Blog Archive

ಚಂಪಾ ಷಷ್ಠಿ: ಮಲೆಕುಡಿಯರ ಪ್ರಭಲ ವಿರೋಧ

Saturday, October 21st, 2017
champa shasti

ಮಂಗಳೂರು:  ಮಡೆ ಸ್ನಾನವನ್ನು ಮೂಢನಂಬಿಕೆ ನಿಷೇಧ ಕಾಯ್ದೆಯಡಿಯಲ್ಲಿ ಬ್ಯಾನ್ ಮಾಡುವ ರಾಜ್ಯ ಸರಕಾರದ ನಿರ್ಧಾರಕ್ಕೆ ಮಲೆಕುಡಿಯರು ಕರಾವಳಿಯ ಬುಡಕಟ್ಟು ಸಮುದಾಯದಲ್ಲಿ ಪ್ರಭಲ ವಿರೋಧ ವ್ಯಕ್ತಪಡಿಸಿದ್ದಾರೆ. ಮುಜುರಾಯಿ ಆಡಳಿತಕ್ಕೆ ಒಳಪಟ್ಟಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾ ಷಷ್ಠಿಯನ್ನು ಬಹಿಷ್ಕರಿಸುವ ಬೆದರಿಕೆಯನ್ನು ಮಲೆಕುಡಿಯರು ಹಾಕಿದ್ದಾರೆ. ಚಂಪಾ ಷಷ್ಠಿಯಲ್ಲಿ ಮಲೆಕುಡಿಯರ ಪಾತ್ರ ಪ್ರಮುಖವಾಗಿದ್ದು ರಥ ಕಟ್ಟುವುದೂ ಸೇರಿದಂತೆ ಹಲವು ಆಚರಣೆಗಳನ್ನು ತಲೆತಲಾಂತರದಿಂದ ಇದೇ ಸಮುದಾಯದವರು ನಡೆಸಿಕೊಂಡು ಬಂದಿದ್ದಾರೆ. ನವೆಂಬರ್ 24ರಂದು ಸುಬ್ರಮಣ್ಯದಲ್ಲಿ ಚಂಪಾ ಷಷ್ಠಿ ನಡೆಯಲಿದೆ. ಒಂದೊಮ್ಮೆ ರಾಜ್ಯ ಸರಕಾರ ಮಡೆ […]

ಕುಕ್ಕೆ: ಬ್ರಹ್ಮರಥ ನಿರ್ಮಿಸುವ ಪ್ರಸ್ತಾಪ, ನಿರ್ಮಾಣ ವಿಚಾರದಲ್ಲಿ ಚರ್ಚೆ

Wednesday, October 18th, 2017
kukke subramanya

ಮಂಗಳೂರು: ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಬ್ರಹ್ಮರಥದ ನಿರ್ಮಾಣ ವಿಚಾರದಲ್ಲಿ ಗೊಂದಲ ಉಂಟಾಗಿದೆ. ಉದ್ಯಮಿ ಹಾಗೂ ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ತನ್ನ ಸ್ವಂತ ಖರ್ಚಿನಲ್ಲಿ ಕ್ಷೇತ್ರಕ್ಕೆ ಬ್ರಹ್ಮರಥ ನಿರ್ಮಿಸುವ ಪ್ರಸ್ತಾಪವನ್ನು ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿ ಮುಂದಿಟ್ಟಿದ್ದಾರೆ. ಈ ವಿಚಾರವನ್ನು ವ್ಯವಸ್ಥಾಪನಾ ಮಂಡಳಿ ಇಂದು ದೇವಸ್ಥಾನದಲ್ಲಿ ನಡೆದ ದೇವಸ್ಥಾನದ ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಪ್ರಸ್ತುತ ಪಡಿಸಿದ್ದು, ಇದಕ್ಕೆ ಭಕ್ತರಿಂದ ವಿರೋಧ ವ್ಯಕ್ತವಾಗಿದೆ. ಕೇವಲ ಒಬ್ಬ ಭಕ್ತ ಕೊಡುವ ಬ್ರಹ್ಮರಥದಲ್ಲಿ ಸುಬ್ರಮಣ್ಯ ಸ್ವಾಮಿ ಸಂತುಷ್ಚನಾಗಲಾರ. ಈ […]

ದಸರಾ ರಜೆ ಹಿನ್ನೆಲೆ, ಪುಣ್ಯ ಕ್ಷೇತ್ರಗಳ ದರ್ಶನಕ್ಕಾಗಿ ಭಕ್ತ ಸಾಗರ

Monday, October 2nd, 2017
darmasthala

  ಮಂಗಳೂರು:  ದಸರಾ ರಜೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರಮುಖ ಪುಣ್ಯ ಕ್ಷೇತ್ರಗಳಿಗೆ ಭಾರೀ ಪ್ರಮಾಣದಲ್ಲಿ ಭಕ್ತರು ಭೇಟಿ ನೀಡುತ್ತಿದ್ದಾರೆ. ಕೊಲ್ಲೂರು ಶ್ರೀ ಮೂಕಾಂಬಿಕಾ ಸನ್ನಿಧಿ, ಶ್ರೀ ಕ್ಷೇತ್ರ ಧರ್ಮಸ್ಥಳ, ಶ್ರೀ ಕ್ಷೇತ್ರ ಕಟೀಲು, ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನಕ್ಕಾಗಿ ಭಕ್ತ ಸಾಗರವೇ ಹರಿದು ಬರುತ್ತಿದೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದರಿಂದ ಕ್ಷೇತ್ರದ ಪ್ರಮುಖ ಸೇವೆಗಳಾದ ಆಶ್ಲೇಷ ಬಲಿ, ನಾಗ ಪ್ರತಿಷ್ಠೆ ಮತ್ತಿತರ ಸೇವೆಗಳು ಅಧಿಕವಾಗಿ […]

ಕುಕ್ಕೆ ಸುಬ್ರಹ್ಮಣ್ಯ ದೇವರ ದರುಶನ ಪಡೆದ ಸಚಿವ ಡಿ.ಕೆ ಶಿವಕುಮಾರ ಕುಟುಂಬ

Monday, September 25th, 2017
DK Shivakumar

ಸುಬ್ರಹ್ಮಣ್ಯ: ಐಟಿ ದಾಳಿ ಕುರಿತು ಸದ್ಯಕ್ಕೆ ತಾನೇನು ಪ್ರತಿಕ್ರೀಯಿಸುವುದಿಲ್ಲ. ಸೂಕ್ತ ಘಳಿಗೆ ಬಂದಾಗ ಪ್ರತಿಕ್ರೀಯಿಸುವೆ. ಆ ಶುಭ ಘಳಿಗೆ ತನಕ ಕಾದು ಬಳಿಕ ಐಟಿ ಧಾಳಿ ಕುರಿತು ಮಾತನಾಡುವೆ. ಅಲ್ಲಿ ತನಕ ಸ್ವಲ್ಪ ಸಮಯ ಕಾಯೋಣ ಎಂದು ತನ್ನ ಹಾಗೂ ಸಂಬಂಧಿಕರ ಮೇಲಿನ ಐಟಿ ದಾಳಿ ಕುರಿತು ಇಂಧನ ಸಚಿವ ಹಾಗೂ ಕಾಂಗ್ರೇಸ್‌ನ ಪ್ರಭಾವಿ ನಾಯಕ ಡಿ.ಕೆ ಶಿವಕುಮಾರ ಪ್ರತಿಕ್ರೀಯಿಸಿದರು. ಕುಕ್ಕೆ ಸಬ್ರಹ್ಮಣ್ಯ ಕ್ಷೇತ್ರಕ್ಕೆ ಭಾನುವಾರ ಕುಟುಂಬ ಸದಸ್ಯರ ಜೊತೆ ಆಗಮಿಸಿ ಶ್ರೀ ದೇವರ ದರ್ಶನ ಪಡೆದು […]

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸ್ನಾನ ಘಟ್ಟ ಸಂಪೂರ್ಣವಾಗಿ ಜಲಾವೃತ

Wednesday, July 19th, 2017
subrahmanya

ಮಂಗಳೂರು :  ನಿರಂತರವಾಗಿ  ಸುರಿಯುವ ಮಳೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ಸ್ನಾನ ಘಟ್ಟ ಸಂಪೂರ್ಣವಾಗಿ ಜಲಾವೃತವಾಗಿದ್ದು, ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳು ನದಿಯ ಮೇಲ್ಭಾಗದಲ್ಲಿ ತೀರ್ಥ ಸ್ನಾನ ಪೂರೈಸುತ್ತಿದ್ದಾರೆ. ಕರ್ನಾಟಕ ಕರಾವಳಿಯಲ್ಲಿ ಎಡೆಬಿಡದೆ ಸುರಿಯುತ್ತಿದೆ ಭಾರೀ ಮಳೆ ಅಲ್ಲದೆ ಘಟ್ಟ ಪ್ರದೇಶದಲ್ಲಿ ಇದೇ ರೀತಿ ನಿರಂತರ ಮಳೆಯಾದರೆ ಕುಮಾರಧಾರಾ ಸೇತುವೆ ಮುಳುಗಡೆಯಾಗುವ ಸಾಧ್ಯತೆ ಇದೆ. ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಸೇತುವೆ ಮಟ್ಟದಲ್ಲಿ ನದಿ ನೀರು ಹರಿಯುತ್ತಿದೆ ಕೊಲ್ಲಮೊಗ್ರು, ಕಲ್ಮಕಾರು, ಗುತ್ತಿಗಾರು, ಪಂಜ, ಬಳ್ಪ, […]

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಪ್ತ ಸಹಾಯಕ ಕುಕ್ಕೆ ಭೇಟಿ

Tuesday, June 13th, 2017
kukke Subrahmanya

ಸುಬ್ರಹ್ಮಣ್ಯ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಆಪ್ತ ಸಹಾಯಕ ಶಕುಂತ್ ಆಪ್ಟೆ ಮಂಗಳವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದರು. ಇವರೊಂದಿಗೆ ಪುಣೆಯ ಸಾಂಗ್ಲಿಯ ಲೋಕಸಭಾ ಸದಸ್ಯ ಸಂಜಯ್ ರಾಮಚಂದ್ರ ಪಾಟಿಲ್ ಹಾಗೂ ಜ್ಯೋತಿ ಸಂಜಯ್ ಪಾಟೀಲ್ ಮತ್ತು ಮಂಜುಶ್ರೀ ಆಗಮಿಸಿದ್ದರು. ಮಂಗಳವಾರ ಕ್ಷೇತ್ರಕ್ಕೆ ಆಗಮಿಸಿದ ಆಪ್ಟೆ ಮತ್ತು ಸಂಜಯ್ ಪಾಟೀಲ್ ಮಹಾಪೂಜೆಗೆ ಸಂಕಲ್ಪ ನೆರವೇರಿಸಿದರು. ವೇದಮೂರ್ತಿ ಮಧುಸೂಧನ ಕಲ್ಲೂರಾಯ ಸಂಕಲ್ಪ ವಿದಿ ವಿಧಾನ ನೆರವೇರಿಸಿದರು. ಬಳಿಕ ಆಪ್ಟೆ ಅವರು ಮಹಾಪೂಜೆ ಸೇವೆ ನೆರವೇರಿಸಿದರು. ಅಲ್ಲದೆ […]

ಕುಕ್ಕೆ ಸುಬ್ರಹ್ಮಣ್ಯದ ಚಂಪಾ ಷಷ್ಟಿ ಉತ್ಸವ

Monday, December 5th, 2016
Kukke-rathothsava

ಮಂಗಳೂರು: ಸಂಭ್ರಮ ಸಡಗರದಿಂದ ನಡೆದ ಕುಕ್ಕೆ ಸುಬ್ರಹ್ಮಣ್ಯದ ಚಂಪಾ ಷಷ್ಟಿ ಉತ್ಸವಕ್ಕೆ ಸಾವಿರಾರು ಭಕ್ತಾದಿಗಳು ಸಾಕ್ಷಿಯಾದರು. ಬೆಳಗ್ಗೆ 6.55 ರ ಮುಹೂರ್ತದಲ್ಲಿ ಸುಬ್ರಹ್ಮಣ್ಯ ದೇವರು ಬ್ರಹ್ಮ ರಥದಲ್ಲಿ ಹಾಗೂ ಉಮಾಮಹೇಶ್ವರ ದೇವರು ಪಂಚಮಿ ರಥದಲ್ಲಿ ಆರೂಢರಾದರು. ವಿಶೇಷ ಪೂಜೆ ನಡೆದ ಬಳಿಕ ಭಕ್ತಾದಿಗಳು ರಥವನ್ನು ಎಳೆಯುವುದರ ಮುಖಾಂತರ ದೇವರ ಕೃಪೆಗೆ ಪಾತ್ರರಾದರು.

ನಾಗಾರಾಧನೆಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದು ಲಕ್ಷದೀಪೋತ್ಸವ

Monday, November 28th, 2016
subramanya lakshadeepothsava

ಸುಬ್ರಹ್ಮಣ್ಯ: ನಾಗಾರಾಧನೆಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದು ಲಕ್ಷದೀಪೋತ್ಸವ ನೆರವೇರಲಿದೆ. ಲಕ್ಷ ದೀಪೋತ್ಸವದೊಂದಿಗೆ ರಥಬೀದಿಯಲ್ಲಿ ಶ್ರೀ ದೇವರ ರಥೋತ್ಸವ ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ಲಕ್ಷ ದೀಪೋತ್ಸವದಂದು ಲಕ್ಷ ಹಣತೆ ಬೆಳಗಿಸಲಾಗುತ್ತದೆ. ಶ್ರೀ ಕ್ಷೇತ್ರದಲ್ಲಿ ಲಕ್ಷ ದೀಪೋತ್ಸವದ ಸಂದರ್ಭದಲ್ಲಿ ಕೆಲವು ಹಣತೆ ದೀಪಗಳನ್ನು ಹಚ್ಚಲಾಗುತ್ತಿತ್ತು. ಈ ಬಾರಿ ಕ್ಷೇತ್ರದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಲಕ್ಷ ಹಣತೆಗಳನ್ನು ಹಚ್ಚುವ ವ್ಯವಸ್ಥೆ ಮಾಡಲಾಗಿದೆ. ದೇವಳದ ಹಾಗೂ ಸಾರ್ವಜನಿಕ ಭಕ್ತರ ಸಹಕಾರದಿಂದ ಲಕ್ಷ ಹಣತೆಗಳನ್ನು ಹಚ್ಚಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಮಣ್ಣಿನ […]

ಸುಬ್ರಹ್ಮಣ್ಯದಲ್ಲಿ ಉಚಿತವಾಗಿ ಊಟ ಮತ್ತು ಉಪಹಾರ ನೀಡಿದ ಹೋಟಲ್‌ಗಳು

Thursday, November 10th, 2016
Kukke

ಸುಬ್ರಹ್ಮಣ್ಯ: ಎಲ್ಲೆಡೆ 500 ಮತ್ತು 1000 ಮುಖಬೆಲೆಯ ನೋಟುಗಳ ಚಲಾವಣೆಗೆ ಸಂಕಷ್ಟ ಬಂದರೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈ ಸಮಸ್ಯೆ ಕಂಡುಬರಲಿಲ್ಲ. ಭಕ್ತರಿಗೆ ಯಾವುದೇ ರೀತಿಯಿಂದಲೂ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಯಿತು. ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಭಕ್ತಾದಿಗಳ ಸೇವಾ ರಶೀದಿಗಳಿಗೆ 500 ಮತ್ತು 1000 ರೂಪಾಯಿ ಮುಖ ಬೆಲೆಯ ನೋಟುಗಳನ್ನು ಸ್ವೀಕರಿಸಿ ಸೇವೆಗಳ ರಶೀದಿ ನೀಡಲಾಯಿತು. ಈ ಮೂಲಕ ಭಕ್ತರಿಗೆ ಸೇವೆ ನೆರವೇರಿಸಲು ಶ್ರೀ ದೇವಳದ ಆಡಳಿತವು ವಿಶೇಷ ಅನುಕೂಲತೆ ಮಾಡಿಕೊಟ್ಟಿತು. ನ. 11ರವರೆಗೆ ಈ ನೋಟುಗಳು ಚಲಾವಣೆಯಲ್ಲಿರುವ […]

ಮುಜರಾಯಿ ಇಲಾಖೆಯ ಕಾಯಕಲ್ಪಕ್ಕೆ ಆಧ್ಯತೆ: ಸಚಿವ ಲಮಾಣಿ

Friday, October 28th, 2016
Mujarayi Ilakhe

ಸುಬ್ರಹ್ಮಣ್ಯ: ರಾಜ್ಯದಲ್ಲಿ ಮುಜರಾಯಿ ಇಲಾಖೆಯ ಅಡಿಯಲ್ಲಿ 60ಕ್ಕೂ ಮಿಕ್ಕಿ ದೇವಸ್ಥಾನಗಳಲ್ಲಿ ವ್ಯವಸ್ಥಾಪನಾ ಸಮಿತಿಯು ರಚನೆಯಾಗಿದೆ. ಮುಜರಾಯಿ ಇಲಾಖೆ ತುಂಬಾ ಮುಜುಗರ ಇರುವ ಇಲಾಖೆಯಾಗಿದೆ. ಹೆಚ್ಚಿನ ದೇವಸ್ಥಾನಗಳಲ್ಲಿ ಸಿಬ್ಬಂಧಿ ಸೇರಿದಂತೆ ಮೂಲಭೂತ ಸೌಕರ್ಯದ ಕೊರತೆಯಿದೆ. ನಾನು ಈ ಖಾತೆಯ ಜವಾಬ್ದಾರಿ ಸ್ವೀಕರಿಸಿದ ಬಳಿಕ ರಾಜ್ಯದ ಎಲ್ಲಾ ದೇವಸ್ಥಾನಗಳಿಗೆ ಕಾಯಕಲ್ಪ ನೀಡಲು ಆಧ್ಯತೆ ನೀಡುತ್ತೇನೆ ಎಂದು ಜವುಳಿ ಮತ್ತು ಮುಜರಾಯಿ ಖಾತೆ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಹೇಳಿದರು. ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. […]