Blog Archive

ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದರೆ ಆಭರಣ ಪೆಟ್ಟಿಗೆ ಸನ್ನಿಧಾನಕ್ಕೆ ತರುವುದಿಲ್ಲ: ಅರಮನೆ ಘೋಷಣೆ

Friday, October 5th, 2018
tiruvabharanam

ಕಾಸರಗೋಡು: ಶಬರಿ ಮಲೆ ದೇವಸ್ಥಾನದ ಹದಿನೆಂಟು ಮೆಟ್ಟಿಲುಗಳನ್ನು ದಾಟಿ ಒಂದೇ ಒಂದು ಹೆಣ್ಣು ಒಳನಡೆದರೂ ಪಂದಳ ರಾಜರ ಅರಮನೆಯಲ್ಲಿರುವ ಆಭರಣದ ಪೆಟ್ಟಿಗೆ ಮುಂದೆಂದೂ ಶಬರಿ ಮಲೆಯ ಸನ್ನಿಧಾನಕ್ಕೆ ಬರುವುದಿಲ್ಲ ತರವುದಿಲ್ಲ ಎಂದು ಅರಮನೆ ಮೂಲಗಳು ಸುತ್ತೋಲೆ ಹೊರಡಿಸಿದೆ. ದೇವಸ್ಥಾನವು ಸರಕಾರದ ಸೊತ್ತಾಗಿರಬಹುದು. ಆದರೆ ಅಯ್ಯಪ್ಪನಿಗೆ ಸಂಬಂಧಪಟ್ಟ ಆಭರಣಗಳು ನಮ್ಮ ಕುಟುಂಬದ ಸ್ವತ್ತಾಗಿರುತ್ತದೆ. ಅದನ್ನ ಬಲವಂತವಾಗಿ ಯಾರೂ ತರಿಸಿಕೊಳ್ಳಲಾಗುವುದಿಲ್ಲ. ಹೆಂಗಸರು ಪ್ರವೇಶಿಸುವ ಶಬರಿಮಲೆಗೆ ಇನ್ನು ಮುಂದೆ ಪಂದಳ ರಾಜಮನೆತನದವರು ಕಾಲಿಡುವುದಿಲ್ಲ ಎಂಬ ಪ್ರಕಟಣೆಯ ಮೂಲಕ ಕರಾರಾಗಿ ಪ್ರಕಟಿಸುತ್ತೇವೆ ಎಂದು […]

ಮುರಿದು ಬಿದ್ದ ವಿದ್ಯುತ್‌ ತಂತಿ: ಬಾಲಕಿ ಸಾವು..ತಾಯಿ ಆಸ್ಪತ್ರೆಗೆ!

Tuesday, October 2nd, 2018
kasrgod

ಕಾಸರಗೋಡು: ಗಾಳಿ ಮಳೆಗೆ ಮರ ಮುರಿದು ವಿದ್ಯುತ್‌ ತಂತಿಯ ಮೇಲೆ ಬಿದ್ದ ಪರಿಣಾಮ ತುಂಡರಿಸಿದ ವಿದ್ಯುತ್‌ ತಂತಿ ಸ್ಪರ್ಶಿಸಿ ಬಾಲಕಿ ಮೃತಪಟ್ಟ ಘಟನೆ ಕುಂಭ್ಡಾಜೆ ಏತಡ್ಕದಲ್ಲಿ ಸೋಮವಾರ ಸಂಜೆ 5 ಗಂಟೆಗೆ ಸಂಭವಿಸಿದೆ. ಕುಂಭ್ಡಾಜೆ ಏತಡ್ಕದ ಜಯರಾಮ ಮೂಲ್ಯ ಅವರ ಪುತ್ರಿ ಏತಡ್ಕ ಯು.ಪಿ. ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ಅರ್ಪಿತಾ (6) ಮೃತ ಬಾಲಕಿ. ಜತೆಯಲ್ಲಿದ್ದ ತಾಯಿ ಜಯಂತಿ ಅವರೂ ವಿದ್ಯುತ್‌ ಆಘಾತಕ್ಕೀಡಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಲೆಯಿಂದ ಮನೆಗೆ ಬಂದು ಚಹಾ ಕುಡಿದ ಬಳಿಕ ತಾಯಿಯೊಂದಿಗೆ ಹಿತ್ತಿಲಿನಲ್ಲಿ […]

ಮಂಗಳೂರು– ಕಾಸರಗೋಡು ಸರ್ಕಾರಿ ಬಸ್‌ ಸಂಚಾರ ಬಂದ್

Tuesday, August 7th, 2018
ksrtc

ಮಂಗಳೂರು : ರಾಷ್ಟ್ರೀಯ ಸಾರಿಗೆ ನೌಕರರ ಒಕ್ಕೂಟ ಕರೆ ನೀಡಿರುವ ಮುಷ್ಕರದಿಂದಾಗಿ ಮಂಗಳೂರು– ಕಾಸರಗೋಡು ನಡುವಿನ ಸರ್ಕಾರಿ ಬಸ್‌ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ಘಟಕದಿಂದ ಕೇರಳದ ಕಾಸರಗೋಡು ಜಿಲ್ಲೆಯ ವಿವಿಧೆಡೆಗೆ ಪ್ರತಿನಿತ್ಯ 35 ಬಸ್‌ಗಳು ಸಂಚರಿಸುತ್ತವೆ. ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ 35 ಬಸ್‌ಗಳು ಕಾಸರಗೋಡಿನಿಂದ ಮಂಗಳೂರಿಗೆ ಬರುತ್ತಿವೆ. ಈ ಎಲ್ಲ ಬಸ್‌ಗಳ ಸಂಚಾರ ಮಂಗಳವಾರ ಬೆಳಿಗ್ಗೆಯಿಂದ ಸ್ಥಗಿತವಾಗಿದೆ. ಪುತ್ತೂರು, ಸುಳ್ಯದಿಂದಲೂ ಕೇರಳದ ವಿವಿಧೆಡೆಗೆ ಸಂಚರಿಸುವ ಬಸ್‌ಗಳ ಸಂಚಾರವೂ […]

ಬೈಕಿನಲ್ಲಿ ಸಂಚರಿಸುತ್ತಿದ್ದ ಯುವಕನ ಕಣ್ಣಿಗೆ ಖಾರದ ಪುಡಿ ಎರಚಿ ನಗದು ಹಾಗೂ ಚಿನ್ನಾಭರಣ ಎಗರಿಸಿ ಪರಾರಿ..!

Tuesday, July 3rd, 2018
saohail

ಕಾಸರಗೋಡು: ಬೈಕಿನಲ್ಲಿ ಸಂಚರಿಸುತ್ತಿದ್ದ ಯುವಕನ ಕಣ್ಣಿಗೆ ಖಾರದ ಪುಡಿ ಎರಚಿ ನಗದು ಹಾಗೂ ಚಿನ್ನಾಭರಣ ಎಗರಿಸಿದ ಘಟನೆ ಬಾಡೂರು ಎಂಬಲ್ಲಿ ನಡೆದಿದೆ. ಮೊಗ್ರಾಲ್ ನಿವಾಸಿ ಸುಹೈಲ್(28) ದರೋಡೆಗೊಳಗಾದವರು. ಇವರು ಸೋಮವಾರ ಸಂಜೆ ಬೈಕಿನಲ್ಲಿ ತೆರಳುತ್ತಿದ್ದಾಗ ಇನ್ನೊಂದು ಬೈಕಿನಲ್ಲಿ ಬಂದ ತಂಡ ಈ ಕೃತ್ಯ ಎಸಗಿದೆ. ಸುಹೈಲ್ ಪೆರ್ಲದಲ್ಲಿರುವ ಸಹೋದರಿ ಮನೆಗೆ ಚಿನ್ನಾಭರಣ ಮತ್ತು ಹಣದೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದಾಗ ಹಿಂಬಾಲಿಸಿಕೊಂಡು ಬಂದ ತಂಡ ಕಣ್ಣಿಗೆ ಖಾರದ ಪುಡಿ ಎರಚಿದೆ. ಬಳಿಕ ಸುಹೈಲ್ ಅವರಲ್ಲಿದ್ದ 15 ಪವನ್ ಚಿನ್ನಾಭರಣ ಹಾಗೂ […]

ಕಣ್ಣೂರಿನಲ್ಲಿ ಎಬಿವಿಪಿ ಸದಸ್ಯನ ಕೊಲೆ, ಎಸ್‌ಡಿಪಿಐ ಸದಸ್ಯರ ಬಂಧನ

Saturday, January 20th, 2018
kasoragodu

ಕಾಸರಗೋಡು: ಕೇರಳದ ಕಣ್ಣೂರಿನಲ್ಲಿ ಮತ್ತೆ ಮತೀಯ ದ್ವೇಷಕ್ಕೆ ಕೊಲೆಯೊಂದು ನಡೆದಿದೆ. ಎರಡು ತಿಂಗಳ ಅವಧಿಯಲ್ಲಿ ಕಣ್ಣೂರಿನಲ್ಲಿ ನಡೆದ ಎರಡನೇ ಕೊಲೆ ಇದಾಗಿದೆ. ಶುಕ್ರವಾರ ಎಬಿವಿಪಿ ಸಂಘಟನೆಯ ಸದಸ್ಯ ಶ್ಯಾಮ್ ಪ್ರಸಾದ್ ಎಂಬುವನನ್ನು ದುಷ್ಕರ್ಮಿಗಳು ಕೊಲೆಗೈದಿದ್ದು, ಈ ಸಂಬಂಧ ಎಸ್‌ಡಿಪಿಐ ಸಂಘಟನೆಯ ನಾಲ್ಕು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಕಣ್ಣೂರಿನಲ್ಲಿ ಮಚ್ಚಿನಿಂದ ಕೊಚ್ಚಿ ಎಬಿವಿಪಿ ಕಾರ್ಯಕರ್ತನ ಕೊಲೆ ಕಣ್ಣೂರಿನ ಪೆರವೂರ್ ಎಂಬಲ್ಲಿ ಹತ್ಯೆ ನಡೆದಿದ್ದು, ಬೈಕ್‌ನಲ್ಲಿ ತನ್ನ ಪಾಡಿಗೆ ಬರುತ್ತಿದ್ದ ಶ್ಯಾಮ್‌ನನ್ನು ಅಡ್ಡಗಟ್ಟಿದ ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದ 3 ಜನ […]

ಲೈಟ್ ಕಂಬಕ್ಕೆ ಕಾರು ಢಿಕ್ಕಿ: ನಾಲ್ವರಿಗೆ ಗಾಯ

Monday, January 15th, 2018
accident

ಕಾಸರಗೋಡು: ಆಲ್ಟೊ ಕಾರೊಂದು ರಸ್ತೆ ಬದಿಯ ಲೈಟ್ ಕಂಬಕ್ಕೆ ಢಿಕ್ಕಿ ಹೂಡೆದು ನಾಲ್ವರು ಗಾಯಗೊಂಡ ಘಟನೆ ಉದುಮ ರೈಲ್ವೆ ಗೇಟ್ ಬಳಿ ಇಂದು ಬೆಳಗ್ಗೆ ನಡೆದಿದೆ. ಮಂಗಳೂರು ವಿಮಾನ ನಿಲ್ದಾಣದಿಂದ ವೆಸ್ಟ್ ಎಳೇರಿಯ ಎಂಬಲ್ಲಿನ ಕುಟುಂಬ ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಸೋಲಾರ್ ದೀಪ ಅಳವಡಿಸಲು ಹಾಕಲಾಗಿದ್ದ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಇದರಿಂದ ಕಾರಿನಲ್ಲಿದ್ದ ಫೈಝಲ್, ಆಯಿಷಾ ಹಾಗೂ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಫೈಝಲ್ ಗಲ್ಫ್ ನಿಂದ ಆಗಮಿಸಿದ್ದು, ಅವರನ್ನು ಕರೆದುಕೊಂಡು ಬರುತ್ತಿದ್ದಾಗ […]

ನಿವೃತ್ತ ಶಿಕ್ಷಕಿಯ ಕತ್ತು ಕೊಯ್ದು ಕೊಲೆ

Thursday, December 14th, 2017
kasargod

ಕಾಸರಗೋಡು: ಮನೆಗೆ ನುಗ್ಗಿದ ದರೋಡೆಕೋರ ತಂಡ ನಿವೃತ್ತ ಶಿಕ್ಷಕಿಯ ಕತ್ತು ಕೊಯ್ದು ಕೊಲೆಗೈದ ಘಟನೆ ಚೀಮೇನಿಯಲ್ಲಿ ಬುಧವಾರ ತಡರಾತ್ರಿ ನಡೆದಿದ್ದು, ಗಂಭೀರ ಸ್ಥಿತಿಯಲ್ಲಿ ಪತ್ತೆಯಾದ ಅವರ ಪತಿಯನ್ನುಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಚೀಮೇನಿ ಪುಲಿಯನ್ನೂರಿನ ನಿವೃತ್ತ ಶಿಕ್ಷಕಿ ಪಿ.ವಿ. ಜಾನಕಿ (65) ಕೊಲೆಗೀಡಾದವರು ಎಂದು ಗುರುತಿಸಲಾಗಿದೆ. ಪತಿ ನಿವೃತ್ತ ಶಿಕ್ಷಕ ಕೃಷ್ಣನ್ ಕತ್ತು ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರನ್ನು ಕಟ್ಟಿ ಹಾಕಿ ಮಾರಾಕಾಸ್ತ್ರದಿಂದ ಕತ್ತು ಕೊಯ್ದ ಬಳಿಕ ದರೋಡೆ ನಡೆಸಲಾಗಿದೆ. ಮೂವರ ತಂಡ ಈ […]

ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು – ಮುರುಳೀಧರ ಬಳ್ಳಕ್ಕುರಾಯ

Sunday, December 3rd, 2017
Alvas

ಮೂಡಬಿದಿರೆ  : ಕಾಸರಗೋಡಿನಲ್ಲಿ ಕನ್ನಡ, ತುಳು, ಮಲೆಯಾಳಂ ಸೇರಿದಂತೆ ಬೇರೆ ಬೇರೆ ಭಾಷೆಯನ್ನಾಡುವ ಜನರಿದ್ದರೂ ಅವರ ಕರುಳಬಳ್ಳಿ ಕರ್ನಾಟಕವೇ ಆಗಿದೆ. ಅಪ್ಪಟ ಕನ್ನಡ ಪ್ರದೇಶವಾದ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂದು ಮಂಗಳೂರು ಎಸ್.ಡಿ.ಎಂ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕ ಮುರುಳೀಧರ ಬಳ್ಳಕ್ಕುರಾಯ ಕಾಸರಗೋಡು ಹೇಳಿದರು. ಆಳ್ವಾಸ್ ನುಡಿಸಿರಿ-2017 ರ ಪ್ರಯುಕ್ತ ರತ್ನಾಕರವರ್ಣಿ ವೇದಿಕೆಯಲ್ಲಿ ಆಯೋಜಿಸಿದ್ದ ವಿಶೇಷೋಪನ್ಯಾಸ ಕಾರ್ಯಕ್ರಮದಲ್ಲಿ ಕಾಸರಗೋಡಿನ ಕನ್ನಡ ಅಲ್ಪಸಂಖ್ಯಾತರ ಸಮಸ್ಯೆಗಳ ಬಗ್ಗೆ ಮಾತನಾಡಿದರು. 1956 ರಲ್ಲಿ ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯಾದಾಗ ಕರ್ನಾಟಕದಲ್ಲಿದ್ದ ಕಾಸರಗೋಡು ಕೇರಳಕ್ಕೆ ಸೇರಿತು. […]

ಕಾಸರಗೋಡು: ನೀಲೇಶ್ವರದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ, ಬಸ್ಸಿಗೆ ಕಲ್ಲು

Tuesday, October 3rd, 2017
kasaragod

ಕಾಸರಗೋಡು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕಾಸರಗೋಡಿಗೆ ಭೇಟಿ ನೀಡುವ ಕೆಲವೇ ಗಂಟೆಗಳ ಮೊದಲು ಮೂವರು ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸಲಾಗಿದೆ. ಕಾಸರಗೋಡು ಜಿಲ್ಲೆಯ ನೀಲೇಶ್ವರದಲ್ಲಿ ಈ ದಾಳಿ ನಡೆದಿದೆ. ಇನ್ನು ಇಂದು ಬೆಳಿಗ್ಗೆ  ನಡೆದಿದೆ. ಈ ದಾಳಿಯನ್ನು ಸಿಪಿಐ(ಎಂ) ಕಾರ್ಯಕರ್ತರು ನಡೆಸಿರಬಹುದು ಎಂದು ಅನುಮಾನಿಸಲಾಗಿದೆ. ಇಂದು ಕಣ್ಣೂರಿನಿಂದ 11 ಗಂಟೆಗೆ ಬಿಜೆಪಿಯ ‘ಜನರಕ್ಷಾ ಯಾತ್ರೆ’ ಆರಂಭವಾಗಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ. ಪಾದಯಾತ್ರೆಗೆ ಚಾಲನೆ ನೀಡಲು ಇಂದು ಮುಂಜಾನೆ 1.30 […]

ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಅವಲೋಕನಸಭೆ

Tuesday, July 5th, 2016
Development package

ಕಾಸರಗೋಡು: ಕಾಸರಗೋಡುಜಿಲ್ಲಾ ಅಭಿವೃದ್ಧಿ ಪ್ಯಾಕೇಜಿ ಅವಲೋಕನ ಸಭೆ ಜಿಲ್ಲಾಕಾರಿ ಸಭಾಂಗಣದಲ್ಲಿ ನಡೆಯಿತು.ಡಾ. ಪ್ರಭಾಕರನ್ ಆಯೋಗವು ನೀಡಿದ ಕಾಸರಗೋಡು ಜಿಲ್ಲೆಯ ಸಮಗ್ರ ಅಭಿವೃದ್ಧಿ ವರದಿಯಲ್ಲಿ ತಿಳಿಸಲ್ಪಟ್ಟ ವಿವಿಧ ಯೋಜನೆಗಳ ಬಗ್ಗೆ ಪರಾಮರ್ಶೆ ನಡೆಯಿತು. ಇದು ವರೆಗೆ ಕಾಸರಗೋಡು ಅಭಿವೃದ್ಧಿ ಯೋಜನೆಯಡಿ 42 ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ೧೮ ಹೊ ಯೋಜನೆಗಳನ್ನು ಆರಂಭಿಸಲಾಗಿದೆ. ಕಳೆದ ಸಾಲಿನ ರಾಜ್ಯ ಬಜೆಟ್‌ನಲ್ಲಿ ಯೋಜನೆಗಾಗಿ 87.98  ಕೋಟಿರೂ.ಗಳನ್ನು ಮೀಸಲಿರಿಸಲಾಗಿದೆ. ವಿವಿಧ ಖಾತೆಗ ಜನಪ್ರತಿನಿಗಳು ಮೀಸಲಿರಿಸಿದ ಹಣವನ್ನು ಶೀಘ್ರವೇ ಉಪಯೋಗಿಸಿಕೊಂಡು ಯೋಜನೆಗಳನ್ನು ಮುಂದುವರಿಸಬೇಕಿದೆ ಎಂದು ಸಭೆಯಲ್ಲಿ ನಿಧರಿಸಲಾಯಿತು. […]