Blog Archive

ಉಳ್ಳಾಲ : ಕಡಲಬ್ಬರಕ್ಕೆ ಹಲವು ಮನೆಗಳು ಅಪಾಯದಂಚಿನಲ್ಲಿ

Friday, November 1st, 2019
Ullal

ಉಳ್ಳಾಲ : ಅರಬಿ ಸಮುದ್ರದಲ್ಲಿ ಉದ್ಭವಿಸಿರುವ ‘ಮಹಾ’ ಚಂಡಮಾರುತದ ಪರಿಣಾಮ ಉಳ್ಳಾಲದಲ್ಲೂ ಕಾಣಿಸಿಕೊಳ್ಳಲಾರಂಭಿಸಿದ್ದು, ಕಡಲಬ್ಬರಕ್ಕೆ ಹಲವು ಮನೆಗಳು ಅಪಾಯದಂಚಿಗೆ ಸಿಲುಕಿವೆ. ಸೋಮೇಶ್ವರ, ಪೆರಿಬೈಲ್, ಬೆಟ್ಟಂಬಾಡಿ ಪ್ರದೇಶಗಳಲ್ಲಿ ಕಳೆದೆರಡು ದಿನಗಳಿಂದ ಕಡಲ್ಕೊರೆತ ಮತ್ತಷ್ಟು ತೀವ್ರಗೊಂಡಿದೆ. ಬೆಟ್ಟಂಪಾಡಿಯಲ್ಲಿ ರೊಹರ ಅಬ್ದುಲ ಎಂಬವರ ಮನೆ ಅಪಾಯದಂಚಿನಲ್ಲಿದೆ. ಅವರ ಮನೆಯ ಸ್ನಾನದ ಕೊಠಡಿ ಈಗಾಗಲೇ ಸಮುದ್ರಪಾಲಾಗಿದೆ. ಸೋಮೇಶ್ವರ ದೇವಸ್ಥಾನ ಸಮೀಪದ ಮೋಹನ್ ಎಂಬವರ ಮನೆಯ ಸ್ನಾನದ ಕೊಠಡಿ ಸೇರಿದಂತೆ ಒಂದು ಪಾರ್ಶ್ವದ ಗೋಡೆ ಗುರುವಾರ ತಡರಾತ್ರಿ ಸಮುದ್ರಪಾಲಾಗಿದೆ. ಮೋಹನ್ ಅವರು ಬಾಡಿಗೆಗೆ ನೀಡಿದ್ದ […]

ಉಳ್ಳಾಲದಲ್ಲಿ ದಡಕ್ಕೆ ಅಪ್ಪಳಿಸುತ್ತಿರುವ ಭಾರೀ ಗಾತ್ರದ ಅಲೆಗಳು

Thursday, October 24th, 2019
Ullal

ಮಂಗಳೂರು : ವಾಯುಭಾರ ಕುಸಿತ ಹಿನ್ನೆಲೆ ಉಳ್ಳಾಲದಲ್ಲಿ ಸಮುದ್ರದ ಅಲೆಗಳು ದಡಕ್ಕೆ ಬಿರುಸಿನಿಂದ ಅಪ್ಪಳಿಸುತ್ತಿದ್ದು, ಕೈಕೋ, ಕಿಲಿರಿಯಾನಗರ, ಮೊಗವೀರಪಟ್ನ ಸಮುದ್ರ ತೀರದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಜೋರಾಗಿ ಬೀಸುತ್ತಿರುವ ಗಾಳಿಯ ಪರಿಣಾಮವಾಗಿ ಕಡಲ್ಕೊರೆತ ಉಂಟಾಗಿ ಅಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ತಡೆಗೋಡೆ ಸಮುದ್ರಪಾಲಾಗುತ್ತಿದೆ. ಉಚ್ಚಿಲ, ಸೋಮೇಶ್ವರ ಭಾಗದಲ್ಲಿ ಕಡಲ್ಕೊರೆತ ಹೆಚ್ಚಾಗಿದ್ದು, ಸೋಮೇಶ್ವರ ದೇವಸ್ಥಾನ ಬಳಿಯ ಮೋಹನ್ ಅವರ ಮನೆಗೆ ಅಲೆಗಳು ಅಪ್ಪಳಿಸುತ್ತಿದೆ. ಉಚ್ಚಿಲದ ಬಟ್ಟಂಪ್ಪಾಡಿ ಸಮೀಪ ನಾಲ್ಕುತೆಂಗಿನ ಮರಗಳು ಧರಾಶಾಯಿಯಾಗಿದೆ.  

ಉಳ್ಳಾಲ : ಸಿಡಿಲು, ಮಿಂಚಿಗೆ ಹೆದರಿ ಓಡಿದಾಗ ರೈಲು ಡಿಕ್ಕಿ ಹೊಡೆದು ಯುವಕ ಮೃತ್ಯು

Friday, October 18th, 2019
Accident

ಉಳ್ಳಾಲ : ಸಿಡಿಲು, ಮಿಂಚಿಗೆ ಹೆದರಿದ ಯುವಕರಿಬ್ಬರು ತರಾತುರಿಯಲ್ಲಿ ತೊಕ್ಕೊಟ್ಟು ಒಳಪೇಟೆಯಲ್ಲಿ ರೈಲು ಹಳಿ ದಾಟುತ್ತಿದ್ದ ಸಂದರ್ಭ ರೈಲು ಡಿಕ್ಕಿ ಹೊಡೆದು ಓರ್ವ ಸಾವನ್ನಪ್ಪಿದರೆ, ಇನ್ನೋರ್ವ ಗಂಭೀರ ಗಾಯಗೊಂಡಿದ್ದಾರೆ. ಹಾವೇರಿ ಜಿಲ್ಲೆಯ ಆನೇಕಲ್ಲು ಹುಣಸಿ ಗ್ರಾಮದ ನಿವಾಸಿ ಸುಭಾಷ್(24) ಸಾವನ್ನಪ್ಪಿದ್ದು, ಆತನ ಜತೆಯಲ್ಲಿದ್ದ ಮಂಜುನಾಥ್(26) ಕಾಲು ತುಂಡಾಗಿದೆ. ಗುರುವಾರ ಸಾಯಂಕಾಲ ಕೆಲಸ ಮುಗಿಸಿ ಬರುತ್ತಿದ್ದ ಯುವಕರು ತೊಕ್ಕೊಟ್ಟು ಒಳಪೇಟೆ ರೈಲು ಹಳಿಬಳಿ ತಲುಪಿದಾಗ ಜೋರಾದ ಮಳೆ, ಸಿಡಿಲು, ಮಿಂಚು ಬಂದಿದೆ. ಇದರಿಂದ ಗಾಬರಿಗೊಂಡ ಯುವಕರು ಬೇಗನೆ ಮನೆ […]

ಕಾಲಿಯಾ ರಫೀಕ್ ಕೊಲೆ ಪ್ರಕರಣ : ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Friday, October 4th, 2019
Mohammed-Najeeb

 ಮಂಗಳೂರು : ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕೋಟೆಕಾರು ಪೆಟ್ರೋಲ್ ಪಂಪ್ ಬಳಿಯಲ್ಲಿ ನಡೆದಿದ್ದ ಕುಖ್ಯಾತ ರೌಡಿ ಕಾಲಿಯಾ ರಫೀಕ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯೋರ್ವನನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಾಸರಗೋಡಿನ ಮೇಲ್ಪರಂಬ, ಕಳನಾಡ್ ಮೊಹಮ್ಮದ್ ನಜೀಬ್ ಯಾನೆ ಕಲ್ಲಟ್ರ ನಜೀಬ್(46) ಬಂಧಿತ ಆರೋಪಿಯಾಗಿದ್ದಾನೆ. 2017ರ ಫೆಬ್ರವರಿ ತಿಂಗಳಲ್ಲಿ ಮಹಮ್ಮದ್ ಝಾಹಿದ್‌ ತನ್ನ ಸ್ನೇಹಿತ ಕಾಲಿಯಾ ರಫಿಕ್‌ನೊಂದಿಗೆ ಮುಜಿಬ್‌ ಹಾಗೂ ಫಿರೋಜ್‌ ರವರ ಜೊತೆಯಲ್ಲಿ ರಾತ್ರಿ 11 ಗಂಟೆಯ ಸುಮಾರಿಗೆ ಕಾರಿನಲ್ಲಿ […]

ಉಳ್ಳಾಲದಲ್ಲಿ ತಡರಾತ್ರಿ ನಡೆದ ಶೂಟೌಟ್ : ಆರೋಪಿಗಳ ಬಂಧನ

Monday, September 23rd, 2019
ullal

ಉಳ್ಳಾಲ : ಇಲ್ಲಿನ ಮುಕ್ಕಚ್ಚೇರಿ ಸಮೀಪದ ಕಡಪರ ಎಂಬಲ್ಲಿ ಭಾನುವಾರ ತಡರಾತ್ರಿ ಎರಡು ತಂಡಗಳ ನಡುವಿನ ಹೊಡೆದಾಟ ಹಾಗೂ ಶೂಟೌಟ್ ನಡೆದಿದ್ದು. ಈ ಪ್ರಕರಣಕ್ಕೆ ಸಂಬಂಧಿಸಿ ಹಲವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ ಸುಹೈಲ್ ಕಂದಕ್ ಹಾಗೂ ಕಡಪರ ನಿವಾಸಿ ಇರ್ಶಾದ್(20) ಎಂಬವರು ಗಾಯಗೊಂಡಿದ್ದಾರೆ. ಆರಂಭದಲ್ಲಿ ವಾಟ್ಸಾಪ್ ಸಂದೇಶದ ವಿಚಾರವಾಗಿ ಸುಹೈಲ್ ಕಂದಕ್ ಮತ್ತು ಸಲ್ಮಾನ್ ನಡುವೆ ಮೊಬೈಲ್ ಫೋನ್ ಮೂಲಕ ಮಾತಿನ ಚಕಮಕಿ ನಡೆದಿದೆ. ಇದು ತಾರಕಕ್ಕೇರಿದ್ದು, ಅತ್ತಾವರ ನಿವಾಸಿಯಾಗಿರುವ ಸುಹೈಲ್ ಕಂದಕ್ ಮತ್ತು ತಂಡ ರಾತ್ರಿ 11:30ರ […]

ಉಳ್ಳಾಲ : ಮರಳು ಸಾಗಾಟ ಲಾರಿ – ಖಾಸಗಿ ಬಸ್ ಮುಖಾಮುಖಿ ಢಿಕ್ಕಿ

Thursday, September 19th, 2019
lorry

ಉಳ್ಳಾಲ : ಮರಳು ಸಾಗಾಟದ ಲಾರಿ ಖಾಸಗಿ ಬಸ್ ಗೆ ಢಿಕ್ಕಿ ಹೊಡೆದ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಕಲ್ಕಟ್ಟ ಎಂಬಲ್ಲಿ ಗುರುವಾರ ಮುಂಜಾನೆ ಸಂಭವಿಸಿದೆ‌ . ಘಟನೆಯಲ್ಲಿ ಬಸ್ ನಲ್ಲಿದ್ದವರು ಸಣ್ಣ ಪುಟ್ಟ ಗಾಯಗೊಂಡಿದ್ದು, ಕೆಲಕಾಲ ರಸ್ತೆ ಸಂಚಾರ ಅಡ್ಡಿಯಾಗಿದೆ. ತೌಡುಗೋಳಿಯಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಗೆ ವಿರುದ್ದ ದಿಕ್ಕಿನಿಂದ ಹರೇಕಳ ಕಡೆಯಿಂದ ಕೇರಳ ಕಡೆಗೆ ಮರಳು ಸಾಗಾಟ ನಡೆಸುತ್ತಿದ್ದ ಲಾರಿ ಮುಖಾಮುಖಿ ಢಿಕ್ಕಿ ಹೊಡೆದಿದೆ. ಬೆಳಗ್ಗಿನ ಸಮಯವಾದ್ದರಿಂದ ಬಸ್ಸಿನಲ್ಲಿ ಪ್ರಯಾಣಿಕರು ಹೆಚ್ಚಿದ್ದು, ವಿದ್ಯಾರ್ಥಿಗಳು […]

ಉಳ್ಳಾಲ : ನಗರಸಭೆ ಅನ್ಯಾಯ ಭ್ರಷ್ಟಾಚಾರ ವಿರುದ್ದ : ಹಿತರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ

Wednesday, September 11th, 2019
Ullal

ಉಳ್ಳಾಲ : ಮಾಜಿ ಸಚಿವರ ಪ್ರೇರಣೆಯಿಂದ ಅಧಿಕಾರಿಗಳು ದುರಾಡಳಿತ ನಡೆಸುತ್ತಾ ಉಳ್ಳಾಲದಲ್ಲಿ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕಲ್ಪಿಸದೇ, ಸೌಹಾರ್ದತೆಗೆ ಧಕ್ಕೆಯಾಗುವಂತೆ ಮಾಡುತ್ತಿದ್ದಾರೆ ಎಂದು ನಾಗರಿಕ ಹಿತರಕ್ಷಣಾ ಸಮಿತಿ ಉಳ್ಳಾಲ ಇದರ ಗೌರವಾಧ್ಯಕ್ಷ ದಿನಕರ್ ಉಳ್ಳಾಲ ಅಭಿಪ್ರಾಯಪಟ್ಟರು. ನಾಗರಿಕ ಹಿತರಕ್ಷಣಾ ಸಮಿತಿ ಉಳ್ಳಾಲ ಇವರ ವತಿಯಿಂದ ಉಳ್ಳಾಲ ನಗರಸಭೆಯಲ್ಲಿ ನಡೆಯುವ ಅನ್ಯಾಯ ಹಾಗೂ ಭ್ರಷ್ಟಾಚಾರ ವಿರುದ್ದ ಉಳ್ಳಾಲ ಅಬ್ಬಕ್ಕ ವೃತ್ತದಿಂದ ಉಳ್ಳಾಲ ನಗರಸಭೆ ಕಚೇರಿವರೆಗೆ ನಡೆದ ಪ್ರತಿಭಟನಾ ಜಾಥಾ ಹಾಗೂ ನಗರಸಭೆ ಎದುರುಗಡೆ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ […]

ಉಳ್ಳಾಲ : ವಾಯು ಚಂಡಮಾರುತದ ಪ್ರಭಾವಕ್ಕೆ ಮೂರು ಮನೆಗಳು ಸಮುದ್ರದ ಪಾಲು- ಕಟೀಲ್ ಭೇಟಿ

Thursday, June 13th, 2019
Nalin

ಮಂಗಳೂರು : ವಾಯು ಚಂಡಮಾರುತದ ಪ್ರಭಾವಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಸಮುದ್ರ ತೀರದಲ್ಲಿದ್ದ ಮೂರು ಮನೆಗಳು ಸಮುದ್ರದ ಪಾಲಾಗಿವೆ. ಉಳ್ಳಾಲದ ಸಮುದ್ರ ತೀರದಲ್ಲಿದ್ದ ಮೂರು ಮನೆಗಳು ಸಮುದ್ರದ‌ ಅಲೆಗೆ ಸಂಪೂರ್ಣ ಹಾನಿಗೀಡಾಗಿವೆ. ಉಳ್ಳಾಲದ ಕಿಲಾರಿಯ ಪ್ರದೇಶದ ಹಮೀದ್, ಮೊಯ್ದಿನಬ್ಬ ಮತ್ತು ಬಾವಾ ಎಂಬುವವರ ಮನೆಗಳಿಗೆ ಹಾನಿಯಾಗಿದ್ದು, ಇವರನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ. ಅಲೆಗಳ ಅಬ್ಬರ ಜಾಸ್ತಿಯಾದರೆ ಇನ್ನೂ ಹಲವು ಮನೆಗಳು ಅಪಾಯಕ್ಕೆ ಸಿಲುಕಲಿವೆ ಎಂದು ಅಂದಾಜಿಸಲಾಗಿದೆ. ಉಳ್ಳಾಲ ಮತ್ತು ಸೋಮೇಶ್ವರ ಉಚ್ಚಿಲ ತೀರದಲ್ಲಿ ಸಮುದ್ರದ ಅಲೆಗಳು […]

ಕಾಂಗ್ರೆಸ್​ಗೆ ಅಧಿಕಾರ ಸಿಗದಿದ್ದರೂ ಪರವಾಗಿಲ್ಲ..ಎಸ್​ಡಿಪಿಐ ಜೊತೆ ಮೈತ್ರಿಯಿಲ್ಲ: ಯು.ಟಿ‌.ಖಾದರ್

Tuesday, September 4th, 2018
u-t-kadher

ಮಂಗಳೂರು: ಉಳ್ಳಾಲ ನಗರಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಇಲ್ಲಿ ಎಸ್ಡಿಪಿಐ ಜೊತೆಗೆ ಮೈತ್ರಿ ಮಾಡುವುದಿಲ್ಲ ಎಂದು ಸಚಿವ ಯು.ಟಿ‌.ಖಾದರ್ ಹೇಳಿದ್ದಾರೆ. ಉಳ್ಳಾಲ ನಗರಸಭೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಾಂಗ್ರೆಸ್ಗೆ ಅಧಿಕಾರ ಸಿಗದಿದ್ದರೂ ಪರವಾಗಿಲ್ಲ. ಎಸ್ಡಿಪಿಐ ಜೊತೆಗೆ ಮೈತ್ರಿ ಮಾಡುವುದಿಲ್ಲ ಎಂದರು. ಇತರೆಡೆಗಳಲ್ಲಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಕ್ಕೆ ತಕ್ಕಂತೆ ನಿರ್ಧರಿಸಲಾಗುವುದು ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಿಗ್ಗೆ 11ರವರೆಗೆ ಶೇ 30.78ರಷ್ಟು ಮತ ಚಲಾವಣೆ

Friday, August 31st, 2018
election

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಮತ್ತು ಪುತ್ತೂರು ನಗರಸಭೆಗಳು ಹಾಗೂ ಬಂಟ್ವಾಳ ಪುರಸಭೆಯ 89 ವಾರ್ಡ್ ಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಯಿಂದ ಎಲ್ಲ ವಾರ್ಡ್ ಗಳಲ್ಲಿ ಏಕಕಾಲಕ್ಕೆ ಮತದಾನ ಆರಂಭವಾಯಿತು. ಬೆಳಿಗ್ಗೆ 9 ಗಂಟೆ ವೇಳೆಗೆ ಉಳ್ಳಾಲದಲ್ಲಿ ಶೇಕಡ 13ರಷ್ಟು, ಪುತ್ತೂರಿನಲ್ಲಿ ಶೇ 14ರಷ್ಟು ಮತ್ತು ಬಂಟ್ವಾಳದಲ್ಲಿ ಶೇ 15ರಷ್ಟು ಮತದಾನ ನಡೆದಿದೆ. ಬೆಳಿಗ್ಗೆ 11 ಗಂಟೆಯವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡ 30.78ರಷ್ಟು ಮತದಾನವಾಗಿದೆ. ಉಳ್ಳಾಲ ನಗರಸಭೆಯಲ್ಲಿ ಶೇ 28.70ರಷ್ಟು, […]