Blog Archive

ಕೇವಲ ಯುವಕರು ಮಾತ್ರ ರಕ್ಷಣೆಗೆ ಮುಂದಾದರೆ ಸಾಲದು,ಮಹಿಳೆಯರು ಮುಂದಾಗಬೇಕು: ಮಹಿಳಾ ಮಂಡಳಿ ಅಧ್ಯಕ್ಷೆ

Friday, July 27th, 2018
president

ಮಂಗಳೂರು: ಶಾಸ್ತ್ರ ಓದಿದ್ದು ಸಾಕು, ಇನ್ನು ಶಸ್ತ್ರಾಸ್ತ್ರವನ್ನೂ ಹಿಡಿಯಬಲ್ಲೆವು ಎಂಬುದನ್ನು ಜಗತ್ತಿಗೆ ತೋರಿಸುವ ಸಮಯ ಈಗ ಬಂದಿದೆ ಎಂದು ಮಹಿಳಾ ಮಾತೃ ಮಂಡಳಿಯ ಅಧ್ಯಕ್ಷೆ ಹೇಳಿಕೆ ನೀಡಿದ್ದಾರೆ. ಮಂಗಳೂರಿನ ವಾಮಂಜೂರಿನಲ್ಲಿ ಗೋ ಕಳ್ಳತನ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಈ ಹೇಳಿಕೆ ನೀಡಿದ್ದಾರೆ. ನಮ್ಮ ರಕ್ಷಣೆಯನ್ನು ನಾವೇ ಮಾಡಬೇಕಾಗಿದೆ. ಕೇವಲ ಯುವಕರು ಮಾತ್ರ ರಕ್ಷಣೆಗೆ ಮುಂದಾದರೆ ಸಾಲದು. ಮಹಿಳೆಯರು ಕೂಡ ಈ ವಿಚಾರದಲ್ಲಿ ಮುಂದಾಗಬೇಕು ಎಂದು ಹೇಳಿದ್ದಾರೆ. ಇದೇ ವೇಳೆ ‌ಮಾತನಾಡಿದ ವಿ.ಹೆಚ್.ಪಿ ಮುಖಂಡ ಮುರಳಿಕೃಷ್ಣ ಹಸಂತಡ್ಕ, ಗೋ […]

ಸಿದ್ದರಾಮಯ್ಯ ‘ಉಗ್ರ’ ಹೇಳಿಕೆಗೆ ವಿಎಚ್‌ಪಿ, ಬಜರಂಗದಳ ತೀವ್ರ ವಿರೋಧ

Monday, January 15th, 2018
bajarngdal

ಮಂಗಳೂರು: ಬಿಜೆಪಿ ಮತ್ತು ಆರ್.ಎಸ್.ಎಸ್ ನವರು ಉಗ್ರರು ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ತೀವ್ರ ಖಂಡನೆ ವ್ಯಕ್ತಪಡಿಸಿವೆ. ಈ ಕುರಿತು ಶುಕ್ರವಾರ ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿ.ಎಚ್.ಪಿ ಪ್ರಾಂತ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್, “ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಈ ರೀತಿಯ ಹೇಳಿಕೆ ನೀಡುವುದು ಖಂಡನೀಯ,” ಎಂದು ಹೇಳಿದರು. “ಈ ಕೂಡಲೇ ಮುಖ್ಯಮಂತ್ರಿ ಅವರು ಬಹಿರಂಗ ಕ್ಷಮೆ ಕೇಳಿ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು,” ಎಂದು ಅವರು ಆಗ್ರಹಿಸಿದರು. ‘ಬಿಜೆಪಿ, ಆರ್ ಎಸ್ ಎಸ್, […]

ಬಿಜೆಪಿ, ಆರ್ ಎಸ್ಎಸ್ ನವರೇ ಒಂಥರ ಉಗ್ರಗಾಮಿಗಳು: ಸಿಎಂ

Wednesday, January 10th, 2018
chamarajanagar

ಚಾಮರಾಜನಗರ: ಬಿಜೆಪಿ, ಬಜರಂಗದಳ, ಆರೆಸ್ಸೆಸ್ಸನವರೇ ಒಂಥರ ಉಗ್ರಗಾಮಿಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ತೀವ್ರ ವಾಗ್ದಾಳಿ ನಡೆಸುವ ಮೂಲಕ ವಿವಾದದ ಕಿಡಿಹೊತ್ತಿಸಿದ್ದಾರೆ. ಚಾಮರಾಜನಗರದ ನಾಗವಳ್ಳಿ ಹೆಲಿಪ್ಯಾಡ್ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಸರಿ ಪಡೆ ನಾಯಕರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಪ್ರತಿಕ್ರಿಯೆ ನೀಡಿರುವುದಾಗಿ ಖಾಸಗಿ ವಾಹಿನಿಗಳು ವರದಿ ಮಾಡಿವೆ. ಆರ್ ಎಸ್ಎಸ್ ಆಗಲಿ, ಪಿಎಫ್ಐ ಆಗಲಿ ಯಾವುದೇ ಸಂಘಟನೆಯಾದರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು. ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಸಿಬಿಐ ಜಾರ್ಜ್ […]

ಗೋಡ್ಸೆ ಅನುಯಾಯಿ ಆದಿತ್ಯನಾಥ್ ರಿಂದ ನಮಗೆ ಪಾಠ ಬೇಡ: ಸಿದ್ದರಾಮಯ್ಯ

Monday, January 8th, 2018
congress-war

ಉಡುಪಿ: ಕಲ್ಲಡ್ಕ ಪ್ರಭಾಕರ ಭಟ್ ಶಾಲೆಗೆ ಮಾತ್ರ ಏಕೆ ಊಟ, ಬೇರೆ ಶಾಲೆಗಳಿಗೂ ಕೊಡಬಹುದಲ್ಲಾ? ಹೀಗೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಆಯೋಜಿಸಿದ್ದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು, ಸಾಫ್ಟ್ ಹಿಂದುತ್ವ ಅಂದರೆ ಏನು? ಈ ಸಾಫ್ಟ್, ಹಾರ್ಡ್ ಏನೂ ಇಲ್ಲ. ನಾನು ದೇವಸ್ಥಾನಗಳಿಗೆ ಹೋಗುತ್ತೇನೆ. ಹಾಗಂತ ಎಲ್ಲಾ ದೇವಸ್ಥಾನಕ್ಕೆ ಹೋಗಲ್ಲ. ಕೃಷ್ಣಮಠಕ್ಕೆ ಹೋಗದೇ ಇರೋದು ದೊಡ್ಡ ವಿಷಯ ಅಲ್ಲ ಎಂದು ತಮ್ಮ ವಿರುದ್ಧ ಆರೋಪಗಳಿಗೆ ಉತ್ತರಿಸಿದರು. ಕರಾವಳಿಯಲ್ಲಿ ಉಲ್ಬಣವಾಗಿರುವ ಕೋಮು ಸಂಘರ್ಷಕ್ಕೆ ಕೋಮುವಾದಿ […]

ಕುಲಭೂಷಣ್ ಅವರ ತಾಯಿ, ಪತ್ನಿಗೆ ಅವಮಾನ ಆರೋಪ: ಪ್ರತಿಭಟನೆ

Saturday, December 30th, 2017
prathibatane

ಮಂಗಳೂರು: ಪಾಕಿಸ್ತಾನದಲ್ಲಿ ಬಂಧನಕ್ಕೊಳಗಾಗಿರುವ ಭಾರತದ ಯೋಧ ಕುಲಭೂಷಣ್ ಜಾದವ್ ಅವರನ್ನು ಭೇಟಿ ಮಾಡಲು ಹೋಗಿದ್ದ ಕುಲಭೂಷಣ್ ಅವರ ತಾಯಿ ಹಾಗೂ ಪತ್ನಿಗೆ ಅವಮಾನ ಮಾಡಿದೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಶುಕ್ರವಾರ ಕದ್ರಿ ಮಲ್ಲಿಕಟ್ಟೆ ವೃತ್ತದ ಬಳಿ ಪಾಕಿಸ್ತಾನದ ಧ್ವಜ ಸುಟ್ಟು ಪ್ರತಿಭಟನೆ ನಡೆಯಿತು.

ಬಜರಂಗದಳದ ಕಾರ್ಯಕರ್ತನ ಕೊಲೆಗೆ ಯತ್ನ

Friday, November 11th, 2016
rss-activist

ಮಂಗಳೂರು: ತಲವಾರಿನಿಂದ ಕಡಿದು ಬಜರಂಗದಳದ ಕಾರ್ಯಕರ್ತನ ಕೊಲೆಗೆ ಯತ್ನ ನಡೆಸಿರುವ ಘಟನೆ ಮಂಗಳೂರು ಹೊರವಲಯದ ಕುತ್ತಾರ್ ಎಂಬಲ್ಲಿ ನಡೆದಿದೆ. ಅಂಬ್ಲಮೊಗರು ನಿವಾಸಿ ರಾಮ್ ಮೋಹನ್(32) ಕೊಲೆ ಯತ್ನಕ್ಕೆ ಒಳಗಾದವರು. ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಇಬ್ಬರು ದುಷ್ಕರ್ಮಿಗಳಿಂದ ತಲವಾರು ದಾಳಿ ನಡೆಸಲಾಗಿದೆ. ಗಂಭೀರ ಸ್ಥಿತಿಯಲ್ಲಿ ಮೋಹನ್‌ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಘಟನೆಯನ್ನು ಸಚಿವ ಯು.ಟಿ.ಖಾದರ್‌ ಖಂಡಿಸಿ ಬೆಂಗಳೂರಿನಿಂದ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಅಲ್ಲದೆ ಮಂಗಳೂರು ಪೊಲೀಸ್‌ ಆಯುಕ್ತರೊಂದಿಗೆ ಮಾತನಾಡಿ, ದುಷ್ಕರ್ಮಿಗಳನ್ನು ಪತ್ತೆಹಚ್ಚುವಂತೆ ಸೂಚಿಸಿದ್ದಾರೆ.

ಅಪಘಾತಕ್ಕೊಳಗಾದ ಮೃತನ ಅಂಗಾಂಗ ದಾನ ಮಾಡುವ ಮೂಲಕ ಹೃದಯವಂತಿಕೆ ಮೆರೆದ ಪೋಷಕರು

Wednesday, August 10th, 2016
Hardik raj Kottary

ಮಂಗಳೂರು: ಅಪಘಾತಕ್ಕೊಳಗಾಗಿ ಮೆದುಳು ನಿಷ್ಕ್ರಿಯವಾಗಿದ್ದ ಯುವಕನೋರ್ವನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮೃತನ ಪೋಷಕರು ಹೃದಯವಂತಿಕೆ ಮೆರೆದಿದ್ದಾರೆ. ನಗರದ ಹೊರವಲಯದ ಪಚ್ಚನಾಡಿಯ ನಿವಾಸಿ ಬಜರಂಗದಳದ ಸಕ್ರಿಯ ಕಾರ್ಯಕರ್ತ ಹಾರ್ದಿಕ್ ರಾಜ್ ಕೊಟ್ಟಾರಿ (24) ಕಳೆದ ಜುಲೈ 24ರಂದು ಪಚ್ಚನಾಡಿ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಯುವಕನನ್ನು ನಗರದ ಏ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಕೋಮಾಕ್ಕೆ ಜಾರಿದ್ದ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಪೋಷಕರು ಅಂಗಾಂಗ ದಾನ ಮಾಡಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಅವರ […]

ಬಾಂಗ್ಲಾದೇಶಿ ಕಳ್ಳ ನುಸುಳುಕಾರರನ್ನು ದೇಶದಿಂದ ಓಡಿಸಿ : ವಿಶ್ವ ಹಿಂದು ಪರಿಷತ್, ಬಜರಂಗದಳ

Wednesday, February 26th, 2014
Bajranga Dal

ಮಂಗಳೂರು: ಕಳೆದ ಕೆಲವು ವರ್ಷಗಳಿಂದ ಬಾಂಗ್ಲಾ ನುಸುಳುಕೋರರು ನಿರಂತರ ಭಾರತಕ್ಕೆ ನುಸುಳುತ್ತಿದ್ದಾರೆ. ಈ ದೇಶದ ಅರ್ಥವ್ಯವಸ್ಥೆ ಹಾಗೂ ಆತಂರಿಕ ಭದ್ರತೆಗೆ ಅಪಾಯ ತರುತ್ತಿದ್ದಾರೆ. ಅಸ್ಸಾಂನಿಂದ ಪ್ರಾರಂಭವಾದ ಈ ಕಳ್ಳ ನುಸುಳುವಿಕೆ ಇಡೀ ದೇಶವನ್ನು ವ್ಯಾಪಿಸಿ ಸಂಕಟಮಯ ಪರಿಸ್ಥಿಯನ್ನು ತಂದಿದೆ. ಆಯಾ ರಾಜ್ಯಗಳಲ್ಲಿ ನುಸುಳುಕೋರರಿಂದ ಲೂಟಿ, ಭಯೋತ್ಪಾದನೆ, ಡಕಾಯಿತಿ ಮುಂತಾದ ಅಪರಾಧಿ ಕೃತ್ಯಗಳಲ್ಲಿ ಸೇರಿಕೊಂಡಿದ್ದಾರೆ. ಒಂದೆಡೆ ಈ ಕಳ್ಳ ನುಸುಳುವಿಕೆ ಗಂಭೀರ ಅಪಾಯವನ್ನು ತಂದೊಡ್ಡಿದರೆ ಇನ್ನೊಂದೆಡೆ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ಅತ್ಯಾಚಾರ, ಸಂಪತ್ತನ್ನು ಲೂಟಿಮಾಡುವುದು ಈ ಕೃತ್ಯಗಳಿಂದ […]

ವಿಶ್ವಹಿಂದೂ ಪರಿಷತ್ ಬಜರಂಗದಳ ಕೋಡಿಕಲ್ ಶಾಖೆಯ ವತಿಯಿಂದ ಐದನೇ ವರ್ಷದ ಗಣೇಶೋತ್ಸವ

Saturday, August 31st, 2013
press-meet

ಮಂಗಳೂರು : ಕೋಡಿಕಲ್ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಮಹಾಬಲ ಚೌಟ ಸೆ.೯ರಿಂದ ಸೆ.೧೧ರವರೆಗೆ ಗಣೇಶೋತ್ಸವ ಸಮಿತಿ  ಮತ್ತು  ವಿಶ್ವಹಿಂದೂ ಪರಿಷತ್ ಬಜರಂಗದಳ ಕೋಡಿಕಲ್ ಶಾಖೆಯ ವತಿಯಿಂದ ಐದನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಲಾಗುವುದು ಎಂದು ತಿಳಿಸಿದರು. ಹಬ್ಬದ ಪ್ರಯುಕ್ತ   ಸೆ.೯ರಂದು ಧಾರ್ಮಿಕ ಸಭೆ,   ಗಣೇಶ ದೇವರ ಬಿಂಬ ಪ್ರತಿಷ್ಠಾಪನೆ ನಡೆಯಲಿದ್ದು,  ಸೆ.೧೦ರಂದು ೧೨೮ಕಾಯಿಗಳ ಗಣಪತಿ ಹವನ ನಡೆಯಲಿದೆ ಹಾಗು ಕೋಡಿಕಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ವಿವಿಧ ಆಟೋಟ ಸ್ಫರ್ಧೆಯನ್ನು ಏರ್ಪಡಿಸಲಾಗಿದೆ ಮತ್ತು ದಂಬೇಲ್ ನದಿಯಲ್ಲಿ ಗಣೇಶ ಮೂರ್ತಿಯನ್ನು  ಜಲಸ್ತಂಭನ […]

ಮಂಗಳೂರಿನಲ್ಲಿ ಮತ್ತೆ ನೈತಿಕ ಪೋಲೀಸ್ ಗಿರಿ, ಮಹಿಳೆಯೊಂದಿಗಿದ್ದ ಅನ್ಯ ಕೋಮಿನ ವ್ಯಕ್ತಿ ಮೇಲೆ ಹಲ್ಲೆ

Friday, February 1st, 2013
Bhajrangdal activists

ಮಂಗಳೂರು : ನಗರದ ಪಂಪ್ ವೆಲ್ ಬಳಿಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ  ಯುವತಿ ಹಾಗು ಅದೇ ಅಂಗಡಿಯ ಮಾಲಕನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಜರಂಗದಳದ ಕಾರ್ಯಕರ್ತರು ಹಿಡಿದು ಥಳಿಸಿ  ಪೊಲೀಸರಿಗೆ ಒಪ್ಪಿಸಿದ  ಘಟನೆ ಗುರುವಾರ ಸಂಜೆ ನಡೆದಿದೆ. ಯುವತಿಗೆ 6 ತಿಂಗಳ ಹಿಂದೆ ಮದುವೆಯಾಗಿದ್ದರು ತನ್ನ ಅಂಗಡಿ ಮಾಲಕನ ಜತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಲಾಗಿದೆ. ನಿನ್ನೆ ಸಂಜೆ ಉದ್ಯೋಗ ಮುಗಿಸಿ ಕಾರಿನಲ್ಲಿ ಜತಯಾಗಿ ಪ್ರಯಾಣಿಸುತ್ತಿದ್ದಾಗ ಬಜರಂಗದಳ ಕಾರ್ಯಕರ್ತರು  ಇವರಿಬ್ಬರನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿದರು […]