರು  : ಮಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗೆ ಕಾಂಗ್ರೆಸ್ ಬಿಜೆಪಿ ಕೊಡುಗೆ ಶೂನ್ಯ. ಕಳೆದೆರಡು ಅವಧಿಯಲ್ಲಿ ಈ ವಿಧಾನ ಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿಜೆಪಿಯ ಯೋಗೀಶ್ ಭಟ್ ಹಾಗೂ ಕಾಂಗ್ರೆಸ್‌ನ ಜೆ.ಆರ್.ಲೋಬೋ ಇವರಿಬ್ಬರ ಆಡಳಿತಾವಧಿಯಲ್ಲಿ ಅಭಿವೃದ್ಧಿಯ ಕೊರತೆ, ಜನಸಾಮಾನ್ಯರ ಸಂಕಷ್ಟಗಳ ಯಥಾಸ್ಥಿತಿ, ಸರಕಾರಿ ಆಸ್ಪತ್ರೆಗಳ ಕಡೆಗಣನೆ, ಮುಕ್ತಿ ಕಾಣದ ಒಳಚರಂಡಿ ವ್ಯವಸ್ಥೆ ಹೀಗೆ ಕ್ಷೇತ್ರದ ಜನರ ಬಗ್ಗೆ ನೀರಾ ಶಕ್ತಿಯನ್ನು ಹೊಂದಿದೆ. ಆದ್ದರಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಆಡಳಿತಕ್ಕೆ ಯಾವುದೇ ವ್ಯತ್ಯಾಸ ಇಲ್ಲ ಎಂದು ಮಂಗಳೂರು ನಗರ ದಕ್ಷಿಣ […]

ಕಾಂಗ್ರೆಸ್, ಬಿಜೆಪಿಯಿಂದ ಕಾರ್ಯಕರ್ತರ ಒಪ್ಪಿಗೆ ಇಲ್ಲದೆ ಅಭ್ಯರ್ಥಿಗಳ ಆಯ್ಕೆ – ಶ್ರೀಕರ ಪ್ರಭು

Saturday, May 5th, 2018
sreekar-prabhu

ಮಂಗಳೂರು  : ಈ ಬಾರಿಯ ವಿಧಾನ ಸಭಾ ಚುನಾವಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಿಂದ ನಿಷ್ಠಾವಂತ ಕಾರ್ಯಕರ್ತರ ಅಭಿಪ್ರಾಯ ಪಡೆಯದೇ ಅಭ್ಯರ್ಥಿಗಳ ಆಯ್ಕೆ ಮಾಡಿರುವುದು ತನ್ನ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾದ ಶ್ರೀಕರ ಪ್ರಭು ಅವರು ತಮ್ಮ ಚುನಾವಣಾ ಕಾರ್ಯಾಲಯದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ತಿಳಿಸಿದರು. ಇದರಿಂದ ಕೆಲವು ನಾಯಕರುಗಳ ಸ್ವಾರ್ಥಕ್ಕೆ ಕಾರ್ಯಕರ್ತರನ್ನು ಕಡೆಗಣಿಸಿರುವುದರಿಂದ ಆ ಪಕ್ಷಗಳಲ್ಲಿ ಅಸಮಾಧಾನ ಶುರುವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ನುಡಿದರು. ಈಗ […]

ದ.ಕ.ಜಿಲ್ಲೆಯಲ್ಲಿ ಕಾಂಗ್ರೆಸ್ ಬೆಂಬಲಿಸಲು ಇಂಟಕ್ ಕರೆ

Saturday, May 5th, 2018
dakshina-kannada

ಮಂಗಳೂರು: ದ.ಕ.ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ಪಕ್ಷದ ಕಾರ್ಮಿಕ ಘಟಕ ವಾದ ಇಂಟಕ್ ಕರೆ ನೀಡಿದೆ. ಶನಿವಾರ ಇಂಟಕ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಇಂಟಕ್ ಜಿಲ್ಲಾಧ್ಯಕ್ಷ ಮನೋಹರ ಶೆಟ್ಟಿ ಇಂಟಕ್‌ನ ಸರ್ವ ಸದಸ್ಯರೂ ಕೂಡ ಬೂತ್ ಮಟ್ಟದಲ್ಲಿ ಸಕ್ರಿಯವಾಗಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಬೇಕು. ತಮ್ಮ ಕುಟುಂಬದ ಸರ್ವರನ್ನೂ ಕೂಡ ಮತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದರು. ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಜೆ.ಆರ್.ಲೋಬೊ ಇಂಟಕ್‌ನ ಹಲವು ಸಮಸ್ಯೆಗಳಿಗೆ […]

ಮೋದಿಗೆ ಅಂಬೇಡ್ಕರ್ ಬಗ್ಗೆ ಮಾತಾಡಲು ನೈತಿಕ ಹಕ್ಕಿಲ್ಲ: ಕಾಂಗ್ರೆಸ್ ನಾಯಕಿ ಶೆಲ್ಜಾ

Saturday, May 5th, 2018
ambedkar

ಮಂಗಳೂರು: ಚುನಾವಣೆಯಲ್ಲಿ ಕೇಂದ್ರ ಸರ್ಕಾರದ ಸುಳ್ಳುಗಳು ಹೊರಬರುತ್ತಿವೆ. ಪ್ರಧಾನಿ ಮೋದಿಗೆ ಅಂಬೇಡ್ಕರ್ ಬಗ್ಗೆ ಮಾತಾಡಲು ನೈತಿಕ ಹಕ್ಕಿಲ್ಲ ಎಂದು ಕಾಂಗ್ರೆಸ್ ನಾಯಕಿ, ಮಾಜಿ ಸಚಿವೆ ಕುಮಾರಿ ಶೆಲ್ಜಾ ಮಂಗಳೂರಿನಲ್ಲಿ ಹೇಳಿದ್ದಾರೆ. ತಳಮಟ್ಟದಲ್ಲಿ ದಲಿತ ಸಮಸ್ಯೆಗಳು ಜ್ವಲಂತವಾಗಿ ಉಳಿದಿವೆ. ದಲಿತ ದೌರ್ಜನ್ಯ ಕಾಯ್ದೆಯನ್ನು ದುರ್ಬಲಗೊಳಿಸಲಾಗಿದೆ. 1989ರಲ್ಲಿ ರಾಜೀವ್ ಗಾಂಧಿ ತಂದ ಕಾನೂನನ್ನು ಯುಪಿಎ ಎರಡನೇ ಅವಧಿಯಲ್ಲಿ ಮತ್ತಷ್ಟು ಪ್ರಬಲಗೊಳಿಸಲಾಯಿತು. ಆದರೆ ಮೋದಿ ಸರ್ಕಾರ 13 ಅಧ್ಯಾದೇಶ ಜಾರಿಗೊಳಿಸಿದೆ. ಇದರಿಂದ ದಲಿತ ದೌರ್ಜನ್ಯ ಕಾಯ್ದೆ ಹಲ್ಲಿಲ್ಲದ ಹಾವಾಗಿದೆ. ಮೋದಿಯವರದ್ದು ದಲಿತರ […]

‘ಆನ್ಸರ್ ಮಾಡಿ ಮೋದಿ’… ಪ್ರಧಾನಿಗೆ ಚಾಲೆಂಜ್ ಹಾಕಿದ ಕಾಂಗ್ರೆಸ್

Saturday, May 5th, 2018
rahul-gandhi

ಬೆಂಗಳೂರು: ಕರ್ನಾಟಕದ ಅಭಿವೃದ್ಧಿ ಬಗ್ಗೆ 15 ನಿಮಿಷ ಮಾತನಾಡಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಪ್ರಧಾನಿ ಮೋದಿ ಇತ್ತೀಚೆಗಷ್ಟೇ ಸವಾಲು ಹಾಕಿದ್ದರು. ಈ ಬೆನ್ನಲ್ಲೇ ‘ಆನ್ಸರ್ ಮಾಡಿ ಮೋದಿ’ ಎಂಬ ಹ್ಯಾಸ್‌ಟ್ಯಾಗ್ ಮೂಲಕ ಟ್ವಿಟರ್‌ನಲ್ಲಿ ಪ್ರಧಾನಿಗೆ ಕಾಂಗ್ರೆಸ್‌ ಭರ್ಜರಿಯಾಗೇ ತಿರುಗೇಟು ನೀಡಿದೆ. ಮೋದಿ ಅವರೇ ನೀವು ತುಂಬಾ ಮಾತಾಡ್ತಿರಿ. ಆದ್ರೆ ನಿಮ್ಮ ಮಾತಿಗೂ ಕ್ರಿಯೆಯೂ ಹೊಂದಾಣಿಕೆ ಆಗಲ್ಲ. ಕರ್ನಾಟಕದಲ್ಲಿ ಎಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೀರಿ ಎಂಬುದಕ್ಕೆ ಇಲ್ಲಿದೆ ಚಿಕ್ಕ ವಿಡಿಯೋ ತುಣಕು. ಇದು ‘ಕರ್ನಾಟಕ ಮೋಸ್ಟ್ […]