Blog Archive

ಸಿಎ-ಸಿಪಿಟಿಯಲ್ಲಿ ಆಳ್ವಾಸ್ ಅತ್ಯುತ್ತಮ ಸಾಧನೆ

Saturday, July 21st, 2018
alwas-clg

ಮೂಡುಬಿದಿರೆ: ಆಳ್ವಾಸ್ ಪಿಯು ಕಾಲೇಜಿನ 147 ಮಂದಿ ವಿದ್ಯಾರ್ಥಿಗಳು ಸಿಎ-ಸಿಪಿಟಿ ಪರೀಕ್ಷೆ ಬರೆದಿದ್ದು, ಅದರಲ್ಲಿ 74 ಮಂದಿ ತೇರ್ಗಡೆ ಹೊಂದಿದ್ದಾರೆ. 9ಮಂದಿ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಆಳ್ವಾಸ್ ವಿದ್ಯಾರ್ಥಿಗಳಾದ ಅಶ್ವಿನಿ ಶೆಣೈ, ನೂತನ್ ಬಿ.ಯು, ಶುಭಕರ್ ಎ.ಚೌಗಲೆ, ಹರ್ಷಿತ್ ವಿ., ರಕ್ಷಾ ರಮೇಶ್ ಶೆಟ್ಟಿ, ಹರ್ಷಿತ್ ವೈ, ಶ್ರೇಯಾ ಡಿ., ಸುಕ್ಷ್ಮಾ ಎಸ್.ಆಚಾರ್ಯ, ಭರತ್ ಗಜಾನನ ಹೆಗ್ಡೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು. ವಿದ್ಯಾರ್ಥಿಗಳಾ ಸಾಧನೆಗೆ ಆಳ್ವಾಸ್ ಶಿಕ್ಷಣ […]

ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ಆತ್ಮಹತ್ಯೆ ಪ್ರಕರಣ..ಎಸ್ಐಟಿಗೆ ನೀಡಬೇಕೆಂದು ಕಾವ್ಯ ಹೆತ್ತವರ ಆಗ್ರಹ!

Saturday, July 7th, 2018
kavya

ಮಂಗಳೂರು: ಕಳೆದ ವರ್ಷ ಜುಲೈ 20 ರಂದು ನಡೆದ ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ಆತ್ಮಹತ್ಯೆ ಪ್ರಕರಣವನ್ನು ಎಸ್ಐಟಿಗೆ ನೀಡಬೇಕೆಂದು ಕಾವ್ಯ ಹೆತ್ತವರು ಮತ್ತು ಜಸ್ಟಿಸ್ ಫಾರ್ ಕಾವ್ಯ ಹೋರಾಟ ಸಮಿತಿ ಆಗ್ರಹಿಸಿದೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾವ್ಯ ತಾಯಿ ಬೇಬಿ ಪೂಜಾರಿ, ಕಾವ್ಯ ಮೃತಪಟ್ಟು ವರ್ಷವಾಗುತ್ತಿದೆ. ಆದರೆ ಮಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಗತಿಯ ಬಗ್ಗೆ ಪೊಲೀಸ್ ಇಲಾಖೆ ಮಾಹಿತಿ ನೀಡುತ್ತಿಲ್ಲ. ಕೇಳಿದರೆ ಒಂದು ವರದಿ ಬರಲು ಬಾಕಿಯಿದೆ ಎನ್ನುತ್ತಾರೆ ಎಂದರು. ಜಸ್ಟಿಸ್ ಫಾರ್ ಕಾವ್ಯ ಹೋರಾಟ […]

58ನೇ ಅಂತರ್‌ರಾಜ್ಯ ಸೀನಿಯರ್ ನ್ಯಾಶನಲ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್‌ಗೆ 9 ಪದಕ

Tuesday, July 3rd, 2018
Alvas

ಮೂಡುಬಿದಿರೆ: ಅಸ್ಸಾಂನ ಗುಹಾಟಿಯಲ್ಲಿ ನಡೆದ 58ನೇ ಅಂತರ್ ರಾಜ್ಯ ಸೀನಿಯರ್ ನ್ಯಾಶನಲ್ ಕ್ರೀಡಾಕೂಟದಲ್ಲಿ ಪುರುಷರ ವಿಭಾಗದ 400ಮೀ ಹಡಲ್ಸ್‌ನಲ್ಲಿ ಆಳ್ವಾಸ್  ವಿದ್ಯಾರ್ಥಿಗಳಾದ ಧಾರುಣ್ 49.68 ಸೆಕುಂಡುಗಳಲ್ಲಿ ಕ್ರಮಿಸಿ ಚಿನ್ನದ ಪದಕ, 100 ಮೀಟರ್ನಲ್ಲಿ ಇಲಾಕ್ಯದಾಸನ್ 10.39 ಸೆಕುಂಡುಗಳಲ್ಲಿ ಕ್ರಮಿಸಿ ಚಿನ್ನ ಮತ್ತು 200 ಮೀಟರ್ನಲ್ಲಿ 21.31 ಸೆಕುಂಡುಗಳಲ್ಲಿ ಕ್ರಮಿಸಿ ಬೆಳ್ಳಿ, ಮಹಿಳೆಯರ ವಿಭಾಗದ ಎತ್ತರ ಜಿಗಿತದಲ್ಲಿ ಏಂಜಲ್ ದೇವಸ್ಯ 1.78 ಮೀಟರ್ ಎತ್ತರ ಜಿಗಿದು ಚಿನ್ನದ ಪದಕ, ಅದೇ ರೀತಿ ಎತ್ತರ ಜಿಗಿತದಲ್ಲಿ ಅಭಿನಯ ಶೆಟ್ಟಿ 1.70 […]

ನಾಟಾ: ಆಳ್ವಾಸ್ ನ 326 ವಿದ್ಯಾರ್ಥಿಗಳು ತೇರ್ಗಡೆ

Monday, June 18th, 2018
alwas-college

ಮೂಡುಬಿದಿರೆ: ನಾಟಾ( ನ್ಯಾಶನಲ್ ಅಪ್ಟಿಡ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್) ರಾಷ್ಟ್ರೀಯ ಪರೀಕ್ಷೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಪಿಯು ಕಾಲೇಜಿನ 326 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ನಾಟಾ ರಾಜ್ಯ ರ್ಯಾಂಕ್ ಪ್ರಕಟಗೊಂಡಿದ್ದು ವೈಷ್ಣವಿ ನಾಯಕ್ 2ನೇ ಹಾಗೂ ಶಶಾಂಕ್ ಡಿ. 5ನೇ ರ್ಯಾಂಕ್ ಪಡೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಅಳ್ವ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಧಿ ಜಿ.ಎ(11ನೇ ರ್ಯಾಂಕ್), ವೇಣುಗೋಪಾಲ ಕೆ.ಆರ್ (29), ಅಖಿಲ್ ಎಸ್.ಆರ್(46), ನೇಹಾ ಕಿಣಿ(50), ವರ್ಷಿಣಿ ಕೆ.ಎಸ್(54), ತೇಜಸ್ವಿನಿ […]

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಇಫ್ತಾರ್ ಕೂಟ

Thursday, June 14th, 2018
iftar-kuta

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಇಫ್ತಾರ್ ಕೂಟ ನಡೆಯಿತು. ಎಷ್ಟೇ ಶ್ರೀಮಂತ ಇರಲಿ, ಬಡವನಿರಲಿ ಪ್ರತಿಯೊಬ್ಬರಿಗೂ ಹಸಿವಿನ ಮಹತ್ವ ಅರಿಯಲು, ದೀನರ ನೋವುಗಳು ತಿಳಿಯಲು ಪವಿತ್ರ ರಂಝಾನ್ ತಿಂಗಳಲ್ಲಿ ಉಪವಾಸ ಆಚರಿಸುತ್ತೇವೆ. ಇಸ್ಲಾಂನ ಪ್ರತಿಯೊಂದು ಆಚರಣೆಗಳು ಸಾಮಾಜಿಕ, ಮಾನವೀಯ ಹಿನ್ನೆಲೆಯಲ್ಲಿರುವಂತದ್ದು. ವಿಶ್ವದಲ್ಲಿ ಇಸ್ಲಾಂ ಧರ್ಮದ ಬಗ್ಗೆ ತಪ್ಪು ಗ್ರಹಿಕೆಗಳಿವೆ. ಇಸ್ಲಾಂ ಆಗಲಿ ಯಾವುದೇ ಧರ್ಮವಾಗಲಿ ಕೋಮುವಾದಕ್ಕೆ ಮಣೆ ನೀಡುವುದಿಲ್ಲ. ಎಲ್ಲ ಧರ್ಮಗಳಲ್ಲಿರುವಂತೆ ಇಸ್ಲಾಂ ಕೂಡ ಮಾನವೀಯ ಆದರ್ಶಗಳನ್ನು ಪ್ರತಿಪಾಧಿಸುತ್ತದೆ. ಕೋಮುವಾದ, ಉಗ್ರವಾದಗಳನ್ನು ಎಂದಿಗೂ ಇಸ್ಲಾಂ ಧರ್ಮ […]

ಆಳ್ವಾಸ್‍ನಲ್ಲಿ ಎನ್‍ಸಿಸಿ ನೌಕದಳ ಶಿಬಿರ

Wednesday, June 6th, 2018
alwas-NCC

ಮೂಡುಬಿದಿರೆ: ಇಲ್ಲಿನ ವಿದ್ಯಾಗಿರಿಯಲ್ಲಿರುವ ಆಳ್ವಾಸ್ ನುಡಿಸಿರಿ ಸಭಾಂಗಣದಲ್ಲಿ ಎನ್‍ಎನ್‍ಸಿ ನೌಕದಳದ ವಾರ್ಷಿಕ ಶಿಬಿರ ಕಳೆದ ಆರು ದಿನಗಳಿಂದ ನಡೆಯುತ್ತಿದ್ದು, ಬುಧವಾರ ಕರ್ನಾಟಕ-ಗೋವಾ ಡೈರಕ್ಟರ್‍ನ ಎನ್‍ಸಿಸಿ ಡೆಪ್ಯುಟಿ ಡೈರೆಕ್ಟರ್ ಜನರಲ್ ಬ್ರಿಗೇಡಿಯರ್ ಡಿ.ಎಂ ಪೂರ್ವಿಮಠ್ ಬೇಟಿ ನೀಡಿ ಕೆಡೆಟ್‍ಗಳ ಜೊತೆ ಸಮಾಲೋಚನೆ ನಡೆಸಿದರು. ಕೆಡೆಟ್‍ಗಳ ಗೌರವರಕ್ಷೆ ಸ್ವೀಕರಿಸಿದ ಬಳಿಕ ಕೆಡೆಟ್‍ಗಳ ಬಳಿ ಶಿಬಿರ, ತರಬೇತಿ ಬಗ್ಗೆ ಮಾಹಿತಿ ಪಡೆದರು. ಬಳಿಕ ಕೆಡೆಟ್‍ಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಎನ್‍ಸಿಸಿ ಕೆಡೆಟ್‍ಗಳು ಶಿಬಿರದಲ್ಲಿ ಪಡೆಯುವ ಜ್ಞಾನ, ಶಿಸ್ತನ್ನು ತಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕು. […]

ನೀಟ್: ಆಳ್ವಾಸ್ ದಾಖಲೆಯ ಫಲಿತಾಂಶ

Wednesday, June 6th, 2018
alwas-college

ಮೂಡುಬಿದಿರೆ: 2018ರಲ್ಲಿ ನಡೆದ ರಾಷ್ಟ್ರೀಯ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆಗೆ ಮೂಡುಬಿದಿರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 3,648 ವಿದ್ಯಾರ್ಥಿಗಳು ಹಾಜರಾಗಿದ್ದು, ಅವರಲ್ಲಿ 3,284 ವಿದ್ಯಾರ್ಥಿಗಳು ಅರ್ಹತೆಯನ್ನು ಪಡೆಯುವ ಮೂಲಕ ಶೇ.90.02 ದಾಖಲೆಯ ಫಲಿತಾಂಶವನ್ನು ದಾಖಲಿಸಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 26 ವಿದ್ಯಾರ್ಥಿಗಳು 500ಕ್ಕೂ ಹೆಚ್ಚು ಅಂಕಗಳನ್ನು ಪಡೆದಿರುತ್ತಾರೆ. ಇದಲ್ಲದೆ 224 ವಿದ್ಯಾರ್ಥಿಗಳು 400ಕ್ಕಿಂತಲೂ ಅಧಿಕ ಅಂಕಗಳನ್ನು ಪಡೆದಿರುತ್ತಾರೆ. ರಾಷ್ಟ್ರೀಯ ಮಟ್ಟದಲ್ಲಿ ಕೆಟಗೆರೆ […]

ಏಷ್ಯನ್ ಜೂನಿಯರ್ ಕ್ರೀಡಾಕೂಟಕ್ಕೆ ಆಳ್ವಾಸ್ ನ 5 ಕ್ರೀಡಾಪಟುಗಳು

Monday, June 4th, 2018
alwas-sports

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಕಾಲೇಜಿನ ಕ್ರೀಡಾಪಟುಗಳು ಮತ್ತೆ ದೇಶದ ಗಮನ ಸೆಳೆದಿದ್ದಾರೆ. ಜಪಾನ್‍ನ ಗಿಫುನಲ್ಲಿ ಜೂನ್ 6ರಿಂದ 10ರವರೆಗೆ ನಡೆಯಲಿರುವ 18ನೇ ಏಷ್ಯನ್ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಭಾರತ ತಂಡಕ್ಕೆ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ 5 ಮಂದಿ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಕಳೆದ ತಿಂಗಳು ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ಈ ಕ್ರೀಡಾಪಟುಗಳು ಪದಕದ ಸಾಧನೆಯನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಕ್ರೀಡಾಪಟುಗಳು ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆದಿದ್ದಾರೆ. […]

ಆಳ್ವಾಸ್ ಪಿಯು ಕಾಲೇಜು ಅತ್ಯುನ್ನತ ಸಾಧನೆ

Saturday, June 2nd, 2018
alwas-cet

ಮೂಡುಬಿದಿರೆ: 2018ನೇ ಸಾಲಿನ ಸಿಇಟಿ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು ಗರಿಷ್ಠ ವಿದ್ಯಾರ್ಥಿಗಳ ತೇರ್ಗಡೆಯೊಂದಿಗೆ ಅತ್ಯುನ್ನತ ಸಾಧನೆ ಮಾಡಿದೆ. ಇಂಜಿನಿಯರಿಂಗ್, ಬಿ.ಎಸ್ ಅಗ್ರಕಲ್ಚರ್, ವಟರ್ನರಿ ಸೈನ್ಸ್, ಬಿ.ಫಾರ್ಮ, ಡಿ.ಫಾರ್ಮ, ಬಿ.ಎಸ್ ಅಗ್ರಿಕಲ್ಚರ್ ಪ್ರಾಕ್ಟಿಕಲ್, ವೆಟರರ್ನರಿ ಸೈನ್ಸ್ ಪ್ರಾಕ್ಟಿಕಲ್ ವಿಷಯಗಳನ್ನು ಸೇರಿ 1ರಿಂದ 100 ಒಳಗಡೆ 99 ರ್ಯಾಂಕ್, 200 ಒಳಗಡೆ 224, 300 ಒಳಗಡೆ 312 ರ್ಯಾಂಕ್, 400 ಒಳಗಡೆ 412 ರ್ಯಾಂಕ್, 500 ಒಳಗಡೆ 498 ರ್ಯಾಂಕ್ ಗಳಿಸಿದೆ. ಇಂಜಿನಿಯರಿಂಗ್ ವಿಭಾಗದಲ್ಲಿ ಶಶಾಂಕ್ ಡಿ. 12 […]

ಎಸೆಸೆಲ್ಸಿಯಲ್ಲಿ ಮೂಡುಬಿದಿರೆಯ ಪ್ರಾಂಶುಲಾ ಪ್ರಶಾಂತ್ ರಾಜ್ಯಕ್ಕೆ ದ್ವಿತೀಯ..!

Monday, May 7th, 2018
pranshul-prashanth

ಮೂಡುಬಿದಿರೆ: ಮಾರ್ಚ್-ಎಪ್ರಿಲ್‌ನಲ್ಲಿ ನಡೆದ 2017-18ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಾಂಶುಲಾ ಪ್ರಶಾಂತ್ 624(99.84 ಶೇ.) ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 8 ಮಂದಿ 624 ಅಂಕಗಳನ್ನು ಗಳಿಸಿದ್ದಾರೆ. ಪ್ರಾಂಶುಲಾ ಪ್ರಶಾಂತ್ ಮೂಲತಃ ಮೂಡುಬಿದಿರೆ ಕೀರ್ತಿ ನಗರದ ನಿವಾಸಿಯಾಗಿರುವ ಪ್ರಶಾಂತ್ ಕುಮಾರ್ ಮತ್ತು ಚೇತನಾ ದಂಪತಿಯ ಪುತ್ರಿ.