Blog Archive

ಮಾಲಾಡಿಯಲ್ಲಿ ಅರಣ್ಯ ಇಲಾಖೆ ಇರಿಸಿದ ಬೋನಿಗೆ ಬಿದ್ದ ಚಿರತೆ

Thursday, December 12th, 2019
chirate

ಕುಂದಾಪುರ : ಹಾಡುಹಗಲೇ ಪ್ರತಕ್ಷವಾಗಿ ಜನರಿಗೆ ನಿರಂತರವಾಗಿ ಉಪಟಳ ನೀಡುತ್ತಿದ್ದ, ಮಾತ್ರವಲ್ಲದೇ ನಾಯಿ, ಜಾನುವಾರು ಸೇರಿದಂತೆ ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇರಿಸಿದ ಬೋನಿಗೆ ಬಿದ್ದ ಘಟನೆ ಉಡುಪಿ ಜಿಲ್ಲೆ ತೆಕ್ಕಟ್ಟೆ ಗ್ರಾಮಪ್ಂಚಾಯತ್ ವ್ಯಾಪ್ತಿಯ ಮಾಲಾಡಿ ತೋಟದಲ್ಲಿ ನಡೆದಿದ್ದು ಗುರುವಾರ ಬೆಳಿಗ್ಗೆ ಸೆರೆಯಾದ ಚಿರತೆ ನೋಡಲು ನೂರಾರು ಮಂದಿ ಆಗಮಿಸಿದ್ದರು. ಮಾಲಾಡಿಯ ಎಕರೆ ಗಟ್ಟಲೆ ಇರುವ ಈ ತೋಟದಲ್ಲಿ ಕಳೆದ ಒಂದೆರಡು ವರ್ಷದಿಂದ ಚಿರತೆ ಕಾಟ ಹೆಚ್ಚಿತ್ತು. ಈ ಹಿನ್ನೆಲೆ ಕಳೆದ ವರ್ಷ […]

ಕುರ್ಚಿಯಲ್ಲಿ ಉಪಟಳ ನೀಡುತ್ತಿದ್ದ ಪುಂಡಾನೆ ಸೆರೆ

Wednesday, December 4th, 2019
elephant

ಮಡಿಕೇರಿ : ದಕ್ಷಿಣ ಕೊಡಗಿನ ಕುಟ್ಟ ವ್ಯಾಪ್ತಿಯಲ್ಲಿ ನಿರಂತರ ಉಪಟಳ ನೀಡುತ್ತಿದ್ದ ಪುಂಡಾನೆಯೊಂದನ್ನು ಅರಣ್ಯ ಇಲಾಖಾ ತಂಡ ಕುರ್ಚಿ ಗ್ರಾಮದಲ್ಲಿ ಸಾಹಸಿಕ ಕಾರ್ಯಾಚರಣೆಯ ಮೂಲಕ ಸೆರೆ ಹಿಡಿಯಲಾಗಿದೆ. ಸೆರೆ ಹಿಡಿದ ಕಾಡಾನೆ ಅಂದಾಜು ೨೪ ವರ್ಷ ಪ್ರಾಯದ್ದಾಗಿದ್ದು, ಇದನ್ನು ದುಬಾರೆ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಕಳೆದ ಆರು ತಿಂಗಳ ಹಿಂದೆ ಕಾರ್ಮಿಕನೊಬ್ಬನ ಸಾವಿಗೆ ಕಾರಣವಾಗಿದ್ದ ಈ ಕಾಡಾನೆ, ಕುಟ್ಟ ವ್ಯಾಪ್ತಿಯ ಗ್ರಾಮಗಳ ಕಾಫಿ ತೋಟ, ಭತ್ತದ ಗದ್ದೆಗಳಲ್ಲಿ ದಾಂಧಲೆ ನಡೆಸಿ ಅಪಾರ ಪ್ರಮಾಣದ ಬೆಳೆ ಹಾನಿಗೆ ಕಾರಣವಾಗಿತ್ತು. ಮನಬಂದಂತೆ ರಾಜಾರೋಷವಾಗಿ […]

ಗುಂಡ್ಲುಪೇಟೆ : ಹುಲಿ ಉಗುರು ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

Thursday, October 31st, 2019
Gundlupete

ಚಾಮರಾಜನಗರ : ಗುಂಡ್ಲುಪೇಟೆ ಪಟ್ಟಣದಲ್ಲಿ ಹುಲಿ ಉಗುರು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಗಳಿಂದ ಅಧಿಕಾರಿಗಳು 6 ಹುಲಿ ಉಗುರು ಹಾಗೂ 5 ನರಿಯ ಹಲ್ಲುಗಳನ್ನು ವಶಕ್ಕೆ ಪಡೆದಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅಂಗಡಿ ಗ್ರಾಮದ ಧವನ್ (45) ಗೋಕುಲ್ (17)ಬಂಧಿತ ಆರೋಪಿಗಳು. ಗುಂಡ್ಲುಪೇಟೆ ಪಟ್ಟಣ ಮತ್ತು ಬೇಗೂರು ಗ್ರಾಮಗಳಲ್ಲಿ ಇವರು ಹುಲಿ ಉಗುರು, ನರಿ ಹಲ್ಲುಗಳನ್ನು ಮಾರಾಟ ಮಾಡುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಈ ಇಬ್ಬರು ಉಗುರು ಮಾರಾಟ ಮಾಡುತ್ತಿದ್ದರು […]

ಸುಬ್ರಹ್ಮಣ್ಯ : ಕುಮಾರ ಪರ್ವತ ಚಾರಣಕ್ಕೆ ಹೋದ ಯುವಕ ನಾಪತ್ತೆ

Tuesday, September 17th, 2019
santosh

ಸುಬ್ರಹ್ಮಣ್ಯ : ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯ ಕುಮಾರ ಪರ್ವತ ಚಾರಣಕ್ಕೆ ಶನಿವಾರ ತೆರಳಿದ ತಂಡದ ಪೈಕಿ ಬೆಂಗಳೂರು ಗಾಯತ್ರಿ ನಗರದ ನಿವಾಸಿ ಸಂತೋಷ್ ನಾಪತ್ತೆಯಾಗಿದ್ದು, ಹುಡುಕಾಟಕ್ಕೆ ನಾಲ್ಕು ತಂಡಗಳು ಮಂಗಳವಾರ ಬೆಳಿಗ್ಗೆ ಪುಷ್ಪಗಿರಿ ವನ್ಯಧಾಮದ ಗಿರಿಗದ್ದೆ ಕಡೆಗೆ ತೆರಳಿದ್ದಾರೆ. ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಗ್ರಾ.ಪಂಚಾಯತ್ ಅಧಿಕಾರಿಗಳನ್ನು ಒಳಗೊಂಡ ತಂಡದ ಜತೆ ಸುಬ್ರಹ್ಮಣ್ಯ ಸ್ಥಳಿಯ ಹಾಗೂ ದೇವರಗದ್ದೆಯ ನುರಿತ ಯುವಕರ ತಂಡ ಶೋಧಕ್ಕೆ ತೆರಳಿದೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅರಣ್ಯ ಇಲಾಖೆ ಅಧಿಕಾರಿಗಳು ಅಲ್ಲದೆ ಪುತ್ತೂರು, ಬೆಳ್ಳಾರೆ, […]

ಕಾಡಿನಲ್ಲಿ ಅಕ್ರಮವಾಗಿ ಮರ ಸಾಗಾಟ: ಓರ್ವನ ಬಂಧನ

Friday, October 26th, 2018
arrested

ಮಂಗಳೂರು: ಕಾಡಿನಲ್ಲಿ ಅಕ್ರಮವಾಗಿ ಮರ ಕಡಿದು ಸಾಗಾಟ ಮಾಡುತ್ತಿದ್ದ ಓರ್ವನನ್ನು ಬಂಧಿಸಿ, ವಾಹನ ಸಹಿತ ಮರಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಧರ್ಮಸ್ಥಳದ ಪುದುವೆಟ್ಟು ಎಂಬಲ್ಲಿ ನಡೆದಿದೆ. ಅಬ್ಬಾಸ್ ಎಂಬಾತ ಬಂಧಿತ ಆರೋಪಿ. ಇತರ ಮೂವರು ಪರಾರಿಯಾಗಿದ್ದಾರೆ. ಇವರು ಕಾಡಿನಲ್ಲಿ ಅಕ್ರಮವಾಗಿ ಬೀಟೆ, ಸಾಗುವಾನಿ ಮರಗಳನ್ನು ಕಡಿದು ವಾಹನದಲ್ಲಿ ಸಾಗಾಟ ಮಾಡುವ ಪ್ರಯತ್ನದಲ್ಲಿದ್ದಾಗ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದೆ. ರಾತ್ರಿಯಿಡೀ ಕಾದು ಬೆಳಗಿನ ಜಾವ ಮೂರು ಗಂಟೆ ಹೊತ್ತಿಗೆ ಅಕ್ರಮ ಮರ ಸಾಗಾಟದ ಯತ್ನವನ್ನು ಅರಣ್ಯ […]

ಅಮೆರಿಕಕ್ಕೆ ತೆರಳುತ್ತಿದ್ದ ಮಹಿಳೆವರ್ವೋಳ ಬ್ಯಾಗ್​ನಲ್ಲಿ ಎಂಟು ಜಿಂಕೆ ಕೊಂಬು..!

Friday, July 27th, 2018
women

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಿಂದ ಅಮೆರಿಕಕ್ಕೆ ತೆರಳುತ್ತಿದ್ದ ಮಹಿಳೆವರ್ವೋಳ ಬ್ಯಾಗ್ನಲ್ಲಿ ಎಂಟು ಜಿಂಕೆ ಕೊಂಬುಗಳು ಪತ್ತೆಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 15 ದಿನಗಳ ಹಿಂದೆ ಅಮೆರಿಕದ ಪ್ರಜೆಯಾಗಿರುವ ಕಾರ್ಕಳ ತಾಲೂಕಿನ ಹಿರ್ಗಾನದ ಮಹಿಳೆ ಅಮೆರಿಕಕ್ಕೆ ತೆರಳುವ ವೇಳೆ ತಮ್ಮ ಮನೆಯಲ್ಲಿ ಅಲಂಕಾರಿಕ ವಸ್ತುವಾಗಿ ಇಟ್ಟುಕೊಳ್ಳಲು ಈ ಕೊಂಬುಗಳನ್ನು ಬ್ಯಾಗ್ನೊಳಗೆ ಇಟ್ಟುಕೊಂಡಿದ್ದರು. ವಿಮಾನ ನಿಲ್ದಾಣದಲ್ಲಿ ಅವರ ಬ್ಯಾಗ್ ಅನ್ನು ವಿಮಾನಯಾನ ಸಂಸ್ಥೆಯ ಲಗೇಜು ಸ್ಕಾನರ್ನಲ್ಲಿ ತಪಾಸಣೆ ನಡೆಸಿದಾಗ ಜಿಂಕೆಯ ಕೊಂಬುಗಳು ಸಿಕ್ಕಿದ್ದವು. ಸದ್ಯ ಇದನ್ನು ಅರಣ್ಯ ಇಲಾಖೆಯವರು ವಶಪಡಿಸಿಕೊಂಡು […]

ಕಾಡಿನಿಂದ ನಾಡಿಗೆ ಬಂದ ಚಿರತೆ: ಉರುಳಿಗೆ ಸಿಲುಕಿ ಮತ್ತೆ ಕಾಡಿಗೆ

Thursday, November 24th, 2016
Leopard

ಪುತ್ತೂರು: ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ಉರುಳಿಗೆ ಸಿಲುಕಿ ಮತ್ತೆ ಕಾಡಿಗೆ ಸೇರಲು ಹರಸಾಹಸಪಟ್ಟ ಘಟನೆ ಕೊಳ್ತಿಗೆ ಗ್ರಾಮದ ಮಾಲೆತ್ತೋಡಿಯಲ್ಲಿ ನಡೆದಿದೆ. ಕೊಳ್ತಿಗೆ ಗ್ರಾಮದ ಮಾಲೆತ್ತೋಡಿಯ ಬಾಲಕೃಷ್ಣ ಕೆದಿಲಾಯ ಎಂಬುವರ ತೋಟದ ಬದಿಯಲ್ಲಿ ಕಾಡುಹಂದಿಗೆ ಇರಿಸಿದ್ದ ಉರುಳಿಗೆ ಚಿರತೆ ಸಿಲುಕಿತ್ತು. ಇಡೀ ದಿನ ಸಂಕಟದಲ್ಲಿ ಸಿಲುಕಿಕೊಂಡು ಸಂಜೆ ವೇಳೆಗೆ ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರದಿಂದ ಕಾಡು ಸೇರಿತು. ತೋಟಕ್ಕೆ ನೀರು ಹಾಯಿಸಲು ಹೋದ ವೇಳೆ ಚಿರತೆ ಉರುಳಿಗೆ ಬಿದ್ದಿರುವುದು ಬಾಲಕೃಷ್ಣರ ಮಗ ಮಧು ಕೆದಿಲಾಯ ಕಂಡಿದ್ದರು. ಬಳಿಕ […]

ಬಾಲಕ ವೈಶಾಖನಿಗೆ ಕಚ್ಚಿ ಗಾಯಗೊಳಿಸಿದ ಹೆಬ್ಬಾವನ್ನು ಹಿಡಿದ ಸಾರ್ವಜನಿಕರು

Thursday, October 20th, 2016
python

ಮಂಗಳೂರು: ಈ ಹಿಂದೆ ಬಾಲಕ ವೈಶಾಖನಿಗೆ ಕಚ್ಚಿ ಗಾಯಗೊಳಿಸಿದ ಹೆಬ್ಬಾವು ಪದೇ ಪದೇ ಅದೇ ಪರಿಸರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅದನ್ನು ಸಾರ್ವಜನಿಕರು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಆದರೆ, ಹಾವನ್ನು ಹಿಡಿಯುವ ಸಂದರ್ಭದಲ್ಲಿ ಅದು ಮತ್ತಿಬ್ಬರಿಗೆ ಕಚ್ಚಿ ಗಾಯಗೊಳಿಸಿದೆ. ಸಜಿಪ ಸಮೀಪದ ಕೊಳಕೆ ಕೂಡೂರು ಎಂಬಲ್ಲಿ ಅಜ್ಜಿ ಮನೆಗೆ ತೆರಳುತ್ತಿದ್ದ ಬಾಲಕ ವೈಶಾಖ್‌ನ ಮೇಲೆ ಹೆಬ್ಬಾವೊಂದು ದಾಳಿ ಮಾಡಿದಾಗ ಹುಡುಗ ಹೆಬ್ಬಾವಿನಿಂದ ತಪ್ಪಿಸಿಕೊಳ್ಳಲು ಸೆಣಸಾಡಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಆದರೆ ಹೆಬ್ಬಾವು ಮತ್ತೆ ಮತ್ತೆ ಅದೇ ಪರಿಸರದಲ್ಲಿ […]

ಪಡೀಲಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇರುವ ಅಡೆತಡೆಯನ್ನು ನಿವಾರಿಸಲು ತ್ವರಿತ ಕ್ರಮ: ರಮಾನಾಥ ರೈ

Saturday, October 15th, 2016
stadium-in-benjanapadavu

ಮಂಗಳೂರು: ನಗರ ಹೊರವಲಯದ ಪಡೀಲಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇರುವ ಅಡೆತಡೆಯನ್ನು ನಿವಾರಿಸಲು ತ್ವರಿತ ಕ್ರಮ ಕೈಗೊಳ್ಳುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖೆಗಳ ನೂತನ ಯೋಜನೆಗಳ ಅನುಷ್ಠಾನ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲಾಧಿಕಾರಿ ಕಚೇರಿಗೆ ಪಡೀಲಿನಲ್ಲಿ ಅರಣ್ಯ ಇಲಾಖೆಯ ಜಾಗವನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಇದಕ್ಕೆ ಬೇಕಾದ 40 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ. ಚೆನ್ನೈನ ಹಸಿರು ಪೀಠಕ್ಕೆ ಪರಿಸರದ ಹೆಸರಿನಲ್ಲಿ ಕೆಲವರು ದೂರು […]

ಕಟಪಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಣಿಸಿಕೊಂಡಿರುವ ಚಿರತೆ: ಸ್ಥಳೀಯರ ಆತಂಕ

Thursday, September 1st, 2016
Leopard

ಕಾಪು: ಕಟಪಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎರಡು ಮರಿಗಳ ಸಹಿತ ಚಿರತೆಯೊಂದು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕಟಪಾಡಿ, ಅಗ್ರಹಾರ, ಮಣಿಪುರ, ಸುಭಾಸ್‌ ನಗರ, ಕುರ್ಕಾಲು ಮತ್ತು ಕುಂಜಾರುಗಿರಿ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದೀಚೆಗೆ ರಾತ್ರಿ ಚಿರತೆ ಸಂಚಾರ ಹೆಚ್ಚಿರುವುದರಿಂದ ಜನರು ಕತ್ತಲಾಗುವ ಮೊದಲೇ ಮನೆ ಸೇರುವಂತಾಗಿದೆ. ಕಟಪಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಣಿಸಿಕೊಂಡಿರುವ ಚಿರತೆ ಕೆಲವೊಂದು ಮನೆಗಳ ನಾಯಿ, ಬೆಕ್ಕು ಮತ್ತು ದನಗಳ ಮೇಲೆಯೂ ದಾಳಿ ನಡೆಸಿದೆ ಎನ್ನಲಾಗುತ್ತಿದೆ. ಕಟಪಾಡಿ ಸುತ್ತಲಿನ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿರುವ ಬಗ್ಗೆ […]