ಉಡುಪಿ : ಕಾಪು ತಾಲ್ಲೂಕಿನಾದ್ಯಂತ ಮಂಗಳವಾರ ಸಂಜೆ ಸಿಡಿಲು, ಮಿಂಚು, ಗಾಳಿ ಸಹಿತ ಭಾರೀ ಮಳೆಯಾಗಿದೆ. ಕೆಲವಡೆ ಗಾಳಿ, ಸಿಡಿಲು ಸಹಿತ ಮಳೆಯಾಗಿದೆ. ಹಲವು ಕಡೆಗಳಲ್ಲಿ ಚರಂಡಿಯ ವ್ಯವಸ್ಥೆ ಸರಿಪಡಿಸದೆ ಇರುವುದರಿಂದ ರಸ್ತೆಯಲ್ಲೇ ನೀರು ಹರಿದು ಹೋಗುವಂತಾಯಿತು. ಪಡುಬಿದ್ರಿ ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಸಮರ್ಪಕ ಕಾಮಗಾರಿಯಿಂದ ಸರ್ವೀಸ್ ರಸ್ತೆಯಲ್ಲಿ ಮಳೆ ನೀರು ಹರಿದುಹೋಗುತಿತ್ತು, ಪಡುಬಿದ್ರಿಯ ಕಲ್ಸಂಕದಲ್ಲಿ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಮಳೆ ನೀರು ಹೆದ್ದಾರಿಯಲ್ಲಿಯೇ ಹೋಗುವಂತಾಯಿತು. ಪಡುಬಿದ್ರಿಯ ಕಾರ್ಕಳ ಸಂಪರ್ಕಿಸುವ ಸರ್ಕಲ್ ಬಳಿ ಮಳೆ ನೀರು ನಿಂತಿತ್ತು. ಆದರೆ ಲಾಕ್‍ಡೌನ್‍ನಿಂದ ಹೆಚ್ಚಿನ ವಾಹನಗಳು […]
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್) ಮುಂಬಯಿ : ವಿಶ್ವದಾದ್ಯಂತ ತಾಂಡವವಾಡುತ್ತಿರುವ ಕೊರೋನಾ ಮಹಾ ಮಾರಿಯಿಂದ ಸ್ತಬ್ಧ ಗೊಂಡಿರುವ ರಾಷ್ಟ್ರದ ಆಥಿಕ ರಾಜಧಾನಿ ಮುಂಬಯಿನಲ್ಲಿ ಉಪನಗರ ಅಂಧೇರಿಯಲ್ಲಿನ ಹೆಸರಾಂತ ಬಿ.ಆರ್ ಹೊಟೇಲು ಸಮೂಹವು ದೈನಂದಿನವಾಗಿ ಲಕ್ಷಾಂತರ ಮೊತ್ತದ ಆಹಾರ ಪೊಟ್ಟಣಗಳ ಉಪಚರಗೈದು ಸೇವೆಯಲ್ಲಿ ತೊಡಗಿಸಿದೆ. ಬೃಹನ್ಮುಂಬಯಲ್ಲಿನ ಹೆಸರಾಂತ ಉದ್ಯಮಿ, ಕೊಡುಗೈದಾನಿ, ಸಮಾಜ ಸೇವಕ, ಉಡುಪಿ ಮೂಲದ ಮುಂಬಯಿವಾಸಿ ಬಿ.ಆರ್ ರೆಸ್ಟೋರೆಂಟ್ಸ್ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಬಿ.ಆರ್ ಶೆಟ್ಟಿ ಮತ್ತು ಸೇವಾಕರ್ತರು ಆಹಾರ ಸಿದ್ಧಪಡಿಸಿ ಜನತೆಗೆ […]
ಉಡುಪಿ : ಅದಮಾರು ಮಠದ ಈಶಪ್ರಿಯ ತೀರ್ಥರು ಶನಿವಾರ ಬೆಳಗಿನ ಜಾವ ಕೃಷ್ಣಮಠದಲ್ಲಿ ಪವಿತ್ರ ಸರ್ವಜ್ಞ ಪೀಠಾರೋಹಣ ಮಾಡಿದರು. ಈ ಮೂಲಕ ಅದಮಾರು ಮಠದ ಪರ್ಯಾಯ ಆರಂಭಗೊಂಡಿತು. ಇದಕ್ಕೂ ಮೊದಲು ಸಂಪ್ರದಾಯದಂತೆ ಕಾಪುವಿನ ದಂಡತೀರ್ಥಕ್ಕೆ ತೆರಳಿ ಮಧ್ಯರಾತ್ರಿ 1.15ಕ್ಕೆ ಸ್ನಾನ ಮಾಡಿ, 1.20ಕ್ಕೆ ದೇವರಿಗೆ ಪೂಜೆ ಸಲ್ಲಿಸಿದರು. ಬಳಿಕ ಉಡುಪಿಯ ಜೋಡುಕಟ್ಟೆಯ ಮಂಟಪಕ್ಕೆ ಆಗಮಿಸಿದ ಶ್ರೀಗಳು ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದರು. ಇದಾದ ಬಳಿಕ ನಸುಕಿನ 2.15ಕ್ಕೆ ಪರ್ಯಾಯ ಮಹೋತ್ಸವದ ವೈಭವದ ಮೆರವಣಿಗೆಗೆ ಚಾಲನೆ ದೊರೆಯಿತು. ಕರಾವಳಿಯ […]
ಉಡುಪಿ : ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ನಡೆಸುತ್ತಿದ್ದ ರೈತರು ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಶನಿವಾರ ನಡೆಯಿತು. ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಛೇರಿ ಬಳಿ ಉಡುಪಿ ಜಿಲ್ಲಾ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಗುತ್ತಿತ್ತು. ಪ್ರತಿಭಟನೆ ನಡೆಸುತಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿ ಜಗದೀಶ್ ಆಗಮಿಸಿದರೂ ಅಹವಾಲು ಆಲಿಸದೆ ಇರುವುದರಿಂದ ಆಕ್ರೋಶಗೊಂಡ ರೈತರು ಡಿ.ಸಿ ಕಚೇರಿಗೆ ಮುತ್ತಿಗೆ ಹಾಕಿದರು. ಆಕ್ರೋಶಗೊಂಡ ರೈತರು ಜಿಲ್ಲಾಧಿಕಾರಿ ಕಛೇರಿ ಆವರಣದೊಳಗೆ ನುಗ್ಗಿದರು. ಆವರಣದೊಳಗೆ ನುಗ್ಗಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳಿಗೆ ದಿಕ್ಕಾರ […]
ಉಡುಪಿ : ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ನ. 16ರಿಂದ 20ರ ವರೆಗೆ ನಡೆಯುವ ಐದು ದಿನಗಳ ಬೃಹತ್ ಯೋಗ ಚಿಕಿತ್ಸೆ ಮತ್ತು ಯೋಗ ಶಿಬಿರವನ್ನು ನಡೆಸಿಕೊಡುವ ಪ್ರಸಿದ್ಧ ಯೋಗಪಟು ಬಾಬಾ ರಾಮದೇವ್ ನ. 15ರ ಸಂಜೆ ಉಡುಪಿಗೆ ಆಗಮಿಸಲಿದ್ದಾರೆ. ಮಂಗಳೂರಿಗೆ ವಿಮಾನದ ಮೂಲಕ ರಾಮದೇವ್ ಬರಲಿದ್ದಾರೆ. ಮಂಗಳೂರಿನಿಂದ ಉಡುಪಿಗೆ ರಸ್ತೆ ಮಾರ್ಗದಲ್ಲಿ ಬರುವ ರಾಮದೇವ್ ಅವರನ್ನು ಸಂಜೆ 5.30ಕ್ಕೆ ಕರಾವಳಿ ಬೈಪಾಸ್ ಬಳಿ ಸ್ವಾಗತಿಸಲಾಗುವುದು. ಕಲ್ಸಂಕದಿಂದ ಸುಮಾರು 5.45ಕ್ಕೆ ಬಡಗು ಪೇಟೆ ಮಾರ್ಗವಾಗಿ ಅವರನ್ನು […]
ಉಡುಪಿ : ಉಡುಪಿ ಸಿಟಿ ಬಸ್ ತಂಗುದಾಣದ ಸಮೀಪ ನರ್ಮ್ ಬಸ್ಸು ತಂಗುದಾಣ ಶೀಘ್ರದಲ್ಲೇ ಆರಂಭವಾಗಲಿದೆ. ಅಕ್ಟೋಬರ್ 2017ರಲ್ಲಿ ಇದರ ಕಾಮಗಾರಿ ಆರಂಭವಾಗಿದ್ದು, ಇದೀಗ ಉದ್ಘಾಟನೆಗೆ ಸಜ್ಜುಗೊಂಡಿದೆ. 4 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಈ ಕಟ್ಟಡವು ಸುಮಾರು 41 ಸೆಂಟ್ಸ್ ಜಾಗದಲ್ಲಿದ್ದು 3 ಅಂತಸ್ತುಗಳನ್ನು ಒಳಗೊಂಡಿದೆ. ಕೆಳಅಂತಸ್ತಿನಲ್ಲಿ 6,814 ಚದರಡಿ ವಿಸ್ತೀರ್ಣ ಹೊಂದಿದೆ. ಮೇಲಿನ ಅಂತಸ್ತು 5,807 ಚದರಡಿ ವಿಸ್ತೀರ್ಣ ಹೊಂದಿದೆ. ಮೊದಲ ಅಂತಸ್ತು 5,637 ಚದರಡಿ ವಿಸ್ತೀರ್ಣ ಹೊಂದಿದೆ. ಕಟ್ಟಡದ ಒಟ್ಟು ವಿಸ್ತೀರ್ಣವು 18,258 […]
ಉಡುಪಿ : ಉಡುಪಿಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಮುಂಗಾರಿನ ಕೊನೆಯಲ್ಲೂ ಪ್ರಾರಂಭದ ಮಳೆಯನ್ನು ನೆನಪಿಸುವಂತಿದೆ. ಇಂದು ಬೆಳಿಗ್ಗೆ ಗಾಳಿ ಮಳೆ ಬಿರುಸು ಪಡೆದಿದೆ. ಕಳೆದ ಐದು ದಿನಗಳಿಂದಲೂ ನಿತ್ಯ ಮಳೆಯಾಗುತ್ತಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ವಾಹನ ಸವಾರರು, ವಿದ್ಯಾರ್ಥಿಗಳು ಮತ್ತು ಪಾದಚಾರಿಗಳು ಈ ಮಳೆಯನ್ನು ನಿರೀಕ್ಷಿಸದೇ ಇದ್ದ ಕಾರಣ ಸಾಕಷ್ಡು ಒದ್ದಾಡಬೇಕಾಯಿತು. ಮಳೆಯ ಕಾರಣದಿಂದ ಕಳೆದ ಐದು ದಿನಗಳಿಂದ ಮೀನುಗಾರಿಕೆ ಚಟುವಟಿಕೆಗೂ ತೊಂದರೆಯಾಗಿದೆ. ಪ್ರಾರಂಭದಲ್ಲಿದ್ದ ಈ ಋತುವಿನ ಮೀನುಗಾರಿಕೆ ಚಟುವಟಿಕೆ ತುಸು ನಿಧಾನಗೊಂಡಿದೆ. ಸಾಮಾನ್ಯವಾಗಿ ಕರಾವಳಿಯಲ್ಲಿ ಅಷ್ಟಮಿ, ಗಣೇಶ […]
ಉಡುಪಿ : ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ಐ.ಎ.ಎಸ್ ಅಧಿಕಾರಿ ಜಿ. ಜಗದೀಶ್ ಇಂದು ಬೆಳಗ್ಗೆ ಅಧಿಕಾರ ಸ್ವೀಕರಿಸಿದರು. ನಿರ್ಗಮನ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಯವರು ನೂತನ ಜಿಲ್ಲಾಧಿಕಾರಿ ಯವರಿಗೆ ಅಧಿಕಾರ ಹಸ್ತಾಂತರಿಸಿದರು. ಕೋಲಾರ ಜಿ.ಪಂನಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ ಐ.ಎ.ಎಸ್ ಅಧಿಕಾರಿ ಜಿ. ಜಗದೀಶ್ ಅವರು ಶಿವಮೊಗ್ಗಾದ ಸೊರಬದವರು. 2017ರಲ್ಲಿ ಕೆ.ಎ.ಎಸ್ ನಿಂದ ಐ.ಎ.ಎಸ್ ಭಡ್ತಿ ಹೊಂದಿದ್ದರು.
ಉಡುಪಿ : ತನ್ನ ವಾರ್ಡಿನ ಜನರಿಗೆ ಆರೋಗ್ಯ ಇಲಾಖೆಯ ಸವಲತ್ತುಗಳ ಸರಿಯಾದ ಮಾಹಿತಿ ನೀಡಿಲ್ಲ ಎಂದು ಆರೋಪಿಸಿ ಉಡುಪಿ ನಗರಸಭಾ ಸದಸ್ಯ ಯೋಗೀಶ್ ವಡಬಾಂದೇಶ್ವರ ಅವರು ಉಡುಪಿ ಆರೋಗ್ಯಾಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಜುಲೈ 16 ರ ಮಂಗಳವಾರ ವಡಬಾಂದೇಶ್ವರ ವಾರ್ಡ್ ನ ನೂತನ ಸದಸ್ಯ ಯೋಗೀಶ್ ಸಾಲಿಯಾನ್ ಅವರು ತನ್ನ ವಾರ್ಡ್ ನ ಸಮಸ್ಯೆಯೊಂದನ್ನು ಸರಿಪಡಿಸಿಲ್ಲವೆಂದು ಉಡುಪಿ ಮುನ್ಸಿಪಾಲಿಟಿ ಆರೋಗ್ಯ ಇನ್ಸ್‌ಪೆಕ್ಟರ್ ಪ್ರಸನ್ನ ಅವರಿದ್ದ ಕಚೇರಿಗೆ ನುಗ್ಗಿ ವಾಗ್ವಾದ ನಡೆಸಿ ಮಾತಿಗೆ ಮಾತು ಬೆಳೆದು ಯೋಗೀಶ್ […]