Blog Archive

ಕರಾವಳಿಯಲ್ಲಿ ಧಾರಾಕಾರ ಮಳೆ… ಸುಳ್ಯ, ಬೆಳ್ತಂಗಡಿಯಲ್ಲಿ ತಂಪೆರೆದ ವರುಣ

Thursday, March 15th, 2018
karavali

ಮಂಗಳೂರು: ಬೇಸಿಗೆಯ ಬಿಸಿ ಆರಂಭವಾಗುತ್ತಿರುವಂತೆಯೇ ಕರಾವಳಿಯಲ್ಲಿ ವರುಣ ಪ್ರತ್ಯಕ್ಷನಾಗಿದ್ದಾನೆ. ಇಂದು ಅಪರಾಹ್ನ ಪುತ್ತೂರು, ಸುಳ್ಯ, ಬೆಳ್ತಂಗಡಿ ಸೇರಿದಂತೆ ಕರಾವಳಿಯ ಹಲವು ಭಾಗಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಒತ್ತಡದಿಂದ ವಾಯುಭಾರ ಕುಸಿತಗೊಂಡಿದ್ದು, ಈ ಹಿನ್ನೆಲೆಯಲ್ಲಿ ತಮಿಳುನಾಡು, ಕೇರಳ ಮತ್ತು ಕರ್ನಾಟಕದ ಕರಾವಳಿ ಭಾಗಗಳಲ್ಲಿ ಮಳೆ ಸುರಿಯುತ್ತಿದೆ.

ಮಂಗಳೂರು ಚಲೋ ಜನಸುರಕ್ಷಾ ಯಾತ್ರೆ: ಸುಳ್ಯದಲ್ಲಿ ಪಾದಯಾತ್ರೆ

Monday, March 5th, 2018
chalo

ಮಂಗಳೂರು : ಬಿಜೆಪಿ ಹಮ್ಮಿಕೊಂಡಿರುವ ಮಂಗಳೂರು ಚಲೋ ಜನಸುರಕ್ಷಾ ಯಾತ್ರೆಯು ಇಂದು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಪ್ರವೇಶಿಸಿದ್ದು ಇಲ್ಲಿ ಪಾದಯಾತ್ರೆ ನಡೆಸಲಾಯಿತು. ಸಿದ್ದರಾಮಯ್ಯ ಸರ್ಕಾರದ ಹಿಂದೂ ವಿರೋಧಿ ಧೋರಣೆಯಿಂದಾಗಿ ಕರ್ನಾಟಕದಲ್ಲಿ ನಿರಂತರವಾಗಿ ಹಿಂದೂ ಕಾರ್ಯಕರ್ತರ ವ್ಯವಸ್ಥಿತ ಹತ್ಯೆಯಾಗುತ್ತಿದೆ ಎಂದು ಆಪಾದಿಸಿ ಬಿಜೆಪಿ ಮಾ. 3 ರಿಂದ ಮಂಗಳೂರು ಚಲೋ ಜನಸುರಕ್ಷಾ ಯಾತ್ರೆ ಆರಂಭಿಸಿದೆ. ಮಾ. 3 ರಂದು ಅಂಕೋಲಾ ಮತ್ತು ಕುಶಾಲನಗರದಿಂದ ಹೊರಟ ಜನಸುರಕ್ಷಾ ಯಾತ್ರೆ ಮಾ. 6 ರಂದು ಮಂಗಳೂರು ತಲುಪಲಿದೆ. ಮಂಗಳೂರಿನಲ್ಲಿ ನಡೆಯುವ […]

ಸುಳ್ಯದಲ್ಲಿ ವಿದ್ಯಾರ್ಥಿನಿಗೆ ಏಳು ಬಾರಿ ಚೂರಿಯಿಂದ ಇರಿದ ಪಾಗಲ್ ಪ್ರೇಮಿ

Tuesday, February 20th, 2018
Sullia student

ಸುಳ್ಯ : ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಪ್ರೇಮ ವೈಫಲ್ಯಗೊಂಡ  ಅದೇ ಕಾಲೇಜಿನ ವಿದ್ಯಾರ್ಥಿ ಚೂರಿಯಿಂದ ಇರಿದು ಕೊಲೆಗೈದ ಘಟನೆ ಸುಳ್ಯದಲ್ಲಿ ಮಂಗಳವಾರ  ಸಂಜೆ 4:30ರ ಸುಮಾರಿಗೆ ನಡೆದಿದೆ. ಸುಳ್ಯ ಎನ್‌ಎಂಸಿ ಕಾಲೇಜಿನಲ್ಲಿ ಕಲಿಯುತ್ತಿದ್ದ  ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ, ನೆಲ್ಲೂರು ಕೆಮ್ರಾಜೆ ನಿವಾಸಿ ಚಂದ್ರಶೇಖರ್ ಎಂಬವರ ಪುತ್ರ ಕಾರ್ತಿಕ್ ತನ್ನ ಸಹಪಾಠಿ  ದ್ವಿತೀಯ ಬಿಎಸ್ಸಿ ಪದವಿ ವಿದ್ಯಾರ್ಥಿನಿ ಅಕ್ಷತಾಳನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ. ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾದ ಶಾಂತಿ ನಗರ ನಿವಾಸಿಯಾಗಿದ್ದ ಅಕ್ಷತಾ ಮಂಗಳವಾರ ಸಂಜೆ ಕಾಲೇಜಿನಿಂದ ಬರುತ್ತಿದ್ದ ರೋಟರಿ ಶಾಲೆಯ ಬಳಿ […]

ಸೈನಿಕನ ಪುತ್ರಿಗೆ ಪ್ರಥಮ ರ‍್ಯಾಂಕ್, ಐದು ಚಿನ್ನ ದ ಪದಕ

Saturday, January 20th, 2018
soldier

ಸುಳ್ಯ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ 202 ಕಾಲೇಜುಗಳ ಬಿ.ಇ. ಪರೀಕ್ಷೆಗಳಲ್ಲಿ ಕಂಪ್ಯೂಟರ್‌ ಸೈನ್ಸ್‌ ಮತ್ತು ಎಂಜಿನಿಯರಿಂಗ್‌ ವಿಭಾಗದಲ್ಲಿ ಅತ್ಯಧಿಕ ಅಂಕಗಳೊಂದಿಗೆ ಪ್ರಥಮ ರ‍್ಯಾಂಕ್ ಹಾಗೂ ಐದು ಚಿನ್ನದ ಪದಕ ಗಳಿಸುವ ಜತೆಗೆ, ಕೆವಿಜಿ ಚಿನ್ನದ ಪದಕಕ್ಕೂ ಭಾಗಿಯಾದ ಸುಳ್ಯದ ಕೆವಿಜಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿನಿ, ಅಜ್ಜಾವರ ಗ್ರಾಮದ ಕಾಂತಮಂಗಲ ಶಶಿಧರ್‌ ಕೇಕುಣ್ಣಾಯ ಮತ್ತು ಕವಿತಾ ಶಶಿಧರ್‌ ಅವರ ಪುತ್ರಿ ಅರ್ಪಿತಾ ಕೆ.ಎಸ್‌. ಅವರಿಗೆ ಸಾಧನೆಯ ಖುಷಿ, ಇನ್ನಷ್ಟು ಸಾಧಿಸುವ ಹಂಬಲ.ತುಂಬಾ ಖುಷಿ ಆಯಿತು. ಹೆತ್ತವರು, ಉಪನ್ಯಾಸಕರು, […]

ಬರೋಬ್ಬರಿ 176 ಸಲ ಶಬರಿಮಲೆ ಯಾತ್ರೆ ಕೈಗೊಂಡ ಸುಳ್ಯದ ಶಿವಪ್ರಕಾಶ್‌‌!

Tuesday, January 16th, 2018
shabarimale

ಮಂಗಳೂರು: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವರ ದರ್ಶನಕ್ಕೆ ಏನೇನೋ ಹರಕೆ ಹೊತ್ತವರು, ಇನ್ನು ಕೆಲವರು ವರ್ಷಕ್ಕೊಮ್ಮೆ ವ್ರತದಂತೆ ಹೋಗುವವರೂ ಇದ್ದಾರೆ. 18 ವರ್ಷ ಇರುಮುಡಿ ಹೊತ್ತು ‘ಪದಿನೆಟ್ಟಾಂಪಡಿ’ ಏರಿ ಸ್ವಾಮಿ ದರ್ಶನ ಮಾಡಿ ಗುರುಸ್ವಾಮಿ ಎನಿಸಿಕೊಳ್ಳುತ್ತಾರೆ. ಆದರೆ, ಇಲ್ಲೊಬ್ಬರು ಬರೋಬ್ಬರಿ 176 ಬಾರಿ ಶಬರಿಮಲೆ ಯಾತ್ರೆ ಕೈಗೊಂಡು ದಾಖಲೆ ಮಾಡಿದ್ದಾರೆ. ಧನುರ್ಮಾಸದಲ್ಲಿ ಕಪ್ಪು ಶಾಲು ಧರಿಸಿ, ಹಣೆಯಲ್ಲಿ ವಿಭೂತಿ ಹಚ್ಚಿ, ಕೊರಳಲ್ಲಿ ರುದ್ರಾಕ್ಷಿ ಧರಿಸಿಕೊಂಡ ಅಯ್ಯಪ್ಪ ಭಕ್ತಾದಿಗಳನ್ನು ಅಲ್ಲಲ್ಲಿ ಕಾಣುತ್ತೇವೆ. ಅದರೆ, ಪುತ್ತೂರು ತಾಲೂಕು ಪಂಚಾಯತ್ ಕಚೇರಿಯಲ್ಲಿ […]

ಕಡಬ ತಾಲೂಕು ತೆಕ್ಕೆಗೆ ರಾಜ್ಯದ ನಂ. 1 ದೇಗುಲ

Monday, January 1st, 2018
subramanya

ಸುಬ್ರಹ್ಮಣ್ಯ : ಸುಳ್ಯ ತಾಲೂಕಿನ ಜನತೆಗೆ ಹೊಸ ವರ್ಷ ಕಹಿ ಅನುಭವ ನೀಡಲಿದೆ. ಕಾರಣ, ಸುಳ್ಯ ತಾಲೂಕು ಮತ್ತಷ್ಟು ಕಿರಿದಾಗಲಿದೆ. ಜತೆಗೆ ಇಲ್ಲಿ ತನಕ ತಾಲೂಕಿನಲ್ಲಿ ಮುಕುಟಪ್ರಾಯವಾಗಿದ್ದ ರಾಜ್ಯದ ನಂ. 1 ದೇಗುಲ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಇನ್ನು ಮುಂದೆ ಕಡಬ ತಾಲೂಕು ಜತೆ ಗುರುತಿಸಿಕೊಳ್ಳಲಿದೆ. 2017ರ ವರ್ಷಕ್ಕೆ ಭಾವಪೂರ್ಣ ವಿದಾಯದ ಜತೆ ಧಾರ್ಮಿಕ ಕೇಂದ್ರ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಹಲವು ಮಹತ್ವದ ಸ್ಥಳಗಳು ಸುಳ್ಯದ ಕೈತಪ್ಪಲಿವೆ. ಇವೆಲ್ಲ ಕಡಬ ತಾಲೂಕಿಗೆ ಸೇರುವುದರಿಂದ ನೋವಿನ ವಿದಾಯ ಹೇಳುವುದು […]

ಸುಳ್ಯದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಗೆ ಭಾರೀ ಬೆಂಬಲ, ಯಾತ್ರೆಗೆ ಜನಸಾಗರ

Friday, November 10th, 2017
parivarthana yathre

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಯಾತ್ರೆ ಸಂಚಾರ ನಡೆಸುತ್ತಿದೆ, ಒಂದು ದಿನದ ವಿಶ್ರಾಂತಿ ಬಳಿಕ ಬಿಜೆಪಿ ನಾಯಕರು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಬಿಜೆಪಿಯ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ 7ನೇ ದಿನಕ್ಕೆ ಕಾಲಿಟ್ಟಿದೆ. ಶುಕ್ರವಾರ ಬೆಳಗ್ಗೆ ಕರ್ನಾಟಕ ಬಿಜೆಪಿಯ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯ ಬಸ್ಸಿಗೆ ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ 7ನೇ ದಿನದ ಯಾತ್ರೆ ಆರಂಭವಾಯಿತು. ಕರ್ನಾಟಕ ಬಿಜೆಪಿ ಅಧ್ಯಕ್ಷ, 2018ರ ಚುನಾವಣೆ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಯಾತ್ರೆ ಆರಂಭವಾಯಿತು. […]

ಸುಳ್ಯ: ಕಾಡಿನ ಕೆಂಚಪ್ಪ ನಿಧನ, ಇನ್ನು ನೆನಪು ಮಾತ್ರ

Saturday, October 28th, 2017
kenchappa gowda

ಮಂಗಳೂರು: ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಬಾಳೆಡಿಯ ನಿವಾಸಿ ಕೆಂಚಪ್ಪ (72) ನಾಡಿಗೆ ಬರದೆ ಸುಮಾರು 50ಕ್ಕೂ ಹೆಚ್ಚು ವರ್ಷದಿಂದ ಕಾಡಿನಲ್ಲಿ ಒಬ್ಬಂಟಿ ಜೀವನ, ಇನ್ನು ನೆನಪು ಮಾತ್ರ. ಅರ್ಧ ಶತಕದಿಂದ ಕಾಡಿನಲ್ಲೇ ನೆಲೆಸಿರುವ ಕೆಂಚಪ್ಪನ ರೋಚಕ ಕಥೆ! ವಯೋ ಸಹಜ ಕಾಯಿಲೆಯಿಂದ ಅಕ್ಟೋಬರ್ 27ರಂದು, ಶುಕ್ರವಾರ ಇವರು ತನ್ನ ಸಹೋದರನ ಮನೆಯಲ್ಲಿ ನಿಧನರಾದರು. ಇವರ ಜೀವನವೇ ಒಂದು ರೋಚಕ ಕಥೆ. ಸುಮಾರು 25 ವರ್ಷದವರಿರುವಾಗ ಮನೆಯವರನ್ನೆಲ್ಲ ತೊರೆದು ಕಾಡಿನಲ್ಲಿ ನೆಲೆಸಲು ಶುರು ಮಾಡಿದ ಈ ವ್ಯಕ್ತಿ […]

ಕೊನೆಗೂ ಸಾಕಾರಗೊಂಡ ಅಂತರ್ ರಾಜ್ಯ ಕಡಿಮೆ ದೂರದ ಸಂಚಾರಿ ರಸ್ತೆ

Tuesday, April 12th, 2016
Sullia Bandadka

ಕಾಸರಗೋಡು : ಹಲವು ವರ್ಷಗಳ ಬಹು ನಿರೀಕ್ಷಿತ ಸುಳ್ಯ-ಬಂದಡ್ಕ ಅಂತರ್ ರಾಜ್ಯ ಸಂಪರ್ಕದ ರಾಜ್ಯ ಹೆದ್ದಾರಿ ಕಾಮಗಾರಿ ಪೂರ್ತಿಯಾಗಿದೆ.ಮೂರು ಕೋಟಿ ರೂ.ವ್ಯಯಿಸಿ ಈ ರಸ್ತೆಯ ಕಾಮಗಾರಿ ನಡೆಸಲಾಗಿದೆ.ಈ ಮೂಲಕ ಬಂದಡ್ಕ ದಾರಿಯಾಗಿ ಸುಳ್ಯ ತಲಪಲು ಅತೀ ಕಡಿಮೆ ದೂರದ ರಸ್ತೆಯ ಕನಸು ನನಸಾಗಿದೆ.ಕೇರಳದ ಕನ್ನಾಡಿತೋಡಿನಿಂದ ಸುಳ್ಯ ತಾಲೂಕಿನ ಆಳೆಟ್ಟಿ ಗ್ರಾ.ಪಂ ನ ಕೋಲ್ಚಾರ್ ವರೆಗಿನ 1800 ಮೀಟರ್ ದೂರದ ರಸ್ತೆಯ ಕಾಮಗಾರಿ ಪೂರ್ತೀಕರಿಸಲಾಗಿದೆ.ಏ.14 ರಂದು ಈ ರಸ್ತೆ ಲೋಕಾರ್ಪಣೆಗೊಳ್ಳಲಿದೆ. ಪುತ್ತೂರಿನ ಹರೀಶ್ ಪೂಜಾರಿ ಈ ಕಾಮಗಾರಿಯ ಟೆಂಡರ್ […]

ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾಗಿ ವಸಂತ ಶೆಟ್ಟಿ ಬೆಳ್ಳಾರೆ ಆಯ್ಕೆ

Saturday, July 20th, 2013
Vasantha shetty

ನವ ದೆಹಲಿ: ಪ್ರತಿಷ್ಠಿತ ದೆಹಲಿ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ವಸಂತ ಶೆಟ್ಟಿ ಬೆಳ್ಳಾರೆ ಆಯ್ಕೆಯಾಗಿದ್ದಾರೆ. ಮೂಲತಃ ಸುಳ್ಯದ ಕಳಂಜದವರಾದ ವಸಂತ ಶೆಟ್ಟಿ ರಿಯಾಣದಲ್ಲಿ ಉದ್ಯೋಗದಲ್ಲಿದ್ದಾರೆ. ಇವರು ದೆಹಲಿ ಕರ್ನಾಟಕ  ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿರುವ ಸುಳ್ಯ ತಾಲೂಕಿನ ಎರಡನೆಯವರಾಗಿದ್ದಾರೆ. ಈ ಮೊದಲು ಡಾ.ಪುರುಷೋತ್ತಮ ಬಿಳಿಮಲೆ ಕೂಡಾ  ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದರು. ಈ ಬಾರಿಯದದೆಹಲಿ ಕರ್ನಾಟಕ ಸಂಘದ ಚುನಾವಣೆಯಲ್ಲಿ ಒಟ್ಟಾರೆ 15 ಜನರುಗಳ ಎರಡು ತಂಡಗಳು ಹಾಗೂ ಓರ್ವರು ಸ್ವತಂತ್ರ ಅಭ್ಯರ್ಥಿಯಾಗಿ ಒಟ್ಟು 31 ಜನ ಸ್ಪರ್ಧಿಸಿದ್ದರು. […]