Blog Archive

ಸಾರಿಗೆ ಬಸ್- ಟಿಪ್ಪರ್ ಮುಖಾಮುಖಿ ಡಿಕ್ಕಿ: ಎರಡೂ ವಾಹನಗಳು ಹಳ್ಳಕ್ಕೆ!

Monday, October 29th, 2018
accident

ಮೈಸೂರು: ಸಾರಿಗೆ ಬಸ್- ಟಿಪ್ಪರ್ ಮುಖಾಮುಖಿ ಡಿಕ್ಕಿ ಹೊಡೆದು, ಎರಡೂ ವಾಹನಗಳು ಹಳ್ಳಕ್ಕೆ ಬಿದ್ದ ಘಟನೆ ಹುಣಸೂರು ರಸ್ತೆಯಲ್ಲಿ ನಡೆದಿದೆ. ಹುಣಸೂರು ಮುಖ್ಯರಸ್ತೆ ಬಿಳಿಕೆರೆ ಸಮೀಪದ ಮಲ್ಲಿನಾಥಪುರದ ಬಳಿ ಘಟನೆ ನಡೆದಿದ್ದು, ಈ ಅವಘಡದಿಂದ ಓರ್ವ ಯುವತಿಯ ಸ್ಥಿತಿ ಗಂಭೀರವಾಗಿದೆ. ಪಿರಿಯಾಪಟ್ಟಣದಿಂದ ಮೈಸೂರು ಕಡೆ ಬರುತ್ತಿದ್ದ ಸರ್ಕಾರಿ ಬಸ್ಗೆ ಎದುರಿನಿಂದ ಹೋಗುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ಎರಡೂ ವಾಹನಗಳು ಹಳ್ಳಕ್ಕೆ ಉರುಳಿ ಬಿದ್ದಿವೆ. ಅಪಘಾತದಿಂದ ಬಸ್ನಲ್ಲಿದ್ದ ಓರ್ವ ಯುವತಿ ಸ್ಥಿತಿ ಗಂಭೀರವಾಗಿದ್ದು, ಓರ್ವ ಬಾಲಕಿಗೆ ಸಣ್ಣಪುಟ್ಟ […]

ಶ್ರೀಕಂಠದತ್ತ ಒಡೆಯರ್​​​​​ ಸಹೋದರಿ ವಿಶಾಲಾಕ್ಷಿ ದೇವಿ ನಿಧನ

Saturday, October 20th, 2018
shrikanta-datta

ಮೈಸೂರು: ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಹಿರಿಯ ಸಹೋದರಿ ವಿಶಾಲಾಕ್ಷಿ ದೇವಿ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಸಂಜೆ ನಿಧನರಾಗಿದ್ದಾರೆ. ರಾಜ ಮನೆತನಕ್ಕೆ ಇಂದು ವಿಜಯ ದಶಮಿ ದಿನ ಎರಡೆರಡು ಸಾವು ಕಾಣುವಂತಾಗಿದೆ. ಬೆಳಗ್ಗೆ ಪ್ರಮೋದಾದೇವಿ ಒಡೆಯರ್ ಅವರ ತಾಯಿ ನಿಧನರಾಗಿದ್ದರು. ಸಂಜೆ ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್ ಅವರ ಹಿರಿಯ ಅಕ್ಕ ವಿಶಾಲಾಕ್ಷಿ ದೇವಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಿಶಾಲಾಕ್ಷಿ ದೇವಿಯವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಇವರ ನಿಧನದ ಸುದ್ದಿ […]

ಧಾರವಾಡದ ಪೈ.ಸದಾಶಿವರಿಗೆ ದಸರಾ ಕೇಸರಿ

Tuesday, October 16th, 2018
dasara

ಮೈಸೂರು: 74 ಕೆಜಿ ವಿಭಾಗದ ಅಂತಿಮ ಕುಸ್ತಿ ಪಂದ್ಯದಲ್ಲಿ ಪೈ.ವೆಂಕಟೇಶ್ ವಿರುದ್ಧ 5-0 ಅಂಕಗಳಿಂದ ಧಾರವಾಡದ ಪೈ.ಸದಾಶಿವ ನಾಲ್ವಡೆ ಜಯ ಪಡೆಯುವ ಮೂಲಕ ದಸರಾ ಕೇಸರಿ ಪ್ರಶಸ್ತಿಗೆ ಭಾಜನರಾದರು. ದಸರಾ ಮಹೋತ್ಸವದ ಅಂಗವಾಗಿ ಐದು ದಿನಗಳಿಂದ ನಡೆಯುತ್ತಿರುವ ಕುಸ್ತಿ ಪಂದ್ಯಾವಳಿಯಲ್ಲಿ ಕೊನೆಯ ದಿನವಾದ ನಿನ್ನೆ ಮದಗಜಗಳಂತೆ ಕಾದಾಡಿದ ಕುಸ್ತಿಪಟುಗಳನ್ನು ನೋಡಿ ಕುಸ್ತಿ ಪ್ರಿಯರು ಸಂತಸಗೊಂಡರು. ಧಾರವಾಡದ ಪೈ.ಸದಾಶಿವ ಹಾಗೂ ಪೈ.ವೆಂಕಟೇಶ್ ವಿರುದ್ಧ ನಡೆದ ರೋಚಕ ಕ್ಷಣದಲ್ಲಿ ಸದಾಶಿವ ಗೆಲುವಿನ ನಗೆ ಬೀರಿದರು. ೫೭ ಕೆ.ಜಿ. ವಿಭಾಗದ ಮೈಸೂರು […]

ಮೈಸೂರು ದಸರಾ ಉತ್ಸವಕ್ಕೆ ಚಾಲನೆ ನೀಡಿದ ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ

Thursday, October 11th, 2018
kumarswamy

ಮೈಸೂರು: ಕರ್ನಾಟಕ ಸರ್ಕಾರ ಭೂಮಿ ನೀಡಿದರೆ ಇನ್ಫೋಸಿಸ್ ವತಿಯಿಂದ ಕೊಡಗು ಜಿಲ್ಲೆಯ ಪ್ರವಾಹ ಪೀಡಿತರಿಗೆ ವಸತಿ ಕಲ್ಪಿಸಿಕೊಡಲಾಗುವುದು ಎಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ತಿಳಿಸಿದ್ದಾರೆ. ಅವರು ಇಂದು ಬೆಳಗ್ಗೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದೇವಿ ಚಾಮುಂಡಿಗೆ ಪುಷ್ಪಾರ್ಚನೆ ಸಲ್ಲಿಸಿ 9 ದಿನಗಳ ನವರಾತ್ರಿ ಹಾಗೂ 10ನೇ ದಿನ ವಿಜಯದಶಮಿಯ ನಾಡಹಬ್ಬಕ್ಕೆ ಅಧಿಕೃತ ಚಾಲನೆ ನೀಡಿ ಮಾತನಾಡಿದರು. ಸರ್ಕಾರ ಮಾಡುವ ಯಾವುದೇ ಕೆಲಸದಲ್ಲಿ ನಾವು ಕೈಜೋಡಿಸುವುದು ನಮ್ಮ ಕೆಲಸವಾಗಿದೆ, ನಮಗೆ ಸಮಾಜದಿಂದ ಸಿಕ್ಕಿದ ಹಣ ಮತ್ತೆ ಸಮಾಜಕ್ಕೆ […]

ರಾಜ್ಯದ ಜನರ ಆಶೀರ್ವಾದದಿಂದ ದರ್ಶನ್ ಆರೋಗ್ಯವಾಗಿದ್ದಾರೆ: ರವಿಶಂಕರ್

Friday, September 28th, 2018
ravishankar

ಮೈಸೂರು: ಚಾಮುಂಡೇಶ್ವರಿ ತಾಯಿ ಹಾಗೂ ರಾಜ್ಯದ ಜನರ ಆಶೀರ್ವಾದದಿಂದ ದರ್ಶನ್ ಆರೋಗ್ಯವಾಗಿದ್ದಾರೆ. ಅವರನ್ನು ಎರಡು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾಜ್೯ ಮಾಡಲಾಗುವುದು ಎಂದು ನಟ ರವಿಶಂಕರ್ ಹೇಳಿದ್ದಾರೆ. ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ದರ್ಶನ್ ಆರೋಗ್ಯ ವಿಚಾರಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದರ್ಶನ್ ಅವರೊಂದಿಗೆ ಮಾತನಾಡಿದ್ದೇನೆ. ಅವರ ಆರೋಗ್ಯದಲ್ಲಿ ಚೇತರಿಕೆಯಾಗುತ್ತಿದೆ.‌ ಅಭಿಮಾನಿಗಳ ಹಾಗೂ ದೇವರ ಆಶೀರ್ವಾದದಿಂದ ಹೆಚ್ಚಿನ ಅನಾಹುತವಾಗಿಲ್ಲವೆಂದು ಮಾತನಾಡಿದರು ಎಂದು ತಿಳಿಸಿದರು.

ಅರಮನೆಗೆ ಗೌರವಧನ ನೀಡುವ ಬಗ್ಗೆ ವಿವಾದ ಬೇಡ: ಸಚಿವ ಜಿಟಿಡಿ

Tuesday, September 18th, 2018
aramane

ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಅರಮನೆ ಹಾಗೂ ಸರ್ಕಾರ ಒಟ್ಟಿಗೆ ಹೋಗಲಿದ್ದು, ಇದರಲ್ಲಿ ಯಾವುದೇ ಅನುಮಾನ ಬೇಡ. ದಸರಾ ಮಹೋತ್ಸವದ ಸಂದರ್ಭದಲ್ಲಿ ರಾಜವಂಶಸ್ಥರಿಗೆ ಸರ್ಕಾರದಿಂದ ಪ್ರತಿ ವರ್ಷದಂತೆ ಗೌರವಧನ ನೀಡಲಿದ್ದು, ಈ ವಿಷಯದ ಬಗ್ಗೆ ಯಾವುದೇ ವಿವಾದ ಸೃಷ್ಟಿಸಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು. ನಗರದ ವಿಶ್ವವಿದ್ಯಾನಿಲಯ ಕ್ರಾಫರ್ಡ್ ಭವನದಲ್ಲಿ ರಾಜ್ಯದ ಎಲ್ಲಾ ಕುಲಪತಿಗಳೊಂದಿಗೆ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜವಂಶಸ್ಥರು ಹೇಳಿರುವಂತೆ ಸರ್ಕಾರದಿಂದ ನಡೆಸುವುದು ನಾಡಹಬ್ಬವಾಗಿದ್ದು, ಇದು ಸಹ […]

ರೈತರಿಬ್ಬರ ಮೇಲೆ ಜೇನುಹುಳಗಳು ದಾಳಿ..ಓರ್ವನ ಸಾವು!

Saturday, September 15th, 2018
died-mysore

ಮೈಸೂರು: ಹುಣಸೂರು.ತಾ. ಹನಗೋಡು ಸಮೀಪದ ಅಬ್ಬೂರಿನಲ್ಲಿ ರೈತರಿಬ್ಬರ ಮೇಲೆ ಜೇನುಹುಳಗಳು ದಾಳಿ ನಡೆಸಿದ್ದು, ಒಬ್ಬರು ಸಾವನ್ನಪ್ಪಿದ್ದು ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಅಬ್ಬೂರಿನ ರೈತ ಶಂಕರೇಗೌಡ ಸಾವಿಗೀಡಾದ ವ್ಯಕ್ತಿ ಹಾಗೂ ಇದೇ ಗ್ರಾಮದ ರಾಮೇಗೌಡ ಗಾಯಗೊಂಡ ರೈತ. ಈ ಇಬ್ಬರು ರೈತರು ಬೆಳಗ್ಗೆ ಶಂಕರೇಗೌಡರ ಜಮೀನಿನಲ್ಲಿ ಮುಸುಕಿನ ಜೋಳ ಕಟಾವು ಮಾಡುತ್ತಿದ್ದ ವೇಳೆ ಹೆಜ್ಜೇನು ದಾಳಿ ನಡೆಸಿದೆ. ದಾಳಿಗೊಳಗಾದ ರೈತರ ಕೂಗಾಟ ಚೀರಾಟ ಕೇಳಿದ ಪಕ್ಕದ ಜಮೀನಿನಲ್ಲಿ ಜೋಳ ಕಟಾವು ಮಾಡುತ್ತಿದ್ದ ರೈತರು, ಜೋಳದ ಗುಡ್ಡೆಗೆ […]

ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ: ಶೋಭಾ ಕರದ್ಲಾಂಜೆ

Friday, July 27th, 2018
shobha-karandlaje

ಮೈಸೂರು : ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಸಂಸದೆ ಶೋಭಾ ಕರದ್ಲಾಂಜೆ ಹೇಳಿದ್ದಾರೆ. ಮೈಸೂರಿನಲ್ಲಿ ಈ ಬಗ್ಗೆ ನಗುತ್ತಲೇ ಹೇಳಿಕೆ ನೀಡುವ ಮೂಲಕ ಎಲ್ಲ ಅಚ್ಚರಿಗೆ ಕಾರಣವಾಗಿದ್ದಾರೆ. ಆಶಾಢ ಮಾಸದ ಎರಡನೇ ಶುಕ್ರವಾರವಾದ ಇಂದು ಸಂಸಸೆ ಶೋಭಾ ಕರಂದ್ಲಾಜೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದರು. ನಡೆದುಕೊಂಡೇ ಮೆಟ್ಟಿಲು ಏರಿದ ಅವರು, ಇದಕ್ಕೂ ಮುನ್ನ ಮಾಧ್ಯಮಗಳ ಜತೆ ಮಾತನಾಡಿ ಈ ಸ್ಫೋಟಕ ವಿಷಯ ಹೊರಗಡೆವಿ ಅಚ್ಚರಿಗೆ ಕಾರಣವಾದರು. ಮುಂಬರುವ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯನ್ನು ಸರ್ವೇ […]

ಬೈಕ್ ಗೆ ಲಾರಿ ಡಿಕ್ಕಿ..ಅಣ್ಣ ತಂಗಿ ಸಾವು..!

Thursday, July 12th, 2018
accident

ಮೈಸೂರು: ಬೈಕ್ ಗೆ ಲಾರಿ ಡಿಕ್ಕಿ ಹೊಡೆದು ಅಣ್ಣ ತಂಗಿ ಸಾವನ್ನಪ್ಪಿದ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಬಳಿ ಸಂಭವಿಸಿದೆ. ಅಮೋಘ್ (18) ಹಾಗೂ ಅಮೃತಾ (14)ಮೃತ ದುರ್ದೈವಿಗಳು. ಇವರು ಪಿರಿಯಾಪಟ್ಟಣ ತಾಲೂಕು ಗೊರಳ್ಳಿ ಗ್ರಾಮದ ಅಧ್ಯಕ್ಷರಾದ ಜಗದೀಶ್ ರವರ ಮಕ್ಕಳು. ನಿನ್ನೆ ರಾತ್ರಿ ಪಾನಿಪುರಿ ತಿನ್ನಲು ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭ ಲಾರಿ ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ ಇವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಅಮೋಘ್, ಅಮೃತಾ […]

ಮೈಸೂರು -ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ..ಆಗಸ್ಟ್​​ 31ರವರೆಗೆ ಅನ್ವಯ!

Friday, July 6th, 2018
kodagu

ಕೊಡಗು: ಜಿಲ್ಲೆಯ ಮೈಸೂರು -ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ – 275 ಸೇರಿದಂತೆ ಅಂತಾರಾಜ್ಯ ಸಂಪರ್ಕ ಕಲ್ಪಿಸುವ ಹೆದ್ದಾರಿಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ನಿಯಮ ಆಗಸ್ಟ್ 31ರವರೆಗೆ ಅನ್ವಯವಾಗಲಿದೆ ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಈ ಹೆದ್ದಾರಿಗಳಲ್ಲಿ ಮರಳು, ಮರದ ದಿಮ್ಮಿ ಸೇರಿದಂತೆ ಕಂಟೇನರ್ಗಳು ತೆರಳುವುದರಿಂದ ರಸ್ತೆ ಕುಸಿಯುತ್ತಿದ್ದು, ರಸ್ತೆಯ ಇಕ್ಕೆಲಗಳಿಗೂ ಹಾನಿಯುಂಟಾಗುತ್ತಿದೆ. ಇದರಿಂದ ಅಪಘಾತ ನಡೆದು ಸ್ಥಳೀಯರ ಆಸ್ತಿಪಾಸ್ತಿಗೂ ಹಾನಿಯಾಗುತ್ತಿದೆ. ಆದ್ದರಿಂದ ಇದನ್ನೆಲ್ಲಾ ತಡೆಯಲು ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಕೊಡಗು ಜಿಲ್ಲೆ ಒಂದು […]