Blog Archive

ಹಳೆ ಬಂದರು ಅಭಿವೃದ್ಧಿಗೆ 65 ಕೋಟಿ ಮಂಜೂರು :ಶಾಸಕ ಜೆ.ಆರ್.ಲೋಬೊ

Tuesday, October 3rd, 2017
J.R Lobo

ಮಂಗಳೂರು: ಹಳೆ ಬಂದರು ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿ ಸಹಭಾಗಿತ್ವದಲ್ಲಿ 65 ಕೋಟಿ ಮಂಜೂರು ಮಾಡಿದೆ ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು. ಅವರು ಸುದ್ಧಿಗೋಷ್ಟಿ ನಡೆಸಿ ಕೇಂದ್ರ ಸರ್ಕಾರ 25 ಕೋಟಿ ನೀಡಿದ್ದು ಉಳಿಕೆ ಹಣವನ್ನು ರಾಜ್ಯ ಸರ್ಕಾರ ಪಾವತಿಸುವುದು ಎಂದರು. ಲಕ್ಷದ್ವೀಪಕ್ಕೆ ಉನ್ನತ ಮಟ್ಟದ ನಿಯೋಗವನ್ನು ಕೊಂಡು ಹೋಗಿ ಅಲ್ಲಿನ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ನುಡಿದ ಅವರು ಅಲ್ಲಿನ ಸರ್ಕಾರ ವಿಶೇಷವಾಗಿ ಜೆಟ್ಟಿ ನಿರ್ಮಿಸಲು 68 ಕೋಟಿ ಕೊಡುವಂತೆ ಪ್ರಯತ್ನಿಸುದಾಗಿ ತಿಳಿಸಿದ ಶಾಸಕ ಜೆ.ಆರ್.ಲೋಬೊ […]

ಐದು ಕಡೆಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ. ನಂದಿಗುಡ್ಡೆ ಸ್ಮಶಾನಕ್ಕೆ 50 ಲಕ್ಷ ರೂಪಾಯಿ

Saturday, July 29th, 2017
lobo

ಮಂಗಳೂರು: ನಂದಿಗುಡ್ಡೆ ಸ್ಮಶಾನವನ್ನು ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು. ಅವರು ಇಂದು ನಂದಿಗುಡ್ಡೆ ಸ್ಮಶಾನ ಅಭಿವೃದ್ಧಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ ಹೆಚ್ಚುವರಿಯಾಗಿ 2 ಶವಾಗಾರಕ್ಕೆ ಸಿಲಿಕಾನ್ ಅಳವಡಿಸುವುದು ಹಾಗೂ ಮೂಲಭೂತ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು. ಇಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡುವುದು, ಕುಡಿಯುವ ನೀರು, ಜನರಿಗೆ ಕುಳಿತುಕೊಳ್ಳಲು ಅವಕಾಶ ಮಾಡಲಾಗುವುದು. ಈ ಕೆಲಸಗಳು 4 ತಿಂಗಳ ಒಳಗೆ ಪೂರ್ಣಗೊಳಿಸಿ ನಂದಿಗುಡ್ಡೆ ಸ್ಮಶಾನವನ್ನು ಆಧುನೀಕರಿಸಲು ಸರ್ವ ಪ್ರಯತ್ನ […]

ಮಂಗಳೂರು ಹಳೆ ಬಂದರು ಅಳಿವೆ ಬಾಗಿಲಲ್ಲಿ ತುಂಬಿರುವ ಹೂಳು ಹೊರ ತೆಗೆಯಲು ಹೂಳೆತ್ತುವ ಯಂತ್ರ

Wednesday, November 23rd, 2016
mangaluru

ಮಂಗಳೂರು: ಮಂಗಳೂರು ಹಳೆ ಬಂದರು ಅಳಿವೆ ಬಾಗಿಲಲ್ಲಿ ತುಂಬಿರುವ ಹೂಳು ಹೊರ ತೆಗೆಯಲು ಕೊನೆಗೂ ಯಂತ್ರ ಬಂದಿದೆ. ಮುಂದಿನ 90 ದಿನಗಳಲ್ಲಿ ಹೂಳೆತ್ತುವ ಕಾಮಗಾರಿ ಪೂರ್ಣಗೊಳ್ಳಲಿದೆ. ಹಳೆ ಬಂದರಿನಲ್ಲಿ ಹೂಳು ತುಂಬಿರುವ ಪರಿಣಾಮ ಅವಘಡಗಳು ಸಂಭವಿಸುತ್ತಿರುವ ಬಗ್ಗೆ ಸ್ಥಳೀಯರು ಶಾಸಕ ಜೆ.ಆರ್.ಲೋಬೊ ಅವರಿಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಮುಂಬೈನಿಂದ ಈ ಹೂಳೆತ್ತುವ ಯಂತ್ರವನ್ನು ತರಿಸಲಾಗಿದೆ. 99.50 ಲಕ್ಷ ರೂಪಾಯಿ ವೆಚ್ಚದ ಈ ಹೂಳೆತ್ತುವ ಕಾಮಗಾರಿಯೂ ನಿಗದಿತ 90 ದಿನಗಳ ಅವಧಿಗೆ ಮುನ್ನವೇ ಮುಗಿಯಲಿದೆ. ಸುಮಾರು ಎರಡು ತಿಂಗಳ […]

ದಕ್ಷಿಣ ವಲಯ ಕಾಂಗ್ರೆಸ್ ಸಮಿತಿಯ ಉಚಿತ ವೈದ್ಯಕೀಯ ಶಿಬಿರಕ್ಕೆ ಉತ್ತಮ ಜನಸ್ಪಂದನೆ

Monday, June 29th, 2015
lober

ಮಂಗಳೂರು : ಶಾಸಕ ಜೆ. ಆರ್. ಲೋಬೊರವರ ನೇತೃತ್ವದಲ್ಲಿ ದಕ್ಷಿಣ ವಲಯ ಹಾಗು 48 ನೇ ಮತ್ತು 49 ನೇ ಕಾಂಗ್ರೆಸ್ ವಾರ್ಡ್ ಸಮಿತಿಯ ಸಹಯೋಗದೊಂದಿಗೆ ಕಪಿತಾನಿಯೊ ಶಾಲೆಯಲ್ಲಿ ಭಾನುವಾರ ನಡೆದ ಮೂರನೆ ಉಚಿತ ವೈದ್ಯಕೀಯ ಶಿಬಿರದಲ್ಲಿ ಎರಡು ವಾರ್ಡಿನಿಂದ ಸುಮಾರು 400ಕ್ಕು ಮಿಕ್ಕಿ ಜನರು ಭಾಗವಹಿಸಿ ಶಿಬಿರದ ಲಾಭವನ್ನು ಪಡೆದರು. ಶಿಬಿರವನ್ನು ಉದ್ಘಾಟಿಸಿ ಮಾತನಡಿದ ಶಾಸಕರು, ಜನ ಸೇವೆಯ ಮೂಲಕ ಪಕ್ಷವನ್ನು ತಳ ಮಟ್ಟದಲ್ಲಿ ಸಂಘಟಿಸಲು ನನ್ನ ವಿಧಾನಸಭಾ ಕ್ಷೇತ್ರದ ಪ್ರತಿ ವಾರ್ಡಿನಲ್ಲಿ ಇಂತಹ ಹಲವರು […]

ಮೀನುಗಾರಿಕ ಇಲಾಖೆಯಲ್ಲಿ ಜೆ.ಆರ್ ಲೋಬೊ ಸಭೆ

Friday, May 22nd, 2015
Fish Dakke

ಮಂಗಳೂರು: ನಗರದ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ. ಆರ್. ಲೋಬೊ ಬಂದರ್ ಪ್ರದೇಶದಲ್ಲಿರುವ ಮೀನುಗಾರಿಕೆ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಮತ್ತು ಮೀನುಗಾರರ ಮುಖಂಡರೊಂದಿಗೆ ಶುಕ್ರವಾರ ಸಭೆ ನಡೆಸಿ ಅವರ ಕುಂದು ಕೊರತೆಗಳನ್ನು ಆಲಿಸಿದರು. ಮೀನುಗಾರರ ಮನವಿಗೆ ಸ್ಪಂದಿಸಿ ಬೋಟ್ ದಾಖಲೆಯ ಸಕ್ರಮಿಕರಣಕ್ಕೆ ಇರುವ ಕೊನೆಯ ದಿನಾಂಕವನ್ನು ಜೂನ್11 ತಾರೀಕುವರೆಗೆ ವಿಸ್ತರಿಸಲು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ಬೆಂಗ್ರೆ ಮತ್ತು ಬಂದರ್ ಪ್ರದೇಶದಲ್ಲಿ ಮೂರನೆ ಹಂತದಲ್ಲಿ ಪ್ರಾರಂಭವಾಗಿರುವ ಹುಳೆತ್ತುವ ಕಾಮಗಾರಿಯು ಇನ್ನು ಅಗಿಲ್ಲ ಎಂದು ಮೀನುಗಾರರ ಮುಖಂಡರು ಸಭೆಯಲ್ಲಿ […]

ಚೌಡೇಶ್ವರಿದೇವಿ ದೇವಸ್ಥಾನದ ಸಮುದಾಯ ಭವನ 10 ಲಕ್ಷ ರೂಪಾಯಿ ಭರವಸೆ: ಜೆ. ಆರ್. ಲೋಬೊ

Saturday, May 9th, 2015
choudeshwari

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ. ಆರ್. ಲೋಬೊ ಶುಕ್ರವಾರ ಮಂಗಳದೇವಿ ಮಂಕಿ ಸ್ಟಾಂಡ್‌ನಲ್ಲಿರುವ ಶ್ರಿ ರಾಮಲಿಂಗ ಚೌಡೇಶ್ವರಿದೇವಿ ದೇವಸ್ಥಾನದ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಸಾವಿರಾರು ಭಕ್ತಾದಿಗಳು ಸೇವೆಸಲ್ಲಿಸುವ ಈ ಕ್ಷೇತ್ರದಲ್ಲಿ ಸಮುದಾಯ ಭವನದ ಆಗತ್ಯತೆಯನ್ನು ಶಾಸಕರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಯಿಸಿ, ಶಾಸಕರ ನಿಧಿಯಿಂದ 10 ಲಕ್ಷ ರೂಪಾಯಿ ಅನುದಾನ ಶೀಘ್ರದಲ್ಲಿ ನೀಡುವ ಭರವಸೆ ವ್ಯಕ್ತಪಡಿಸಿದರು.

ತಣ್ಣೀರುಬಾವಿ ತೂಗು ಸೇತುವೆಗೆ ರೂ. 6.00 ಕೋಟಿ ಬಿಡುಗಡೆ.- ಜೆ. ಆರ್. ಲೋಬೊ.

Friday, April 17th, 2015
Hanging Bridge

ಮಂಗಳೂರು : ಕರ್ನಾಟಕ ರಾಜ್ಯ ಸರಕಾರದ ಲೋಕೋಪಯೋಗಿ ಇಲಾಖೆಯಿಂದ ರೂ. 6.00 ಕೋಟಿ ಅನುದಾನ ತಣ್ಣಿರುಬಾವಿ-ಸುಲ್ತಾನ್ ಬತ್ತೇರಿ ತೂಗು ಸೇತುವೆ ಕಾಮಗಾರಿಗೆ ಬಿಡುಗಡೆ ಮಾಡಲಾಗಿದೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ.ಆರ್. ಲೋಬೊ ರವರು ಮಾಧ್ಯಮದ ಜೊತೆ ಮಾತನಾಡುತ್ತಾ ಹೇಳಿದರು. ಹಲವು ವರುಷಗಳಿಂದ ಅನುದಾನ ಅನಿಶ್ಚಿತತೆಯಲ್ಲಿ ಕಾಮಗಾರಿಯು ನೆನೆಗುದಿಗೆ ಬಿದ್ದಿದ್ದು, ಇದಕ್ಕೆ ಮರುಜೀವ ಕೊಡುವುದು ನನ್ನ ಯೋಜನೆಯಾಗಿತ್ತು. 410 ಮೀ. ಉದ್ದ, 10 ಅಡಿ ಅಗಲದ ಸುಮಾರು ರೂ. 12.00 ಕೋಟಿ ವೆಚ್ಚದ ತಣ್ಣೀರುಬಾವಿ […]

ಪುಟಾಣಿ ಮಕ್ಕಳೊಂದಿಗೆ ದೀಪಾವಳಿ ಹಬ್ಬ ಆಚರಿಸಿದ ಶಾಸಕರಾದ ಶ್ರೀ ಜೆ.ಆರ್ ಲೋಬೊ.

Saturday, October 25th, 2014
Deepavali

ಮಂಗಳೂರು : ಜೆಪ್ಪು ಮಾರ್ಕೆಟ್ ಬಳಿ ಇರುವ ಬಗಿನಿ ಸಮಾಜದಲ್ಲಿ ಆಶ್ರಯಿತರಾಗಿರುವ ಮಕ್ಕಳೊಂದಿಗೆ ದೀಪಾವಳಿ ಹಬ್ಬವನ್ನು ಸಿಹಿತಿಂಡಿ, ಹಣ್ಣುಹಂಪಲು, ಮತ್ತು ಪಟಾಕಿಗಳನ್ನು ಹಂಚುವುದರ ಮೂಲಕ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ತಮ್ಮ ಪಕ್ಷದ ಕಾರ್ಯಕರ್ತರೊಡನೆ ಸೇರಿ ಆಚರಿಸಿದರು. ನಂತರ ಮಾತನಾಡಿದ ಅವರು ಈ ಮಕ್ಕಳೊಂದಿಗೆ ಆಚರಿಸಲು ಮುಖ್ಯ ಉದ್ದೇಶವೆಂದರೆ ಎಲ್ಲಾ ಕಡೆ ಸಿಹಿ ಹಂಚುವಾಗ ಪಟಾಕಿ ಸಿಡಿಸುವಾಗ ನಮಗೆ ಇಂತಹ ಅವಕಾಶ ಇಲ್ಲ ಎನ್ನುವ ಬಾವನೆ ಈ ಮಕ್ಕಳಲ್ಲಿ ಬರಬಾರದು ಈ ಮಕ್ಕಳು ಕೂಡ ಎಲ್ಲರಂತೆ ಸಂತೊಷದಲ್ಲಿ […]

2.31 ಕೋಟಿ ವೆಚ್ಚದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶ್ರೀ ಜೆ.ಆರ್ ಲೋಬೊರವರಿಂದ ಚಾಲನೆ.

Thursday, October 23rd, 2014
Soutth Mla

ಮಂಗಳೂರು : ಮಂಗಳೂರು ದಕ್ಷಿಣ ವಿಧಾನಸಭಾ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು 2.31ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವುದರ ಮೂಲಕ ಈ ವರ್ಷದ ದೀಪಾವಳಿ ಹಬ್ಬವನ್ನು ಆಚರಿಸಿದರು. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜಪ್ಪಿನಮೊಗರು, ಕೊಡಿಯಾಲ್ ಬೈಲ್, ಶಕ್ತಿನಗರ, ಅತ್ತಾವರ, ಮರೋಳಿ, ಅಳಪೆ ಉತ್ತರ ಮುಂತಾದ ವಾರ್ಡ್‌ಗಳಲ್ಲಿ ಅಭಿವೃದ್ಧಿಯ ವಿವಿಧ ಕಾಮಗಾರಿಗಳನ್ನು ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಶಂಕುಸ್ಥಾಪನೆ ಮಾಡಿದರು. ಜಪ್ಪಿನಮೊಗರು ಕಲ್ಲತಡಮೆ ರಸ್ತೆ ಅಭಿವೃದ್ಧಿಗೆ 40 ಲಕ್ಷ, ಕೊಡಿಯಾಲ್ ಬೈಲ್ ವಿವೇಕ್ ನಗರದಲ್ಲಿ […]

ಬಡವರಿಗೆ ಸರ್ಕಾರದ ಸಹಾಯಧನ ವಿತರಿಸಿದ ಜೆ.ಆರ್.ಲೋಬೊ

Thursday, September 5th, 2013
lobo

ಮಂಗಳೂರು: ಬಡಕುಟುಂಬಗಳಿಗೆ ಸರ್ಕಾರದಿಂದ ಸಿಗುವ ವಿವಿಧ ರೀತಿಯ ಸಹಾಯಧನವನ್ನು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ನಗರದ ಎನ್.ಜಿ.ಒ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಿತರಿಸಿದರು. ಈ ಸಂದರ್ಭ ನೆರೆದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ಇಲಾಖೆ ಆಸಕ್ತಿ ವಹಿಸಿ ಕೆಲಸ ನಿರ್ವಹಿಸಿದರೆ ಯಾವುದೇ ರೀತಿಯ ಕಾರ್ಯವನ್ನು ಸಾಧಿಸಬಹದು ಎಂಬುದಕ್ಕೆ ಈ ಸಮಾರಂಭವೇ ಸಾಕ್ಷಿಯಾಗಿದೆ. ಇಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಆಸಕ್ತಿ ವಹಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಸೂಕ್ತ ರೀತಿಯ ಸಹಾಯಧನವನ್ನು ವಿತರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. […]