ಬ್ಲಾಕ್ ಫಂಗಸ್ ಇಂಜೆಕ್ಷನ್ ಕೂಡಲೇ ಹಂಚಿಕೆ ಮಾಡಲು ಕೇಂದ್ರಕ್ಕೆ ಮನವಿ
Saturday, May 22nd, 2021ಬೆಂಗಳೂರು : ರಾಜ್ಯಕ್ಕೆ ಮ್ಯೂಕೊರ್‍ಮೈಕೋಸಿಸ್ (ಬ್ಲಾಕ್ ಫಂಗಸ್) ಕಾಯಿಲೆಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಬಳಸಲಾಗುತ್ತಿರುವ ಲಿಪೊಸೊಮಲ್ ಅಂಫೋಟೆರಿಸಿನ್ ಬಿ ಇಂಜೆಕ್ಷನ್ ನ್ನು ಕೂಡಲೇ ಹಂಚಿಕೆ ಮಾಡಬೇಕು ಎಂದು ಕಂದಾಯ ಸಚಿವ ಆರ್ ಅಶೋಕ ಅವರು ಪತ್ರ ಬರೆದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. “ದೇಶದಲ್ಲಿ ಕರ್ನಾಟಕ ಎರಡನೇ ಅತೀ ಹೆಚ್ಚು ಕೋವಿಡ್ ಪಾಸಿಟಿವ್ ಸೋಂಕಿತರನ್ನ ಹೊಂದಿದ ರಾಜ್ಯವಾಗಿದೆ ಹಾಗೂ ಪಾಸಿಟಿವಿಟಿ ದರ ಕಳೆದ ವಾರಕ್ಕಿಂತಲು ಶೇ. 30ರಷ್ಟು ಹೆಚ್ಚಳವಾಗಿದೆ. […]