Blog Archive

ಕಣ್ಣೂರಿನಲ್ಲಿ ಎಬಿವಿಪಿ ಸದಸ್ಯನ ಕೊಲೆ, ಎಸ್‌ಡಿಪಿಐ ಸದಸ್ಯರ ಬಂಧನ

Saturday, January 20th, 2018
kasoragodu

ಕಾಸರಗೋಡು: ಕೇರಳದ ಕಣ್ಣೂರಿನಲ್ಲಿ ಮತ್ತೆ ಮತೀಯ ದ್ವೇಷಕ್ಕೆ ಕೊಲೆಯೊಂದು ನಡೆದಿದೆ. ಎರಡು ತಿಂಗಳ ಅವಧಿಯಲ್ಲಿ ಕಣ್ಣೂರಿನಲ್ಲಿ ನಡೆದ ಎರಡನೇ ಕೊಲೆ ಇದಾಗಿದೆ. ಶುಕ್ರವಾರ ಎಬಿವಿಪಿ ಸಂಘಟನೆಯ ಸದಸ್ಯ ಶ್ಯಾಮ್ ಪ್ರಸಾದ್ ಎಂಬುವನನ್ನು ದುಷ್ಕರ್ಮಿಗಳು ಕೊಲೆಗೈದಿದ್ದು, ಈ ಸಂಬಂಧ ಎಸ್‌ಡಿಪಿಐ ಸಂಘಟನೆಯ ನಾಲ್ಕು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಕಣ್ಣೂರಿನಲ್ಲಿ ಮಚ್ಚಿನಿಂದ ಕೊಚ್ಚಿ ಎಬಿವಿಪಿ ಕಾರ್ಯಕರ್ತನ ಕೊಲೆ ಕಣ್ಣೂರಿನ ಪೆರವೂರ್ ಎಂಬಲ್ಲಿ ಹತ್ಯೆ ನಡೆದಿದ್ದು, ಬೈಕ್‌ನಲ್ಲಿ ತನ್ನ ಪಾಡಿಗೆ ಬರುತ್ತಿದ್ದ ಶ್ಯಾಮ್‌ನನ್ನು ಅಡ್ಡಗಟ್ಟಿದ ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದ 3 ಜನ […]

ಸಚಿವ ಖಾದರ್ ವಿರುದ್ಧ ಕೊಲೆಗೀಡಾದ ಇಲ್ಯಾಸ್ ಪತ್ನಿ ವಾಗ್ದಾಳಿ…

Saturday, January 20th, 2018
iliyas

ಮಂಗಳೂರು: ಟಾರ್ಗೆಟ್ ಗ್ರೂಪ್‌ನ ಇಲ್ಯಾಸ್ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಇಲ್ಯಾಸ್ ಪತ್ನಿ ಪರ್ಜಾನಾ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜ. 13ರಂದು ತಾನಿದ್ದ ಪ್ಲಾಟ್‌ನಲ್ಲಿ ಪುಟ್ಟ ಮಗುವಿನ ಎದುರೇ ಟಾರ್ಗೆಟ್ ಗ್ರೂಪ್‌ನ ಇಲ್ಯಾಸ್ ಬರ್ಬರವಾಗಿ ಕೊಲೆಗೀಡಾಗಿದ್ದ. ಕೊಲೆ ನಡೆದು ವಾರ ಕಳೆಯುತ್ತಿದೆ. ಈಗ ಇಲ್ಯಾಸ್ ಪತ್ನಿ ಉಳ್ಳಾಲದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಸಚಿವ ಖಾದರ್‌ರತ್ತ ಬೆರಳು ತೋರಿಸಿದ್ದಾರೆ. ಚುನಾವಣೆ ಬಂದಾಗ ನನ್ನ ಗಂಡ ಬೇಕಿತ್ತು, ಗಂಡ ಇರುವಾಗ ಮನೆ ಬಾಗಿಲಿಗೆ […]

‘ಮಂಗಳೂರು ಉತ್ತರ’ದಲ್ಲಿ ಶಾಸಕ ಬಾವಾ ವಿರುದ್ಧ ಬಿಜೆಪಿ ಅಭ್ಯರ್ಥಿ ಯಾರು?

Friday, January 19th, 2018
rajashekarananda-swami

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ ಅತ್ಯಂತ ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಅಥವಾ ಸುರತ್ಕಲ್ ಕೂಡಾ ಒಂದು. ಕೋಮು ಸೂಕ್ಷ್ಮ ಪ್ರದೇಶ ಎಂದೇ ಗುರುತಿಸಲಾಗುವ ಈ ಕ್ಷೇತ್ರ ಹಿಂದೆ ಬಿಜೆಪಿಯ ಭದ್ರಕೋಟೆಯಾಗಿತ್ತು. ಆದರೆ ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಭದ್ರಕೋಟೆಯನ್ನು ಛಿದ್ರಗೊಳಿಸಿ ಕಾಂಗ್ರೆಸ್ ಇಲ್ಲಿ ವಿಜಯದ ನಗೆ ಬೀರಿತ್ತು. ಪ್ರಸ್ತುತ ಕಾಂಗ್ರೆಸ್ ನ ಮೊಯ್ದೀನ್ ಬಾವಾ ಇಲ್ಲಿನ ಶಾಸಕರು. ಮಂಗಳೂರು ಉತ್ತರ ಕ್ಷೇತ್ರಕ್ಕೆ ಬಂದರೆ […]

ಸಮಾನ ನಾಗರಿಕ ಸಂಹಿತೆ ಜಾರಿಗೆ ಯತ್ನ:ಸಚಿವ ಹೆಗಡೆ

Friday, January 19th, 2018
vidhyadisha-thirtha

ಉಡುಪಿ: ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಲು ಯತ್ನಿಸಲಾಗುವುದು ಎಂದು ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಹೇಳಿದರು. ಶ್ರೀಕೃಷ್ಣ ಮಠದಲ್ಲಿ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಪರ್ಯಾಯ ಪೂಜಾಧಿಕಾರವನ್ನು ವಹಿಸಿಕೊಂಡ ದಿನ ಗುರುವಾರವೇ ಜ್ಞಾನಸತ್ರ ಮತ್ತು ಸ್ವಚ್ಛತಾ ಅಭಿಯಾನ ಉದ್ಘಾಟನೆಗೊಂಡ ಸಂದರ್ಭ ಪರ್ಯಾಯ ಶ್ರೀಗಳು ವಿದ್ಯೆ, ಕಾನೂನು, ಉದ್ಯೋಗ, ಆರೋಗ್ಯ ಸೇವೆಗಳು ಎಲ್ಲರಿಗೂ ಒಂದೇ ತೆರನಾಗಿ ಸಿಗುವಂತಹ ಸಮಾನ ನಾಗರಿಕ ಸಂಹಿತೆ ಜಾರಿ ಗೊಳ್ಳಬೇಕು ಎಂದು ಹಾರೈಸಿದಾಗ ಸಚಿವರು ಈ ರೀತಿ ಪ್ರತಿಕ್ರಿಯೆ ನೀಡಿದರು. ದೇಶಕ್ಕೆ ಒಂದು […]

ಕಾಂಗ್ರೆಸ್‌ ವಿರುದ್ಧ ಸೆಣಸಲು ಅಭ್ಯರ್ಥಿ ಹುಡುಕುತ್ತಿದೆ ಬಿಜೆಪಿ

Friday, January 19th, 2018
udupi

ಉಡುಪಿ: ಶ್ರೀ ಕೃಷ್ಣನ ನಾಡು ಉಡುಪಿಯಲ್ಲಿ ರಾಜಕೀಯ ಲೆಕ್ಕಾಚಾರ ಬಿರುಸುಗೊಂಡಿದೆ. ಉಡುಪಿಯಲ್ಲಿ ಪರ್ಯಾಯ ಮಹೋತ್ಸವದ ಸಂಭ್ರಮ ಒಂದೆಡೆಯಾದರೆ ಇನ್ನೊಂದೆಡೆ ರಾಜಕೀಯ ಪಕ್ಷಗಳು ಚುನಾವಣಾ ಅಖಾಡಕ್ಕಿಳಿಯಲು ಸಜ್ಜಾಗುತ್ತಿವೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಕಣಕ್ಕಿಳಿಯಲಿರುವ ಅಭ್ಯರ್ಥಿಗಳು ಯಾರು ಎಂಬ ಲೆಕ್ಕಾಚಾರ ಬಿರುಸಿನಿಂದ ಸಾಗಿದೆ. ಉಡುಪಿ ರಾಜಕೀಯಕ್ಕೆ ತನ್ನದೇ ಆದ ಇತಿಹಾಸವಿದೆ. ವಿ.ಎಸ್. ಆಚಾರ್ಯ, ಯು.ಆರ್. ಸಭಾಪತಿ , ಮನೋರಮಾ ಮಧ್ವರಾಜ್ ಯಂತಹ ಘಟಾನುಘಟಿ ರಾಜಕಾರಣಿಗಳು ಈ ಜಿಲ್ಲೆಯಿಂದ ಗೆದ್ದು ಇತಿಹಾಸ […]

ಉಪ ರಾಷ್ಟ್ರಪತಿ ಚಪ್ಪಲಿಯೇ ನಾಪತ್ತೆ… ಮುಜುಗರಕ್ಕೀಡಾದ ಬಿಜೆಪಿ ಸಂಸದ

Friday, January 19th, 2018
venkaih-naidu

ಬೆಂಗಳೂರು: ಇಂದು ನಗರದಲ್ಲಿ ನಡೆಯುತ್ತಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ್ದ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ತಮ್ಮ ಚಪ್ಪಲಿಗಾಗಿ ಹುಡುಕಾಟ ನಡೆಸಿದ ಪ್ರಸಂಗ ನಡೆದಿದೆ. ಸಂಸದ ಪಿ.ಸಿ. ಮೋಹನ್ ಅವರ ನಿವಾಸದಲ್ಲಿ ವೆಂಕಯ್ಯ ನಾಯ್ಡು ಅವರು ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದರು. ನಂತರ ಅವರು ಸಂಸದರ ಮನೆಯಿಂದ ಹೊರಬರುತ್ತಿದ್ದಂತೆ ಅವರ ಚಪ್ಪಲಿ ಕಾಣಿಸಲಿಲ್ಲ. ಆ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಚಪ್ಪಲಿಗಾಗಿ ಮನೆ ಸುತ್ತಮುತ್ತ ಹುಡುಕಾಡಿದರೂ ಸಿಗಲಿಲ್ಲ. ಬಳಿಕ ಪಕ್ಕದಲ್ಲಿದ್ದ ಬಾಟಾ ಶೋರೂಂಗೆ ಭದ್ರತಾ ಸಿಬ್ಬಂದಿ ದಾವಿಸಿದ್ದಾರೆ. […]

ಬಿಪಿಎಲ್ ಕಾರ್ಡ್ ಸಮಸ್ಯೆ ಬಗೆಹರಿಸಿದ ಶ್ರೇಯಸ್ಸು ನಮ್ಮದು: ಖಾದರ್

Friday, January 19th, 2018
u-t-kader

ಮಂಗಳೂರು :ಹಿಂದಿನ ಬಿಜೆಪಿ ಸರ್ಕಾರ ಬಿಪಿಎಲ್ ಕಾರ್ಡ್ ಸರಿಯಾಗಿ ವಿತರಿಸಿಲ್ಲ ಹಾಗಾಗಿ ಸಾಕಷ್ಟು ಗೊಂದಲಗಳು ಉಂಟಾಗಿತ್ತು, ಆದರೆ ಕಾಂಗ್ರೆಸ್ ಸರ್ಕಾರ 33 ಲಕ್ಷ 70 ಸಾವಿರ ಬಿಪಿಎಲ್ ಕಾರ್ಡ್ ಗಳನ್ನು ವಿತರಿಸಿದ್ದೇವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೂವರೆ ಕೋಟಿ ಜನರು ಪಡಿತರ ಸೌಲಭ್ಯ ಪಡೆಯುತ್ತಿದ್ದಾರೆ ಎಲ್ಲವನ್ನೂ ಪಾರದರ್ಶಕ ಅನ್ ಲೈನ್ ವ್ಯವಸ್ಥೆಯಡಿ ತಂದಿದ್ದೇವೆ ಲಕ್ಷಾಂತರ ಬೋಗಸ್ ಕಾರ್ಡ್ ಪತ್ತೆಹಚ್ಚಿದ್ದೇವೆ […]

ರಸ್ತೆ ಅಗೆದು ಜನರನ್ನು ವಂಚಿಸುತ್ತಿರುವ ಪಾಲಿಕೆ ಮತ್ತು ಶಾಸಕರು- ಡಿ ವೇದವ್ಯಾಸ ಕಾಮತ್

Wednesday, January 17th, 2018
strike

ಮಂಗಳೂರು: ತಿಂಗಳುಗಟ್ಟಲೆ ರಸ್ತೆ ಅಗೆದು ಕಾಮಗಾರಿ ಯಾವಾಗ ಮುಗಿಯುತ್ತೆ ಎನ್ನುವ ಸ್ಪಷ್ಟ ಕಲ್ಪನೆ ಇಲ್ಲದೆ ನೂರಾರು ಜನ ನಿತ್ಯ ಪ್ರಯಾಣಿಸುವ ರಸ್ತೆಯನ್ನು ಬಂದ್ ಮಾಡಿರುವ ಮೇಯರ್ ಹಾಗೂ ಶಾಸಕರಿಗೆ ಜನರ ಸಮಸ್ಯೆ ಅರ‍್ಥವಾಗುವುದಿಲ್ಲವೇ ಎಂದು ಮಂಗಳೂರು ನಗರ ದಕ್ಷಿಣದ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಪ್ರಶ್ನಿಸಿದ್ದಾರೆ. ಅವರು ಬೋಳೂರು ವಾರ‍್ಡ್ 27ರಲ್ಲಿ ಸ್ಥಳೀಯ ನಾಗರಿಕರು ಮತ್ತು ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ರಸ್ತೆ ಕಾಮಗಾರಿಗಳನ್ನು ನಿರ‍್ದೀಷ್ಟ ಸಮಯದ ಒಳಗೆ ಮುಗಿಸುವ ಪರಿಜ್ಞಾನ ಜನಪ್ರತಿನಿಧಿಗಳಿಗೆ ಇರಬೇಕು. ಆದರೆ […]

ಬಂಟ್ವಾಳ ತಾಲೂಕಿನಲ್ಲಿ “ಪರಿವರ್ತನೆಗೆ ಗ್ರಾಮದೆಡೆಗೆ ಬಿಜೆಪಿ ನಡಿಗೆ”ಯ ಮೂರನೆ ದಿನದ ಪಾದಯಾತ್ರೆ

Wednesday, January 17th, 2018
Bantwala

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ನೇತೃತ್ವದಲ್ಲಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಮುಂದಾಳತ್ವದಲ್ಲಿ ಜ.14ರಂದು ಆರಂಭವಾದ 13 ದಿನಗಳ ಬಂಟ್ವಾಳದ “ಪರಿವರ್ತನೆಗೆ ಗ್ರಾಮದೆಡೆಗೆ ಬಿಜೆಪಿ ನಡಿಗೆ”ಯ ಮೂರನೆ ದಿನದ ಪಾದಯಾತ್ರೆಯು ಮಂಗಳವಾರ ರಾಯಿ ಪೇಟೆಯಲ್ಲಿ ಮತ್ತೆ ಆರಂಭವಾಯಿತು. ಕೈತ್ರೋಡಿ ಕ್ವಾಟ್ರಸ್‍ರಸ್ತೆಯಲ್ಲಿ ಪಂಜಿಕಲ್ಲಿನ ಬಾಲೇಶ್ವರಗರಡಿಗೆ ತಲುಪಿದಾಗ ಅಲ್ಲಿ ನೆರೆದಿದ್ದ ಪಂಜಿಕಲ್ಲಿನ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ರಾಜೇಶ್ ನಾಯ್ಕ್ ಉಳಿಪ್ಪಾಡಿಯವರಿಗೆ ಹೂ ಹಾರ ಹಾಕುವ ಮೂಲಕ ಸ್ವಾಗತಿಸಿದರು. ಅಲ್ಲಿಂದ ಪಾದಯಾತ್ರೆಯು ಮುಂದುವರಿದು ರಸ್ತೆಯ […]

ಕಾಂಗ್ರೆಸ್‌ v/s ಬಿಜೆಪಿ ನೇರ ಹಣಾಹಣಿ

Wednesday, January 17th, 2018
j-r-lobo

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಕುತೂಹಲ ಕೆರೆಳಿಸಿರುವ ಕ್ಷೇತ್ರ ಮಂಗಳೂರು ದಕ್ಷಿಣ. ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಇಲ್ಲಿ ನೇರಾನೇರ ಸ್ಪರ್ಧೆ. ಕ್ಷೇತ್ರದ ಹಾಲಿ ಶಾಸಕರು ಕಾಂಗ್ರೆಸ್‌ನ ಜೆ.ಆರ್.ಲೋಬೋ. ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ಅವರು ಕ್ಷೇತ್ರದ ಟಿಕೆಟ್‌ಗೆ ಪ್ರಯತ್ನ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರು ಅವರಾದರೂ ಜೆ.ಆರ್.ಲೋಬೋಗೆ ಟಿಕೆಟ್ ನಿರಾಕರಿಸಲು ಕಾರಣಗಳು ಇಲ್ಲ. ಬಿಜೆಪಿ ಕ್ಷೇತ್ರದಿಂದ ಯುವ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದೆ ಎಂಬುದು ಸದ್ಯದ ಸುದ್ದಿ. ಉದ್ಯಮಿಗಳಾದ […]