Blog Archive

ಮಂಗಳೂರು ಜೈಲಿನಲ್ಲಿ ಗುಂಪು ಘರ್ಷಣೆ: 6 ಪೊಲೀಸ್, 10 ಕೈದಿಗಳಿಗೆ ಗಾಯ

Tuesday, January 9th, 2018
police

ಮಂಗಳೂರು: ಮಂಗಳೂರು ಜೈಲಿನಲ್ಲಿ ವಿಚಾರಣಾಧೀನ ಕೈದಿಗಳ ಗುಂಪಿನ ನಡುವೆ ಸೋಮವಾರ ಸಂಜೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಓರ್ವ ಕಾರಾಗೃಹ ಸಿಬ್ಬಂದಿ ಸೇರಿದಂತೆ 5 ಮಂದಿ ಪೊಲೀಸರು ಹಾಗೂ 10 ಕ್ಕೂ ಹೆಚ್ಚು ವಿಚಾರಣಾಧೀನ ಕೈದಿಗಳಿಗೆ ಗಾಯಗಳಾಗಿವೆ. ಜೈಲಿನ ಎ ಮತ್ತು ಬಿ ಬ್ಯಾರೆಕ್ ನ ಕೈದಿಗಳನ್ನು ಇಂದು ವಿಸಿಟಿಂಗ್ ಹಾಗೂ ಟೀ ಬ್ರೇಕ್ ಗೆ ಬಿಡಲಾಗಿತ್ತು . ಈ ಸಂದರ್ಭದಲ್ಲಿ ಕಲ್ಲಡ್ಕದ ಚೂರಿ ಇರಿತ ಪ್ರಕರಣದ ಆರೋಪಿ ಮಿಥುನ್ ಹಾಗೂ ಶರತ್ ಮಡಿವಾಳ ಪ್ರಕರಣದ ಆರೋಪಿ ಸಾದಿಕ್ […]

ದೀಪಕ್‌ ಹತ್ಯೆಗೆ 2 ದಿನ ಮೊದಲೇ ಹೊಂಚು

Saturday, January 6th, 2018
supari

ಮಂಗಳೂರು: ಕಾಟಿಪಳ್ಳದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್‌ ರಾವ್‌ ಅವರನ್ನು ಹತ್ಯೆ ಮಾಡಲು ದುಷ್ಕರ್ಮಿಗಳು ಎರಡು ದಿನ ಮೊದಲೇ ಹೊಂಚು ಹಾಕಿದ್ದರಾದರೂ ಕೊನೆಯ ಗಳಿಗೆಯಲ್ಲಿ ವಿಫಲವಾಗಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ. ಬುಧವಾರ ಮಧ್ಯಾಹ್ನ 1.15ಕ್ಕೆ ದೀಪಕ್‌ ರಾವ್‌ ಕೊಲೆಯಾಗಿದ್ದಾರೆ. ಆದರೆ ಅದಕ್ಕೆ ಎರಡು ದಿನ ಹಿಂದೆಯೇ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಆರೋಪಿಗಳು ವಾಹನದಲ್ಲಿ ಆಯುಧಗಳನ್ನು ಹಿಡಿದು ಕೊಂಡು ಕಾಟಿಪಳ್ಳ, ಕೈಕಂಬ ಪ್ರದೇಶದಲ್ಲಿ ಓಡಾಡುತ್ತಿದ್ದರು ಎಂಬ ವಿಚಾರ ನೌಶಾದ್‌ ಮತ್ತು ಮಹಮದ್‌ ಇಶಾìನ್‌ ವಿಚಾರಣೆಯ ವೇಳೆ ಪೊಲೀಸರಿಗೆ […]

ಪ್ರತಾಪ್‌ ಸಿಂಹ ವಿರುದ್ಧದ ಸೆಕ್ಷನ್‌ ಹಿಂಪಡೆಯಲು ಅರ್ಜಿ: ಪೊಲೀಸರಿಗೆ ಕೋರ್ಟ್‌‌ನಿಂದ ತಪರಾಕಿ

Friday, December 15th, 2017
pratap-simha

ಮೈಸೂರು: ಹುಣಸೂರು ಹನುಮ ಜಯಂತಿ ಮೆರವಣಿಗೆಗೆ ಹೊರಟಿದ್ದ ವೇಳೆ ಸಂಸದ ಪ್ರತಾಪ್ ಸಿಂಹರನ್ನು ಬಂಧಿಸಿ, 188 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದ್ರೆ ಬಳಿಕ ಸಂಸದರ ವಿರುದ್ಧದ ಸೆಕ್ಷನ್‌ 188 ವಾಪಸ್ ಪಡೆಯಲು ಅರ್ಜಿ ಸಲ್ಲಿಸಿದ್ದಕ್ಕೆ ಪೊಲೀಸ್ ತನಿಖಾಧಿಕಾರಿಗೆ ಕೋರ್ಟ್ ತಪರಾಕಿ ಹಾಕಿದೆ. ಡಿ. 3ರಂದು ಹುಣಸೂರಿನ ಬೆಳಿಕೆರೆ ಸಮೀಪ ಸಂಸದ ಪ್ರತಾಪ್‌ ಸಿಂಹರನ್ನು ಪೊಲೀಸರು ಬಂಧಿಸಿ ಐಪಿಸಿ ಸೆಕ್ಷನ್ 188( ಸರ್ಕಾರಿ ಅಧಿಕಾರಿಯ ಆದೇಶದ ಉಲ್ಲಂಘನೆ) ಅಡಿಯಲ್ಲಿ ಪ್ರಕಣರ ದಾಖಲು ಮಾಡಿದ್ದರು. ಬಳಿಕ ಸಂಸದರನ್ನು ಬಿಡುಗಡೆ […]

ಇದು ಸಾಮರಸ್ಯದ ನಡಿಗೆ ಅಲ್ಲ, ‘ಹಾಸ್ಯಾಸ್ಪದ ನಡಿಗೆ’ : ಹರಿಕೃಷ್ಣ ಬಂಟ್ವಾಳ್

Tuesday, December 12th, 2017
ramanath-rai

ಮಂಗಳೂರು: ಸುಮಾರು 25 ಸಂಘಟನೆಗಳ ಪಾಲ್ಗೊಳ್ಳುವಿಕೆಯೊಂದಿಗೆ ನಡೆಯುತ್ತದೆ ಎನ್ನಲಾಗಿದ್ದ ಸಚಿವ ಬಿ.ರಮಾನಾಥ ರೈ ನೇತೃತ್ವದ ‘ಸಾಮರಸ್ಯದ ನಡಿಗೆ’ಯಲ್ಲಿ ಬರೀ 500ರಷ್ಟು ಜನರು ಮಾತ್ರ ಭಾಗವಹಿಸಿದ್ದಾರೆ. ಇದು ಸಾಮರಸ್ಯದ ನಡಿಗೆ ಅಲ್ಲ, ‘ಹಾಸ್ಯಾಸ್ಪದ ನಡಿಗೆ’. ಇದೊಂದು ‘ಫ್ಲಾಪ್ ಶೋ’ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ವ್ಯಂಗ್ಯವಾಡಿದ್ದಾರೆ. ಮಂಗಳೂರಿನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್ ಸೇರಿದಂತೆ ಇತರ ಇಲಾಖೆಗಳು ತಮ್ಮ ನಿಯಂತ್ರಣದಲ್ಲಿದ್ದರೂ ಕಳೆದ 4 ವರ್ಷಗಳಲ್ಲಿ ದ.ಕ. ಜಿಲ್ಲೆಯಲ್ಲಿ ಸಾಮರಸ್ಯ ಸಾಧಿಸಲು ಸಾಧ್ಯವಾಗದವರಿಗೆ ಈಗ ಸಾಮರಸ್ಯದ ನೆನಪಾಗಿರುವುದೇಕೆ? […]

ಶರತ್‌ ಹತ್ಯೆ ಆರೋಪಿಗಳ ಪತ್ತೆ ಹಚ್ಚಿದ ಪೊಲೀಸರಿಗೆ ಬಹುಮಾನ

Monday, December 11th, 2017
sharath-madiwal

ಬಂಟ್ವಾಳ: ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಹತ್ಯಾ ಪ್ರಕರಣವನ್ನು ಭೇದಿಸಿದ ವಿಶೇಷ ಪೊಲೀಸ್‌ ತಂಡಕ್ಕೆ 2.80 ಲಕ್ಷ ರೂ. ನಗದು ಬಹುಮಾನವನ್ನು ರಾಜ್ಯ ಪೊಲೀಸ್‌ ಡಿಜಿ ನೀಲಮಣಿ ಘೋಷಿಸಿದ್ದಾರೆ. ದ.ಕ. ಜಿಲ್ಲಾ ಅಪರಾಧ ಪತ್ತೆ ದಳದ ಇನ್ಸ್‌ಪೆಕ್ಟರ್‌ ಅಮನುಲ್ಲಾ, ಸಿಸಿಬಿ ಇನ್ಸ್‌ಪೆಕ್ಟರ್‌ ಸುನಿಲ್‌ ಕುಮಾರ್‌ ಸಹಿತ ಒಟ್ಟು ನಾಲ್ವರು ಇನ್ಸ್‌ಪೆಕ್ಟರ್‌ಗಳು, ಸಬ್‌ ಇನ್ಸ್‌ಪೆಕ್ಟರ್‌ಗಳು ಹಾಗೂ ಸಿಬ್ಬಂದಿ ಸೇರಿ 54 ಮಂದಿಗೆ ಈ ನಗದು ಬಹುಮಾನ ಹಂಚಿಕೆ ಮಾಡಲಾಗಿದೆ. ಶರತ್‌ ಮಡಿವಾಳ ಹತ್ಯಾ ಪ್ರಕರಣವನ್ನು ಭೇದಿಸುವ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸಿರುವ […]

ಬಜ್ಜೋಡಿ: ಗಾಂಜಾ ಸೇವನೆ,ಯುವಕರು ಪೊಲೀಸ್ ವಶಕ್ಕೆ

Thursday, October 19th, 2017
ganja

ಮಂಗಳೂರು:  ಸಿಸಿಬಿ ಪೊಲೀಸರು ಬಜ್ಜೋಡಿ ಎರಡನೇ ಅಡ್ಡರಸ್ತೆಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ  ಯುವಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉರ್ವ ಹ್ಯೊಗೆಬೈಲಿನ ಆಲ್ವಿನ್ ಕ್ಲಿಂಟನ್ (24), ಬಿಕರ್ನಕಟ್ಟೆಯ ಅಜೇಯ್ ಸೆಬಾಸ್ಟಿಯನ್ ಲೋಬೊ (24), ಬಜ್ಜೋಡಿಯ ಜೋಯೆಲ್ ಫರ್ನಾಂಡಿಸ್ (27), ಪಡೀಲ್ನ ಆದಿತ್ಯ (18), ಪಡೀಲ್ ಅಳಪೆಯ ದೇವರಾಜ್ (21), ಮೂಡುಶೆಡ್ಡೆಯ ಅಕ್ಷಯ್ ಸಾಲಿಯಾನ್ (21) ಹಾಗೂ ಎಂ.ಜಿ. ರಸ್ತೆಯ ಅಮೋಘ್ ಹೆಗ್ಡೆ (27) ಬಂಧಿತರು. ಖಚಿತ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್ ಸುನೀಲ್ ನಾಯಕ್ ಹಾಗೂ ಅವರ ತಂಡ ಬಜ್ಜೋಡಿಯಲ್ಲಿ ಗಾಂಜಾ […]

ಚಟ್ಟಂಚಾಲ್‌ನಲ್ಲಿ ಅಗ್ನಿ ಅನಾಹುತ: ಪೊಲೀಸ್ ವಶದಲ್ಲಿದ್ದ ವಾಹನಗಳಿಗೆ ಕಿಚ್ಚು

Sunday, January 17th, 2016
fire mishap

ಕಾಸರಗೋಡು : ಚಟ್ಟಂಚಾಲ್ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳ ಡಂಬಿಂಗ್ ಮೈದಾನದಲ್ಲಿ ಶುಕ್ರವಾರ ಉಂಟಾದ ಅಗ್ನಿಅನಾಹುತದಲ್ಲಿ ವಿವಿಧ ಪ್ರಕರಣಗಳಲ್ಲೊಳಗೊಂಡ ಮೂವತ್ತರಷ್ಟು ವಾಹನಗಳು ಅಗ್ನಿಗಾಹುತಿಯಾಗಿವೆ. ವಿದ್ಯಾನಗರ ಪೊಲೀರು ಸ್ವಯಂ ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ1.30 ಕ್ಕೆ ಗ್ರೌಂಡ್‌ನ ಒಂದು ಭಾಗದಲ್ಲಿ ಅಗ್ನಿನಾಹುತ ಉಂಟಾಗಿರುವುದು ನಾಗರಿಕರ ಗಮನಕ್ಕೆ ಬಂದಿತ್ತು. ನಂದಿಸಲು ಪ್ರಯತ್ನವೂ ನಡೆದಿತ್ತು. ಆದರೆ ಗಾಳಿಗೆ ಬೆಂಕಿ ಹರಡಿರುವುದರಿಂದ ಕಾಸರಗೋಡಿನ ಲೀಡಿಂಗ್ ಫಯರ್‌ಮ್ಯಾನ್ ಕೆ. ಸತೀಶನ್ ಅವರ ನೇತೃತ್ವದಲ್ಲಿ ಕಾಸರಗೋಡಿನಿಂದ ಎರಡು ಯೂನಿಟ್ ಹಾಗೂ ಕಾಞಂಗಾಡ್‌ನಿಂದ ಒಂದು ಯೂನಿಟ್ […]

ಮರಳು ಸಾಗಾಟ ಲಂಚಕ್ಕಾಗಿ ಕೈಯೊಡ್ಡಿದ ಪೊಲೀಸ್, ಸ್ಪಂದನ ಚಾನೆಲ್ ವರದಿಗಾರನ ಮೇಲೆ ಹಲ್ಲೆ

Thursday, October 30th, 2014
spandana

ಉಡುಪಿ : ಜಿಲ್ಲೆಯ ಬ್ರಹ್ಮಾವರ ಠಾಣೆಯಲ್ಲಿ ಮರಳು ಸಾಗಾಟಕ್ಕಾಗಿ ಲಂಚಕ್ಕಾಗಿ ಕೈಯೊಡ್ಡುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸ್ಪಂದನ ಚಾನೆಲ್ ಇತ್ತೀಚೆಗೆ ರಹಸ್ಯ ಕಾರ್ಯಾಚರಣೆ ಯನ್ನು ಮಾಡಿತ್ತು. ಈ ಕಾರ್ಯಚರಣೆಯ ಮುಂದುವರಿದ ಭಾಗವಾಗಿ ಚಾನೆಲ್ ನ ವಿಶೇಷ ವರದಿಗಾರ ಬ್ರಹ್ಮಾವರ ಠಾಣೆಗೆ ಹೋಗಿದ್ದಾಗ ರಹಸ್ಯ ಕಾರ್ಯಚರಣೆ ಮಾಡುತ್ತಿರುವುದು ಪೊಲೀಸರ ಅರಿವಿಗೆ ಬಂದು ವರದಿಗಾರರ ಮೇಲೆ ಹಲ್ಲೆ ಮಾಡಲಾಗಿತ್ತು ಮತ್ತು ರಹಸ್ಯ ಕಾರ್ಯಚರಣೆಯ ಕ್ಯಾಮರವನ್ನು ಕಿತ್ತುಕೊಳ್ಳಲಾಗಿತ್ತು. ರಹಸ್ಯ ಕಾರ್ಯಚರಣೆಯಲ್ಲಿ ಬ್ರಹ್ಮಾವರ ಸರ್ಕಲ್ ಇನ್ಸ್ ಫೆಕ್ಟರ್ ಅರುಣ್ ನಾಯಕ್ ಮತ್ತು ಕಾನ್ಸ್ಟೇಬಲ್ […]

ನಕ್ಸಲರ ಮಧ್ಯೆ ಭೀಕರ ಗುಂಡಿನ ಕಾಳಗ ಪೋಲಿಸ್ ಪೇದೆ ಬಲಿ

Sunday, October 9th, 2011
Mahadeva S Mane

ಬೆಳ್ತಂಗಡಿ : ಬೆಳ್ತಂಗಡಿ ಸಮೀಪದ ಸವಣಾಳು ಬಳಿ ಶನಿವಾರ ಮಧ್ಯರಾತ್ರಿ ನಕ್ಸಲ್ ನಿಗ್ರಹ ಪಡೆ ಮತ್ತು ನಕ್ಸಲರ ಮಧ್ಯೆ ಭೀಕರ ಗುಂಡಿನ ಕಾಳಗ ನಡೆದಿದ್ದು ನಕ್ಸಲ್ ನಿಗ್ರಹ ಪಡೆ ಪೇದೆ ಮಾನೆ ಗುಂಡಿಗೆ ಬಲಿಯಾಗಿದ್ದಾರೆ.ನಕ್ಸಲರ ಗುಂಡೇಟಿನಿಂದ ಸ್ಥಳದಲ್ಲೇ ಸಾವನ್ನಪ್ಪಿದ ಕಾನ್ಸ್‌ಟೇಬಲ್ ಮಹದೇವ ಎಸ್.ಮಾನೆ (40 ವರ್ಷ) ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ಗ್ರಾಮದವರು. ಬೆಳ್ತಂಗಡಿಯಿಂದ ಹದಿನೇಳು ಕಿ.ಮೀ ದೂರದಲ್ಲಿರುವ ಸವಣಾಳು ಗ್ರಾಮದ ಬಳಿ ಅರಣ್ಯ ಪ್ರದೇಶದಲ್ಲಿ ನಕ್ಸಲರು ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿ ಪಡೆದ ಸ್ಥಳೀಯ ಪೊಲೀಸರು […]