Blog Archive

ದಕ್ಷಿಣ ಕನ್ನಡ ಜಿಲ್ಲೆಗೆ ಒಟ್ಟು 10 ಇಂದಿರಾ ಕ್ಯಾಂಟೀನ್​ಗಳು ಮಂಜೂರು..!

Friday, July 13th, 2018
indira-canteen

ಮಂಗಳೂರು: ಒಂದು ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳು ಮತ್ತೊಂದು ಸರ್ಕಾರ ಅಧಿಕಾರಕ್ಕೆ ಬಂದ ನಂತರ ನೆನೆಗುದಿಗೆ ಬೀಳುತ್ತವೆ ಎಂಬ ಸಾರ್ವಜನಿಕರ ಮಾತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಈ ಪ್ರಕರಣ ಸಾಕ್ಷಿಯಾಗುತ್ತಿದೆ. ನೆನೆಗುದಿಗೆ ಬಿದ್ದ ಅಂತಹ ಯೋಜನೆಗಳ ಪಟ್ಟಿಯಲ್ಲಿ ಈಗ ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಯೋಜನೆ ಇಂದಿರಾ ಕ್ಯಾಂಟೀನ್ ಕೂಡ ಸೇರ್ಪಡೆಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಗೆ ಒಟ್ಟು 10 ಇಂದಿರಾ ಕ್ಯಾಂಟೀನ್ಗಳು ಮಂಜೂರಾಗಿದ್ದವು. ಆದರೆ ಇದೀಗ ಕಾರ್ಯಾಚರಿಸುತ್ತಿರುವುದು 5 ಕ್ಯಾಂಟೀನ್ಗಳು ಮಾತ್ರ. ಮಂಜೂರಾದ 10 […]

ಮುಂದಿನ 48 ಗಂಟೆಗಳಲ್ಲಿ ಕರಾವಳಿಯಲ್ಲಿ‌ ಭಾರೀ ಮಳೆ..ಹವಾಮಾನ ಇಲಾಖೆಯಿಂದ ಎಚ್ಚರ!

Wednesday, July 11th, 2018
karavali

ಮಂಗಳೂರು: ಕಳೆದ ಎರಡು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿರಾಮ ಪಡೆದಿದ್ದ ಮಳೆರಾಯ ಮತ್ತೆ ಅಬ್ಬರಿಸತೊಡಗಿದ್ದಾನೆ . ಎರಡು ದಿನಗಳಿಂದ ಕರಾವಳಿಯಲ್ಲಿ ಮುಂಗಾರು ಕ್ಷೀಣಗೊಂಡಿತ್ತು. ಆದರೆ ಇಂದು ಮಳೆ ಅಬ್ಬರ ಮತ್ತೇ ಆರಂಭವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಂಜಾನೆಯಿಂದ ಜಡಿ ಮಳೆ ಆರಂಭಗೊಂಡಿದೆ. ಪರಿಣಾಮ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ಸೇರಿದಂತೆ ಮಂಗಳೂರಿನಾದ್ಯಂದ ಮಳೆ ಸುರಿಯುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಲ್ಲಿ ಗುಡ್ಡ ಕುಸಿದ ಘಟನೆಗಳು […]

ಬಂಟ್ವಾಳದಲ್ಲಿ ಸ್ವಚ್ಚಗೆಳತಿ

Tuesday, July 10th, 2018
bantwala

ಬಂಟ್ವಾಳ: ದ.ಕ.ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ್ ಮಿಷನ್ ತಾಲೂಕು ಪಂಚಾಯತ್ ಬಂಟ್ವಾಳ, ರಾಷ್ಟ್ರೀಯ ಸೇವಾ ಯೋಜನೆ, ಮಂಗಳೂರು ವಿಶ್ವವಿದ್ಯಾನಿಲಯ , ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶ್ರೀ ವೆಂಕಟರಮಣ ಸ್ವಾಮಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಸಹಭಾಗಿತ್ವದಲ್ಲಿ ಸ್ವಚ್ಚಗೆಳತಿ ಋತುಸ್ರಾವ ಜಾಗ್ರತಿ ಅಭಿಯಾನ 2018-19 ತಾಲೂಕು ಹಂತದ ತರಭೇತಿ ಕಾರ್ಯಗಾರ ಶ್ರೀ ವೆಂಕಟರಮಣ ಸ್ವಾಮಿ ಮಹಾವಿದ್ಯಾಲಯದಲ್ಲಿ ನಡೆಯಿತು. ಕಾರ್ಯಕ್ರಮದ ಅದ್ಯಕ್ಷ ತೆಯನ್ನು ವಹಸಿ […]

ಗುಂಡಿ ಮುಕ್ತ ರಸ್ತೆಗಳಿಗೆ ಕಾರಣರಾದ ಸಂಚಾರಿ ಪೊಲೀಸರು!

Saturday, June 30th, 2018
road-repair

ಮಂಗಳೂರು: ಬಂಟ್ವಾಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವೆಡೆ ಕಾಣಿಸಿಕೊಂಡ ಗುಂಡಿಗಳನ್ನು ಮುಚ್ಚುವಂತೆ ಸೂಚಿಸಲಾಗಿದ್ದರೂ ನಿರ್ಲಕ್ಷ್ಯ ತೋರಿದ ಗುತ್ತಿಗೆದಾರರ ವಿರುದ್ಧ ಸಂಚಾರಿ ಪೊಲೀಸರ ತಂಡ ಪ್ರಕರಣ ದಾಖಲಿಸುವ ಪತ್ರವನ್ನು ಕಳುಹಿಸಿದೆ. ಈ ಬೆನ್ನಲ್ಲೇ ಗುತ್ತಿಗೆದಾರರು ರಸ್ತೆ ಗುಂಡಿ ಮುಚ್ಚಿದ್ದಾರೆ. ದೂರು ದಾಖಲು ಪತ್ರದ ವಿಚಾರ ತಿಳಿಯುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ರಾಷ್ಟ್ರೀಯ ಹೆದ್ದಾರಿ ನಿರ್ವಹಣೆಯ ಗುತ್ತಿಗೆದಾರರು, ರಾಷ್ಟ್ರೀಯ ಹೆದ್ದಾರಿಯಲ್ಲಿನ ಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ಬಂಟ್ವಾಳ ಟ್ರಾಫಿಕ್ ಪೊಲೀಸರು ಮೊದಲು‌ ಮೌಖಿಕವಾಗಿ ಸೂಚಿಸಿದ್ದರೂ ಇದರ ಬಗ್ಗೆ ಗುತ್ತಿಗೆದಾರರು ನಿರ್ಲಕ್ಷ್ಯ ತೋರಿದ್ದರು. ಈ […]

ತಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ: ರಮಾನಾಥ ರೈ

Wednesday, June 27th, 2018
ramanath-rai

ಬಂಟ್ವಾಳ: ಹೈಕಮಾಂಡ್ ಅವಕಾಶ ನೀಡಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಬಿ.ಸಿ.ರೋಡ್‌ನಲ್ಲಿರುವ ಪಕ್ಷದ ಕಚೇರಿಯಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಪಕ್ಷವು ಪಾರ್ಲಿಮೆಂಟ್‌ ಚುನಾವಣೆಗೆ ಸಿದ್ಧವಾಗುತ್ತಿದ್ದು, ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ ಎಂದು ಹೇಳಿದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಬಂಟ್ವಾಳ ಕ್ಷೇತ್ರಕ್ಕೆ ತಾನು ಕೈಗೊಂಡ ಎಲ್ಲ ಯೋಜನೆಗಳಿಗೆ ಆಡಳಿತಾತ್ಮಕ ಮಂಜೂರಾತಿ ಸಿಕ್ಕಿದೆ. ಇವುಗಳ ಟೆಂಡರ್ ಪ್ರಕ್ರಿಯೆ […]

ಬಂಟ್ವಾಳದಲ್ಲಿ 45 ವರ್ಷಗಳಷ್ಟು ಹಳೆಯ ಮೂಲರಪಟ್ಣದ ಸೇತುವೆ ಕುಸಿತ

Monday, June 25th, 2018
Mularapatna Bridge

ಮಂಗಳೂರು: ಸುಮಾರು 45 ವರ್ಷಗಳಷ್ಟು ಹಳೆಯದಾದ ಮೂಲರಪಟ್ಣದ ಸೇತುವೆ ಕಳೆದ ಮೂರುನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ನೀರಿನ ಒಳ ಹರಿವು ಹೆಚ್ಚಾದುದರಿಂದ ಸೋಮವಾರ ಸಂಜೆ 5.30ರ ಸುಮಾರಿಗೆ ಕುಸಿದಿದೆ. ಬಿ.ಸಿ. ರೋಡ್ ಮತ್ತು ಕುಪ್ಪೆಪದವು ಸಂಪರ್ಕಿಸುವ ರಸ್ತೆಯ ನಡುವೆ ಫಲ್ಗುಣಿ ನದಿಗೆ ಅಡ್ಡಲಾಗಿ ಸೇತುವೆ ಕಟ್ಟಲಾಗಿದೆ. ಇದೇ ವೇಳೆಗೆ ಸೀಗಲ್ ಎಂಬ ಬಸ್ಸು ಮೂಲರಪಟ್ಣ ದಿಂದ ಸುರತ್ಕಲ್ ಗೆ ಹೋಗುತಿತ್ತು. ಕೇವಲ ಒಂದೆರಡು ನಿಮಿಷಗಳ ವ್ಯತ್ಯಾಸದಲ್ಲಿ ಈ ಘಟನೆ ಸಂಭವಿಸಿದೆ . ಫಲ್ಗುಣಿ ನದಿಯಲ್ಲಿ ನಡೆಯುತ್ತಿದ್ದ […]

ಕರಾವಳಿ ಕುಂಬಾರರ ಯುವವೇದಿಕೆ ಬಂಟ್ವಾಳ ಕ್ಷೇತ್ರ ಇದರ ಕಾರ್ಯಕಾರಿ ಸಮಿತಿ ಸಭೆ!

Tuesday, June 19th, 2018
karavali

ಬಂಟ್ವಾಳ: ಕರಾವಳಿ ಕುಂಬಾರರ ಯುವವೇದಿಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ಇದರ ಕಾರ್ಯಕಾರಿ ಸಮಿತಿ ಸಭೆಯು ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ನಾರಾಯಣ ಸಿ ಪೆರ್ನೆ ಯವರ ಅಧ್ಯಕ್ಷತೆಯಲ್ಲಿ ಜರಗಿತು. ಮುಂದಿನ ಸಾಲಿನ ನೂತನ ಅಧ್ಯಕ್ಷರಾಗಿ ಸುಕುಮಾರ್ ಬಂಟ್ವಾಳ ಅವಿರೋಧವಾಗಿ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ನಾರಾಯಣ ಸಿ.ಪೆರ್ನೆ, ಕಾರ್ಯದರ್ಶಿಯಾಗಿ ಹರಿಪ್ರಸಾದ್, ಉಪಾಧ್ಯಕ್ಷರಾಗಿ ಸತೀಶ್ ಜಕ್ರಿಬೆಟ್ಟು, ಸತೀಶ ಸಂಪಾಜೆ, ಖಜಾಂಚಿಯಾ ಕವಿರಾಜ್ , ಸಂತೋಷ್ ಮರ್ತಾಜೆ, ಕ್ರೀಡಾ ಕಾರ್ಯದರ್ಶಿ ಜಯರಾಜ್ ಬಂಗೇರಾ, ಸಾಂಸ್ಕೃತಿಕ ಕಾರ್ಯದರ್ಶಿ ಯಾದವ ಅಗ್ರಬೈಲು, ಗೌರವ ಸಲಹೆಗಾರರಾಗಿ ಶೇಷಪ್ಪ […]

ಕೇರಳಕ್ಕೆ ಗೋ ಸಾಗಿಸಲು ಯತ್ನ: ಇಬ್ಬರು ಅರೆಸ್ಟ್

Tuesday, June 12th, 2018
cow-trackling

ಮಂಗಳೂರು: ರಾಜ್ಯದ ಗಡಿ ಭಾಗದಿಂದ ಕೇರಳಕ್ಕೆ ಅಕ್ರಮವಾಗಿ ಗೋವು ಸಾಗಾಟ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೇರಳದ ಎಣ್ಮಕಜೆ ಗ್ರಾಮದ ಬಳಪು ಮನೆ ನಿವಾಸಿ ಇಷಾದ್ (21) ಮತ್ತು ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಮರಕ್ಕಿಣಿ ನಿವಾಸಿ ರಶೀದ್ (19) ಬಂಧಿತ ಆರೋಪಿಗಳು. ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಎಂಬಲ್ಲಿ ಪೆರುವಾಯಿ ಕಡೆಯಿಂದ ಕೇರಳದ ಕಡೆಗೆ ಜಾನುವಾರು ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸರು […]

ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ..ಓರ್ವ ವ್ಯಕ್ತಿ ಬಂಧನ

Friday, June 8th, 2018
gold-buiscet

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಮಂಗಳೂರು ಡಿ‌ಆರ್‌‌ಐ ಅಧಿಕಾರಿಗಳು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿಲದ ಉಮರ್‌ ಫಾರೂಕ್‌ ಕನ್ನದಗುಳಿ‌ ಎಂಬಾತ ಬಂಧಿತ ಆರೋಪಿ. ಬುಧವಾರದಂದು ಸಂಜೆ 6.15 ಕ್ಕೆ ದುಬೈನಿಂದ‌ ಮಂಗಳೂರಿಗೆ ಉಮರ್‌ ಫಾರೂಕ್‌ ಬಂದಿದ್ದ. ಸ್ಪೈಸ್‌ಜೆಟ್‌ ವಿಮಾನದಲ್ಲಿ ಮಂಗಳೂರಿಗೆ ಬಂದಿಳಿದಿದ್ದ ಆರೋಪಿ ಮಲ್ಟಿ ಮೀಡಿಯಾ ಸ್ಪೀಕರ್‌ ಸಿಸ್ಟಮ್‌ ಒಳಗಡೆ ಚಿನ್ನವನ್ನು ಅಡಗಿಸಿ ತಂದಿದ್ದ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದಾಗ […]

ರಾಜೇಶ್ ನಾಯಕ್ ಬಂಟ್ವಾಳ ಕ್ಷೇತ್ರದಲ್ಲಿ ಜಯಗಳಿಸಿದ ಹಿನ್ನೆಲೆಯಲ್ಲಿ ಇಂದು ಬಿಜೆಪಿ ವತಿಯಿಂದ ವಿಜಯೋತ್ಸವ..!

Saturday, June 2nd, 2018
Rajesh-nayak

ಬಂಟ್ವಾಳ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಂಟ್ವಾಳ ಕ್ಷೇತ್ರದಲ್ಲಿ ಜಯಗಳಿಸಿದ ಹಿನ್ನೆಲೆಯಲ್ಲಿ ಇಂದು ಬಿಜೆಪಿ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ಬಿ.ಸಿ.ರೋಡು-ಕೈಕಂಬದಿಂದ ಬಿ.ಸಿ.ರೋಡು, ಗಾಣದಪಡ್ಪು, ಬಂಟ್ವಾಳ ನೆರೆವಿಮೋಚನಾ ರಸ್ತೆ, ಬಂಟ್ವಾಳ ಪೇಟೆ,ಬಡ್ಡಕಟ್ಟೆ, ಜಕ್ರಿಬೆಟ್ಟು ಮೂಲಕ ಬೈಪಾಸ್ ರಾಮನಗರ ಜಂಕ್ಷನ್‌ವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಶಿಲ್ಪ ಗೊಂಬೆ ಕುಣಿತ, ಚೆಂಡೆ, ಡಿಜೆ ಸೆಟ್ ಆಕರ್ಷಣೀಯವಾಗಿತ್ತು.