Blog Archive

ಉಳ್ಳಾಲ, ಪುತ್ತೂರು, ಬಂಟ್ವಾಳ ನಗರಸಭೆ ಚುನಾವಣೆ

Friday, August 31st, 2018
election

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ನಗರಸಭೆ, ಪುತ್ತೂರು ನಗರಸಭೆ ಹಾಗೂ ಬಂಟ್ವಾಳ ಪುರಸಭೆಗೆ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ಮುಂಜಾನೆಯಿಂದಲೇ ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನದಲ್ಲಿ ಭಾಗಿಯಾಗಿದ್ದಾರೆ. ಉಳ್ಳಾಲ ನಗರಸಭೆಯ 31 ವಾರ್ಡುಗಳಿಗೆ 102 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇಲ್ಲಿ 44132 ಮತದಾರರಿದ್ದು, 43 ಮತಗಟ್ಟೆಗಳಲ್ಲಿ 43 ಇವಿಎಂ ವ್ಯವಸ್ಥೆ ಮಾಡಲಾಗಿದೆ. 172 ಮತಗಟ್ಟೆ ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಂಟ್ವಾಳ ಪುರಸಭೆಯ 27 ವಾರ್ಡ್ಗಳಿಗೆ 71 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇಲ್ಲಿ 34102 ಮತದಾರರಿದ್ದು, 32 ಮತಗಟ್ಟೆಗಳಲ್ಲಿ […]

ಉಳ್ಳಾಲದಲ್ಲಿ ಸುಮಾರು 41 ಮನೆಗಳು ಹಾನಿ.. ಪರ್ಯಾಯ ನಿವೇಶನ ಗುರುತಿಸಿ ನೀಡಲು ಖಾದರ್ ಆದೇಶ

Tuesday, July 17th, 2018
u-t-kadher

ಮಂಗಳೂರು: ಉಳ್ಳಾಲ, ಸೋಮೇಶ್ವರ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಲ್ಲಿ ಕಡಲಕೊರೆತ ತೀವ್ರಗೊಂಡು ಸುಮಾರು 41 ಮನೆಗಳು ಸಂಪೂರ್ಣ ಹಾನಿಗೊಂಡಿದ್ದು, ಇವರಿಗೆ ಪರ್ಯಾಯ ನಿವೇಶನ ಗುರುತಿಸಿ ನೀಡಲು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್ ಆದೇಶಿಸಿದ್ದಾರೆ. ಅವರು ಈ ಬಗ್ಗೆ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿ, ಕಡಲ್ಕೊರೆತದಿಂದ ಹೆಚ್ಚು ಅಪಾಯದಲ್ಲಿರುವ ಇಲ್ಲಿನ ನಿವಾಸಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಮುಂದಿನ 15 ದಿನದಲ್ಲಿ ಸೂಕ್ತವಾದ ನಿವೇಶನ ಗುರುತಿಸಿ, ಮಂಜೂರುಗೊಳಿಸಬೇಕು ಎಂದು ಮಂಗಳೂರು ತಹಸೀಲ್ದಾರ್ಗೆ ತಿಳಿಸಿದರು. ಉಳ್ಳಾಲ, ಸೋಮೇಶ್ವರ, ಸಸಿಹಿತ್ಲು […]

ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

Monday, July 16th, 2018
arrested

ಮಂಗಳೂರು: ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಳ್ಳಾಲ‌ ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ‌ ಧರ್ಮನಗರದ ಬೊಟ್ಟುವಿನ ನಿವಾಸಿಯಾದ ಮುಕ್ತಾರ್ (24) ಬಂಧಿತ ಆರೋಪಿ. ಈತನ ವಿರುದ್ಧ ಉಳ್ಳಾಲ ಮತ್ತು ಬರ್ಕೆ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಹಾಗೂ ಹಲ್ಲೆ ಪ್ರಕರಣದ ಮೇಲೆ ಕೇಸ್ ದಾಖಲಾಗಿತ್ತು. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯದಿಂದ 4 ಬಾರಿ ವಾರಂಟ್ ಜಾರಿಯಾದರೂ ಮುಕ್ತಾರ್ ಕೋರ್ಟ್ಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದಾರೆ.

ಭಾರಿ ಮಳೆ..ಉಳ್ಳಾಲದ ಹಳೆ ರೈಲ್ವೆ ನಿಲ್ದಾಣದ ಕಟ್ಟಡ ಕುಸಿತ!

Saturday, July 14th, 2018
ullal-station

ಮಂಗಳೂರು: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಮಂಗಳೂರು ಹೊರ ವಲಯದಲ್ಲಿರುವ ಉಳ್ಳಾಲದ ಹಳೆರೈಲ್ವೆ ನಿಲ್ದಾಣದ ಕಟ್ಟಡ ಕುಸಿದಿದೆ. ಇಂದು ಸುರಿದ ಭಾರಿ ಗಾಳಿಮಳೆಗೆ ಕಟ್ಟಡದ ಛಾವಣಿ ಕುಸಿದಿದೆ. ಈ ವೇಳೆ ನಿಲ್ದಾಣದಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಕಟ್ಟಡ ಶಿಥಿಲಗೊಂಡಿದ್ದ ಹಿನ್ನೆಲೆಯಲ್ಲಿ ಹೊಸ ನಿಲ್ದಾಣ ನಿರ್ಮಿಸಲಾಗಿತ್ತು. ನಿಲ್ದಾಣದ ಚಟುವಟಿಕೆಗಳೆಲ್ಲವೂ ಹೊಸ ನಿಲ್ದಾಣದಲ್ಲಿಯೇ ನಡೆಯುತ್ತಿದ್ದವು. ಈ ಕಟ್ಟಡದಲ್ಲಿ ಇತ್ತೀಚಿನವರೆಗೆ ಕ್ಯಾಂಟೀನ್ ಮಾತ್ರ ಕಾರ್ಯಾಚರಿಸುತ್ತಿದ್ದು, ಇತ್ತೀಚೆಗೆ ಇದು ಕೂಡ ಹೊಸ ನಿಲ್ದಾಣಕ್ಕೆ ಸ್ಥಳಾಂತರಗೊಂಡಿತ್ತು.

ಉಳ್ಳಾಲದಲ್ಲಿ ಗುಡ್ಡ ಕುಸಿತ..ಎರಡು ಮನೆಗೆ ಹಾನಿ!

Wednesday, June 20th, 2018
ullal

ಮಂಗಳೂರು: ಅಂಬ್ಲಮೊಗರು ಮದಕ ಬಳಿ‌ ಗುಡ್ಡ ಕುಸಿದು ಎರಡು ಮನೆಗೆ ಹಾನಿಯಾಗಿದೆ. ಸುಮಾರು 10ಕ್ಕೂ ಹೆಚ್ಚು ಮನೆಗಳನ್ನು ಸಂಪರ್ಕಿಸುವ ರಸ್ತೆಗೆ ಗುಡ್ಡ ಕುಸಿತವಾಗಿದೆ. ಮನೆಗಳಿಗೆ ಸಂಪರ್ಕ ಇಲ್ಲದಂತಾಗಿ ಮನೆ ಮಂದಿ ಪರದಾಡುವ ಸ್ಥಿತಿ‌ ನಿರ್ಮಾಣವಾಗಿದೆ. ನಾಲ್ಕು ಮನೆಗಳು ಅಪಾಯದಲ್ಲಿದ್ದು, ಮದಕ ನಿವಾಸಿಗಳಾದ ಅಬ್ಬಾಸ್ ಮತ್ತು ರಝಾಕ್ ಎಂಬವರ ಮನೆಗೆ ಹಾನಿಯಾಗಿದೆ.

ಅನ್ಯಧರ್ಮಿಯ ಪತ್ನಿಯ ಮನೆಗೆ ಬಂದ ಯುವಕನಿಗೆ ಆತನ ಪತ್ನಿಯಿಂದ ಹಲ್ಲೆ..!

Wednesday, June 13th, 2018
assulted

ಮಂಗಳೂರು: ಅನ್ಯಧರ್ಮಿಯ ಪತ್ನಿಯ ಮನೆಗೆ ಬಂದ ಯುವಕನಿಗೆ ಆತನ ಪತ್ನಿ ಮತ್ತು ಮನೆಯವರಿಂದ ಹಲ್ಲೆ ನಡೆದ ಘಟನೆ ಮಂಗಳೂರಿನ ತೊಕ್ಕೊಟ್ಟುವಿನ ಕುಂಪಲದ ಚಿತ್ರಾಂಜಲಿ ನಗರದಲ್ಲಿ ನಡೆದಿದೆ. ಸುಳ್ಯದ ಸಯ್ಯದ್ ಎಂಬಾತನ ಮೇಲೆ ಹಲ್ಲೆ ನಡೆದಿದ್ದು, ಈತ ಆರು ತಿಂಗಳ ಹಿಂದೆ ಹಿಂದು ಧರ್ಮಿಯ ಯುವತಿಯನ್ನು ಯುವಕ ಮದುವೆಯಾಗಿದ್ದ. ನಂತರ ಮನೆಯವರ ವಿರೋಧದಿಂದ ದೂರವಾಗಿದ್ದರು. ಮತ್ತೆ ಈತ ತನ್ನ ಪತ್ನಿಯ ಮನೆಗೆ ಹೋದಾಗ, ಆತನ ಮೇಲೆ ಹಲ್ಲೆ ನಡೆದಿದೆ. ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಸುಮಾರು 20 ಸಾವಿರ ಮತಗಳ ಅಂತರದಲ್ಲಿ ಯು.ಟಿ ಖಾದರ್ ಗೆಲುವು

Tuesday, May 15th, 2018
kader-won

ಮಂಗಳೂರು: ದ.ಕ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಭಾರೀ ಮುನ್ನಡೆ ಸಾಧಿಸಿರುವ ನಡುವೆ ಉಳ್ಳಾಲ ಕ್ಷೇತ್ರದ ಅಭ್ಯರ್ಥಿ ಯು.ಟಿ ಖಾದರ್ ಗೆಲುವು ಸಾಧಿಸಿದ್ದಾರೆ. ಸುಮಾರು 20 ಸಾವಿರ ಮತಗಳ ಅಂತರದಲ್ಲಿ ಯು.ಟಿ ಖಾದರ್ ಅವರು ತಮ್ಮ ಸ್ಪರ್ಧಿ ಬಿಜೆಪಿಯ ಸಂತೋಷ್ ಕುಮಾರ್ ರೈ ಅವರ ವಿರುದ್ಧ ಗೆಲುವು ದಾಖಲಿಸಿದ್ದಾರೆ.

ಉಳ್ಳಾಲದಲ್ಲಿ ಜೆಡಿಎಸ್ ಅಶ್ರಫ್ ಪರ ಭರ್ಜರಿ ಪ್ರಚಾರ

Thursday, May 3rd, 2018
ashraf

ಮಂಗಳೂರು: ಆಹಾರ ಸಚಿವ ಯ.ಟಿ. ಖಾದರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮಂಗಳೂರು ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಚುರುಕು ಪಡೆದುಕೊಂಡಿದೆ. ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಖಾದರ್ ನಾಲ್ಕನೇ ಬಾರಿ ಆಯ್ಕೆಯಾಗಲು ಮತದಾರರನ್ನು ಎದುರಿಸುತ್ತಿದ್ದಾರೆ. ಬಿಜೆಪಿಯಿಂದ ಯುವ ನಾಯಕ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬೋಳಿಯಾರ್ ಸಂತೋಷ್ ರೈ ಸ್ಪರ್ಧೆ ನಡೆಸುತ್ತಿದ್ದಾರೆ. ಕಳೆದ ಬಾರಿ 29 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿರುವ ಖಾದರ್ ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳಿಂದ ಕಠಿಣ […]

ಉಳ್ಳಾಲ,ಸೋಮೇಶ್ವರ,ಉಚ್ಚಿಲದಲ್ಲಿ ತೀವ್ರಗೊಂಡ ಕಡಲಿನಬ್ಬರ

Monday, April 23rd, 2018
ullal-beach

ಉಳ್ಳಾಲ: ಹವಾಮಾನ ವೈಪರಿತ್ಯದಿಂದಾಗಿ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಪದೇಶಗಳಲ್ಲಿ ಕಡಲಿನ ಅಬ್ಬರ ತೀವ್ರಗೊಂಡಿದ್ದು, ಬೃಹತಾಕರಾದ ಅಲೆಗಳು ಸಮುದ್ರ ತೀರಕ್ಕೆ ಅಪ್ಪಳಿಸುತ್ತಿವೆ. ಕಡಲ್ಕೊರೆತ ತೀವ್ರಗೊಂಡ ಪರಿಣಾಮ ಉಚ್ಚಿಲ ಪ್ರದೇಶದ ಕೆಲವು ಮನೆಗಳಿಗೆ ಹಾನಿಯಾಗಿದೆ. ಶನಿವಾರ ರಾತ್ರಿಯಿಂದಲೇ ಈ ಭಾಗದಲ್ಲಿ ಕಡಲ್ಕೊರೆತದ ತೀವ್ರತೆ ವೀಪರೀತವಾಗಿದ್ದು, ಕಡಲ ತಡಿಯ ಜನರು ಭಯಭೀತರಾಗಿದ್ದಾರೆ. ಸೋಮೇಶ್ವರ, ಉಚ್ಚಿಲದಲ್ಲಿ ನಾಲ್ಕು ಮನೆಗಳಿಗೆ ಹಾನಿಯಾಗಿದ್ದು, ರವಿವಾರ ಮಧ್ಯಾಹ್ನವೇ ಉಳ್ಳಾಲ ಸೋಮೇಶ್ವರ ಪ್ರದೇಶದಲ್ಲಿ ಕಡಲು ಪ್ರಕ್ಷುಬ್ದಗೊಂಡಿದ್ದು, ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಪ್ರತಿ ವರ್ಷ ಮಳೆಗಾಲ ಆರಂಭದ ಬಳಿಕವಷ್ಟೇ […]

ಮೀನಿಗಿಂತಲೂ ದುಬಾರಿ ಆಯ್ತೇ ಮರಳು… ನೋಡಿ ಹೀಗಿದೆ ಅಕ್ರಮ ಸಾಗಾಟ!

Monday, March 26th, 2018
sand-ullal

ಮಂಗಳೂರು: ಮೀನು ಸಾಗಾಟದ ರೀತಿಯಲ್ಲಿ ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣವೊಂದು ಬಯಲಿಗೆ ಬಂದಿದೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ವಿಜಯ ಬ್ಯಾಂಕ್ ಸಮೀಪ ಇರುವ ಹೊಗೆಹಿತ್ಲು ಎಂಬಲ್ಲಿ ಕಂಟೈನರ್ ಹಾಗೂ ಮೀನು ಸಾಗಾಟದ ಮುಚ್ಚಿದ ಲಾರಿಯಲ್ಲಿ ಅಕ್ರಮವಾಗಿ ಸಾಮಾನ್ಯ ಮರಳನ್ನು ಗುಪ್ತವಾದ ರೀತಿಯಲ್ಲಿ ಹೊರ ನೋಟಕ್ಕೆ ಮೀನು ಸಾಗಾಟ ಮಾಡುವ ರೀತಿಯಲ್ಲಿ ಕೇರಳದ ಕಡೆಗೆ ಮಾರಾಟ ಮಾಡಲು ತುಂಬಿಸಿ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಉಳ್ಳಾಲ ಠಾಣಾ ಪೊಲೀಸ್ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್. ಮತ್ತು […]