Blog Archive

ಯೋಗಾಸನ ಸ್ಪರ್ಧೆ: ಆಳ್ವಾಸ್‍ನ ಐವರು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

Monday, October 22nd, 2018
alwas-clg

ಮೂಡುಬಿದಿರೆ: ಕಾರ್ಕಳದಲ್ಲಿ ನಡೆದ ಮೈಸೂರು ವಿಭಾಗೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಸಮಗ್ರ ಪ್ರಶಸ್ತಿ ಅದರಲ್ಲಿ ಸ್ಪರ್ಧಿಸಿದ್ದ ಆಳ್ವಾಸ್ ಕನ್ನಡ ಮಾಧ್ಯಮ ಐವರು ವಿದ್ಯಾರ್ಥಿಗಳು ಎಲ್ಲ ವಿಭಾಗಗಳಲ್ಲೂ ಪ್ರಥಮ ಸ್ಥಾನ ಗಳಿಸಿ, ನವೆಂಬರ್‍ನಲ್ಲಿ ದೊಡ್ಡಬಳ್ಳಾಪುರದಲ್ಲಿ ನಡೆಯುವ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. 14ರ ವಯೋಮಿತಿಯ ಬಾಲಕರ ವಿಭಾಗದ ಗುಂಪು ಯೋಗದಲ್ಲಿ ಆಳ್ವಾಸ್‍ನ ಸಂಜು ಮುತ್ತಪ್ಪ , 17ರ ವಯೋಮಿಯ ಬಾಲಕರ ವಿಭಾಗದಲ್ಲಿ ಅಥ್ಲೇಟಿಕ್ ಯೋಗದಲ್ಲಿ ಮಿಲನ್ ಲೋಕೇಶ್ , ರಿದೇಮಿಕ್ ಯೋಗಾ ಪವನ್ […]

ಜಿಲ್ಲೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು..ಪಟ್ಟಣ ಪಂಚಾಯತ್​ಗಳಲ್ಲೂ ಅಧಿಕಾರ ಹಿಡಿಯುವಲ್ಲಿ ಯಶಸ್ವಿ!

Monday, September 3rd, 2018
udupi

ಉಡುಪಿ: ಜಿಲ್ಲೆಯಲ್ಲಿ ನಡೆದ ನಾಲ್ಕು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಉಡುಪಿ ನಗರಸಭೆ, ಕಾರ್ಕಳ ಮತ್ತು ಕುಂದಾಪುರ ಪುರಸಭೆ ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ಗಳಲ್ಲೂ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಮುಖ್ಯವಾಗಿ ಉಡುಪಿ ನಗರಸಭೆಯ 35 ವಾರ್ಡ್ಗಳ ಪೈಕಿ 31 ವಾರ್ಡ್ಗಳನ್ನು ಬಿಜೆಪಿ ಬಾಚಿಕೊಳ್ಳುವ ಮೂಲಕ ಕಾಂಗ್ರೆಸ್ ಕೈಯಿಂದ ನಗರಸಭೆಯನ್ನು ವಶಕ್ಕೆ ಪಡೆದಿದೆ. ಈ ಭಾಗದ ಪ್ರಭಾವಿ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗೆ ಇದು ದೊಡ್ಡ ಮುಖಭಂಗ ಎಂದೇ ವಿಶ್ಲೇಷಿಸಲಾಗುತ್ತಿದೆ. […]

ಖಾಸಗಿ ಬಸ್ ಪಲ್ಟಿ..25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ!

Thursday, July 12th, 2018
bus-accident-3

ಉಡುಪಿ: ಜಿಲ್ಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿ 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾದ ಘಟನೆ ನಡೆದಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೆಳ್ಮಣ್ ಸಮೀಪದ ನಂದಳಿಕೆ ಕ್ರಾಸ್ ಬಳಿ ಘಟನೆ ನಡೆದಿದೆ. ಕಾರ್ಕಳದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಬಸ್ಸು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಯಿತು. ಇದರ ಪರಿಣಾಮವಾಗಿ ಬಸ್ನಲ್ಲಿದ್ದ 25ಕ್ಕೂ ಹೆಚ್ಚು ಗಾಯಗೊಂಡರು. ಅದೃಷ್ಟವಶಾತ್ ಪ್ರಯಾಣಿಕರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ […]

ಜಿಲ್ಲೆಯಲ್ಲಿ ಧಾರಾಕಾರ ಮಳೆ..ಸಮುದ್ರಕ್ಕಿಳಿಯದಂತೆ ಜಿಲ್ಲಾಡಳಿತ ಮೀನುಗಾರರಿಗೆ ಎಚ್ಚರಿಕೆ!

Thursday, June 21st, 2018
rain-udupi

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ರಾತ್ರಿಯಿಂದಲೇ ವರುಣನ ಆರ್ಭಟವಿದ್ದು, ಯೋಗ ದಿನಾಚರಣೆಗೆ ಅಡ್ಡಿಯಾಗಿದೆ. ಕುಂದಾಪುರ, ಕಾರ್ಕಳ, ಕೊಲ್ಲೂರು ಬೈಂದೂರಿನಲ್ಲೂ ಎಡೆಬಿಡದೇ ಮಳೆ ಸುರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ನೆರೆ ಹಾವಳಿ ಭೀತಿ ಎದುರಾಗಿದೆ. ನಿರಂತರ ಮಳೆಯಿಂದ ಜಿಲ್ಲೆಯಲ್ಲಿ ಹಳ್ಳಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಸಮುದ್ರಕ್ಕಿಳಿಯದಂತೆ ಜಿಲ್ಲಾಡಳಿತ ಮೀನುಗಾರರಿಗೆ ಎಚ್ಚರಿಕೆ ನೀಡಿದೆ. ದಿನವಿಡಿ ಮಳೆ ಮುಂದುವರೆಯುವ ಸಾಧ್ಯತೆ ಇದೆ.

ಕೋಚ್ ರವಿಶಾಸ್ತ್ರಿ ಇಂದು ತಮ್ಮ ತವರೂರಾದ ಕಾರ್ಕಳದ ಕರ್ವಾಲುಗೆ ಭೇಟಿ..ವಿಶೇಷ ಪೂಜೆ..!

Tuesday, May 22nd, 2018
ravi-shastri

ಉಡುಪಿ: ಭಾರತೀಯ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿ ಇಂದು ತಮ್ಮ ತವರೂರಾದ ಉಡುಪಿ ಜಿಲ್ಲೆ ಕಾರ್ಕಳದ ಎರ್ಲಪಾಡಿಯ ಕರ್ವಾಲುಗೆ ಭೇಟಿ ನೀಡಿದ್ದರು. ಈ ವೇಳೆ ಎರ್ಲಪಾಡಿಯ ಕರ್ವಾಲು ವಿಷ್ಣು ಮೂರ್ತಿ, ನಾಗ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು. ಕಳೆದ 10 ವರ್ಷಗಳಿಂದ ಪ್ರತಿ ವರ್ಷ ಶಾಸ್ತ್ರಿ ಅವರು ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಮೂಲನಾಗನ ಪೂಜೆಯಿಂದ ಸಂತಾನ ಪ್ರಾಪ್ತಿ ನಂಬಿಕೆ ಹಿನ್ನೆಲೆಯಲ್ಲಿ ನಾಗ ಸನ್ನಿಧಿಯಲ್ಲಿ ಶಾಸ್ತ್ರಿ ಅವರು ತನು ತಂಬಿಲ ಅರ್ಪಿಸಿದರು. ಪ್ರತಿವರ್ಷ ಮೂಲನಾಗ ದರ್ಶನ ಪಡೆಯುವ ಶಾಸ್ತ್ರಿ […]

ಕಾರ್ಕಳ ಬಳಿ ಭೀಕರ ಅಪಘಾತ:ತಾಯಿ-ಮಗ ಸ್ಥಳದಲ್ಲೇ ಸಾವು

Monday, April 9th, 2018
karkala

ಮಂಗಳೂರು: ಇನ್ನೋವಾ ಹಾಗೂ ಓಮ್ನಿ ಕಾರ್‌ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿರುವ ದಾರುಣ ಘಟನೆ ಕಾರ್ಕಳ ತಾಲೂಕಿನ ನೆಲ್ಲಿಕಾರು ಎಂಬಲ್ಲಿ ನಡೆದಿದೆ. ತೀರ್ಥಹಳ್ಳಿಯ ಸೋಮಶೇಖರ್ (45) ಹಾಗೂ ತಾಯಿ‌ ರತ್ನಮ್ಮ (70) ಸಾವನಪ್ಪಿದವರು. ಪ್ರವಾಸ ನಿಮಿತ್ತ ತೆರಳುತ್ತಿದ್ದ 9 ಮಂದಿ ಇದ್ದ ಓಮ್ನಿ ಕಾರು ಹಾಗೂ 6 ಮಂದಿ ಪ್ರಯಾಣಿಕರಿದ್ದ ಇನ್ನೋವಾ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ. ದುರ್ಘಟನೆಯಲ್ಲಿ ಇಬ್ಬರು ಮೃತರಾದರೆ ಹಲವರಿಗೆ ಗಾಯವಾಗಿದೆ. ಮೃತದೇಹವನ್ನು ಮೂಡಬಿದ್ರೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡವರನ್ನು ಸ್ಥಳೀಯ […]

ಕಾರ್ಕಳದಲ್ಲಿ ಮಾದರಿ ಆಡಳಿತ: ಮಟ್ಟಾರು

Saturday, February 10th, 2018
karkala

ಕಾರ್ಕಳ: ಅನೇಕ ವಿಚಾರಗಳಲ್ಲಿ ಕಾರ್ಕಳ ಕ್ಷೇತ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಕಾಲದಲ್ಲಿ ವಿ. ಸುನಿಲ್‌ ಕುಮಾರ್‌ ಶಾಸಕರಾಗಿ ಆಯ್ಕೆಯಾಗಿದ್ದು, ಅವರ ಆಡಳಿತಾವಧಿಯಲ್ಲಿ ಅಚ್ಚರಿಯ ರೀತಿಯಲ್ಲಿ ಕ್ಷೇತ್ರ ಅಭಿಚೃದ್ಧಿಯಾಗಿದೆ. ಮಾದರಿ ಆಡಳಿತದಿಂದಾಗಿ ಪ್ರಸ್ತುತ ಕಾರ್ಕಳ ರಾಜ್ಯದಲ್ಲಿ ಗುರುತಿಸಿಕೊಂಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು. ತಾ.ಪಂ. ಕಚೇರಿ ಸಮೀಪ ಮೈದಾನದಲ್ಲಿ ಶುಕ್ರವಾರ ನಡೆದ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 5 ವರ್ಷಗಳ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ರಿಪೋರ್ಟ್‌ ಕಾರ್ಡ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಸಕ ವಿ. […]

ಕಾರ್ಕಳದಲ್ಲಿ ಸುನೀಲ್ ಕುಮಾರ್ ಎದುರಿಸುವ ಕಾಂಗ್ರೆಸ್‌ ಅಭ್ಯರ್ಥಿ ಯಾರು?

Tuesday, January 30th, 2018
sunil-kumar

ಉಡುಪಿ: ಒಂದೆಡೆ ದಿಗಂತದವರೆಗೆ ಚಾಚಿಕೊಂಡಿರುವ ಅರಬ್ಬೀ ಸಮುದ್ರ. ಇನ್ನೊಂದೆಡೆ ಪಶ್ಚಿಮ ಘಟ್ಟದ ಸಾಲು. ಇವೆರಡರ ನಡುವೆ ತೆಂಗು – ಕಂಗುಗಳ ಮರೆಯಲ್ಲಿ ಪ್ರಕೃತಿ ವಿಸ್ಮಯಗಳನ್ನು ಓಡಲಲ್ಲಿ ಅಡಗಿಸಿಕೊಂಡಿರುವ ಜಿಲ್ಲೆ ಉಡುಪಿ . ಅಷ್ಟ ಮಠಗಳ ನಾಡು ಈಗ ಚುನಾವಣಾ ಕದನಕ್ಕೆ ಸಿದ್ಧಗೊಳ್ಳುತ್ತಿದೆ. ಉಡುಪಿ ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಕೈಯಲ್ಲಿರುವ ಏಕೈಕ ಕ್ಷೇತ್ರವೆಂದರೆ ಅದು ಕಾರ್ಕಳ ವಿಧಾನಸಭಾ ಕ್ಷೇತ್ರ. ಕರಿಗಲ್ಲ ಗೊಮ್ಮಟ ನಗರಿ ಕಾರ್ಕಳ ಈಗ ಚುನಾವಣಾ ಅಖಾಡಕ್ಕೆ ತೆರದು ಕೊಳ್ಳುತ್ತಿದೆ. ರಾಮ, […]

ಕಾರ್ಕಳದಲ್ಲಿ 18 ತಿಂಗಳುಗಳ ಉಚಿತ ಕರಕುಶಲ ತರಬೇತಿ

Sunday, March 12th, 2017
Shilpa kale

ಕಾರ್ಕಳ : ಕೆನರಾ ಬ್ಯಾಂಕ್ ಪ್ರಾಯೋಜಿತ ಸಿ.ಇ.ಕಾಮತ್ ಕರಕುಶಲ ತರಬೇತಿ ಸಂಸ್ಥೆ, ಕಾರ್ಕಳ ಇವರು ಕನಿಷ್ಠ ಏಳನೆಯ ತರಗತಿ ಪಾಸಾಗಿರುವ, 17 ರಿಂದ 35 ರ ವಯಸ್ಸಿನೊಳಗಿನ ಅರ್ಹ ನಿರುದ್ಯೋಗಿ ಯುವಕರಿಗೆ ಹದಿನೆಂಟು ತಿಂಗಳು ಉಚಿತ ಊಟ, ವಸತಿ, ಸಮವಸ್ತ್ರ, ಉಪಕರಣಗಳು, ಕಚ್ಚಾವಸ್ತುಗಳ ಜೊತೆಗೆ ಅನುಭವಿ ಗುರುಗಳ ಮಾರ್ಗದರ್ಶನದಲ್ಲಿ ಕಲ್ಲು ಮತ್ತು ಮರ, ಲೋಹ ಶಿಲ್ಪಕಲೆಯನ್ನು ಕಲಿಸಿಕೊಡುತ್ತಾರೆ. ಇದರ ಜೊತೆಗೆ ಶೈಕ್ಷಣಿಕ ಪ್ರವಾಸ, ಪೂರಕವಾಗಿ ಕಂಪ್ಯೂಟರ್ ಮತ್ತು ಇಂಗ್ಲೀಷ್ ಮಾತನಾಡುವ ತರಗತಿಗಳನ್ನು ನೀಡುತ್ತಾರೆ. ಆಸಕ್ತರು ತಮ್ಮ ಹೆಸರು, […]

ಸುಶಾಂತ್ ನ ಚಿಕಿತ್ಸೆಗೆ ನೆರವಾಗುವಿರಾ… ಕಾಲುಗಳಿಗೆ ಸ್ವಾಧೀನವಿಲ್ಲ…ಆತನಿಗೆ ಅಮ್ಮನೇ ಎಲ್ಲ

Monday, July 28th, 2014
sushanth

ಮಂಗಳೂರು: ಆ ಪುಟ್ಟ ಬಾಲಕನ ಪ್ರತಿಯೊಂದು ಕೆಲಸಕ್ಕೂ ಅಮ್ಮನ ನೆರವು ಬೇಕು. ಬಾಲ್ಯದ ಕ್ಷಣಗಳನ್ನು ಖುಷಿಯಿಂದ ಕಳೆಯಬೇಕಾದ ಆತನಿಗೆ ಭಗವಂತ ಆ ಭಾಗ್ಯ ಕರುಣಿಸಿಲ್ಲ. ತನ್ನೆರಡೂ ಕಾಲುಗಳ ಸ್ವಾಧೀನವನ್ನು ಕಳೆದುಕೊಂಡಿರುವ ಆ ಪುಟ್ಟ ಬಾಲಕನಿಗೆ ಈಗ ಅಮ್ಮನೇ ಎಲ್ಲ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪಳ್ಳಿ ಎಂಬಲ್ಲಿನ ಸುಧಾಕರ ಆಚಾರ್ಯ ಮತ್ತು ತನುಜ ದಂಪತಿಯ ಪುತ್ರ ಹತ್ತರ ಹರೆಯದ ಸುಶಾಂತನ ನೋವಿನ ಕಥೆಯಿದು. ಎಲ್ಲರಂತೆ ಖುಷಿಯಿಂದ ನಲಿದಾಡುತ್ತಾ ಶಾಲೆಗೆ ತೆರಳಬೇಕಿದ್ದ ಈತ ಕಳೆದ ನಾಲ್ಕು ವರ್ಷಗಳಿಂದ ನಡೆದಾಡುವ […]