Blog Archive

ವಿಮಾನ ನಿಲ್ದಾಣ ಮೂಲಕ ದುಬೈಯಿಂದ ಅಕ್ರಮವಾಗಿ ಚಿನ್ನ ಸಾಗಿಸಲು ಯತ್ನಿಸಿದ ಆರೋಪಿ ಬಂಧನ

Saturday, October 1st, 2016
smuggling-in-mia

ಮಂಗಳೂರು: ವಿಮಾನ ನಿಲ್ದಾಣ ಮೂಲಕ ದುಬೈಯಿಂದ ಅಕ್ರಮವಾಗಿ 32.91 ಲಕ್ಷ ರೂ. ಮೌಲ್ಯದ 1.05 ಕೆ.ಜಿ. ಚಿನ್ನ ಸಾಗಿಸಲು ಯತ್ನಿಸಿದ ಆರೋಪಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಏರ್ ಇಂಡಿಯಾ ವಿಮಾನದ ಮೂಲಕ ಆಗಮಿಸಿದ ಆರೋಪಿ ಸೆ. 27ರಂದು ಬಜ್ಪೆ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸಲೆತ್ನಿಸಿದ್ದ. ಅನುಮಾನ ಬಂದು ತಪಾಸಣೆ ನಡೆಸಿದಾಗ ಆತನ ಬಳಿ ಸಿಲಿಂಡರ್ ರೂಪದ ಚಿನ್ನದ ರಾಡ್ ಪತ್ತೆಯಾಗಿತ್ತು. ಇದನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಸ್ತಾಂತರಿಸಿದ್ದು, […]

500 ರೂ. ಕಡಿಮೆ ಆಯಿತೆಂದು ಪ್ರಯಾಣವನ್ನೇ ತಡೆ ಹಿಡಿದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಸಿಬಂದಿ

Thursday, September 8th, 2016
valerian

ಮಂಗಳೂರು: ಮಸ್ಕತ್‌ಗೆ ಹೊರಟ್ಟಿದ್ದ ವ್ಯಕ್ತಿಯೊಬ್ಬರು ಹೊಂದಿದ್ದ ಹ್ಯಾಂಡ್‌ ಬ್ಯಾಗ್‌ ಕೊಂಡೊಯ್ಯಲು ತಗಲುವ ಶುಲ್ಕದಲ್ಲಿ ಕೇವಲ 500 ರೂ. ಕಡಿಮೆ ಆಯಿತೆಂದು ಅವರ ಪ್ರಯಾಣವನ್ನೇ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಸಿಬಂದಿ ತಡೆ ಹಿಡಿದ ಘಟನೆ ಮಂಗಳವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದೆ. ಉಡುಪಿಯ ವಲೇರಿಯನ್‌ ಮಥಾಯಸ್‌ ವಿಮಾನದಲ್ಲಿ ಪ್ರಯಾಣಿಸಲು ಸಾಧ್ಯವಾಗದೆ ವಾಪಸಾದ ವ್ಯಕ್ತಿ. ಬೆಳಗ್ಗೆ 8.55ರ ವಿಮಾನದಲ್ಲಿ ಪ್ರಯಾಣಿಸಲು ಅವರು 7.30ಕ್ಕೆ ವಿಮಾನ ನಿಲ್ದಾಣಕ್ಕೆ ತಲುಪಿದ್ದರು. ಅವರ ದೊಡ್ಡ ಲಗೇಜ್‌ ತಪಾಸಣೆಯ ಬಳಿಕ ಪಾಸ್‌ ಆಗಿತ್ತು. ಆದರೆ […]

ಹಜ್‌ಯಾತ್ರೆಯ ಮೊದಲ ತಂಡ ಮಂಗಳೂರಿಗೆ ವಪಾಸ್

Tuesday, September 29th, 2015
Haj pilgrims

ಮಂಗಳೂರು : ಹಜ್‌ ನಿರ್ವಹಣಾ ಸಮಿತಿ ಮಂಗಳೂರು ಇದರ ವತಿಯಿಂದ ಪವಿತ್ರ ಹಜ್‌ಯಾತ್ರೆ ಕೈಗೊಂಡಿದ್ದ ಕರ್ನಾಟಕದ ಹಜ್ ಯಾತ್ರಾರ್ಥಿಗಳ ಮೊದಲ ತಂಡ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಸೋಮವಾರ ಆಗಮಿಸಿತು. ದ.ಕನ್ನಡ, ಉಡುಪಿ, ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ 666 ಮಂದಿ ಹಜ್‌ಯಾತ್ರೆ ಕೈಗೊಂಡಿದ್ದರು. ವಿಮಾನ ನಿಲ್ದಾಣದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಕುಟುಂಬದ ಸದಸ್ಯರು ಯಾತ್ರಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು. ವಸತಿ, ಊಟ, ಪ್ರಯಾಣದ ವ್ಯವಸ್ಥೆ ಉತ್ತಮವಾಗಿತ್ತು. ಮಂಗಳೂರು ಹಜ್‌ ನಿರ್ವಹಣಾ ಸಮಿತಿ ನಮ್ಮ ಬಗ್ಗೆ ಹೆಚ್ಚಿನ ಕಾಳಜಿ […]

ಮಂಗಳೂರು ವಿಮಾನ ನಿಲ್ದಾಣದಲ್ಲಿ 27.10 ಲಕ್ಷ ಮೌಲ್ಯದ ಆಕ್ರಮ ಚಿನ್ಟ ಸಾಗಟ ಪತ್ತೆ

Tuesday, October 14th, 2014
Gold Smuggler

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಲೈಫ್‌ಜಾಕೆಟ್‌ ಬ್ಯಾಗಿನೊಳಗೆ ಹುದುಗಿಸಿಟ್ಟು ಅಕ್ರಮವಾಗಿ ಸಾಗಿಸುತ್ತಿದ್ದ 27.10 ಲಕ್ಷ ರೂ. ಮೌಲ್ಯದ 1 ಕಿಲೋ ಚಿನ್ನವನ್ನು ಸೋಮವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ. ಕೊಡಗು ನಾಪೊಕ್ಲು ನಿವಾಸಿ ಮಡಪಳ್ಳಿ ಮಹಮ್ಮದ್‌ ಇಸ್ಮಾಯಿಲ್‌ ಬಂಧಿತ ಆರೋಪಿಯಾಗಿದ್ದಾನೆ. ಜೆಟ್‌ ಏರ್‌ವೇಸ್‌ನಲ್ಲಿ ದುಬಾೖಯಿಂದ ಮಂಗಳೂರಿಗೆ ಮಂಗಳವಾರ ಬೆಳಗ್ಗೆ 9 ಗಂಟೆಗೆ ಆಗಮಿಸಿದ ಆರೋಪಿಯು ಚಿನ್ನ ಹುದುಗಿಸಿಟ್ಟಿದ್ದ ಲೈಫ್‌ ಜಾಕೆಟ್‌ ಬ್ಯಾಗನ್ನು ವಿಮಾನದ ಸೀಟಿನಡಿಯಲ್ಲಿ ಅಡಗಿಸಿಟ್ಟಿದ್ದ. ಕಸ್ಟಮ್ಸ್‌ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದ […]

ಪಿ.ಸಿ. ಆಭರಣ ಮಳಿಗೆ ಮಂಗಳೂರಿನಲ್ಲಿ ತೆರೆದ ಬಾಲಿವುಡ್ ತಾರೆ ನಟಿ ಶಿಲ್ಪ ಶೆಟ್ಟಿ

Monday, November 25th, 2013
shilpa-shetty

ಮಂಗಳೂರು : ನಗರದ ಬಲ್ಲಾಳ್‌ಬಾಗ್‌ನ ಕಾಯರ್‌ಮಂಜ್ ಕಟ್ಟಡದಲ್ಲಿ  ಪಿ.ಸಿ. ಜ್ಯುವೆಲ್ಲರಿ ಶೋರೂಂ ಅನ್ನು ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಭಾನುವಾರ ಉದ್ಘಾಟನೆ ಮಾಡಿದರು. ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಮಾತನಾಡಿ, ಮಂಗಳೂರು ಮಹಿಳೆಯರಿಗೆ ಸೌಂದರ್ಯ ಪ್ರಜ್ಞೆ ಹೆಚ್ಚು, ಇಲ್ಲಿಯವರಿಗೆ ಆಭರಣ ತುಂಬಾ ಇಷ್ಟ, ಅಷ್ಟು ಗ್ಯಾರಂಟಿ ನೀಡುತ್ತೇನೆ. ಮಂಗಳೂರಿಗೆ ಬರಬೇಕೆಂದು ಹಂಬಲಿಸುತ್ತಿರುತ್ತೇನೆ, ಸಮಯಾವಕಾಶ ಕೊರತೆಯಿಂದ ಬರಲು ಸಾಧ್ಯವಾಗಿಲ್ಲ. ಪಿ.ಸಿ. ಜ್ಯುವೆಲ್ಲರಿ ಉದ್ಘಾಟನೆಗೆ ಕರೆದಾಗ ತಕ್ಷಣ ಒಪ್ಪಿಕೊಂಡು ಬಂದೆ. ಇಲ್ಲಿನ ಮಲ್ಲಿಗೆ ಹೂವು ಎಂದರೆ ನನಗೆ ತುಂಬಾ ಇಷ್ಟ. ವಿಮಾನ […]

ಅಧಿಕಾರಿಗಳ ಜತೆಯಲ್ಲಿ ವಿಡಿಯೋ ಕಾನ್ಫರೆನ್ಸ್‌ ನಡೆಸಿ ಆಡಳಿತ ಕ್ರಮ : ಡಿ.ವಿ.ಎಸ್

Sunday, August 21st, 2011
ಅಧಿಕಾರಿಗಳ ಜತೆಯಲ್ಲಿ ವಿಡಿಯೋ ಕಾನ್ಫರೆನ್ಸ್‌ ನಡೆಸಿ ಆಡಳಿತ ಕ್ರಮ : ಡಿ.ವಿ.ಎಸ್

ಮಂಗಳೂರು: ಉಡುಪಿ ಜಿಲ್ಲೆಯ ಪ್ರವಾಸಕ್ಕೆ ಆಗಮಿಸಿರುವ ಮುಖ್ಯಮಂತ್ರಿಗಳು ಶನಿವಾರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮುಂದಿನ ವಾರದಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದ ಹಿಡಿದು ತಹಶೀಲ್ದಾರ್‌ ವರೆಗಿನ ಅಧಿಕಾರಿಗಳ ಜತೆಯಲ್ಲಿ ವಿಡಿಯೋ ಕಾನ್ಫರೆನ್ಸ್‌ ನಡೆಸಿ, ಕೆಲವೇ ದಿನಗಳಲ್ಲಿ ರಾಜ್ಯದ ಆಡಳಿತ ಯಂತ್ರಕ್ಕೆ ವೇಗ ನೀಡಲಾಗುವುದು ಎಂದು ಅವರು ಹೇಳಿದರು. ಈವರೆಗೆ 20 ಇಲಾಖೆಗಳ ಪ್ರಗತಿ ಕುರಿತಂತೆ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ ಇತರ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಯಾವುದೇ ಕಾರ್ಯಗಳಿದ್ದರೂ ಅದನ್ನು ಜಾರಿಗೊಳಿಸುವವರು ಕೆಳಗಿನ ಅಧಿಕಾರಿಗಳು. ಹಾಗಾಗಿ ಅವರೊಂದಿಗೆ […]

ವಿಮಾನ ನಿಲ್ದಾಣ ಮತ್ತು ಬಿಜೈ ಕೆ.ಎಸ್.ಆರ್.ಟಿಸಿ ನಿಲ್ದಾಣ ಮಧ್ಯೆ ಸರಕಾರಿ ವೋಲ್ವೊ ಬಸ್

Tuesday, July 12th, 2011
kdp meeting/ಕೆಡಿಪಿ ಸಭೆ

ಮಂಗಳೂರು : ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ  ತ್ರೈ ಮಾಸಿಕ ಕೆಡಿಪಿ ಸಭೆ ಸೋಮವಾರ ನಡೆಯಿತು.  ಗ್ರಾಮೀಣ ಪ್ರದೇಶಗಳಿಗೆ ಅನುಕೂಲವಾಗುವಂತೆ ಬಸ್ಸಿನ ವ್ಯವಸ್ಥೆ  ಮಾಡುವಂತೆ ಕಳೆದ ಸಭೆಯಲ್ಲಿ ಸೂಚಿಸಲಾಗಿತ್ತು,  ಅದರಂತೆ ಗ್ರಾಮೀಣ ಪ್ರದೇಶಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು  ಒದಗಿಸಲು  ಸಲ್ಲಿಸಿರುವ 4 ತಾತ್ಕಾಲಿಕ ಪರವಾನಿಗೆ ಅರ್ಜಿಗಳನ್ನು ಪರಿಗಣಿಸಿ ತಾತ್ಕಾಲಿಕ ಪರವಾನಿಗೆ ನೀಡಲಾಗಿದೆ, 78ಚಾಲಕರನ್ನು ನೇಮಿಸಲಾಗಿದ್ದು,  ಅದರಂತೆ ಬಸ್ಸುಗಳನ್ನು ಓಡಿಸಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕೆಡಿಪಿ ಸಭೆಯಲ್ಲ್ಲಿ ತಿಳಿಸಿದರು. […]