Blog Archive

ಮಂಜೇಶ್ವರ ತೀಯಾ ಸಮಾಜದ ಸಭಾ ಭವನದ ಉದ್ಘಾಟನೆ

Friday, February 5th, 2016
Tiya Bhavan

ಮಂಜೇಶ್ವರ : ಉದ್ಯಾವರ ಮಾಡದಲ್ಲಿ ನಿರ್ಮಾಣಗೊಂಡ ತೀಯಾ ಸಮಾಜದ ನೂತನ ಸಭಾ ಭವನದ ಉದ್ಘಾಟನೆಯನ್ನು ಬಡಾಜೆ ಬೂಡು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ಇದರ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ತಂತ್ರಿಯವರು ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಮಂಜು ಭಂಡಾರಿ ಉದ್ಯಾವರ ಮಾಡ, ಡಾ.ಎಂ.ಜಯಪಾಲ ಶೆಟ್ಟಿ, ಖ್ಯಾತ ಉದ್ಯಮಿ ರೋಹಿದಾಸ್ ಬಂಗೇರ, ಎಂ.ದಯಾನಂದ ಕನಿಲ,ಶ್ರೀಭಗವತಿ ಕ್ಷೇತ್ರ ಉದ್ಯಾವರದ ಕೃಷ್ಣಪ್ಪ ಬೆಂಗರೆ, ಧಾರ್ಮಿಕ ನೇತಾರ […]

ಮಂಜೇಶ್ವರ ಗೋವಿಂದ ಪೈ ಸ್ಮಾರಕಕ್ಕೆ ವೀರಪ್ಪ ಮೊಯಿಲಿ ಭೇಟಿ

Tuesday, January 19th, 2016
veerappa Moily

ಮಂಜೇಶ್ವರ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕಕ್ಕೆ ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಭಾನುವಾರ ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿದರು. ಬಳಿಕ ಗೋವಿಂದ ಪೈ ನಿವಾಸದಲ್ಲಿ ನಡೆದ ಸಭೆಯಲ್ಲಿ ಸ್ಮಾರಕದ ಉದ್ಘಾಟನಾ ದಿನವನ್ನು ನಿಶದಚಯಿಸಲಾಯಿತು. ಫೆ.28 ರಂದು ಲೋಕಾರ್ಪಣೆಗೊಳ್ಳಲಿರುವ ಸ್ಮಾರಕದ ಅಂತಿಮ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ತಿಗೊಳಿಸಲು ನಿರ್ಮಿತಿ ಕೇಂದ್ರದವರಲ್ಲಿ ಕೇಳಿಕೊಳ್ಳಲಾಯಿತು. ಸಭೆಯಲ್ಲಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಅಧ್ಯಕ್ಷ ವೀರಪ್ಪ ಮೊಯಿಲಿ,ಕಾಸರಗೋಡು ಜಿಲ್ಲಾಧಿಕಾರಿ ಮುಹಮ್ಮದ್ ಸಗೀರ್,ಟ್ರಸ್ಟ್ ಸದಸ್ಯರಾದ ಡಾ.ಡಿ.ಕೆ.ಚೌಟ,ಪ್ರೊ.ಬಿ.ವಿವೇಕ ರೈ,ಡಾ.ರಮಾನಂದ ಬನಾರಿ,ತೇಜೋಮಯ,ಎಂ.ಜೆ.ಕಿಣಿ,ಸುಭಾಶ್ಚಂದ್ರ,ಕೆ.ಆರ್ ಜಯಾನಂದ ಉಪಸ್ಥಿತರಿದ್ದರು.

ರಂಗ ಕಲಾವಿದ ಧರ್ಮೇಂದ್ರ ಅಮೀನ್ ನಿಧನ

Tuesday, December 24th, 2013
Dharmendra Amin

ಮಂಜೇಶ್ವರ: ತುಳು ರಂಗಭೂಮಯಲ್ಲಿ 5000ಕ್ಕೂ ಅಧಿಕ ನಾಟಕಗಳ ಪ್ರದರ್ಶನದ ಮೂಲಕ ದೇಶ ವಿದೇಶದಲ್ಲಿ ಪ್ರಖ್ಯಾತಿಗಳಿಸಿದ ಹಾಸ್ಯ ಕಲಾವಿದ ಧರ್ಮೇಂದ್ರ ಅಮೀನ್ (40), ಹೃದಯಾಘಾತದಿಂದ ಮೃತರಾಗಿದ್ದಾರೆ. ಮೃತರು ಪತ್ನಿ ಸ್ಮಿತಾ, ಓರ್ವ ಪುತ್ರ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ. ಸೋಮವಾರ ಮಂಗಲ್ಪಾಡಿ ಸಮೀಪದ ಸಿರಿಗೋಳಿಯ ಶ್ರೀ ಸದಾಶಿವ ದೇವಸ್ಥಾನದ ವಾರ್ಷಿಕ ಜಾತ್ರಾ ಪ್ರಯುಕ್ತ, ಕಿಶೋರ ಡಿ. ಶೆಟ್ಟಿಯವರ “ಎಲ್ಯ ವಿಷಯ ಮಲ್ಲ ಮಲ್ಪೊಡ್ಚಿ” ಎಂಬ ನಾಟಕ ಪ್ರದರ್ಶನದ ವೇಳೆ ಸುಮಾರು ಮಧ್ಯರಾತ್ರಿ 2 ಗಂಟೆಯ ವೇಳೆಗೆ ನಾಟಕದ ಎರಡನೇ […]

ಕನಿಲ ಶ್ರೀ ಭಗವತೀ ಕ್ಷೇತ್ರದಲ್ಲಿ ಭರಣಿ ಮಹೋತ್ಸವ

Friday, March 22nd, 2013
Kanila Temple

ಮಂಜೇಶ್ವರ : ಕನಿಲ ಶ್ರೀ ಭಗವತೀ  ಕ್ಷೇತ್ರ ಮಂಜೇಶ್ವರ ಕಾಸರಗೋಡು ಜಿಲ್ಲೆ. ಇಲ್ಲಿ ಭರಣಿ ಮಹೋತ್ಸವವು ಮಾರ್ಚ್ 21 ಗುರುವಾರ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜ್ರುಂಭಣೆಯಿಂದ ನಡೆಯಿತು. ರಾತ್ರಿ ನಡೆದ ಧಾರ್ಮಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಮುಜರಾಯಿ ಮತ್ತು ದತ್ತಿ ಇಲಾಖೆ ಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಮಂಜೇಶ್ವವರದ ಗುಡ್ಡದ ಮೇಲಿರುವ ಈ ಸುಂದರ ಕ್ಷೇತ್ರ ಧಾರ್ಮಿಕ ಪಾವಿತ್ರ್ಯತೆ ಹಾಗೂ ಮನಸ್ಸಿನ ನಿಯಂತ್ರಣಕ್ಕೆ ಪ್ರಶಾಂತ ತಾಣ ಎಂದು ಹೇಳಿದರು. ಭಗವಂತನ ನಿತ್ಯ […]

ಹಣಕ್ಕಾಗಿ ವೈದ್ಯಕೀಯ ವಿದ್ಯಾರ್ಥಿ ಅಪಹರಣ

Friday, October 14th, 2011
Medical-Student Kidnap

ಉಳ್ಳಾಲ: ದೇರಳಕಟ್ಟೆಯ ವೈದ್ಯಕೀಯ ಕಾಲೇಜಿನಲ್ಲಿ ಇಂಟರ್ನ್ಶಿಪ್‌ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ತಂಡವೊಂದು ಹಣಕ್ಕಾಗಿ ಬುಧವಾರ ತಡರಾತ್ರಿ ಅಪಹರಣ ನಡೆಸಿದ್ದು, ಗುರುವಾರ ಮುಂಜಾನೆ ಕೇರಳದ ಮಂಜೇಶ್ವರದ ಉದ್ಯಾವರದ ಬಳಿ ಜಖಂಗೊಳಿಸಿ ಬಿಟ್ಟಿದ್ದಾರೆ.   ದೇರಳಟ್ಟೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕಾಂಪ್ಲೆಕ್ಸ್‌ ಒಂದರಿಂದ ವಿದ್ಯಾರ್ಥಿಯನ್ನು ಅಪಹರಿಸಲಾಗಿದ್ದು ಹಣಕ್ಕಾಗಿ ಈ ಅಪಹರಣ ನಡೆದಿದೆ ಎನ್ನಲಾಗಿದೆ. ಕಾಲೇಜಿನ ಎದುರಿಗಿರುವ ಫ್ಲಾಟ್‌ನಲ್ಲಿ ವಿದ್ಯಾರ್ಥಿ ವಾಸವಾಗಿದ್ದ. ವಿದ್ಯಾರ್ಥಿಯನ್ನು ಕೇರಳದ ತ್ರಿಶೂರ್‌ ನಿವಾಸಿ ಮಹಮ್ಮದ್‌ ನೆಬಿಲ್‌(23) ಎಂದು ಗುರುತಿಸಲಾಗಿದೆ. ನೆಬಿಲ್‌ನ ತಂದೆ ತಾಯಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು ಕಾಂಪ್ಲೆಕ್ಸ್‌ ನ ಣಕಾಸಿನ ವ್ಯವಹಾರ ನೆಬಿಲ್‌ […]

ರಸ್ತೆ ಅಫಘಾತ ಮಂಜೇಶ್ವರ ಆನೆಕಲ್ಲು ನಿವಾಸಿ ಸಾವು

Tuesday, August 9th, 2011
Car Accident/ ರಸ್ತೆ ಅಫಘಾತ

ನೆಲ್ಯಾಡಿ : ರಾಷ್ಟ್ರೀಯ ಹೆದ್ದಾರಿ 48 ರ ನೆಲ್ಯಾಡಿ ಸಮೀಪದ ಗೋಳಿತ್ತೂಟ್ಟು ಎಂಬಲ್ಲಿ ರಿಟ್ಜ್ ಕಾರು ಮತ್ತು ಟಿಪ್ಪರ್‌ ಡಿಕ್ಕಿ ಹೊಡೆದು ಓರ್ವ ಆಸ್ಪತ್ರೆಗೆ ಸಾಗಿಸುವಾಗ ದಾರಿಯಲ್ಲೇ ಮೃತ ಪಟ್ಟ ಘಟನೆ ನಿನ್ನೆ ನಡೆದಿದೆ. ಮೃತರು ಮಂಜೇಶ್ವರ ಆನೆಕಲ್ಲು ನಿವಾಸಿ ಮಮ್ಮದರ ಪುತ್ರ ಅಬ್ದುಲ್‌ ರಝಾಕ್‌(36ವ).ಇವರು ಈಗ 2 ವರ್ಷಗಳಿಂದ ಉಪ್ಪಿನಂಗಡಿ ಸಮೀಪದ 34ನೇ ನೆಕ್ಕಿಲಾಡಿಯಲ್ಲಿ ಬಾಡಿಗೆಗೆ ವಾಸವಿದ್ದು ಬ್ರೋಕರ್‌ ಕೆಲಸ ಮಾಡುತ್ತಿದ್ದರು.ಇವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿರುತ್ತಾರೆ. ಟಿಪ್ಪರ್‌ ಜಲ್ಲಿ ಇಳಿಸಲು ಹಿಂದಕ್ಕೆ ಚಲಾಸುತ್ತಿದ್ದಾಗ […]