Blog Archive

ಸಾಲಮನ್ನಾ ಘೋಷಿಸಿ ಇಲ್ಲವೇ ರಾಜೀನಾಮೆ ನೀಡಿ: ಯಡಿಯೂರಪ್ಪ

Wednesday, May 30th, 2018
yedeyurappa

ಬೆಂಗಳೂರು: ಬುಧವಾರದೊಳಗಾಗಿ ಸಾಲಮನ್ನಾ ಘೋಷಣೆ ಮಾಡದೇ ಇದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ದೆಹಲಿಯಲ್ಲಿ ನೀಡಿದ್ದ ಹೇಳಿಕೆಯಂತೆ ಕುಮಾರಸ್ವಾಮಿ ನಡೆದುಕೊಳ್ಳಬೇಕು, ಸಾಲಮನ್ನಾ ಘೋಷಿಸಬೇಕು ಇಲ್ಲವೇ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ. ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೋರಾಟದ ಪರಿಣಾಮವಾಗಿ ಸಿಎಂ ಕುಮಾರಸ್ವಾಮಿ ರೈತ ಮುಖಂಡರ ಸಭೆ ಕರೆದಿದ್ದಾರೆ. 15 ದಿನಗಳಲ್ಲಿ ಸಣ್ಣ ರೈತರ ಸಾಲಮನ್ನಾ ಬಗ್ಗೆ ಮಾತನಾಡಿದ್ದಾರೆ. ಕುಮಾರಸ್ವಾಮಿ ನೀವು ಹೇಳಿದ್ದು ಏನು? ರೈತರ ವಿಚಾರದಲ್ಲಿ ದೊಂಬರಾಟ ಮಾಡುತ್ತಿದ್ದೀದರಾ? […]

ಬಿಜೆಪಿ ಕರೆ ನೀಡಿದ ರಾಜ್ಯ ಬಂದ್ ಗೆ ಯಾರು ಬೆಂಬಲಿಸಿಲ್ಲ: ಐವನ್ ಡಿಸೋಜ

Monday, May 28th, 2018
ivan-dsouza

ಮಂಗಳೂರು: ಬಿಜೆಪಿ ಕರೆ ನೀಡಿದ ರಾಜ್ಯ ಬಂದ್ ಗೆ ಯಾರು ಬೆಂಬಲಿಸಿಲ್ಲ ಎಂದು ಮಂಗಳೂರಿನಲ್ಲಿ ‌ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದ್ದಾರೆ. ನಿನ್ನೆಯಿಂದಲೆ ಸಂಘಸಂಸ್ಥೆಗಳು ಬೆಂಬಲಿಸುವುದಿಲ್ಲ ಎಂದು ತಿಳಿಸಿದೆ. ಯಡಿಯೂರಪ್ಪ ಕರೆ ನೀಡಿರುವ ಬಂದ್ ಸಂಪೂರ್ಣ ವಿಫಲ, ಯಡಿಯೂರಪ್ಪ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಎಂದಿದ್ದಾರೆ. ರಾಜ್ಯ ಬಂದ್ ಗೆ ಕರೆ ನೀಡಿ ಆಸ್ತಿಪಾಸ್ತಿ ಗೆ ನಷ್ಟವಾದರೆ ಯಡಿಯೂರಪ್ಪ ಅವರೆ ಹೊಣೆ .ಸಾಲಮನ್ನಾ ಮಾಡಲು ಸರಕಾರ ಬದ್ದವಿದೆ. ರಾಜ್ಯದ ಹಣಕಾಸು ಪರಿಸ್ಥಿತಿ ಚರ್ಚೆ ಮಾಡಿ ತೀರ್ಮಾನ […]

ಸಾಲ ಮನ್ನಾ ಬಗ್ಗೆ ಬಿಜೆಪಿ ಬ್ಲ್ಯಾಕ್‌ಮೇಲ್ ಮಾಡಲು ಸಾಧ್ಯವಿಲ್ಲ: ಡಿ.ಕೆ.ಶಿವಕುಮಾರ್

Friday, May 25th, 2018
d-k--shivkumar

ಬೆಂಗಳೂರು: ಸಾಲ ಮನ್ನಾ ವಿಚಾರವಾಗಿ ಬಿಜೆಪಿ ಡೆಡ್‌ಲೈನ್ ಕೊಡಲು ಸಾಧ್ಯವಿಲ್ಲ. ಬಹುಮತ ಸಾಬೀತು ವೇಳೆ ವಾಕ್ ಔಟ್ ಮಾಡುವ ಮೂಲಕ ಬಿಜೆಪಿ ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಿದ್ದಾರೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು. ವಿಧಾನ ಸೌಧದಲ್ಲಿ ಮಾತನಾಡಿದ ಅವರು, ರೈತರು ಶಾಂತಿಯುತವಾಗಿ ವರ್ತಿಸಬೇಕು. ಯಡಿಯೂರಪ್ಪಗೆ ಸಿಎಂ ಆಗಲು ಅಡ್ಡಿಯಾಗಿದ್ದು, ಕಾಂಗ್ರೆಸ್ ಶಕ್ತಿ. ನನ್ನಿಂದ ಮಾತ್ರ ಅದು ಆಗಿಲ್ಲವೆಂದು ಸ್ಪಷ್ಟಪಡಿಸಿದರು. ಯಡಿಯೂರಪ್ಪ ಅವರು ಇಂದು ಕೆಟ್ಟ ಸಂಸದೀಯ ವ್ಯವಹಾರವನ್ನು ಶುರು ಮಾಡಿದ್ದಾರೆ. ಬಂದ್ ಮಾಡುತ್ತೇವೆ ಎಂದು ಹೇಳುವ […]

ರಾಜಕೀಯದಲ್ಲಿ ನಮ್ಮ ತಾಯಿ ಹೆಸರು ತರಬೇಡಿ: ಸಿಎಂ ಹೆಚ್.ಡಿ.ಕುಮಾರಸ್ವಾಮಿ

Friday, May 25th, 2018
kumar-cm

ಬೆಂಗಳೂರು: ರಾಜಕೀಯ ವಿಚಾರದಲ್ಲಿ ದಯವಿಟ್ಟು ನಮ್ಮ ತಾಯಿಯವರ ಹೆಸರನ್ನು ತರಬೇಡಿ. ಅವರು ಎಂದೂ ಪ್ರಚಾರ ಬಯಸಿದವರಲ್ಲ. ಸಿದ್ದರಾಮಯ್ಯ ಅವರನ್ನು ಕ್ಷಮಿಸಲು ನಾನ್ಯಾರು ಎಂದು ಹೇಳಿರುವುದನ್ನೇ ಕೆಲವು ಮಾಧ್ಯಮದವರು ಅವರನ್ನು ನಾನು ಯಾವತ್ತೂ ಕ್ಷಮಿಸಲ್ಲ ಎಂದು ಬರೆದಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಗೃಹ ಕಚೇರಿಯಲ್ಲಿ ಇಂದು ಜೆಡಿಎಸ್ ಶಾಸಕ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ತಾಯಿ ಚೆನ್ನಮ್ಮ ಅವರು ಸಿದ್ದರಾಮಯ್ಯನವರನ್ನು ಯಾವತ್ತೂ ಕ್ಷಮಿಸಲ್ಲ ಎಂದು ಹೇಳಿದ್ದಾರೆ ಅಂತಾ ಕೆಲವು ಮಾಧ್ಯಮದವರು ಬರೆದಿದ್ದಾರೆ. […]

ಇಂದು ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ

Thursday, May 24th, 2018
yedeyurappa

ಬೆಂಗಳೂರು: ಇಂದು ಸಂಜೆ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಸಂಜೆ 6ಗಂಟೆಗೆ ಮಾಜಿ ಸಿಎಂ ಹಾಗೂ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಯಲಿದೆ. ಪಕ್ಷದ ರಾಜ್ಯಮಟ್ಟದ ನಾಯಕರು ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಶುಕ್ರವಾರ ನಡೆಯುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ವಿಶ್ವಾಸಮತದಲ್ಲಿ ಪಾಲ್ಗೊಳ್ಳಬೇಕೋ, ಬೇಡವೋ ಎಂಬ ಬಗ್ಗೆ ಚರ್ಚೆ ನಡೆಯಲಿದೆ. ಅಲ್ಲದೇ ಅತ್ಯಂತ ಸಮೀಪದಲ್ಲೇ ಇರುವ ಚುನಾವಣೆಗಳಲ್ಲಿ ಗೆಲ್ಲುವ ಸಂಬಂಧ ಕೈಗೊಳ್ಳಬೇಕಾದ ತಂತ್ರವನ್ನು ಹೆಣೆಯಲಾಗುತ್ತದೆ. ಒಂದರ ಹಿಂದೆ ಒಂದು ಚುನಾವಣೆ ಬರುತ್ತಿದ್ದು, ಸಮ್ಮಿಶ್ರ […]

ರಾಜ್ಯಕ್ಕೇ ಇಂದು ಕರಾಳ ದಿನ, ಅತೃಪ್ತರು ವಿಶ್ವಾಸ ಮತಕ್ಕೂ ಮುನ್ನ ನಮ್ಮಲ್ಲಿ ಬನ್ನಿ : ಯಡಿಯೂರಪ್ಪ

Wednesday, May 23rd, 2018
Yedyurappa

ಬೆಂಗಳೂರು : ಕಾಂಗ್ರೆಸ್ ನಲ್ಲಿ ಅಸಮಾಧಾನ ಹೊಂದಿರುವ ಶಾಸಕರು ಕುಮಾರ ಸ್ವಾಮಿಯವರು ವಿಶ್ವಾಸ ಮತ ಯಾಚಿಸುವುದಕ್ಕೂ ಮುನ್ನ ಬಿಜೆಪಿಗೆ ಬನ್ನಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಕರೆ  ನೀಡಿದ್ದಾರೆ. ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ರಚನೆಯನ್ನು ವಿರೋಧಿಸಿ ರಾಜ್ಯಾದ್ಯಂತ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿರುವ ಜನಮತ ವಿರೋಧಿ ದಿನ ಆಚರಣೆಯ ನೇತೃತ್ವವನ್ನು ವಹಿಸಿ ಮಾತನಾಡಿದರು. ರಾಜ್ಯದ ಜನತೆ ಬಿಜೆಪಿ ಪರವಾಗಿ ತೀರ್ಪು ನೀಡಿದ್ದಾರೆ. ಆದರೆ ಅಧಿಕಾರ ಪಡೆಯುವ ಒಂದೇ ಉದ್ದೇಶದಿಂದ ಇಂದು ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿವೆ. ಈ […]

ಸಂಸದ ಸ್ಥಾನಕ್ಕೆ ಯಡಿಯೂರಪ್ಪ, ಶ್ರೀರಾಮುಲು ರಾಜೀನಾಮೆ

Saturday, May 19th, 2018
yeddi-shrii

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ಕಾರಣ ತಮ್ಮ ಲೋಕಸಭಾ ಸದಸ್ಯತ್ವಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ. ಹಾಗೆಯೇ ಶ್ರೀರಾಮುಲು ಅವರು ಸಹ ರಾಜೀನಾಮೆ ನೀಡಿದ್ದಾರೆ. 2014 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕ್ರಮವಾಗಿ ಶಿವಮೊಗ್ಗ ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾಗಿದ್ದ ಬಿ ಎಸ್ ಯಡಿಯೂರಪ್ಪ ಮತ್ತು ಶ್ರೀರಾಮುಲು ಅವರ ರಾಜೀನಾಮೆಯನ್ನು ಸ್ಪೀಕರ್ ಅನುಮೋದಿಸಿದ್ದಾರೆ. ಮೇ 12 ರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ […]

3 ದಿನದ ಮುಖ್ಯಮಂತ್ರಿ ಶ್ರೀಯುತ ಯಡಿಯೂರಪ್ಪನವರ ಅಧಿಕಾರಾವಧಿ ಇಂದಿಗೆ ಕೊನೆಗೊಳ್ಳಲಿದೆ: ಸಿದ್ದರಾಮಯ್ಯ

Saturday, May 19th, 2018
congress

ಬೆಂಗಳೂರು: ರಾಜ್ಯ ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆಯೇ ರಾಜಕಾರಣಿಗಳು ಮತ್ತು ಜನರ ಕುತೂಹಲ, ಉದ್ವೇಗ ಹೆಚ್ಚಾಗಿದೆ. ಆದರೆ, ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರ ಅಧಿಕಾರದ ಅವಧಿ ಇಂದೇ ಮುಕ್ತಾಯವಾಗಲಿದೆ. ಅವರು ಮೂರು ದಿನಗಳ ಮಟ್ಟಿಗಿನ ಮುಖ್ಯಮಂತ್ರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಕಲಾಪ ಆರಂಭಕ್ಕೂ ಮುನ್ನ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಬಹುಮತವಿಲ್ಲದೆಯೇ ಸಂವಿಧಾನ ಬಾಹಿರವಾಗಿ ಪ್ರಮಾಣವಚನ ಸ್ವೀಕಾರ ಮಾಡಿರುವುದು ನಾಡಿನ ಮತದಾರರ ಆಶಯಗಳಿಗೆ ವಿರುದ್ಧವಾಗಿದೆ ಎಂದಿದ್ದಾರೆ. ಇಂದು ಸಂಜೆ ಜನಾಭಿಪ್ರಾಯಕ್ಕೆ ಜಯ ದೊರೆಯಲಿದೆ ಎಂಬ ವಿಶ್ವಾಸವಿರುವುದಾಗಿ ಹೇಳಿಕೊಂಡಿದ್ದಾರೆ. […]

ಅಮಿತ್‌ ಶಾ ‘ಗೂಬೆಲ್‌’ ತಂತ್ರ ನಡೆಯಲ್ಲ: ರಾಜ್ಯದಲ್ಲಿ ಅದಕ್ಕೆ ಅವಕಾಶವೂ ಇಲ್ಲ: ಸಿದ್ದರಾಮಯ್ಯ

Friday, May 18th, 2018
siddaramaih

ಬೆಂಗಳೂರು: ನಾಳೆಯೇ ಬಿ.ಎಸ್‌‌.ಯಡಿಯೂರಪ್ಪ ಅವರಿಗೆ ಬಹುಮತ ಸಾಬೀತು ಪಡಿಸಲು ಸೂಚಿಸಿರುವ ಸುಪ್ರೀಂಕೋರ್ಟ್‌ ಆದೇಶವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ. ತೀರ್ಪು ನೀಡಿರುವ ನ್ಯಾಯಮೂರ್ತಿಗಳನ್ನು ಅಭಿನಂದಿಸುತ್ತೇನೆ. ದೇಶದ ಇತಿಹಾಸದಲ್ಲಿ ಇದು ಮೈಲಿಗಲ್ಲಾಗುವ ತೀರ್ಪು ಎಂದು ಸಿದ್ದರಾಮಯ್ಯ ಹೇಳಿದರು. ಸುಪ್ರೀಂಕೋರ್ಟ್‌ ಆದೇಶ ಹೊರ ಬರುತ್ತಿದ್ದಂತೆ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್‌ ನಗರದ ಕೆಪಿಪಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ತೀರ್ಪಿನ ಮೂಲಕ ನ್ಯಾಯಾಧೀಶರು ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಣೆ ಮಾಡುವ ಕರ್ತವ್ಯ ನಿರ್ವಹಿಸಿದ್ದಾರೆ. ಸುಪ್ರೀಂ ನ್ಯಾಯಾಧೀಶರಿಗೆ […]

ಯಡಿಯೂರಪ್ಪ ನೂತನ ಸರ್ಕಾರದಿಂದ ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ!

Thursday, May 17th, 2018
Annamalai

ಬೆಂಗಳೂರು : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿಯ ನೂತನ ಸರ್ಕಾರದಿಂದ ಐಪಿಎಸ್ ಅಧಿಕಾರಿಗಳ ಮೊದಲ ವರ್ಗಾವಣೆ ನಡೆದಿದ್ದು ಅಣ್ಣಾಮಲೈ  ಸೇರಿದಂತೆ ಐವರು  ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಕೆಎಸ್‌ಆರ್‌ಪಿ ಡಿಐಜಿ ಆಗಿದ್ದ ಸಂದೀಪ್ ಪಾಟೀಲ್ ಅವರನ್ನು ಗುಪ್ತದಳದ ಡಿಐಜಿಯಾಗಿ, ರೈಲ್ವೆ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಅವರನ್ನು ಗುಪ್ತದಳದ ಎಡಿಜಿಪಿ, ಬೀದರ್ ಎಸ್ ಪಿ ಆಗಿದ್ದ ಡಿ. ದೇವರಾಜ್ ಅವರನ್ನು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿಯನ್ನಾಗಿ ಹಾಗೂ ಎಸಿಬಿ ಎಸ್ಪಿ ಗಿರೀಶ್ ಅವರನ್ನು ಬೆಂಗಳೂರು ಈಶಾನ್ಯ […]