Blog Archive

ದಕ್ಷಿಣಕನ್ನಡ ಸಹಕಾರಿ ಹಾಲು ಒಕ್ಕೂಟದಿಂದ ಕೋವಿಡ್-19 ಪರಿಹಾರ ನಿಧಿಗೆ ರೂ.50.00 ಲಕ್ಷ ಚೆಕ್ ಹಸ್ತಾಂತರ

Wednesday, April 29th, 2020
dkmlu

ಮಂಗಳೂರು : ಕರ್ನಾಟಕ ರಾಜ್ಯಾದಾದ್ಯಂತ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್‌ಆಗಿರುವ ಹಿನ್ನೆಲೆಯಲ್ಲಿ ರಾಜ್ಯದ ಸಹಾಯಕ ಜನತೆ ಹಾಗೂ ಸಂತ್ರಸ್ಥರ ನೆರವಿಗೆ ಸಹಕಾರಿಯಾಗಲು ದಕ್ಷಿಣಕನ್ನಡ ಸಹಕಾರಿ ಹಾಲು ಒಕ್ಕೂಟದ  ಉಭಯ ಜಿಲ್ಲೆಗಳ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ  ದೇಣಿಗೆ ಮೊತ್ತ, ಒಕ್ಕೂಟದ ಸಿಬ್ಬಂದಿಗಳ ಒಂದು ದಿನದ ವೇತನ ಮೊತ್ತ ನ್ನಡ ಸಹಕಾರಿ ಹಾಲು ಒಕ್ಕೂಟವ ಒಟ್ಟಾಗಿ ರೂ.50.00 ಲಕ್ಷ ಸಹಾಯಧನದ ಚೆಕ್‌ನ್ನುದಿನಾಂಕ 28.04.2020 ರಂದು ಮಾನ್ಯ ಸಹಕಾರ ಸಚಿವರ ಮೂಲಕ ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ […]

ಬಂಟ್ವಾಳ ಕಸಬಾದ ನಾಲ್ಕನೇ ಮಹಿಳೆಗೆ ಕೋವಿಡ್-19 ಸೋಂಕು ದೃಢ, ಈಕೆ ಮೃತ ಮಹಿಳೆಯ ಮಗಳು

Saturday, April 25th, 2020
Bantwal

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಮತ್ತೋರ್ವ ಮಹಿಳೆಗೆ ಕೋವಿಡ್-19 ಸೋಂಕು ದೃಢವಾಗಿದೆ. ಈಕೆ ಸದ್ಯ ಕೋವಿಡ್-19 ಸೋಂಕಿನ ಕಾರಣದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯ ಮಗಳಾಗಿದ್ದು, ಒಂದೇ ಕುಟುಂಬದ ಇಬ್ಬರು ಸೋಂಕಿತರಾದಂತಾಗಿದೆ. ಏಪ್ರಿಲ್ 21ರಂದು ಪಾಸಿಟಿವ್ ವರದಿ ಬಂದಿದ್ದ ಸೋಂಕಿತ ಸಂಖ್ಯೆ409 ವೃದ್ದೆಯ ಸಂಪರ್ಕದಿಂದ ಆಕೆಯ 39 ವರ್ಷದ ಮಗಳಿಗೆ ಸೋಂಕು ಹರಡಿದೆ. ಇವರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಕೆಯನ್ನೂ ಎಪ್ರಿಲ್ 19ರಂದೇ ಮಂಗಳೂರಿನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇದರಿಂದಾಗಿ ದಕ್ಷಿಣ ಕನ್ನಡದ ಬಂಟ್ವಾಳದ ಕಸಬಾ […]

ಬಂಟ್ವಾಳದ ಕೋವಿಡ್ 19 ಮೃತ ಮಹಿಳೆಯ ಶುಶ್ರೂಷಕಿ ಮತ್ತು ಮನೆಯ 9 ಮಂದಿಗೆ ಹೋಂ ಕ್ವಾರಂಟೈನ್‌‍

Wednesday, April 22nd, 2020
quarantine

ಬೆಳ್ತಂಗಡಿ: ಬಂಟ್ವಾಳದಲ್ಲಿ ಕೋವಿಡ್ 19 ವೈರಸ್ ನಿಂದ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಆರೈಕೆ ಮಾಡುತ್ತಿದ್ದ ವಾರ್ಡ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಶುಶ್ರೂಷಕಿ ಸಂಪರ್ಕದಲ್ಲಿದ್ದ ಪುದುವೆಟ್ಟು ಗ್ರಾಮದ ಸಾಮೇದಕಲಪುವಿನ ಒಂದೇ ಮನೆಯ ಮಕ್ಕಳು ಸೇರಿದಂತೆ 9 ಮಂದಿಯನ್ನು ಎ. 21ರಂದು ನೆರಿಯ ಆಸ್ಪತ್ರೆಯ ವೈದ್ಯರ ತಂಡ ಮುನ್ನೆಚ್ಚರಿಕಾ ಕ್ರಮವಾಗಿ ಹೋಂ ಕ್ವಾರಂಟೈನ್‌‍ಗೆ ಒಳಪಡಿಸಿದೆ. ಕೋವಿಡ್ 19 ವೈರಸ್ ಸೋಂಕಿನಿಂದ ಮೃತಪಟ್ಟ ಮಹಿಳೆ ಬಂಟ್ವಾಳದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅವರನ್ನು ಆರೈಕೆ ಮಾಡಿದ್ದ ವಾರ್ಡ್‌ನಲ್ಲಿದ್ದ ನರ್ಸ್‌ […]

ಕೋವಿಡ್-19 ಅಧಿಕಾರಿಗಳ ಮೇಲೆ ಹಲ್ಲೆಇಬ್ಬರು ಆರೋಪಿಗಳು ವಶಕ್ಕೆ

Tuesday, April 21st, 2020
Bantwal accused

ಬಂಟ್ವಾಳ : ಕೋವಿಡ್-19 ಕರ್ತವ್ಯದಲ್ಲಿದ್ದ ಸರಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಸಿ.ಐ. ನೇತೃತ್ವದ ಪೋಲೀಸ್ ತಂಡ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದ ಆರೋಪಿಗಳಿಗಾಗಿ ಶೋಧನೆ ನಡೆಸಲಾಗುತ್ತಿದೆ. ಲಾಕ್ ಡೌನ್ ಅವಧಿಯಲ್ಲಿ ಗುಂಪು ಕಟ್ಟಿಕೊಂಡು ಅಂಗಡಿಗಳನ್ನು ತೆರೆದಿಟ್ಟಲ್ಲದೆ, ಪ್ರಶ್ನಿಸಿದ ಅಧಿಕಾರಿಗಳ ಮೇಲೆಯೇ ಹಲ್ಲೆ ನಡೆಸಿದ ಬಗ್ಗೆ ಪ್ಲೈಯಿಂಗ್ ಸ್ವ್ಕಾಡ್ ನ ಮಹಿಳಾ ಅಧಿಕಾರಿ ಯೋರ್ವರು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಸೋಮವಾರ ಮಧ್ಯಾಹ್ನ ದೂರು ನೀಡಿದ್ದರು. […]

ಕೋವಿಡ್ -19 : ಸೌದಿ ಕಂಪೆನಿಯಲ್ಲಿ ಸಿಕ್ಕಿ ಹಾಕಿಕೊಂಡ 2500 ಮಂದಿ ಭಾರತೀಯರಲ್ಲಿ 500 ಮಂದಿ ಮಂಗಳೂರಿನವರು

Thursday, April 16th, 2020
Expertise-Contracting

ಮಂಗಳೂರು : ಇಂಡೋ-ಸೌದಿ ಜಂಟಿ ಉದ್ಯಮವಾದ ಎಕ್ಸ್‌ಪರ್ಟೈಸ್ ಕಾಂಟ್ರಾಕ್ಟಿಂಗ್ ಕೋ ಲಿಮಿಟೆಡ್ ಎಂಬ ಕಂಪನಿಯಲ್ಲಿ ಮಂಗಳೂರು ಮೂಲದ  500 ಮಂದಿ ಕಾರ್ಮಿಕರು ಊರಿಗೆ ಮರಳಲಾಗದೆ ಸಿಕ್ಕಿ ಹಾಕಿಕೊಂಡಿದ್ದಾರೆ. ಸೌದಿ ಅರೇಬಿಯಾದ ತೈಲ, ಅನಿಲ ಮತ್ತು ಪೆಟ್ರೋಕೆಮಿಕಲ್ ಕ್ಷೇತ್ರದಲ್ಲಿ ತೋಟಗಾರಿಕೆ ನಿರ್ವಹಣೆ ಮತ್ತು ಕಂಪೆನಿಯ ಇತರ ವಿಭಾಗಗಳಲ್ಲಿ ಕೆಲಸ ಮಾಡಲು  ಅವರನ್ನು ಕಂಪೆನಿ ತಾತ್ಕಾಲಿಕ ವೀಸಾದಲ್ಲಿ ಕರೆಸಿ ಕೊಂಡಿತ್ತು. ಕಂಪನಿಯು ವಿಶ್ವದ ವಿವಿಧ ಮೂಲೆಗಳಿಂದ 8,000 ಕ್ಕೂ ಹೆಚ್ಚು ಕಾರ್ಮಿಕರನ್ನು ನೇಮಿಸಿಕೊಂಡಿತ್ತು ಮತ್ತು ಅವರಲ್ಲಿ 2,500 ಮಂದಿ  ಭಾರತದಿಂದ ಬಂದವರು.  ಕಂಪೆನಿ ಅಲ್ಪಾವಧಿಯ ವಿಸಿಟಿಂಗ್ […]

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೋವಿಡ್-19 ಪರಿಹಾರ ನಿಧಿಗೆ 30ಲಕ್ಷ ರೂ. ದೇಣಿಗೆ

Thursday, April 16th, 2020
mattaru rathnakara hegde

ಮಂಗಳೂರು  : ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮುಖ್ಯಮಂತ್ರಿ ಗಳ ಕೋವಿಡ್-19 ಪರಿಹಾರ ನಿಧಿಗೆ 30ಲಕ್ಷ ರೂ. ದೇಣಿಗೆ ನೀಡಿದೆ‌. 30ಲಕ್ಷ ರೂಪಾಯಿ ಚೆಕ್ಕನ್ನು ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆಯವರು ಗುರುವಾರ , ಏಪ್ರಿಲ್ 16 ರಂದು  ದ.ಕ. ಜಿಲ್ಲಾಧಿಕಾರಿ ಸಿಂಧು ರೂಪೇಶ ರವರಿಗೆ ಹಸ್ತಾಂತರಿಸಿದರು. ಈ ಸಂಧರ್ಭ ಶಾಸಕ ಡಿ.ವೇದವ್ಯಾಸ ಕಾಮತ್, ಪ್ರದೀಪ್ ಡಿಸೋಜ,ಕಾರ್ಯದರ್ಶಿ,ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ರಾಘವೇಂದ್ರ ಎಂ, ವಲಯಾಧಿಕಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಸುದರ್ಶನ್ .ಎಂ, ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷರು, ರಾಮದಾಸ್ ಪ್ರದಾನ ಕಾರ್ಯದರ್ಶಿ […]

ಬೆಂಗಳೂರು: ಒಂದೇ ದಿನ 19 ಮಂದಿಗೆ ಕೋವಿಡ್-19 ಸೋಂಕು ದೃಢ ; ಇಬ್ಬರು ಸಾವು

Wednesday, April 15th, 2020
Corona 19

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 19 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಎರಡು ದಿನದ ಹಿಂದೆ ಸಾವನ್ನಪ್ಪಿದ ಬೆಳಗಾವಿ ವೃದ್ಧೆಗೆ ಸೋಂಕು ಇತ್ತು ಎಂದು ಖಚಿತವಾಗಿದೆ. ಬುಧವಾರ ಬೆಳಿಗ್ಗೆ ಚಿಕ್ಕಬಳ್ಳಾಪುರದ ವ್ಯಕ್ತಿ ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದರು. ಈಗ ಬೆಳಗಾವಿ, ಹಿರೇಬಾಗೆವಾಡಿಯ 80 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದ ಸೋಂಕಿತರ ಸಾವಿನ ಸಂಖ್ಯೆ 12ಕ್ಕೇರಿದೆ. ವಿಜಯಪುರದಲ್ಲಿ ಮತ್ತೊಂದು ಸೋಂಕು ಪ್ರಕರಣ ದೃಢವಾಗಿದೆ. ಸೋಂಕಿತ ಸಂಖ್ಯೆ 221 ರ ಸಂಪರ್ಕಕ್ಕೆ ಬಂದ 28 ವರ್ಷದ ಮಹಿಳೆಗೆ ಸೋಂಕು ದೃಢವಾಗಿದೆ. […]

ಕೋವಿಡ್ 19 : ಅಡಿಕೆ ಅಡವಿಟ್ಟರೆ ಬ್ಯಾಂಕ್ ಸಾಲ

Sunday, April 5th, 2020
Arrecanut

ಮಂಗಳೂರು:  ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ರೈತರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಇದನ್ನು ಮನಗಂಡು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ರೈತರಿಗೆ ತುರ್ತಾಗಿ ಅಡಿಕೆ ಅಡಮಾನ ಸಾಲವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ನೀಡಲು ಮುಂದಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ತಿಳಿಸಿದ್ದಾರೆ. ಅವಿಭಜಿತ ದ. ಕ. ಜಿಲ್ಲೆಯಲ್ಲಿ ಅಡಿಕೆ ಮಾರಾಟದಲ್ಲಿ ವ್ಯತ್ಯಯಗಳು ಕಂಡು ಬಂದಿರುವುದರಿಂದ ಅಡಿಕೆ ಧಾರಣೆಯಲ್ಲೂ ಕುಸಿತ ಕಂಡಿದೆ. ಇಂತಹ ಸಂದರ್ಭದಲ್ಲಿ ಅಡಿಕೆ ಬೆಳೆಗಾರರಿಗೆ ಆರ್ಥಿಕ […]

ಸಹ್ಯಾದ್ರಿಸ್ಟಾರ್ಟ್-ಅಪ್‌ನಲ್ಲಿ ಕೋವಿಡ್-19 ವಾರಿಯರ್ಸ್‌ಗಾಗಿ ಫೇಸ್ ಶೀಲ್ಡ್ಸ್ ತಯಾರಿಸಿ ಸರಬರಾಜು 

Sunday, April 5th, 2020
Sahyadri-Face-Shield

ಮಂಗಳೂರು  : ಕೋವಿಡ್-19 , ಇತ್ತೀಚೆಗೆ ಪತ್ತೆಯಾದ ಕರೋನ ವೈರಸ್‌ನಿಂದ ಉಂಟಾದ ಸಾಂಕ್ರಾಮಿಕ ರೋಗವು 2019  ರಡಿಸೆಂಬರ್‌ನಲ್ಲಿ ಏಕಾಏಕಿ ಉಂಟಾಯಿತು. ಮೂಗು ಅಥವಾ ಬಾಯಿಯಿಂದ ಸಣ್ಣ ಹನಿಗಳ ಮೂಲಕ ಈ ರೋಗವು ವ್ಯಕ್ತಿಯಿಂದ ವ್ಯಕ್ತಿಗೆ ಹರಡಬಹುದು, ಇದು ಕೋವಿಡ್-19 ಕೆಮ್ಮುಅಥವಾ ಉಸಿರಾಡುವಾಗ ಹರಡುತ್ತದೆ. ಆದ್ದರಿಂದ ಈ ಪರಿಸ್ಥಿತಿಯನ್ನು ತಪ್ಪಿಸಲು ಮುಖವಾಡಗಳ ಬಳಕೆಯನ್ನು ಹೆಚ್ಚಿಸಲಾಗಿದೆ, ಇದರ ಪರಿಣಾಮವಾಗಿ ವಿಶ್ವವ್ಯಾಪಿ ಮುಖವಾಡಗಳ ಕೊರತೆ ಉಂಟಾಗಿದೆ ಮತ್ತು ಬಿಸಾಡ ಬಹುದಾದ ಮುಖವಾಡಗಳನ್ನು ಒಮ್ಮೆ ಮಾತ್ರ ಬಳಸಬಹುದಾಗಿದೆ.ಆದ್ದರಿಂದ ಕೋವಿಡ್-19 ರೋಗಿಗಳನ್ನು ನೋಡಿಕೊಳ್ಳಲು ಮತ್ತು ಕರೋನ […]

ಮರ್ಕಜ್ ಮಸೀದಿಯ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ 13 ಮಂದಿಗೆ ಕೋವಿಡ್ 19 ವೈರಸ್ ಸೋಂಕು

Friday, April 3rd, 2020
Suresh kumar

ಬೆಂಗಳೂರು: ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿಯ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಮೂಲದವರ ಪೈಕಿ 13 ಮಂದಿಗೆ ಕೋವಿಡ್ 19 ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಕರ್ನಾಟಕದಲ್ಲಿ ಕೊರೋನಾ ವೈರಸ್ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡುವ ಜವಾಬ್ದಾರಿ ಹೊತ್ತ ಬಳಿಕ ಮೊದಲ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಸುರೇಶ್ ಕುಮಾರ್ ಅವರು, ರಾಜ್ಯದಿಂದ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿಯ ಧಾರ್ಮಿಕ ಸಭೆಗೆ ಪಾಲ್ಗೊಳ್ಳಲು ತೆರಳಿದ್ದವರ ಪೈಕಿ 13 ಮಂದಿಗೆ ಕೊರೋನಾ ವೈರಸ್ ತಗುಲಿದೆ. […]