Blog Archive

ಸ್ಟೇಟ್ ಬ್ಯಾಂಕ್ ಅಪ್ ಇಂಡಿಯಾ ಬ್ಯಾಂಕ್ ಸಿಬ್ಬಂದಿಗೆ ಬಸ್ಸಿನಲ್ಲೇ ಹೃದಯಾಘಾತ

Thursday, June 25th, 2020
heart-attack

ಬೆಳ್ತಂಗಡಿ : ಸ್ಟೇಟ್ ಬ್ಯಾಂಕ್ ಅಪ್  ಇಂಡಿಯಾ  ಬ್ಯಾಂಕ್ ಸಿಬ್ಬಂದಿಯೊಬ್ಬರು ಕರ್ತವ್ಯಕ್ಕೆ ಆಗಮಿಸುತ್ತಿದ್ದಾಗ ಸರಕಾರಿ ಬಸ್ಸಿನಲ್ಲೇ ಹೃದಯಾಘಾತದಿಂದ ನಿಧನರಾದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ. ಮೃತರನ್ನು ಬಂಟ್ವಾಳ ತಾಲೂಕು ರಾಮಲ್‌ಕಟ್ಟೆ ನಿವಾಸಿ ಚನಿಯ ನಾಯ್ಕ್(57) ಎಂಬವರೆಂದು ಗುರುತಿಸಲಾಗಿದೆ ಬೆಳ್ತಂಗಡಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ( ಎಸ್.ಬಿ.ಐ) ಇದರ ಸೀನಿಯರ್ ಅಸಿಸ್ಟೆಂಟ್ ಆಗಿದ್ದ ಕಾರ್ಯನಿರ್ವಹಿಸುತ್ತಿದ್ದರು. ಎಂದಿನಂತೆ ಬೆಳಿಗ್ಗೆ ಮನೆಯಿಂದ ಹೊರಟು ಬಸ್ಸಿನಲ್ಲಿ ಬರುತ್ತಿದ್ದಾಗ ಘಟನೆ ನಡೆದಿದ್ದು, ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅದಾಗಲೇ ಅವರು ಅಸುನೀಗಿದ್ದರು. […]

ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಲಘು ಹೃದಯಾಘಾತ

Thursday, February 27th, 2020
arjun-janya

ಬೆಂಗಳೂರು : ಸಂಗೀತ‌‌‌ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ಲಘು ಹೃದಯಾಘಾತವಾಗಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಧವಾರ ಅವರು‌ ಬೋಗಾದಿಯಲ್ಲಿರುವ ವಿಲ್ಲಾದಲ್ಲಿ ತಂಗಿದ್ದರು. ಮಧ್ಯರಾತ್ರಿ ಎದೆನೋವು ಕಾಣಿಸಿಕೊಂಡಿದ್ದು ಆ ಕೂಡಲೇ‌ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಾಣಾಪಾಯದಿಂದ‌ ಅವರು ಪಾರಾಗಿದ್ದಾರೆ ಎಂದು ಜನ್ಯ ತಿಳಿದು ಬಂದಿದೆ. ಸ್ಯಾಂಡಲ್‌ವುಡ್‌ನ ಪ್ರಖ್ಯಾತ ಸಂಗೀತ ನಿರ್ದೇಶಕರಾಗಿರುವ ಅರ್ಜುನ್‌ ಜನ್ಯ, ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳ ತೀರ್ಪುಗಾರರೂ ಕೂಡಾ ಆಗಿದ್ದಾರೆಎ. ಹಾಗೆಯೇ ತಮ್ಮದೇ ಆದ ಶೈಲಿಯಲ್ಲಿ ಹಲವಾರು ಚಿತ್ರಗಳ ಹಾಡಿಗೆ ಧ್ವನಿಯಾಗಿದ್ದಾರೆ. […]

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಂದಿಗೆ ಹೃದಯಾಘಾತ

Friday, May 31st, 2019
puttur-Nandi

ಪುತ್ತೂರು : ತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಂದಿ ಹೆಸರಿನ ಬಸವ ಹೃದಯಾಘಾತಕ್ಕೆ ಒಳಗಾಗಿ ಮೇ.30ರ ರಾತ್ರಿ ಮೃತಪಟ್ಟಿದೆ . ನಂದಿ ದಿನ ನಿತ್ಯದಂತೆ ಮೇ30ರ ಮಧ್ಯಾಹ್ನ ಪೂಜೆ ವೇಳೆ ದೇವಸ್ಥಾನದ ಮುಂಭಾಗ ಬಂದು ದೇವರ ಪೂಜೆ ವೀಕ್ಷಿಸಿತ್ತು. ಆದರೆ ರಾತ್ರಿ 7.45 ರ ವೇಳೆಗೆ ನಂದಿ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. ಎಲ್ಲರಿಗೂ ಪ್ರೀತಿ ಪಾತ್ರವಾಗಿದ್ದ ಬಸವನ ಸಾವಿಗೆ ಭಕ್ತರು ಕಂಬನಿ ಮಿಡಿದಿದ್ದಾರೆ.

ಮತದಾನಕ್ಕೆ ತೆರಳುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು

Saturday, May 12th, 2018
Anni Acharya

ಬೆಳ್ತಂಗಡಿ :  ತಾಲೂಕಿನ ಅಂಡಿಜೆ ಗ್ರಾಮದ ಶಾಲೆಯಲ್ಲಿ ಮತದಾನಕ್ಕೆ ತೆರಳುತ್ತಿದ್ದ ವ್ಯಕ್ತಿಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಜಾರಿಗೆದಡಿ ನಿವಾಸಿ ಅಣ್ಣಿ ಅಚಾರ್ಯ(70) ಹೃದಯಾಘಾತದಿಂದ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮತದಾನ ಮಾಡಲು ತೆರಳಿದ್ದ ಶಾಲೆಯ ಮುಂಭಾಗದಲ್ಲಿ ಹೃದಯಘಾತವಾಗಿ ಕುಸಿದುಬಿದ್ದು ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೃದಯಾಘಾತಕ್ಕೊಳಗಾಗಿ ಖಾಸಗಿ ಈಜುಕೊಳದಲ್ಲಿ ವಿದ್ಯಾರ್ಥಿ ಸಾವು

Wednesday, December 7th, 2016
Karthik Rai

ಮಂಗಳೂರು: ಪುತ್ತೂರು ನಗರದ ಹೊರವಲಯದ ದರ್ಬೆ ಬೈಪಾಸ್ ರಸ್ತೆ ಸಮೀಪವಿರುವ ಖಾಸಗಿ ಈಜುಕೊಳವೊಂದರಲ್ಲಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ. ಇದು ಈ ಈಜುಕೊಳದಲ್ಲಿ ಒಂದು ವರ್ಷದ ಅವಧಿಯಲ್ಲಿ ನಡೆದ ಎರಡನೇ ದುರಂತವಾಗಿದೆ. ಪುತ್ತೂರು ತಾಲೂಕಿನ ತೊಟ್ಲ ನಿವಾಸಿ, ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಕಾರ್ತಿಕ್‌ ರೈ (19) ಎಂಬಾತ ಮೃತ ಯುವಕ. ಕ್ರಿಕೆಟ್ ಆಟಗಾರನಾಗಿದ್ದ ಕಾರ್ತಿಕ್‌ ರೈ ಮಂಗಳೂರು ವಿವಿ ತಂಡ ಸದಸ್ಯನಾಗಿದ್ದ. ಎಂಪಿಎಲ್ ಪಂದ್ಯಾಟ ಆಡಲು ಅಭ್ಯಾಸ ನಡೆಸುತ್ತಿದ್ದ ಕಾರ್ತಿಕ್‌ ಪುತ್ತೂರಿನ ಸಂತ ಫಿಲೋಮಿನಾ […]

ಕಾರಾಗೃಹದ ಕೈದಿ ಹೃದಯಾಘಾತದಿಂದ ಸಾವು

Wednesday, September 14th, 2016
heart-attack

ಮಂಗಳೂರು: ನಗರದ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಕಾರ್ಕಳ ಹೊಸ್ಮಾರು ಈದು ಗ್ರಾಮ ಬಾಬು ಯಾನೆ ಮಬು (60) ಅವರು ಮಂಗಳವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅನಾರೋಗ್ಯ ಹೊಂದಿದ್ದ ಅವರಿಗೆ ಹಲವು ಬಾರಿ ನಗರದ ವೆನ್‌ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗಿತ್ತು. ಮಂಗಳವಾರವೂ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದು, ಕೂಡಲೇ ಸಿಬ್ಬಂದಿಗಳ ಭದ್ರತೆಯೊಂದಿಗೆ ವೆನ್‌ಲಾಕ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಅವರನ್ನು ಪರೀಕ್ಷಿಸಿದ ವೈದ್ಯರು ಹೃದಯಾಘಾತದಿಂದ ಮಾರ್ಗದ ಮಧ್ಯೆಯೇ ಮೃತಪಟ್ಟಿರುವ ಬಗ್ಗೆ ದೃಢಪಡಿಸಿದ್ದಾರೆ. ಬಾಬು ಅವರು ಮೂಡಬಿದಿರೆ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣದ ಆರೋಪಿಯಾಗಿ […]

ಪೆರ್ಲ: ಬಿಜೆಪಿ ಕಾರ್ಯಕರ್ತ ಹೃದಯಾಘಾತದಿಂದ ನಿಧನ

Wednesday, January 6th, 2016
Narayana

ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಮುಂಡೋಳಿ ಮೂಲೆ ದಿ.ನಿಟ್ಟೋಣಿ ಅಜಿಲ-ದಿ.ಬಾಗಿ ದಂಪತಿಗಳ ಪುತ್ರ, ಬಿಜೆಪಿ ಕಾರ್ಯಕರ್ತ ನಾರಾಯಣ(40) ಹೃದಯಾಘಾತದಿಂದ ಮಂಗಳವಾರ ರಾತ್ರಿ ನಿಧನರಾದರು. ಮಂಗಳವಾರ ರಾತ್ರಿ ಪತ್ನಿಯ ತಾಯಿ ಮನೆ ಆರ್ಲಪದವಿನಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಪುತ್ತೂರಿನ ಖಾಸಗೀ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.1995-2000 ನೇ ಆಡಳಿತಾವಧಿಯಲ್ಲಿ ವಾಣೀನಗರ ವಾರ್ಡ್‌ನಿಂದ ಬಿಜೆಪಿ ಸದಸ್ಯರಾಗಿ ಚುನಾಯಿತರಾಗಿ ಆಯ್ಕೆಯಾಗಿದ್ದರು.ಇವರು ದೈವ ನರ್ತನ ಕಲಾವಿದರೂ ಆಗಿದ್ದರು.

ಪಿಲಿಕುಳದ ‘ರಾಜ’ ಹುಲಿ ಹೃದಯಾಘಾತದಿಂದ ಸಾವು

Saturday, May 23rd, 2015
Tiger Raja

ಮಂಗಳೂರು: ಪಿಲಿಕುಳದ ಡಾ. ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿನ 21 ವರ್ಷ ಪ್ರಾಯದ ಹಿರಿಯ ‘ರಾಜ’ ಎಂಬ ಹುಲಿ ಶುಕ್ರವಾರ ಮುಂಜಾನೆ 5 ಗಂಟೆಗೆ ಹೃದಯಾಘಾತದಿಂದ ಸಹಜವಾಗಿ ಮೃತಪಟ್ಟಿದೆ. 2003ರಲ್ಲಿ ಶಿವಮೊಗ್ಗದ ಪ್ರಾಣಿ ಸಂಗ್ರಹಾಲಯದಿಂದ ಕರೆತರಲಾಗಿರುವ ರಾಜ ಹುಲಿಗೆ ವಯಸ್ಸಾದ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಬಳಲಿದ್ದು, ನಾಲ್ಕು ತಿಂಗಳಿಂದ ಆಹಾರ ಸೇವನೆಯ ಪ್ರಮಾಣ ಮಾತ್ರವಲ್ಲದೆ ಚಲನವಲನವನ್ನು ತುಸು ಕಡಿಮೆ ಮಾಡಿದ್ದ. ಪಿಲಿಕುಳಕ್ಕೆ ಆಗಮಿಸಿದ್ದ ಸಂದರ್ಭ ಸುಮಾರು 280 ಕೆ.ಜಿ. ತೂಕವಿದ್ದ ರಾಜ ದಿನಕ್ಕೆ 10 ಕೆಜಿ […]

ಡಾ| ರಂಗನಾಥ್ ಎಸ್. ಶೆಟ್ಟಿ ಜೋಗೇಶ್ವರಿ ನಿಧನ

Tuesday, April 1st, 2014
Dr.Ranganath Shetty

ಮುಂಬಯಿ :  ಉಪನಗರ ಜೋಗೇಶ್ವರಿ ಪೂರ್ವದ ಪ್ರಸಿದ್ಧ ವೈದ್ಯಾಧಿಕಾರಿ, ಡಾ| ರಂಗನಾಥ್ ಎಸ್.ಶೆಟ್ಟಿ (68.) ಅವರು ಇಂದಿಲ್ಲಿ ಸೋಮವಾರ (31.03.2014) ಮುಂಜಾನೆ ತನ್ನ ಸ್ವನಿವಾಸ ಗೋರೆಗಾಂವ್ ಪೂರ್ವದ ಪೇರುಭಾಗ್ ಅಲ್ಲಿನ ಧನವಂತಿ ಅಪಾರ್ಟ್ ಮೆಂಟ್ ನ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ಮೂಲತಃ ಮಂಗಳೂರು ಬಳ್ಕುಂಜೆ ಸನಿಹದ ಮುಂಡ್ಕೂರು ಉಳೆಪಾಡಿ ಕಲೆಂಬಿ ನಿವಾಸದವರಾಗಿದ್ದ ರಘುನಾಥ್ ಶೆಟ್ಟಿ ಹಲವಾರು ವರ್ಷಗಳಿಂದ ಜೋಗೇಶ್ವರಿ ಪೂರ್ವದಲ್ಲಿ ಪಾರಸ್ ನಗರದಲ್ಲಿ ಕ್ಲಿನಿಕ್ ಮೂಲಕ ವೈದ್ಯಕೀಯ ಸೇವಾ ನಿರತರಾಗಿದ್ದರು. ಮೃತರು ಪತ್ನಿ ಶ್ರೀಮತಿ ಸುಕನ್ಯಾ ಆರ್.ಶೆಟ್ಟಿ, ಏಕೈಕ ಸುಪುತ್ರಿ ಡಾ| […]

ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಿಧಿವಶ

Tuesday, December 10th, 2013
Srikantadatta Narasimharaja Wodeyar

ಬೆಂಗಳೂರು : ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರು ಮಂಗಳವಾರ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ನಗರದ ವಿಕ್ರಮ್ ಆಸ್ಪತ್ರೆಯಲ್ಲಿ ಒಂದು ವಾರದ ಹಿಂದೆ ಎದೆನೋವಿನ ಕಾರಣ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದಿದ್ದರು. ಮಂಗಳವಾರ ಮಧ್ಯಾಹ್ನ ಮನೆಯಲ್ಲಿ ತೀವ್ರ ಎದೆನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ಮಹಾರಾಜರನ್ನು ಕರೆ ತರಲಾಗಿತ್ತು. ಆಸ್ಪತ್ರೆಗೆ ಬರುವಷ್ಟರಲ್ಲೇ ಒಡೆಯರ್ ಅವರು ವಿಧಿವಶರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿರುವ ತುರ್ತು ನಿಗಾ ಘಟಕದಲ್ಲಿ ಒಡೆಯರ್ ಅವರ ಪಾರ್ಥೀವ ಶರೀರವನ್ನು ಇರಿಸಲಾಗಿದೆ. ಒಡೆಯರ್ […]