Blog Archive

ಮಂಜೇಶ್ವರ : ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆಯ ಮತದಾನ ಆರಂಭ

Monday, October 21st, 2019
Manjeshwara

ಕಾಸರಗೋಡು : ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಇಂದು ಬೆಳಗ್ಗೆ ಆರಂಭಗೊಂಡಿದ್ದು, ಮೊದಲ ಗಂಟೆಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಬೆಳಗ್ಗೆಯಿಂದಲೇ ಮತಗಟ್ಟೆಗಳಲ್ಲಿ ಸರತಿ ಸಾಲು ಕಂಡುಬರುತ್ತಿದೆ. ಬಿಗು ಪೊಲೀಸ್ ಬಂದೋಬಸ್ತ್ ನಲ್ಲಿ ಮತದಾನ ನಡೆಯುತ್ತಿದೆ. ಮೊದಲ ಬಾರೀ ಮಂಜೇಶ್ವರ ಉಪಚುನಾವಣೆಗೆ ವೇದಿಕೆಯಾಗುತ್ತಿದ್ದು, ತ್ರಿಕೋನ ಸ್ಪರ್ಧೆಯ ಮೂಲಕ ಗಮನ ಸೆಳೆಯುತ್ತಿದೆ. 2017ರಲ್ಲಿ ನಡೆದ ಚುನಾವಣೆಯಲ್ಲಿ ಯುಡಿಎಫ್ ನ ಪಿ.ಬಿ.ಅಬ್ದುರ್ರಝಾಕ್ ರವರು ಬಿಜೆಪಿಯ ಕೆ.ಸುರೇಂದ್ರನ್ ವಿರುದ್ಧ ಕೇವಲ 89 ಮತಗಳಿಂದ ಗೆಲುವು ಸಾಧಿಸಿದ್ದರು. ಇದೇ ಕಾರಣಕ್ಕೆ ಈ ಬಾರಿಯ ಚುನಾವಣೆ ರಾಷ್ಟ್ರ […]

ಮಂಜೇಶ್ವರ : ಉಪಚುನಾವಣೆಗೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

Monday, September 30th, 2019
manjeshwara

ಕಾಸರಗೋಡು : ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಪ್ರಮುಖ ಅಭ್ಯರ್ಥಿಗಳು ಸೆ. 30 ರ ಸೋಮವಾರ ನಾಮಪತ್ರ ಸಲ್ಲಿಸಿದರು. ಯು ಡಿ ಎಫ್ ಅಭ್ಯರ್ಥಿ ಎಂ . ಸಿ ಖಮರುದ್ದೀನ್ ಸೋಮವಾರ ಬೆಳಿಗ್ಗೆ ಮಂಜೇಶ್ವರ ಬ್ಲಾಕ್ ಅಭಿವೃದ್ಧಿ ಕಚೇರಿಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಉಪ್ಪಳದ ಮುಸ್ಲಿಂ ಲೀಗ್ ಕಚೇರಿಯಿಂದ ಮುಖಂಡರು ಕಾರ್ಯಕರ್ತರ ಜೊತೆ ಆಗಮಿಸಿದ ಅಭ್ಯರ್ಥಿ ನಾಮಪತ್ರ ಸಲ್ಲಿಸಿದರು. ಎಲ್ ಡಿ ಎಫ್ ಅಭ್ಯರ್ಥಿ ಎಂ . ಶಂಕರ ರೈ ಬೆಳಿಗ್ಗೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ […]

ಮಂಜೇಶ್ವರ : ಬೆಂಕಿಗಾಹುತಿಯಾದ ಅಲ್ಫಾ ಬೇಕರಿ

Monday, September 9th, 2019
alfaa-bekari

ಮಂಜೇಶ್ವರ : ಮಂಜೇಶ್ವರ ಒಳಗಿನ ಪೇಟೆಯಲ್ಲಿ ಬೇಕರಿಯೊಂದು ಶಾರ್ಟ್ ಸೆಕ್ಯೂರ್ಟ್ ನಿಂದ ಉಂಟಾದ ಬೆಂಕಿಯಿಂದಾಗಿ ಸಂಪೂರ್ಣ ಬೆಂಕಿ ಗಾಹುತಿಯಾದ ಘಟನೆ ತಡರಾತ್ರಿ ನಡೆದಿದೆ. ಸೋಮವಾರ ಬೆಳಗ್ಗೆ ಪತ್ರಿಕೆ ಹಾಕುತ್ತಿದ್ದ ವ್ಯಕ್ತಿ ಅಂಗಡಿಯೊಳಗಿಂದ ಹೊಗೆ ಬರುತ್ತಿರುವುದ್ದನ್ನು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಹಮೀದ್ ಮಾಲಕತ್ವದ ಅಲ್ಫಾ ಬೇಕರಿಯ ಸುಮಾರು ಮೂರು ಲಕ್ಷಕ್ಕೂ ಹೆಚ್ಚಿನ ಸಾಮಾಗ್ರಿಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಉಪ್ಪಳದಿಂದ ತಲುಪಿದ ಅಗ್ನಿಶಾಮಕ ದಳ ಹಾಗೂ ಮಂಜೇಶ್ವರ ಪೊಲೀಸರು ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸಿದರು.    

ವೃದ್ಧ ತಾಯಿಗೆ ಮತ್ತು ಮಾನಸಿಕ ಅಸ್ವಸ್ಥೆ ಮಗಳಿಗೆ ಮಂಜೇಶ್ವರ ಸ್ನೇಹಾಲಯ ಸಹಾಯ ಹಸ್ತ

Saturday, September 7th, 2019
manjeshwar

ಕಾಸರಗೋಡು : ಕಳೆದ ಹಲವು ವರ್ಷಗಳಿಂದ ನರಕಯಾತನೆ ಅನುಭವಿಸುತ್ತಿದ್ದ ಮಾನಸಿಕ ಅಸ್ವಸ್ಥೆ ಹಾಗೂ ಆಕೆಯ ತಾಯಿಗೆ ಕೊನೆಗೂ ಮಂಜೇಶ್ವರ ಸ್ನೇಹಾಲಯ ಸಹಾಯ ಹಸ್ತ ಚಾಚಿದೆ. ತಾಯಿ ಮಗಳಿಗಾಗಿ ಊಟ , ನಿದ್ದೆಯಲ್ಲ್ಲೂ ಕಾವಲಾಗಿ ನಿಂತು ಮುಂದೇನು ಎಂಬ ಚಿಂತೆಯಲ್ಲಿದ್ದ ವೃದ್ಧ ಮಾತೆಗೆ ಸ್ನೇಹದ ನೆರಳು ಲಭಿಸಿದ್ದು , ತಾಯಿ ಮತ್ತು ಮಗಳು ಸ್ನೇಹಾಲಯದ ಸ್ನೇಹದಲ್ಲಿ ಸುರಕ್ಷಿತವಾಗುವಂತಾಗಿದೆ. ಕಾಸರಗೋಡು ಮಧೂರು ಗ್ರಾಮಪಂಚಾಯತ್ ನ ಮನ್ನಿಪ್ಪಾಡಿ ಲಕ್ಷಂವೀಡು ಕಾಲನಿಯ 78 ರ ವಯೋ ವೃದ್ದೆ ಪಾರ್ವತಿ ರವರ 47 ರ […]

ಮಂಜೇಶ್ವರ : ಚರ್ಚ್ ಮೇಲೆ ದುಷ್ಕರ್ಮಿ ಗಳಿಂದ ಕಲ್ಲು ತೂರಾಟ

Monday, August 19th, 2019
kallu-toorata

ಮಂಜೇಶ್ವರ : ಅವರ್ ಲೇಡಿ ಆಫ್ ಮೆರ್ಸಿ ಚರ್ಚ್ ಮೇಲೆ ದುಷ್ಕರ್ಮಿಗಳು ಕಲ್ಲೆಸೆತ ನಡೆಸಿದ ಘಟನೆಯು ಇಂದು ಸೋಮವಾರ ಮುಂಜಾನೆ ನಡೆದಿದೆ.ಘಟನೆಯಲ್ಲಿ ಚರ್ಚಿನ ಎರಡು ಕಿಟಕಿ ಗಾಜುಗಳಿಗೆ ಹಾನಿಯಾಗಿದೆ. ನಿನ್ನೆ ಕುಂಡು ಕೊಳಜೆ ಅಂಜಾರು ಎಂಬಲ್ಲಿ ಮರಳು ಮಾಫಿಯಾ ತಂಡವು ಫೆಲಿಕ್ಸ್ ಕ್ರಾಸ್ತಾ ಎಂಬವರ ಮನೆಗೆ ನುಗ್ಗಿ ಮನೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿ, ದಾಂಧಲೆ ನಡೆಸಿತ್ತು. ಹಲ್ಲೆಯಿಂದ ಗಂಭೀರ ಗಾಯಗೊಂಡ ಫೆಲಿಕ್ಸ್ ಡಿ.ಸೋಜ ರವರ ಪತ್ನಿ ರೀಟಾ ಡಿ ಸೋಜ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ […]

ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ಯಿಂದ ಹೆಣ್ಣುಮಗಳ ಮದುವೆಗೆ ಸಹಾಯ

Thursday, November 1st, 2018
jai sri ram

ಮಂಜೇಶ್ವರ: ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ಮಂಜೇಶ್ವರ ಇದರ ನವೆಂಬರ್ ತಿಂಗಳ 19 ನೇ ಯೋಜನೆ ಸಹಾಯ ಹಸ್ತವನ್ನು ಉಪ್ಪಳ ಬಳಿಯ ಮುಳಿಂಜ ಮಹಾ ನಗರ ನಿವಾಸಿ ದಿವಂಗತ ಪದ್ಮನಾಭ ಭಂಡಾರಿಯವರ ಪುತ್ರಿ ಚಿ. ಸೌ ಪೂರ್ಣಿಮಾರ ವಿವಾಹಕ್ಕೆ ನೀಡಲಾಯಿತು. ಪಾನ್ ಬೀಡ ಅಂಗಡಿ ಹೊಂದಿದ ಪಧ್ಮನಾಭರವರು ನಿಧನರಾದ ಬಳಿಕ ಪತ್ನಿ ವಿಜಯಲಕ್ಷಿ ತಮ್ಮ 3 ಹೆಣ್ಣು ಮಕ್ಕಳ ಜೊತೆ ಕಷ್ಟ ಪಟ್ಟು ಜೀವಿಸುತ್ತಿದ್ದರು. ಇದೀಗ ಪ್ರಾಯ ಪೂರ್ತಿ ಅದ ಹಿರಿಯ ಮಗಳಿಗೆ ಪೆರ್ಲ ನಿವಾಸಿ ಜೊತೆ […]

ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ನಿಧನ

Saturday, October 20th, 2018
abdul

ಮಂಗಳೂರು: ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಅವರು ಇಂದು ನಿಧನರಾಗಿದ್ದಾರೆ. ಜ್ವರದಿಂದ ಬಳಲುತ್ತಿದ್ದ ಅವರು ಇಂದು ಮಂಜಾನೆ. 5.30ಕ್ಕೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ಕಾಸರಗೋಡು ಜಿಲ್ಲೆಯ ನಾಯನ್ಮಾರ್ ಮೂಲೆಯ ಅವರ ಮನೆಗೆ ಕೊಂಡೊಯ್ಯಲಾಗಿದೆ. ಎರಡು ಬಾರಿ ಮಂಜೇಶ್ವರ ಕ್ಷೇತ್ರದಿಂದ ಕೇರಳ ವಿಧಾನಸಭೆಗೆ ಆಯ್ಕೆಯಾದ ಅಬ್ದುಲ್ ರಜಾಕ್ 2011ರ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಲೀಗ್ ಪಕ್ಷದಿಂದ ಸ್ಪರ್ಧಿಸಿದ್ದರು. ಅವರು ಸಿಪಿಎಂನ ಸಿ.ಎಚ್. ಕುಂಞಂಬುರನ್ನು 5825 […]

ಮಂಜೇಶ್ವರ ಮರದ ಮಿಲ್ಲಿನಲ್ಲಿ ಬಾಲಕನನ್ನು ಲೈಂಗಿಕವಾಗಿ ಬಳಸಿ ಕೊಲೆ ಶಂಕೆ

Monday, May 21st, 2018
Shravanth

ಮಂಜೇಶ್ವರ : ವರ್ಕಾಡಿ ಸಮೀಪದ ಬೇಕರಿ ಜಂಕ್ಷನ್ ಬಳಿಯ ಮರದ ಮಿಲ್ಲೊಂದರ ಆವರಣದಲ್ಲಿ ರಾಶಿ ಹಾಕಲಾಗಿದ್ದ ಮರದ ಮೇಲೆ ಅಸ್ವಸ್ತನಾಗಿ ಮಲಗಿದ್ದ ರೀತಿಯಲ್ಲಿ ಕಂಡು ಬಂದ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಕೊಲೆ ಎಂದು ಆತನ ಹೆತ್ತವರು ಆರೋಪಿಸಿದ್ದಾರೆ. ಮೃತ ಬಾಲಕನನ್ನು ವರ್ಕಾಡಿ ಬೇಕರಿ ಜಂಕ್ಷನ್ ಸಮೀಪದ ಬಾಡಿಗೆ ಮನೆಯಲ್ಲಿ ವಾಸವಿರುವ ಗಂಗಾಧರ ಆಚಾರ್ಯರ ಪುತ್ರ ಶ್ರವಂತ್ ಆಚಾರ್ಯ(09) ಎಂದು ಗುರುತಿಸಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ನಡೆಸಲಾಯಿತು. ರವಿವಾರ ಸಂಜೆ ವೇಳೆ ಗೆ ಶ್ರವಂತ್ ಅಂಗಡಿಗೆಂದು ಹೋದವ ಅಸ್ವಸ್ತನಾದ ರೀತಿಯಲ್ಲಿ […]

ಕಾರು ಢಿಕ್ಕಿ; ಐದು ಮಂದಿಗೆ ಗಾಯ

Friday, February 2nd, 2018
manjeshwara

ಮಂಜೇಶ್ವರ: ಆರಿಕ್ಕಾಡಿಯಲ್ಲಿ ನಿಲ್ಲಿಸಿದ್ದ ಆಲ್ಟೋ ಕಾರಿಗೆ ಸ್ವಿಫ್ಟ್ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಐದು ಮಂದಿ ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ.ರಾಷ್ಟ್ರೀಯ ಹೆದ್ದಾರಿ 66 ಆರಿಕ್ಕಾಡಿ ಬಳಿ ಶುಕ್ರವಾರ ಅಪಘಾತ ಸಂಭವಿಸಿದೆ. ಆಲ್ಟೋ ಕಾರನ್ನು ರಸ್ತೆ ಬದಿಯ ಮರದಡಿಯಲ್ಲಿ ನಿಲ್ಲಿಸಿ ಸಮೀಪದ ಹೋಟೆಲೊಂದಕ್ಕೆ ಉಪಹಾರಕ್ಕೆ ತೆರಳಿದ್ದರು. ಈ ವೇಳೆ ಮಂಗಳೂರು ಕಡೆಯಿಂದ ಬಂದ ಸ್ವಿಫ್ಟ್ ಕಾರು, ನಿಲ್ಲಿಸಿದ್ದ ಆಲ್ಟೋ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಸ್ವಿಫ್ಟ್ ನಲ್ಲಿದ್ದ 5 ಮಂದಿ ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ […]

ಮಂಜೇಶ್ವರ ರೈಲು ಡಿಕ್ಕಿ : ಮಗು ಸಹಿತ ಇಬ್ಬರು ಮಹಿಳೆಯರು ಮೃತ್ಯು

Wednesday, January 31st, 2018
railaccident

ಮಂಜೇಶ್ವರ :  ಇಬ್ಬರು ಮಹಿಳೆಯರು ಹಾಗೂ ನಾಲ್ಕು  ವರ್ಷದ ಮಗುವೊಂದು ಮಂಜೇಶ್ವರ ರೈಲು ನಿಲ್ದಾಣ ಬಳಿ ಹಳಿ ದಾಟುತ್ತಿದ್ದ ವೇಳೆ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ. ಮೃತರನ್ನು ಪೊಸೋಟ್ ನ ಆಮಿನಾ (45), ಆಯಿಶಾ(43), ಆಯಿಶಾರ ಪುತ್ರ ತಾಮೀಲ್ ಎಂದು ಗುರುತಿಸಲಾಗಿದೆ. ಮಂಗಳೂರು – ಚೆನ್ನೈ ಎಕ್ಸ್ ಪ್ರೆಸ್ ರೈಲು  ಹೋದ ನಂತರ  ಇನ್ನೊಂದು ಹಳಿಯಲ್ಲಿ ಬರುತ್ತಿದ್ದ  ರೈಲು ಇಂಜಿನ್ ನನ್ನ ಗಮನಿಸದೆ ದಾಟಲು ಯತ್ನಿಸಿದ್ದೇ  ಈ ಅಪಘಾತ ಕ್ಕೆ ಕಾರಣ. ಈ ಬಗ್ಗೆ […]