Blog Archive

ಮಂಗಳೂರಿನಲ್ಲಿ ಬಾರಿ ಸಂಖ್ಯೆಯಲ್ಲಿ ಕ್ರೈಸ್ತ ಯುವಕರು ಬಿಜೆಪಿಗೆ ಸೇರ್ಪಡೆ

Tuesday, May 1st, 2018
Vedavyas

ಮಂಗಳೂರು : ಬುಧವಾರ ಮಂಗಳೂರು ನಗರ ದಕ್ಷಿಣ ಬಿಜೆಪಿ ಚುನಾವಣಾ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕ್ರೈಸ್ತ ಯುವಕರು ಬಿಜೆಪಿಯನ್ನು ಸೇರಿದರು. ಈ ಸಂದರ್ಭ ಮಾತನಾಡಿದ ಮಂಗಳೂರು ನಗರ ದಕ್ಷಿಣ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಗ್ಲಾಡ್ವೀನ್ ಡಿಸೋಜಾ ಕ್ರೈಸ್ತ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಬಾರಿ ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸಿದ್ದಾರೆ. ಅದಕ್ಕೆ ಮುಖ್ಯ ಕಾರಣ ಕಾಂಗ್ರೆಸ್ ದುರಾಡಳಿತವನ್ನು ಕೊನೆಗಾಣಿಸುವುದು ಎಂದು ಹೇಳಿದರು. ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಡ್ಯಾರಿನ್, ರೋಹನ್, ಅಬ್ಬಿ, ರೋಶನ್ ಮತ್ತು […]

ಕರಾವಳಿಯಲ್ಲಿ ಬಿಜೆಪಿ ಗೆಲ್ಲುವ ಸೀಟೆಷ್ಟು ?

Monday, April 30th, 2018
bjp Candidate

ಮಂಗಳೂರು  : ಭಾರತೀಯ ಜನತಾ ಪಾರ್ಟಿ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವುದಕ್ಕಿಂತಲೂ ಹೆಚ್ಚು ಚರ್ಚಾ ವಿಚಾರ ಕರಾವಳಿಯಲ್ಲಿ, ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಗೆಲ್ಲುವ ಸೀಟೆಷ್ಟು ಎಂಬ ಬಗ್ಗೆ ಭಾರೀ ಚರ್ಚೆ ನಡೆದಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಏಳು ಸ್ಥಾನ ಗೆದ್ದರೆ, ಬಿಜೆಪಿ ಗೆದ್ದಿರುವುದು ಕೇವಲ ಒಂದೇ. ಅಂದೂ 1300 ಮತಗಳ ಕಡಿಮೆ ಅಂತರದಿಂದ. ಉಡುಪಿಯಲ್ಲಿ ಕೂಡ ಬಿಜೆಪಿ ಗೆದ್ದಿರುವುದು ಒಂದೇ ಸ್ಥಾನ. ಕಾಂಗ್ರೆಸ್ ಮೂರು ಮತ್ತು ಒಬ್ಬ ಪಕ್ಷೇತರ  […]

ಕಾಂಗ್ರೆಸ್ಸಿನದೇನಿದ್ದರೂ ಹಣ ಹೊಡೆಯುವ ಭಾಗ್ಯ: ಎಚ್ ಡಿಕೆ ವ್ಯಂಗ್ಯ

Saturday, April 28th, 2018
kumaraswamy

ಮೈಸೂರು: “ಕಾಂಗ್ರೆಸ್ ಪ್ರಣಾಳಿಕೆ ಕೇವಲ ಬೋಗಸ್. 5 ವರ್ಷಗಳಲ್ಲಿ ಈಡೇರಿಸಲಾಗದ್ದನ್ನು ಕಾಂಗ್ರೆಸ್ಸಿಗರು ಮುಂದೆ ಈಡೇರಿಸುತ್ತಾರಾ?” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ. ಮೇ 12 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆಯ ನಿಮಿತ್ತ ಮೈಸೂರಿನಲ್ಲಿ ಪ್ರಚಾರ ನಡೆಸುತ್ತಿರುವ ಅವರು, ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಏ.27 ರಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಿಡುಗಡೆ ಮಾಡಿದ ಪ್ರಣಾಳಿಕೆಯ ಕುರಿತು ಪ್ರತಿಕ್ರಿಯೆ ನೀಡಿದರು. “ಕಾಂಗ್ರೆಸ್ ನ ಭಾಗ್ಯಗಳು ಬರಿ ಹಣ ಹೊಡೆಯುವ ಭಾಗ್ಯಗಳು. ಭಾಗ್ಯಗಳ ಹೆಸರಲ್ಲಿ ಹಣ ಲೂಟಿ […]

ಸುಳ್ಳನ್ನೇ ಹೇಳುವ ಜಾಯಾಮಾನ ಬಿಜೆಪಿ ನಾಯಕರದ್ದು: ನಟ ಪ್ರಕಾಶ್ ರೈ

Saturday, April 28th, 2018
prakash-rai

ಬಂಟ್ವಾಳ: ಪ್ರಧಾನಿ ಮೋದಿಗೆ ಮತಿಭ್ರಮಣೆಯಾಗಿದೆ. 2019 ರ ಬಳಿಕ ಮೋದಿ ನಿರುದ್ಯೋಗಿ ಎಂದು ನಟ ಪ್ರಕಾಶ್ ರೈ ವ್ಯಂಗ್ಯವಾಡಿದ್ದಾರೆ. ಬಂಟ್ವಾಳದಲ್ಲಿ ನಡೆದ ಸಂವಿಧಾನ ಉಳಿವಿಗೆ ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡಿದ ಅವರು, ಸುಳ್ಳನ್ನೇ ಹೇಳುವ ಜಾಯಾಮಾನದವರು ಬಿಜೆಪಿಯವರು. ಬೆದರು ಗೊಂಬೆಗಳ ತರಹ ಮಾತ್ರ ಬಿಜೆಪಿಯಿದೆ. ಬಿಜೆಪಿ ಪಕ್ಷಕ್ಕೆ ಸಿದ್ಧಾಂತ ಎಂಬುದೇ ಇಲ್ಲ. ಆರ್ ಎಸ್ಎಸ್ ಹೇಳಿದಂತೆ ಕೇಳುವ ಪಕ್ಷ ಎಂದು ಲೇವಡಿ ಮಾಡಿದರು. 2019 ರ ಬಳಿಕ ಮೋದಿ ನಿರುದ್ಯೋಗಿ. ಅನಂತರ ಮೋದಿ ಕರ್ನಾಟಕಕ್ಕೆ ಬಂದು ಕನ್ನಡ ಕಲಿಯಲಿ. […]

‘ಹಿಂದುತ್ವ’ದ ಹೆಸರಲ್ಲಿ ಮತ ಯಾಚನೆ ಮಾಡಿದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಪತ್ನಿ

Saturday, April 28th, 2018
vedavyas-kamath

ಮಂಗಳೂರು: ಇಲ್ಲಿನ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರ ಪತ್ನಿ ಹಿಂದುತ್ವದ ಹೆಸರಲ್ಲಿ ಮತ ಯಾಚನೆ ಮಾಡಿದ್ದರೆನ್ನಲಾದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿವಾದ ಸೃಷ್ಟಿಸಿದೆ. ಈ ವೀಡಿಯೊದಲ್ಲಿ ಕೆಲವು ಮಹಿಳೆಯರು ಬಿಜೆಪಿಗೆ ಮತಯಾಚನೆ ಮಾಡಲು ಬಂದಿದ್ದಾರೆ. ಆ ಪೈಕಿ ಓರ್ವ ಮಹಿಳೆ ” ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರ ಧರ್ಮಪತ್ನಿಯವರೇ ನಿಮ್ಮಲ್ಲಿ ಮತಯಾಚನೆಗೆ ಬಂದಿದ್ದಾರೆ, ಅವರು ನಿಮ್ಮಲ್ಲಿ ಮಾತನಾಡಲಿದ್ದಾರೆ” ಎಂದು ಹೇಳುತ್ತಾರೆ. ಬಳಿಕ ಮಾತನಾಡುವ […]

ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಬೇಸತ್ತಿರುವ ನಾಡಿನ ಜನರು ಈ ಬಾರಿ ಬಿಜೆಪಿಗೆ ಮತ ನೀಡಿ : ವೇದವ್ಯಾಸ್ ಕಾಮತ್

Saturday, April 28th, 2018
vedavyas-kamath

ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿರುವ ಡಿ.ವೇದವ್ಯಾಸ್ ಕಾಮತ್ ಅವರು ಕೊಡಿಯಾಲ್ ಬೈಲಿನ ವಾರ್ಡ್ ನಂ 30ರ ಬೂತ್ ನಂ. 20 ರ ಕದ್ರಿಗುಡ್ಡೆ ಪರಿಸರದಲ್ಲಿ ಮನೆ ಮನೆಗಳಿಗೆ ತೆರಳಿ ಮತ ಯಾಚಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಬೇಸತ್ತಿರುವ ನಾಡಿನ ಜನರು ಈ ಬಾರಿ ಭಾರತೀಯ ಜನತಾ ಪಾರ್ಟಿಯನ್ನು ಗೆಲ್ಲಿಸಬೇಕೆಂದು ವಿನಂತಿಸಿದರು. ನಂತರ ಪದವು ಪೂರ್ವ ವಾರ್ಡ್ ನಂ 36 ರಲ್ಲಿ ಮನೆ […]

ನಾವು ಜಾತಿ ಧರ್ಮ, ಹಿಂದುತ್ವದ ಬಗ್ಗೆ ಪ್ರಕಾಶ್ ರೈ ಅವರಿಂದ ಕಲಿಯಬೇಕಿಲ್ಲ :ಮಂಜುಳಾ ರಾವ್

Saturday, April 28th, 2018
manjula

ಮಂಗಳೂರು: ಚಿತ್ರನಟ ಪ್ರಕಾಶ್ ರೈ ಅವರು ತಮಿಳುನಾಡಿನಲ್ಲಿ ಕೆಲಸವಿಲ್ಲದೆ ಇಲ್ಲಿಗೆ ಬಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಮಂಡಲ ಅಧ್ಯಕ್ಷೆ ಮಂಜುಳಾ ರಾವ್ ವ್ಯಂಗ್ಯವಾಡಿದ್ದಾರೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ಅವರ ಪತ್ನಿ ಧರ್ಮದ ಆಧಾರದಲ್ಲಿ ಮತ ಕೇಳಿದ್ದಾರೆ ಎಂದು ನಟ ಪ್ರಕಾಶ್ ರೈ ಟ್ವೀಟ್ ಮಾಡಿರುವ ವಿಚಾರದ ಬಗ್ಗೆ ಮಾತನಾಡಿದ ಅವರು, ನೀವು ನಟ ಎನ್ನುವುದು ಗೊತ್ತಿದೆ. ನೀವು ಎಲ್ಲವನ್ನೂ ತ್ಯಜಿಸಿ ಸಂತ ಪದವಿಗೆ […]

ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ: ಗುರ್ಮೆ ಸುರೇಶ್ ಶೆಟ್ಟಿ

Saturday, April 28th, 2018
lalaji-mendon

ಶಿರ್ವ: ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ ಮತ್ತು ಅಭಿವೃದ್ಧಿಯ ಅನುಷ್ಠಾನ ರಾಜ್ಯದ ಜನತೆಗೆ ತಲುಪಬೇಕಾದರೆ ಕರ್ನಾಟಕದಲ್ಲೂ ಯಡಿಯೂರಪ್ಪನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬರಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕಾಪು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲಾಲಾಜಿ ಮೆಂಡನ್‌ರನ್ನು ಬಹುಮತದಿಂದ ಗೆಲ್ಲಿಸಬೇಕೆಂದು ಉಡುಪಿ ಜಿಲ್ಲಾ ಬಿಜೆಪಿ ಹಿರಿಯ ನಾಯಕ ಗುರ್ಮೆ ಸುರೇಶ್ ಶೆಟ್ಟಿ ಮನವಿ ಮಾಡಿದ್ದಾರೆ. ಶಿರ್ವ ಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ರಾಜಕೀಯ ಪಾರ್ಟಿಯಲ್ಲಿ ಅಪೇಕ್ಷೆಗಳಿರುವುದು ತಪ್ಪಲ್ಲ, ಆದರೆ ಪಾರ್ಟಿ ಒಬ್ಬರನ್ನು ಅಭ್ಯರ್ಥಿಯೆಂದು ಘೋಷಿಸಿದ ನಂತರ ಒಮ್ಮತದ ಹೋರಾಟ […]

ಬಿಜೆಪಿ ನಾಯಕರಿಗೆ ಮೂರು ಕಾಸಿನ ಮಾನ ಮರ್ಯಾದೆ ಇಲ್ಲ: ಸಿಎಂ ಸಿದ್ದರಾಮಯ್ಯ

Friday, April 27th, 2018
bantwala

ಮಂಗಳೂರು: ಈ ಬಾರಿ ಉಡುಪಿ, ಮಂಗಳೂರಲ್ಲಿ ಬಿಜೆಪಿಗೆ ಒಂದೂ ಸೀಟು ಬರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ಮೂರು ಕಾಸಿನ ಮಾನ ಮರ್ಯಾದೆ ಇಲ್ಲ. ಚುನಾವಣೆ ಘೋಷಣೆಯಾದ ಕೂಡಲೇ 2008 ರ ಲೂಟಿ ಕೋರರು ಮತ್ತೆ ಒಂದಾಗಿದ್ದಾರೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಟೀಂ ವಿರುದ್ಧ ಸಿಎಂ ಆಕ್ರೋಷ ವ್ಯಕ್ತಪಡಿಸಿದರು. ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, […]

ಬಿಜೆಪಿಯವರಿಗೆ ಪ್ರಚಾರ ಮಾಡಲು ವಿಷಯವೇ ಇಲ್ಲ: ಬಿ.ರಮಾನಾಥ ರೈ

Friday, April 27th, 2018
ramanath-rai

ಬಂಟ್ವಾಳ: ಬಿಜೆಪಿಯವರಿಗೆ ಪ್ರಚಾರ ಮಾಡಲು ವಿಷಯವೇ ಇಲ್ಲ. ಅದಕ್ಕಾಗಿ ತನ್ನ ಮೇಲೆ ಸುಳ್ಳು ಆರೋಪವನ್ನು ಮಾಡುವ ಮೂಲಕ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ಹೇಳಿದ್ದಾರೆ. ಮಂಗಳವಾರ ಕೊಳ್ನಾಡ್ ಗ್ರಾಮದ ಬೂತ್ ಮಟ್ಟದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬಿಜೆಪಿಯು ತನ್ನ ಮೇಲೆ ಧರ್ಮ ವಿರೋಧಿ ಹಣೆಪಟ್ಟಿ ಕಟ್ಟಿ, ಅಪಪ್ರಚಾರದ ಮೂಲಕ ಮತವನ್ನು ತಮ್ಮತ್ತ ಸೆಳೆದುಕೊಳ್ಳುವುದು ಕೂಡಾ ರಾಜಧರ್ಮವಲ್ಲ ಎಂದು ಹೇಳಿದರು. ಬಂಟ್ವಾಳ ಕ್ಷೇತ್ರಕ್ಕೆ ಸುಮಾರು ಸಾವಿರದ […]