Blog Archive

ಚಿಕ್ಕಮಗಳೂರಲ್ಲಿ ಭಾರಿ ಮಳೆ..ಭದ್ರಾ ನದಿ ಸುತುವೆ ಮುಳುಗಡೆಯ ಸಾಧ್ಯತೆ!

Saturday, July 7th, 2018
chikmagaluru

ಚಿಕ್ಕಮಗಳೂರು: ಚಿಕ್ಕಮಗಳೂರಲ್ಲಿ ನಿನ್ನೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೊರನಾಡು ಸಮೀಪದ ಹೆಬ್ಬಾಳೆ ಸೇತುವೆಗೆ ಭದ್ರಾ ನದಿಯ ನೀರು ಅಪ್ಪಳಿಸುತ್ತಿರುವ ಹಿನ್ನೆಲೆಯಲ್ಲಿ ಸುತುವೆ ಮುಳುಗಡೆಯ ಸಾಧ್ಯತೆ ಕಂಡುಬರುತ್ತಿದೆ. ಹೆಬ್ಬಾಳೆ ಸೇತುವೆ ಮುಳುಗಡೆಯಾದಲ್ಲಿ ಕಳಸ – ಹೊರನಾಡು ರಸ್ತೆ ಸಂಚಾರಕ್ಕೆ ಸಾಧ್ಯವಾಗದೆ ಸಂಪರ್ಕಕ್ಕೆ ತಡೆಯಾಗಲಿದೆ. ಶುಕ್ರವಾರ ರಾತ್ರಿಯಿಂದ ಕುದುರೆಮುಖ, ಕಳಸ, ಹೊರನಾಡು ಸುತ್ತಮುತ್ತ ನಿರಂತರ ಮಳೆಯ ಹಿನ್ನೆಲೆಯಲ್ಲಿ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಹಲವೆಡೆ ರಸ್ತೆ ಸಂಪರ್ಕ […]

ವೃದ್ಧರ ಆಸೆಯನ್ನು ಈಡೇರಿಸಿ ಮಾನವೀಯತೆ ಮೆರೆದ ಎಸ್ಪಿ ಅಣ್ಣಾಮಲೈ

Wednesday, July 4th, 2018
sp-annamalai

ಚಿಕ್ಕಮಗಳೂರು: ನೆಚ್ಚಿನ ವ್ಯಕ್ತಿವೊಬ್ಬರನ್ನು ನೋಡಬೇಕೆಂದು ಪಟ್ಟು ಹಿಡಿದಿದ್ದ ವೃದ್ಧರ ಆಸೆಯನ್ನು ಈಡೇರಿಸಿ ಮಾನವೀಯತೆ ಮೆರೆದಿದ್ದಾರೆ ಚಿಕ್ಕಮಗಳೂರಿನ ಎಸ್ಪಿ ಅಣ್ಣಾಮಲೈ. ಹೌದು..ಕಳೆದೊಂದು ವರ್ಷದಿಂದ ಅಣ್ಣಾಮಲೈ ಅವರನ್ನು ನೋಡಲೇಬೇಕೆಂದು ಚಿಕ್ಕಮಗಳೂರಿನ ಅನ್ನಪೂರ್ಣೇಶ್ವರಿ ವೃದ್ಧಾಶ್ರಮದಲ್ಲಿ ಈ ಹಿರಿಯ ಜೀವಗಳು ಪಟ್ಟು ಹಿಡಿದಿದ್ದರು. ಈಗ ಅವರ ಆಸೆಗೆ ಸಿಂಗಂ ಸ್ಪಂದಿಸಿದ್ದಾರೆ. ಇಂದು ದಿಢೀರ್ನೆ ವೃದ್ಧಾಶ್ರಮಕ್ಕೆ ಭೇಟಿ ನೀಡುವ ಮೂಲಕ ವೃದ್ಧರ ಕುಶಲೋಪರಿ ವಿಚಾರಿಸಿದರು. ನೆಚ್ಚಿನ ವ್ಯಕ್ತಿಯನ್ನು ಕಂಡು ವೃದ್ಧರು ಸಹ ಸಂತೋಷಗೊಂಡು ಕಣ್ಣೀರಿಟ್ಟು ಅಳಲು ತೋಡಿಕೊಂಡರು.

ಮಗ ಸತ್ತ ನೋವು ಮರೆಯಲು ಸೀರೆಯ ಮೇಲೆ ಲಲಿತ ಸಹಸ್ರ ನಾಮ..!

Tuesday, July 3rd, 2018
chik-magaluru

ಚಿಕ್ಕಮಗಳೂರು: ಮಗ ಸತ್ತ ನೋವು ಮರೆಯಲು ತಾಯಿಯೊಬ್ಬಳು ಸೀರೆಯ ಮೇಲೆ ಲಲಿತ ಸಹಸ್ರ ನಾಮವನ್ನು ಬರೆದು ಶೃಂಗೇರಿಯ ಶಾರದಾಂಬೆಗೆ ಅರ್ಪಣೆ ಮಾಡಿರುವ ವಿಡಿಯೋ ಹಾಗೂ ಫೋಟೋ ಇದೀಗ ವೈರಲ್ ಆಗಿದೆ. ತಮಿಳುನಾಡು ಮೂಲದ ಪದ್ಮಾ ಮಂಜುನಾಥ್‌ ಎಂಬುವರೇ ಲಲಿತ ಸಹಸ್ರ ನಾಮ ಬರೆದು ಶಾರದೆಗೆ ಅರ್ಪಣೆ ಮಾಡಿದವರು. ಕಳೆದ ವರ್ಷ ಇವರ ಪ್ರೀತಿಯ ಮಗ ಮೃತಪಟ್ಟಿದ್ದು, ಈ ನೋವನ್ನು ಮರೆಯಲೆಂದೇ ಪದ್ಮಾ ಮಂಜುನಾಥ್ ಸೀರೆಯ ಮೇಲೆ ಸಾವಿರ ನಾಮವನ್ನು ಹೆಣೆದಿದ್ದಾರಂತೆ. ಪದ್ಮಾ ಮಂಜುನಾಥ್ ಅವರು ಬ್ರಹ್ಮಾಂಡ ಪುರಾಣದಲ್ಲಿ […]

ಆಗುಂಬೆ ಘಾಟ್ ನಲ್ಲಿ ಬಸ್ ಸಂಚಾರಕ್ಕೆ ಅನುಮತಿ..!

Saturday, June 30th, 2018
agumbe-gatt

ಉಡುಪಿ: ಆಗುಂಬೆ ಘಾಟ್ ನಲ್ಲಿ ಭೂ ಕುಸಿತದಿಂದಾಗಿ ಕಳೆದೆರಡು ದಿನಗಳ ಹಿಂದೆ ಭಾರೀ ವಾಹನಗಳ ಸಂಚಾರ ನಿಷೇಧವಾಗಿತ್ತು. ಆದರೆ ಇಂದು ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆಗುಂಬೆ ಘಾಟ್ ನಲ್ಲಿ ತಾತ್ಕಾಲಿಕ ದುರಸ್ತಿ ಕಾರ್ಯ ನಡೆದಿದೆ. ಆದ್ದರಿಂದಾಗಿ ಬಸ್ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ. ಉಡುಪಿಯಿಂದ ಶಿವಮೊಗ್ಗ- ಚಿಕ್ಕಮಗಳೂರು ಮಾರ್ಗವಾಗಿ ಬಸ್ ಓಡಾಟ ಶುರುವಾಗಲಿದೆ.

ಪ್ರಾಣಿಯನ್ನು ನುಂಗಿ ರಸ್ತೆಯಲ್ಲಿ ನರಳಾಡಿದ ಹೆಬ್ಬಾವು..!

Tuesday, June 26th, 2018
chikamagaluru

ಚಿಕ್ಕಮಗಳೂರು: ಕೊಟ್ಟಿಗೆಹಾರದ ಮಲೆಮನೆ ಕಾಫಿ ಎಸ್ಟೇಟ್ ನಲ್ಲಿ ಹೆಬ್ಬಾವೊಂದು ಪ್ರಾಣಿಯನ್ನು ನುಂಗಿ ರಸ್ತೆಯಲ್ಲಿ ನರಳಾಡಿದ ಘಟನೆ ನಡೆದಿದೆ. ಬಾರಿ ಗಾತ್ರದ ಹೆಬ್ಬಾವು ಕಾಡು ಕುರಿಯನ್ನು ನುಂಗಿ ರಸ್ತೆಯಲ್ಲಿ ಒದ್ದಾಡುತ್ತಿತ್ತು. ಹೆಬ್ಬಾವು ನೋಡಿ ಭಯಗೊಂಡ ಕಾಫಿ ತೋಟದ ಕಾರ್ಮಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ ಹಾಗೂ ಸ್ನೇಕ್ ಆರೀಫ್ ಹೆಬ್ಬಾವನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆ ಸಿಬ್ಬಂದಿಗಳು ಹೆಬ್ಬಾವನ್ನು ಚಾರ್ಮಾಡಿ ಘಾಡಿಗೆ ಬಿಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲೆಮನೆ ಎಸ್ಟೇಟ್ ನಲ್ಲಿ ಈ ಘಟನೆ […]

ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್‌‌ ಮೇಘನಾ ಶ್ಯಾನ್‍ಬೋಗ್‍ಗೆ ಸನ್ಮಾನ..!

Friday, June 22nd, 2018
woman-pilot

ಚಿಕ್ಕಮಗಳೂರು: ದಕ್ಷಿಣ ಭಾರತದ ಮೊದಲ ಯುದ್ಧ ವಿಮಾನದ ಮಹಿಳಾ ಪೈಲಟ್ ಮೇಘನಾ ಶ್ಯಾನ್‍ಬೋಗ್‍ಗೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬ್ರಾಹ್ಮಣ ಸಮಾಜದ ವತಿಯಿಂದ ಸನ್ಮಾನಿಸಲಾಯ್ತು. ಇಂದು ಹುಟ್ಟೂರಿಗೆ ಬಂದಿದ್ದ ಮೇಘನಾಗೆ ನಗರದ ರಂಗಣ್ಣ ಛತ್ರದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಮೇಘನಾ, ತನ್ನ ಬಾಲ್ಯ, ಕಾಲೇಜು, ಅಡ್ವೆಂಚರಸ್ ಸಾಧನೆ, ಯುದ್ಧ ವಿಮಾನದ ಪೈಲಟ್ ಆಗಲು ಪಡೆದ ಟ್ರೈನಿಂಗ್, ಸೆಲೆಕ್ಷನ್ ಹಾಗೂ ಪಟ್ಟ ಪರಿಶ್ರಮದ ಹಾದಿಯನ್ನ ಮೆಲುಕು ಹಾಕಿದ್ರು. ಇದೇ ವೇಳೆ ನನ್ನ ಅಪ್ಪ-ಅಮ್ಮ ಇಬ್ಬರೂ ಲಾಯರ್ಸ್. ನಮ್ಮ […]

ಜಿಲ್ಲೆಯಲ್ಲಿ ವರುಣನ ಆರ್ಭಟ…ಮುಳುಗಡೆ ಭೀತಿಯಲ್ಲಿ ಶೃಂಗೇರಿ ದೇಗುಲ!

Thursday, June 14th, 2018
shringeri-rain

ಚಿಕ್ಕಮಗಳೂರು: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪರಿಣಾಮ ಶೃಂಗೇರಿ ದೇವಸ್ಥಾನದ ಮೆಟ್ಟಿಲುಗಳ ತನಕ ನೀರು ಬಂದಿದ್ದು ಮುಳುಗಡೆ ಭೀತಿಯಲ್ಲಿದೆ. ಇದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಇನ್ನು ಕಳಸ ಸಮೀಪದ ಹಳುವಳ್ಳಿ ಎಂಬಲ್ಲಿ ರಸ್ತೆಗೆ ನೀರು ನುಗ್ಗಿದ್ದು, ಕಳಸ- ಬಾಳೆಹೊನ್ನೂರು ಸಂಪರ್ಕ ಕಡಿತವಾಗಿದೆ. ನೆಲ್ಲಿಬೀಡು, ಕುದುರೆಮುಖದಲ್ಲಿ ಸೇತುವೆಯ ಮೇಲೆ ನೀರು ಹರಿದ ಪರಿಣಾಮ ಕಳಸ-ಕುದುರೆಮುಖ-ಮಂಗಳೂರು ರಸ್ತೆ ಸಂಪರ್ಕ ಕೂಡಾ ಕಡಿತಗೊಂಡಿದೆ. ಅಲ್ಲದೆ ಕಳಸ-ಹೊರನಾಡು,ಕಳಸ-ಕಳಕೋಡು ಸಂಪರ್ಕ ಕೂಡಾ ಕಡಿತಗೊಂಡಿದೆ. ಕುದುರೆಮುಖ ಅಯ್ಯಪ್ಪ […]

ರಾಜ್ಯದಲ್ಲಿ ಮುಂದುವರಿದ ವರುಣನ ಅಬ್ಬರ… ರೈತರ ಮೊಗದಲ್ಲಿ ಮಂದಹಾಸ

Monday, June 4th, 2018
heavy-rain

ಬೆಂಗಳೂರು: ಭಾನುವಾರವೂ ರಾಜ್ಯದ ಹಲವೆಡೆ ವರುಣನ ಅಬ್ಬರ ಜೋರಾಗಿತ್ತು. ಧಾರವಾಡ, ಚಿಕ್ಕಮಗಳೂರು, ಹಾವೇರಿ, ತುಮಕೂರು ಸೇರಿದಂತೆ ವಿವಿಧೆಡೆ ಧಾರಾಕಾರ ಮಳೆಯಾಗಿದೆ. ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ, ಲಕಮಾಪುರ, ಯಾದವಾಡ ಸೇರಿದಂತೆ ಅನೇಕ ಕಡೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು, ಕೆಲವೆಡೆ ನೆರೆ ಕೂಡ ಬಂದಿದೆ. ತಾಲೂಕಿನ ಉಪ್ಪಿನ ಬೆಟಗೇರಿಯಿಂದ ಹನುಮನಹಾಳಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ನೀರು ತುಂಬಿ ಬಂದಿದ್ದು, ಆ ಮಾರ್ಗ ಸಂಪೂರ್ಣ ಬಂದ್ ಆಗಿತ್ತು. ಚಿಕ್ಕ ಹಳ್ಳ ಇದಾಗಿದ್ದು, ಸೇತುವೆ ಜಲಾವೃತಗೊಂಡಿತ್ತು. ಬೈಕ್ ಸವಾರರು ಧೈರ್ಯ […]

ರಾಜ್ಯದ ಮೈತ್ರಿ ಸರ್ಕಾರದಲ್ಲಿ ಕಿತ್ತಾಟ ಮುಖ್ಯಮಂತ್ರಿ ಜನರ ಬಳಿ ಕ್ಷಮೆ ಕೇಳಬೇಕು : ಶೋಭಾ ಕರಂದ್ಲಾಜೆ

Wednesday, May 30th, 2018
shobha-karandlaje

ಚಿಕ್ಕಮಗಳೂರು: ಹಾಲು ಕೊಡುವ ಹಸು ಯಾರಿಗೆ ಸೇರಬೇಕೆಂದು ರಾಜ್ಯದ ಮೈತ್ರಿ ಸರ್ಕಾರದಲ್ಲಿ ಕಿತ್ತಾಟ ನಡೆಯುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಖಾತೆಗಳಿಗಾಗಿ ಹಗ್ಗ-ಜಗ್ಗಾಟ ನಡೆಸ್ತಿರೋ ರಾಜ್ಯ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ. ಮುಖ್ಯಮಂತ್ರಿಯಂದ್ರೆ ಓರ್ವ ದೊರೆಯ ಜಾಗ. ಅಂತಹ ಜಾಗದಲ್ಲಿರೋ ಮುಖ್ಯಮಂತ್ರಿ ನಾನು ನಾಡಿನ ಜನರ ಮುಲಾಜಿನಲ್ಲಿ ಇಲ್ಲ, ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ ಎಂದಿರೋದು ರಾಜ್ಯದ ಜನತೆಗೆ ಮಾಡಿರೋ ಅಪಮಾನ. ಕೂಡಲೇ ಅವರು ರಾಜ್ಯದ ಜನರ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ. ಕಾಂಗ್ರೆಸ್ಸಿಗೆ ಎಲ್ಲಾ ಇಲಾಖೆಯಲ್ಲಿ ಭ್ರಷ್ಟಾಚಾರ ಮಾಡಿ ಅಭ್ಯಾಸವಾಗಿದೆ. ಅದೇ […]

ಮಧ್ಯರಾತ್ರಿ ಕಾರಿನ ಟಯರ್ ಪಂಕ್ಚರ್: ಸಂಕಷ್ಟದಲ್ಲಿದ್ದ ಪ್ರವಾಸಿಗರಿಗೆ ನೆರವಾದ ಅಣ್ಣಾಮಲೈ

Monday, December 25th, 2017
annamalai

ಚಿಕ್ಕಮಗಳೂರು: ರಾತ್ರಿ ರಸ್ತೆ ಮಧ್ಯೆ ಕಾರಿನ ಟಯರ್ ಪಂಕ್ಚರ್ ಆಗಿ ಸಂಕಷ್ಟಕ್ಕೆ ಸಿಲುಕಿದ್ದ ಪ್ರವಾಸಿಗರಿಗೆ ನೆರವಾಗುವ ಮೂಲಕ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಘಟನೆ ನಿನ್ನೆ ರಾತ್ರಿ ನಡೆದಿದ್ದು, ಬೆಂಗಳೂರಿನ ಪ್ರವಾಸಿಗರಿದ್ದ ಕಾರೊಂದು ಚಿಕ್ಕಮಗಳೂರು-ಶೃಂಗೇರಿ ಮಾರ್ಗವಾಗಿ ಸಂಚರಿಸುತ್ತಿದ್ದ ವೇಳೆ ಮತ್ತಾವರ ಎಂಬ ಗ್ರಾಮವನ್ನು ತಲುಪಿದಾಗ ಕಾರಿನ ಟಯರ್ ಪಂಕ್ಚರ್ ಆಗಿತ್ತು. ಜನಸಂಖ್ಯೆ ವಿರಳವಾಗಿದ್ದ, ಸುತ್ತಮುತ್ತ ಮರಗಳೇ ಅಧಿಕವಾಗಿದ್ದ ಈ ಪ್ರದೇಶದಲ್ಲಿ ಪ್ರವಾಸಿಗರು ತುಂಬಾ ಆತಂಕಕ್ಕೆ ಒಳಗಾಗಿದ್ದರು. ಅಷ್ಟರಲ್ಲಿ ಆ ದಾರಿಯಾಗಿ ಕೊಪ್ಪದಿಂದ ಚಿಕ್ಕಮಗಳೂರಿಗೆ […]