Blog Archive

ಸದನದಲ್ಲಿ ನಮಗೆ ಬಹುಮತ ಸಾಬೀತಾಗುವುದು ಖಚಿತ: ಡಿ.ಕೆ. ಶಿವಕುಮಾರ್

Saturday, May 19th, 2018
shivkumar

ಬೆಂಗಳೂರು: ನಮ್ಮ ಎಲ್ಲಾ ಶಾಸಕರೂ ಕಾಂಗ್ರೆಸ್ ಪರವಾಗಿ ಓಟ್ ಮಾಡಲಿದ್ದಾರೆ. ಸದನದಲ್ಲಿ ನಮಗೆ ಬಹುಮತ ಸಾಬೀತಾಗುವುದು ಖಚಿತ ಎಂದು ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದ ಬಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಪ್ರತಾಪ್ ಗೌಡ, ಆನಂದ್ ಸಿಂಗ್ ಅವರನ್ನು ಯಾರು ಕರ್ಕೊಂಡು ಹೋಗಿದ್ದಾರೆ ಎಂದು ನಾನು ನನ್ನ ಬಾಯಲ್ಲಿ ಹೇಳುವುದಿಲ್ಲ. ಆನಂದ್ ಸಿಂಗ್ ಕೆಲವೇ ಕ್ಷಣಗಳಲ್ಲಿ ಆಗಮಿಸಲಿದ್ದಾರೆ. ನಮ್ಮ ಪರವಾಗಿ ಮತ ಹಾಕಲಿದ್ದಾರೆ ಎಂದು ಹೇಳಿದರು. ಪ್ರತಾಪ್ ಗೌಡ ಪಾಟೀಲ್ ಪ್ರಮಾಣವಚನ ಸ್ವೀಕರಿಸುತ್ತಾರೆ. ಪ್ರತಾಪ್ […]

ಗೈರಾಗಿರುವ ಶಾಸಕರನ್ನು ಅವರೇ ಕರೆ ತರ್ತಾರೆ… ನಮ್ಮಲ್ಲೂ ರಣತಂತ್ರ ಸಿದ್ಧ: ಡಿ.ಕೆ.ಶಿವಕುಮಾರ್

Saturday, May 19th, 2018
D-k-shivkumar

ಬೆಂಗಳೂರು: ವಿಧಾ‌ಸಭೆಯಲ್ಲಿ ಕಾಂಗ್ರೆಸ್‌ನ ಆನಂದ್ ಸಿಂಗ್ ಹಾಗೂ ಪ್ರತಾಪ್ ಗೌಡ ಪಾಟೀಲ್ ಇಲ್ಲ. ಆದರೆ ನಾವು ಅವರ ಸಂಪರ್ಕದಲ್ಲಿದ್ದು, ಅವರು ನಮ್ಮ ಪರವಾಗಿಯೇ ಮತ ಚಲಾಯಿಸಲಿದ್ದಾರೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಇಬ್ಬರು ಶಾಸಕರನ್ನು ಬಿಟ್ಟು ಎಲ್ಲಾ ಶಾಸಕರೂ ಸದನದಲ್ಲಿ ಹಾಜರಿದ್ದಾರೆ. ಅವರನ್ನು ಯಾರು ಕರೆದುಕೊಂಡು ಹೋಗಿದ್ದಾರೋ ಅವರೇ ಕರೆದುಕೊಂಡು ಬರಲಿದ್ದಾರೆ. ಆದರೆ ಅವರು ಯಾವ ಪಕ್ಷದಿಂದ ಆಯ್ಕೆಯಾಗಿದ್ದಾರೋ ಆ ಪಕ್ಷದ‌ ಪರ ಇರಲಿದ್ದಾರೆ ಎಂದರು. ಬಿಜೆಪಿಯ ಸೋಮಶೇಖರ […]

ನಮ್ಮ ಶಾಸಕರನ್ನು ಒಳಗೆ ಅಥವಾ ಹೊರಗೆ ಕೊಂಡೊಯ್ದು ರಕ್ಷಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್

Thursday, May 17th, 2018
D-K-Shivkumar

ಬೆಂಗಳೂರು: ನಮ್ಮ ಒಬ್ಬ ಶಾಸಕರನ್ನು ಹೊರತುಪಡಿಸಿದರೆ ಎಲ್ಲರೂ ಜತೆಯಲ್ಲೆ ಇದ್ದಾರೆ. ಯಾರೂ ಬಿಟ್ಟು ಹೋಗಿಲ್ಲ ಎಂದು ಶಾಸಕ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನ ಅಶೋಕ ಹೋಟೆಲ್‌ನಲ್ಲಿ ಸುದ್ದಿಗಾರರ ಜತೆ‌ ಮಾತನಾಡಿದ ಅವರು, ಸಂಪರ್ಕಕ್ಕೆ ಸಿಗದಿರುವ ಶಾಸಕರ ಬಗ್ಗೆ ಈಗ ಏನನ್ನೂ ಹೇಳಲ್ಲ. ಅವರು ನಮ್ಮೊಂದಿಗೆ ಇಲ್ಲ ಅಷ್ಟೆ, ಸಂಪರ್ಕದಲ್ಲಿದ್ದಾರೆ. ನಮ್ಮ ಶಾಸಕರು ನಮ್ಮೊಂದಿಗೆ ಇದ್ದಾರೆ, ಎಲ್ಲಿಯೂ ಹೋಗಲ್ಲ. ಅಗತ್ಯ ಸಂದರ್ಭ ಬಂದಾಗ ನಮ್ಮ ಬಲ ತೋರಿಸುತ್ತೇವೆ. ನಾವು ನಮ್ಮ ನಡೆಯನ್ನು ಈಗ ತಿಳಿಸಲ್ಲ. ಅಗತ್ಯ ಬಂದಾಗ ನಿಮಗೇ ಅರಿವಾಗುತ್ತದೆ […]

ಆಪರೇಷನ್‌ ಕಮಲದ ಭೀತಿ, ಈಗಲ್‌ಟನ್‌ನತ್ತ ಕಾಂಗ್ರೆಸ್‌ ಶಾಸಕರು

Wednesday, May 16th, 2018
congress-bus

ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ರಚನೆಗೆ ಕಾಂಗ್ರೆಸ್ – ಬಿಜೆಪಿ ನಡುವೆ ಭಾರಿ ಸರ್ಕಸ್‌ ನಡೆಯುತ್ತಿದೆ. ಮತ್ತೊಂದು ಕಡೆ ಬಿಜೆಪಿ ಆಪರೇಷನ್‌ ಕಮಲ ನಡೆಸುವ ಸಾಧ್ಯತೆ ಇದೆ ಎಂಬ ಗುಮಾನಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಶಾಸಕರನ್ನು ರಕ್ಷಿಸಿಕೊಳ್ಳಲು ಮುಂದಾಗಿದ್ದು, ರೆಸಾರ್ಟ್‌ ರಾಜಕೀಯಕ್ಕೆ ಮುಂದಾಗಿದೆ. ಬಿಡದಿಯ ಈಗಲ್ ಟನ್ ರೆಸಾರ್ಟ್‌ ಗೆ ಕಾಂಗ್ರೆಸ್ ಶಾಸಕರನ್ನು ಕರೆದೊಯ್ಯಲು ಕೆಪಿಸಿಸಿ ಕಚೇರಿಗೆ ಖಾಸಗಿ ಐಶಾರಾಮಿ ಬಸ್‌ ಬಂದಿದ್ದು, ನೂತನ ಎಂಎಲ್‌ಗಳನ್ನು ಮೊದಲಿಗೆ ರಾಜ್ಯಪಾಲರ ಬಳಿ ಕರೆದುಕೊಂಡು ಹೋಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಆ […]

ಉಭಯ ಜಿಲ್ಲೆಗಳಲ್ಲಿ ಕಳೆದ ಬಾರಿಗಿಂತ ಎರಡು ಸ್ಥಾನ ಜಾಸ್ತಿ -ಡಿ.ಕೆ. ಶಿವಕುಮಾರ್

Thursday, May 3rd, 2018
vasanth-bangera

ಬೆಳ್ತಂಗಡಿ: ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು ಉಭಯ ಜಿಲ್ಲೆಗಳಲ್ಲಿ ಕಳೆದ ಬಾರಿಗಿಂತ ಎರಡು ಸ್ಥಾನ ಜಾಸ್ತಿ ಗಳಿಸಲಿದ್ದೇವೆ ಎಂದು ಇಂಧನ ಸಚಿವ ಹಾಗೂ ರಾಜ್ಯ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು. ಅವರು ಬುಧವಾರ ಬೆಳ್ತಂಗಡಿ ಅಂಬೇಡ್ಕರ್ ಭವನದ ಬಳಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಾಗೂ ಮಾಜಿ ಸಚಿವ ಕೆ. ಗಂಗಾಧರ ಗೌಡ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕತರರ್ನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿ […]

ಮಂಗಳೂರಿನಲ್ಲಿ ಡಿಕೆಶಿ, ಉಮನ್‌ ಚಾಂಡಿ… ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ

Thursday, May 3rd, 2018
congress

ಮಂಗಳೂರು: ಬೆಳ್ತಂಗಡಿ ಮಾಜಿ ಶಾಸಕ, ಮಾಜಿ ಸಚಿವ ಗಂಗಾಧರ ಗೌಡ ಸಚಿವ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಇಂದು ಕಾಂಗ್ರೆಸ್ ಸೇರ್ಪಡೆಗೊಂಡರು. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಗಂಗಾಧರ ಗೌಡರಿಗೆ ಟಿಕೆಟ್‌ ತಪ್ಪಿದ ಹಿನ್ನೆಲೆ ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಸಚಿವ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಗಂಗಾಧರ ಗೌಡ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, ಮೋದಿಯವರ ಅಚ್ಛೇ ದಿನ್ ಯಾರಿಗೂ ಬಂದಿಲ್ಲ. ಯಾರಿಗೂ 15 ಲಕ್ಷ ರೂ.‌ ಮೋದಿಯವರಿಂದ ದೊರಕಿಲ್ಲ. ನಿನ್ನೆ ಮೋದಿಯವರು ದೇವೇಗೌಡರನ್ನು ಹೊಗಳಿದ್ದರು. […]

ಈ ಬಾರಿ ಧರ್ಮ ಅಧರ್ಮದ ನಡುವಿನ ಚುನಾವಣೆ: ಡಿ.ಕೆ. ಶಿವಕುಮಾರ್

Wednesday, May 2nd, 2018
D.k-.shivakumar

ಉಡುಪಿ: ಈ ಬಾರಿ ಧರ್ಮ ಅಧರ್ಮದ ನಡುವಿನ ಚುನಾವಣೆ ನಡೆಯುತ್ತಿದೆ. ನಮ್ಮದು ಧರ್ಮ- ಬಿಜೆಪಿದ್ದು ಅಧರ್ಮ ಎಂದು ರಾಜ್ಯ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಶ್ರೀಕೃಷ್ಣ ಒಬ್ಬ ರಾಜಕಾರಣಿ. ರಾಜಕಾರಣಿಯನ್ನು ದೇವರ ಹೆಸರಲ್ಲಿ ಧರ್ಮ ಸ್ಥಾಪನೆಗೆ ಪ್ರತಿಷ್ಠಾಪಿಸಲಾಗಿದೆ. ಮಠಕ್ಕೆ ಯಾರು ಬಂದ್ರು ಯಾರು ಬರಲಿಲ್ಲ ಮುಖ್ಯವಲ್ಲ. ನನಗೆ ಕೃಷ್ಣನ ಮೇಲೆ ಬಹಳ ನಂಬಿಕೆಯಿದೆ ಎಂದು ಹೇಳಿದರು. ಪಕ್ಷದ ಪರವಾಗಿ, ವೈಯುಕ್ತಿಕವಾಗಿ ಸರ್ಕಾರದ ಪರವಾಗಿ ಬಂದಿದ್ದೇನೆ. ಭಕ್ತನ -ಭಗವಂತನ ವ್ಯವಹಾರ ನಮ್ಮಿಬ್ರಿಗೆ […]

ಬಿಜೆಪಿಯವರು ತಾವು ಹೇಳಿದ ಮಾತಿಗೆ ಬದ್ಧರಾಗಿಲ್ಲ ಮಂಗಳೂರಿನಲ್ಲಿ ರಾಹುಲ್ ಗಾಂಧಿ

Friday, April 27th, 2018
rahul-gandhi-

ಮಂಗಳೂರು : ಎಐಸಿಸಿ ಅಧ್ಯಕ್ಷ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳೂರಿನಲ್ಲಿ ಬಹುನಿರೀಕ್ಷಿತ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಮಂಗಳೂರಿನ ಟಿಎಂಎ ಪೈ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು ಮಂಗಳೂರಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲು ಖುಷಿಯಾಗುತ್ತಿದೆ. ಈ ಪ್ರಣಾಳಿಕೆಯನ್ನು ನಾಲ್ಕು ಗೋಡೆಗಳ ಮಧ್ಯೆ ಕುಳಿತ ನಾಲ್ವರು ತಯಾರಿಸಿದ್ದಲ್ಲ. ಎಲ್ಲಾ ಸಮುದಾಯಗಳನ್ನು ಕೇಳಿ ಇದನ್ನು ರಚಿಸಲಾಗಿದೆ. ನಿಮ್ಮ ಸರಕಾರ ಏನು ಮಾಡಬೇಕು ಎಂಬುದನ್ನು ಜನರಿಂದಲೇ ಕೇಳಿ ಇದನ್ನು ರಚಿಸಲಾಗುತ್ತದೆ. ಇದು […]

ಪ್ರಚಾರದ ಅಖಾಡ ರಂಗೇರಿಸಲು ‘ಕೈ’ ವಿಶೇಷ ಕಾರ್ಯತಂತ್ರ: ನಾಳೆ ರಾಜ್ಯಕ್ಕೆ ರಾಹುಲ್ ಗಾಂಧಿ

Wednesday, April 25th, 2018
rahul-gandhi

ಬೆಂಗಳೂರು: ಪ್ರಚಾರದ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇದುವರೆಗೂ ನಾಮಪತ್ರ ಸಲ್ಲಿಕೆ ಸಿದ್ಧತೆ, ಟಿಕೆಟ್ ಸಿಗದ ಆತಂಕ, ಬಂಡಾಯ, ಟಿಕೆಟ್ ಸಿಗುವ ನಿರೀಕ್ಷೆ ಇತ್ಯಾದಿಗಳಲ್ಲಿ ಪ್ರಚಾರದತ್ತ ಹೆಚ್ಚು ಗಮನಹರಿಸದ ನಾಯಕರು ಇಂದಿನಿಂದ ಇದೇ ಕಾಯಕದಲ್ಲಿ ನಿರತವಾಗಲಿದ್ದಾರೆ. ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಬಿಜೆಪಿ ಪ್ರಚಾರ ನಡೆಸಿದರೆ, ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನ ಮಾಡಲಿದೆ. ರಾಷ್ಟ್ರೀಯ ಪಕ್ಷಗಳಿಂದ ಬಂಡಾಯವೆದ್ದು ಬಂದಿರುವವರಿಂದ ನಿರೀಕ್ಷೆಗೂ ಮೀರಿದ ಉತ್ಸಾಹ ಪಡೆದಿರುವ ಜೆಡಿಎಸ್ ಕೂಡ ಹೊಸ ಉತ್ಸಾಹದೊಂದಿಗೆ ಪ್ರಚಾರಕಣಕ್ಕಿಳಿಯಲಿದೆ. ಇದರ ಜತೆ ಆಮ್ ಆದ್ಮಿ ಪಕ್ಷ, […]

ಬಿಡುವಿಲ್ಲದ ಪ್ರಚಾರ… ಸುಸ್ತಾದ ಸಿಎಂಗೆ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ

Tuesday, April 3rd, 2018
siddaramaih

ಬೆಂಗಳೂರು: ಬಿಡುವಿಲ್ಲದ ಚುನಾವಣಾ ಪ್ರಚಾರ ಕಾರ್ಯಕ್ರಮಗಳಿಂದಾಗಿ ಅನಾರೋಗ್ಯಕ್ಕೆ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರದ ವಿಕ್ರಂ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಸುಸ್ತು, ಅಸಿಡಿಟಿ‌ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ ವಿಕ್ರಮ್ ಆಸ್ಪತ್ರೆ ವೈದ್ಯರಿಂದ ಚಿಕಿತ್ಸೆ ಪಡೆದುಕೊಂಡರು. ಬಿಪಿ, ಶುಗರ್ ಚೆಕಪ್ ಮಾಡಿದ ವೈದ್ಯರು ಮೈಸೂರು ಪ್ರಚಾರದ ವೇಳೆ ತಲೆಗೆ ಏಟು ಬಿದ್ದು ತಲೆ ನೋವು ಕಾಣಿಸಿಕೊಂಡ ಮಾಹಿತಿ ಪಡೆದು ತಲೆಗೆ ಗಾಯವಾಗಿದ್ದನ್ನ ಪರಿಶೀಲಿಸಿದರು. ನಂತರ ಅದು ಸಣ್ಣ ಗಾಯ ಏನೂ ಆಗೋದಿಲ್ಲ ಎಂದು ಮುಲಾಮು […]