Blog Archive

ಕೊರೋನಾ ಸೋಂಕಿತರು ಮೇ 21 : ದ.ಕ. 864 – ಸಾವು 7, ಉಡುಪಿ 855 -ಸಾವು 7, ಕಾಸರಗೋಡು 650

Friday, May 21st, 2021
positive

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಶುಕ್ರವಾರ 864 ಮಂದಿಗೆ ಕೊರೋನ ಸೋಂಕು ದೃಢಪಟ್ಟಿವೆ. 1166 ಮಂದಿ ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಶುಕ್ರವಾರ ಮತ್ತೆ 7 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 845ಕ್ಕೇರಿದೆ. ಜಿಲ್ಲೆಯಲ್ಲಿ ಈವರಗೆ 8,20,577 ಮಂದಿಯ ಗಂಟಲ ದ್ರವ ಪರೀಕ್ಷೆ ಮಾಡಲಾಗಿದೆ. ಆ ಪೈಕಿ 7,52,050 ಮಂದಿಯ ವರದಿ ನೆಗೆಟಿವ್ ಬಂದಿದೆ. ಅಲ್ಲದೆ 68,527 ಮಂದಿ ಕೊರೋನ ಸೋಂಕಿಗೊಳಗಾಗಿದ್ದಾರೆ. ಈ ಪೈಕಿ 57,284 ಮಂದಿ ಗುಣಮುಖರಾಗಿದ್ದಾರೆ. ಸದ್ಯ 10,398 […]

ಕರ್ನಾಟಕದ ಕೋವಿಡ್ ಲಾಕ್ ಡೌನ್ ಪ್ಯಾಕೇಜ್ ಇಲ್ಲಿದೆ ನೋಡಿ

Wednesday, May 19th, 2021
yedyurappa

ಬೆಂಗಳೂರು: ಕೊರೋನಾ ಎರಡನೇ ಅಲೆ ತೀವ್ರವಾಗಿ ಹೆಚ್ಚಳವಾಗಿದ್ದರಿಂದ ಲಾಕ್ ಡೌನ್ ಮಾಡುವುದು ಅನಿವಾರ್ಯವಾಗಿತ್ತು. ಈ ಲಾಕ್ ಡೌನ್ ನಿಂದ ಹಲವು ಅಸಂಘಟಿತ ವಲಯಗಳಿಗೆ, ರೈತರಿಗೆ, ದಿನಗೂಲಿ ನೌಕರರಿಗೆ, ಬಡವರು-ನಿರ್ಗತಿಕರಿಗೆ ತೀವ್ರ ಸಂಕಷ್ಟವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಸುಮಾರು 1,250 ಕೋಟಿ ರೂಪಾಯಿಗೂ ಅಧಿಕ ವಿಶೇಷ ಪರಿಹಾರ ಪ್ಯಾಕೇಜ್ ನ್ನು ವಿವಿಧ ವರ್ಗಗಳ ಹಿತರಕ್ಷಣೆಗೆ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿಗಳು ಇಂದು ಪ್ರಕಟಿಸಿದ ಪರಿಹಾರ ಪ್ಯಾಕೇಜ್  ಇಲ್ಲಿದೆ ನೋಡಿ.  *ಹೂವು ಬೆಳೆಯುವ ರೈತರಿಗೆ ಹಾನಿ ಆಗಿದ್ದರೆ ಹೆಕ್ಟೇರ್‌ಗೆ ₹10,000 ನೀಡಲಾಗುವುದು. ಇದರಿಂದ 20 […]

ಲಾಕ್ ಡೌನ್ : ಅನಗತ್ಯ ಅಂಗಡಿ ತೆರೆದ ಮಾಲೀಕರ ವಿರುದ್ಧ ಕ್ರಮ ಕೈ ಗೊಂಡ ಉಡುಪಿ ಡಿಸಿ

Wednesday, May 19th, 2021
Shops

ಉಡುಪಿ : ಲಾಕ್ ಡೌನ್ ಮಾರ್ಗಸೂಚಿಯನ್ನು ಉಲ್ಲಂಘಿಸುತ್ತಿರುವ ಮಾಹಿತಿ ಆಧಾರ ಮೇಲೆ ಮೇ 19 ರ ಬುಧವಾರ ನಗರ ಹಾಗೂ ಮಲ್ಪೆ ಪ್ರದೇಶದಲ್ಲಿ ಧಿಡೀರ್ ದಾಳಿ ನಡೆಸಿದ ಡಿಸಿ ಜಿ.ಜಗದೀಶ್ ಹಲವು ಅಂಗಡಿ ಮಾಲಕರಿಗೆ ಹಾಗೂ ವಾಹನ ಸವಾರರಿಗೆ ಎಚ್ಚರಿಕೆ ನೀಡಿದರು. ಅಗತ್ಯವಿರುವ ವಸ್ತುಗಳನ್ನು ಖರೀದಿಸಲು ಜನರು ಹತ್ತಿರದ ಕಿರಾಣಿ ಮತ್ತು ತರಕಾರಿ ಅಂಗಡಿಗಳಿಗೆ ಕಾಲ್ನಡಿಗೆಯಲ್ಲಿ ಭೇಟಿ ನೀಡಬೇಕು ಎಂದು ಅವರು ಎಚ್ಚರಿಸಿದರು. ಇದಲ್ಲದೆ ಅನಗತ್ಯವಾಗಿ ವಾಹನದಲ್ಲಿ ಸಂಚರಿಸುತ್ತಿರುವವರ ಕಠಿಣ ಎಚ್ಚರಿಕೆ ನೀಡಿದ ಅವರು ವಾಹನಗಳನ್ನು ಸೀಜ್ […]

ಲಾಕ್ ಡೌನ್ ಸಂಕಷ್ಟದ್ದ ರೈತನಿಂದ 3000 ಕೆಜಿ ಈರುಳ್ಳಿ ಖರೀದಿಸಿದ ನಟ ಉಪೇಂದ್ರ

Monday, May 17th, 2021
onion

ಹಿರಿಯೂರು: ಲಾಕ್ ಡೌನ್ ನಿಂದ ಬೆಳೆದ ಬೆಳೆ ಮಾರಲಾಗದೆ ಸಂಕಷ್ಟದಲ್ಲಿದ್ದ ಹಿರಿಯೂರು ತಾಲ್ಲೂಕಿನ ಪಟ್ರೇಹಳ್ಳಿ ಗ್ರಾಮದ ಮಹೇಶ್ ಅವರ 60 ಚೀಲ ಈರುಳ್ಳಿಯನ್ನು ನಟ ಉಪೇಂದ್ರ ಖರೀದಿಸಿದ್ದಾರೆ. ಲಾಕ್ ಡೌನ್ ವೇಳೆ ವ್ಯಾಪಾರವಾಗದೇ ಸಂಕಷ್ಟದಲ್ಲಿರುವ ರೈತರಿಗೆ ನಟ ಉಪೇಂದ್ರ ಅವರು ” ನಮಗೆ ಅವಶ್ಯಕತೆ ಇರುವ ಬೆಳೆಯನ್ನು ನಿಮ್ಮ ಬಳಿ ಸೂಕ್ತ ಬೆಲೆಗೆ ಕೊಂಡು ಬೇಕಿರುವವರಿಗೆ ಹಂಚುತ್ತೇವೆ” ಎಂದು ತನ್ನ ಮೊಬೈಲ್ ನಂಬರ್ ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಿದ್ದರು. ಇದನ್ನು ಗಮನಿಸಿದ ಮಹೇಶ್ ಉಪೇಂದ್ರ ಅವರಿಗೆ ಕರೆ ಮಾಡಿ ವಿಚಾರಿಸಿ […]

ಸುಸಜ್ಜಿತ ಆರೈಕೆ ಕೇಂದ್ರವಾಗಿ ಬದಲಾದ ಹಜ್ ಭವನ

Saturday, May 15th, 2021
Haj Bhavan

ಬೆಂಗಳೂರು : ಬೆಂಗಳೂರಿನ ಉತ್ತರ ಭಾಗದ ಕೋವಿಡ್ ಸೋಂಕಿತರ ಅನುಕೂಲಕ್ಕಾಗಿಯೇ ಥಣಿಸಂದ್ರದ ಹಜ್ ಭವನದಲ್ಲಿ ಸಿದ್ಧಗೊಂಡಿರುವ ಸುಸಜ್ಜಿತ ಕೋವಿಡ್ ಆರೈಕೆ ಕೇಂದ್ರವನ್ನ ಕಂದಾಯ ಸಚಿವರಾದ ಆರ್ ಅಶೋಕ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಆರ್ ಅಶೋಕ್ ಅವರು,”ಈ ಭಾಗದ ಸೋಂಕಿತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಹಜ್ ಭವನವನ್ನ ಹಲವು ಅನುಕೂಲಗಳುಳ್ಳ ಸುಸಜ್ಜಿತ ಕೋವಿಡ್ ಆರೈಕೆ ಕೇಂದ್ರವಾಗಿ ಸಜ್ಜುಗೊಳಿಸಿದೆ. ಇಲ್ಲಿ ನೂರಕ್ಕೂ ಅಧಿಕ ಆಕ್ಸಿಜನ್ ಹಾಸಿಗೆ ಗಳಿದ್ದು, 50 ಐಸಿಯೂ ಹಾಗೂ 50 ಹೆಚ್‍ಡಿಯೂ ಹಾಸಿಗೆಗಳನ್ನ ಸಿದ್ಧಪಡಿಸಲು […]

ತಾಲೂಕು ಪಂಚಾಯತ್ ಸದಸ್ಯನ ಮೇಲೆ ಬಂಟ್ವಾಳ ಏಎಸ್ ಐ ಯಿಂದ ಹಲ್ಲೆ

Friday, May 14th, 2021
Bantwala SI

ಬಂಟ್ವಾಳ : ಮೆಡಿಕಲ್ ಶಾಪ್ ಗೆ ಬಂದ ತಾಲೂಕು ಪಂಚಾಯತ್ ಸದಸ್ಯನ  ಮೇಲೆ ಕಲ್ಲಡ್ಕದಲ್ಲಿ ಬಂಟ್ವಾಳ ಏಎಸ್ ಐ ಹಲ್ಲೆ ನಡೆಸಿದ್ದು ಇದನ್ನು ಸಾರ್ವಜನಿಕರು ಪ್ರಶ್ನಿಸಿದದ ಘಟನೆ ಶುಕ್ರವಾರ ಬೆಳಗ್ಗೆ ಕಲ್ಲಡ್ಕದಲ್ಲಿ ನಡೆದಿದೆ. ಲಾಕ್ ಡೌನ್ ನಿಯಮಾವಳಿಯಂತೆ ಬೆಳಗ್ಗೆ 9 ಗಂಟೆಯ ಬಳಿಕ ಕಲ್ಲಡ್ಕದಲ್ಲಿ ಅಂಗಡಿಗಳನ್ನು ಮುಚ್ಚುವಂತೆ ಪೋಲೀಸರು ಸೂಚಿಸುತ್ತಿದ್ದರು. ಈ ವೇಳೆ ಕಾರು ನಿಲ್ಲಿಸಿ ಮೆಡಿಕಲ್ ಶಾಪ್ ಗೆ ಬರುತ್ತಿದ್ದ ಬಂಟ್ವಾಳ ತಾಲೂಕು ಪಂಚಾಯತ್ ಹಾಲಿ ಬಿಜೆಪಿ ಸದಸ್ಯ ಮಹಾಬಲ ಆಳ್ವ ಗೋಳ್ತಮಜಲು ಅವರ ಮೇಲೆ  ಬಂಟ್ವಾಳ ನಗರ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಂತ್ಯ ಕರ್ಫ್ಯೂ ಇಲ್ಲ ಎಂದು ಜಿಲ್ಲಾಧಿಕಾರಿ ಆದೇಶ

Thursday, May 13th, 2021
Rajendra

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ವಾರಂತ್ಯ ಕರ್ಫ್ಯೂ ಇಲ್ಲ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ನೀಡಿದ್ದಾರೆ. ಕೊರೋನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲಾಗಿದ್ದು, ಈಗಾಗಲೇ ಸರಕಾರ ಹೊರಡಿಸಿರುವ ಮೇ 10ರಿಂದ ಮೇ 24ರ ತನಕದ ಲಾಕ್ ಡೌನ್ ಮುಂದುವರೆಯಲಿದೆ. ಆ ಮಾರ್ಗಸೂಚಿಯೇ ಮುಂದುವರೆಯಲಿದೆ. ಅದನ್ನು ಹೊರತು ಪಡಿಸಿ ಉಳಿದಂತೆ ಯಾವುದೇ ಪ್ರತ್ಯೇಕ ವಾರಾಂತ್ಯ ಕರ್ಫ್ಯೂ ಇಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಹಾಗೂ ರವಿವಾರದಂದು ಬೆಳಗ್ಗೆ 9 […]

ಲಾಕ್ ಡೌನ್ : ತಿಂಗಳಿಗೆ ಕನಿಷ್ಟ ರೂ, 10,000 ಆರ್ಥಿಕ ಪರಿಹಾರ ಮೊತ್ತಕ್ಕಾಗಿ ಸಿಪಿಐ(ಎಂ) ಒತ್ತಾಯ

Tuesday, May 11th, 2021
lock down

ಮಂಗಳೂರು  : ಕರ್ನಾಟಕ ಬಿಜೆಪಿ ಸರ್ಕಾರ ದಿನಾಂಕ 10-05-2021 ರಿಂದ 24-05-2021ರ ತನಕ ಕೊರೋನಾ ತಡೆಗಟ್ಟಲು ಲಾಕ್ ಡೌನ್ ಘೋಷಿಸಿದೆ. ಇದರಿಂದ ದುಡಿದು ಬದುಕುವ ಅಪಾರ ಸಂಖ್ಯೆಯ ಕಾರ್ಮಿಕರು ತೊಂದರೆಗೊಳಗಾಗಲಿದ್ದಾರೆ. ಮುಖ್ಯವಾಗಿ ಬೀಡಿ ಕಾರ್ಮಿಕರು , ಕಟ್ಟಡ ಕಾರ್ಮಿಕರು , ಬಸ್ಸು ಡ್ರೈವರ್ಸ್‍, ನಿರ್ವಾಹಕರು, ಆಟೋ, ಟೆಂಪೋ, ಮ್ಯಾಕ್ಸಿ ಕ್ಯಾಬ್, ಲೊರಿ ಚಾಲಕರಿಗೆ ಹೊಟೇಲ್ ಕಾರ್ಮಿಕರು, ಬಿಸಿಯೂಟ, ಅಂಗನವಾಡಿ, ಆಶಾ ಕಾರ್ಮಿಕರು,‌ ಗುತ್ತಿಗೆ ಕಾರ್ಮಿಕರು, ದಿನಗೂಲಿ ಕಾರ್ಮಿಕರಿಗೆ ಹಾಗೂ ಇತರೆ ಕಾರ್ಮಿಕರಿಗೆ ತಿಂಗಳಿಗೆ ಕನಿಷ್ಟ ರೂ, 10,000 […]

ಸಂಘಟನೆ, ಪಕ್ಷ ಅಥವಾ ಇನ್ಯಾವುದೋ ಪಾಸ್ ಬಳಸಿ ಸುತ್ತಾಡಿದರೆ ವಾಹನ ಮುಟ್ಟುಗೋಲು

Sunday, May 9th, 2021
police Commissioner

ಮಂಗಳೂರು :  ಕೊರೋನ ಲಾಕ್ ಡೌನ್ ಸಂದರ್ಭ ಸಂಘಟನೆ, ಪಕ್ಷ ಅಥವಾ ಇನ್ಯಾವುದೋ ಪಾಸ್ ಬಳಸಿ ಸುತ್ತಾಡಿದರೆ ಅಂತಹವರ ವಾಹನಗಳನ್ನು ನಿರ್ದಾಕ್ಷಿಣ್ಯವಾಗಿ ಮುಟ್ಟುಗೋಲು ಹಾಕಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ರವಿವಾರ ಸಾಮಾಜಿ ಜಾಲತಾಣಗಳ ಲೈವ್ ನಲ್ಲಿ ಎಚ್ಚರಿಕೆ ನೀಡಿದ್ದಾರೆ. ನಾಗರಿಕರ ಹಿತದೃಷ್ಟಿಯಿಂದ ಕೋವಿಡ್, ವೀಕೆಂಡ್ ಕರ್ಫ್ಯೂವನ್ನು ಜಾರಿ ಮಾಡಲಾಗಿದೆ. ಮೆಡಿಕಲ್, ವೈದ್ಯಕೀಯ, ಪತ್ರಿಕೆ ಸಹಿತ ತುರ್ತು ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಆದರೆ ಕೆಲವರು ನಿರ್ಗತಿಕರಿಗೆ ಊಟದ ವ್ಯವಸ್ಥೆ ನೀಡುತ್ತಿದ್ದೇವೆ ಎಂದು ಹೇಳಿಕೊಂಡು […]

ಹಸಿದೊಟ್ಟೆಗೆ ಊಟ ನೀಡಿ ಮಾನವಿಯತೆ ಮೆರೆದ ಕುಂದಾಪುರದ ಶ್ರೀ ನಾರಾಯಣ ಗುರು ಯುವಕ ಮಂಡಳಿ

Saturday, May 8th, 2021
Narayana Guru

ಕುಂದಾಪುರ  :   ಉಡುಪಿ ಜಿಲ್ಲೆಯ ಕುಂದಾಪುರದ ತಾಲೂಕಿನ ಶ್ರೀ ನಾರಾಯಣ ಗುರು ಯುವಕ ಮಂಡಳಿ(ರಿ)ಯವರಿಂದು ಲಾಕ್ ಡೌನ್ ಇಂದಾಗಿ ದಿನದ ಕೂಳಿಲ್ಲದೆ ಹಸಿವಿನಿಂದ ಕಂಗೆಟ್ಟಿದ್ದ ಅಲ್ಲಿನ ಸುತ್ತ-ಮುತ್ತ ಪರಿಸರದಲ್ಲಿನ ಬಡವರಿಗೆ, ವಿಕಲ ಚೇತನರಿಗೆ, ಲಾರಿ ಚಾಲಕರಿಗೆ, ಹಾಗೂ ಹಣ ವಿದ್ದರೂ ಸಹ, ಊಟ ಮಾಡಲು ಹೊಟೇಲ್ ಗಳಿಲ್ಲದೆ ಹಸಿವಿನಿಂದ ಕಂಗೆಟ್ಟಿದ್ದ ಸುಮಾರು 250 ಜನರ ಹಸಿವಿನ ಹೊಟ್ಟೆಗೆ ಊಟ ನೀಡಿ ಮಾನವಿಯತೆ ಮೆರೆದ್ದಿದ್ದಾರೆ. ಈ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷ ಶ್ರೀನಾಥ ಕಡ್ಲಿ ಮನೆ, ಕಾರ್ಯದರ್ಶಿ ವಿಜಯ್ ಪೂಜಾರಿ,ಕಿರಣ್ […]