Blog Archive

ಜಾತಿ, ಧರ್ಮ ನೋಡಿ ಕೆಲಸ ಮಾಡಿಲ್ಲ

Monday, January 8th, 2018
belthangady

ಮಂಗಳೂರು: ‘ನಾಲ್ಕು ವರ್ಷ ಎಂಟು ತಿಂಗಳ ಅವಧಿಯಲ್ಲಿ ಜನರಿಗೆ ಕೊಟ್ಟ ಮಾತಿನಂತೆ ನಡೆದಿದ್ದೇನೆ. ಜಾತಿ, ಧರ್ಮ ನೋಡಿ ಯಾವ ಕೆಲಸವನ್ನೂ ಮಾಡಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬೆಳ್ತಂಗಡಿ ತಾಲ್ಲೂಕು ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ 76 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ‘ನಮ್ಮ ಸರ್ಕಾರ ಧರ್ಮ, ಜಾತಿ ನೋಡಿ ಯಾವ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಎಂಬುದನ್ನು ತೋರಿಸಿ’ ಎಂದು ಸವಾಲು ಹಾಕಿದರು. ‘ಅನ್ನಭಾಗ್ಯ ಯೋಜನೆಯಡಿ ಎಲ್ಲ ಧರ್ಮ, ಜಾತಿಯ […]

ಮಂಗಳೂರಲ್ಲಿ ಹಲ್ಲೆಗೊಳಗಾದ ಬಷೀರ್ ಸ್ಥಿತಿ ಅತ್ಯಂತ ಗಂಭೀರ

Saturday, January 6th, 2018
murdered

ಮಂಗಳೂರು: ನಗರದ ಕೊಟ್ಟಾರ ಚೌಕಿಯ ಬಳಿ ಆಗಂತುಕರಿಂದ ಹಲ್ಲೆಗೆ ಒಳಗಾಗಿ ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಶೀರ್ ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದಾರೆ. ದೀಪಕ್ ರಾವ್ ಕೊಲೆ ನಡೆದ ದಿನವೇ ಸಂಜೆ ವೇಳೆ ಅಂಗಡಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಬಷೀರ್ ಅವರ ಮೇಲೆ ಅಗಂತುಕರು ಕತ್ತಿಗಳೊಂದಿಗೆ ದಾಳಿ ಸತತ 17 ಬಾರಿ ಅವರ ಮೇಲೆ ಹಲ್ಲೆ ನಡೆಸಿದ್ದರು. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತಿದ್ದ ಬಷೀರ್ ಅವರನ್ನು ಶೇಖರ್ ಮತ್ತು ರಾಹುಲ್ ಎಂಬ ಹಿಂದೂ ಯುವಕರು ಆಸ್ಪತ್ರೆಗೆ […]

ಪ್ರಕಾಶ್ ರೈ ಆಗಮನವನ್ನು ತಾಕತ್ತಿದ್ದರೆ ನಿಲ್ಲಿಸಲಿ: ವಿರೋಧಿಗಳಿಗೆ ಸಚಿವ ಯು.ಟಿ.ಖಾದರ್ ಸವಾಲು

Friday, December 22nd, 2017
U-T-Kader

ಮಂಗಳೂರು: ಚಲನಚಿತ್ರ ನಟ ಪ್ರಕಾಶ್ ರೈ ಈ ಮಣ್ಣಿನ ಮಗ. ಅವರನ್ನು ವಿರೋಧಿಸಲು ಯಾರಿಗೂ ಹಕ್ಕಿಲ್ಲ. ಅವರು ಕರಾವಳಿ ಉತ್ಸವ ಉದ್ಘಾಟನೆಗೆ ಮಂಗಳೂರಿಗೆ ಬಂದೇ ಬರುತ್ತಾರೆ. ತಾಕತ್ತಿದ್ದರೆ ಅವರನ್ನು ತಡೆಯಲಿ ನೋಡೋಣ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದ್ ವಿರೋಧಿಗಳಿಗೆ ಸವಾಲು ಹಾಕಿದ್ದಾರೆ. ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನಿಂದ ಲೇಡಿಹಿಲ್ ಸಮೀಪದ ಕರಾವಳಿ ಉತ್ಸವ ಮೈದಾನದಲ್ಲಿ ಆರಂಭಗೊಳ್ಳಲಿ ರುವ ಕರಾವಳಿ ಉತ್ಸವ ಉದ್ಘಾಟನೆಗೆ ನಟ ಪ್ರಕಾಶ್ ರೈ ಆಗಮನ ಸಂಬಂಧಿಸಿ ಸಾಮಾಜಿಕ […]

ಆಮ್‌ ಆದ್ಮಿ ಜೀವವಿಮಾ ಪಾಲಿಸಿ ಸ್ಥಗಿತದಿಂದ ಜನರಿಗೆ ತೊಂದರೆ: ಖಾದರ್‌

Friday, December 15th, 2017
u-t-kadar

ಮಂಗಳೂರು: ಕೇಂದ್ರ ಸರ್ಕಾರ ಆಮ್ ಆದ್ಮಿ ಜೀವವಿಮಾ ಪಾಲಿಸಿಯನ್ನು ಸ್ಥಗಿತಗೊಳಿಸಿರುವುದರಿಂದ ಜನಸಾಮಾನ್ಯರು ತೊಂದರೆಗೊಳಗಾಗಿದ್ದಾರೆ ಎಂದು ಆಹಾರ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಮಾ ಯೋಜನೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಸಾವು ಸಂಭವಿಸಿದರೆ, ಅಪಘಾತದಿಂದ ಮೃತಪಟ್ಟವರಿಗೆ, ಅಂಗ ವೈಕಲ್ಯಕ್ಕೆ ಗರಿಷ್ಠ ಮೊತ್ತದ ಪರಿಹಾರಕ್ಕೆ ಅವಕಾಶವಿತ್ತು. ಆದರೆ ಕೇಂದ್ರ ಏಕಾಏಕಿ ಈ ವಿಮೆ ಯೋಜನೆಯನ್ನು ರದ್ದುಪಡಿಸಿದ್ದು, ಇದು ಸರಿಯಾದ ಕ್ರಮವಲ್ಲ ಎಂದು ಹೇಳಿದರು. ಆಹಾರ ವಸ್ತುಗಳ ಗುಣಮಟ್ಟವನ್ನು ನಿರ್ಧರಿಸುವ ಬ್ಯೂರೋ ಆಫ್‌ ಸ್ಟಾಂಡರ್ಡ್‌ (ಬಿಐಎಸ್) ಸಮಿತಿಗೆ ನನ್ನನ್ನು ಕೇಂದ್ರ […]

ಆಶ್ರಫ್, ಶರತ್ ಕುಟುಂಬಕ್ಕೆ ತಲಾ 5 ಲಕ್ಷ ರೂ

Thursday, December 14th, 2017
u-t-kader

ಮಂಗಳೂರು: ಬಂಟ್ವಾಳ ತಾಲೂಕಿನಲ್ಲಿ ಕೆಲವು ತಿಂಗಳ ಹಿಂದೆ ಕೊಲೆಯಾಗಿರುವ ಮುಹಮ್ಮದ್ ಅಶ್ರಫ್ ಮತ್ತು ಶರತ್ ಮಡಿವಾಳ ಕುಟುಂಬಕ್ಕೆ ರಾಜ್ಯ ಸರಕಾರ ತಲಾ ಐದು ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಿದೆ ಎಂದು ಆಹಾರ ಮತ್ತು ನಾಗರಿಕ‌ ಸರಬರಾಜು ಸಚಿವ ಯು.ಟಿ.ಖಾದರ್ ಹೇಳಿದರು. ಪರಿಹಾರದ ಮೊತ್ತವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಮೂಲಕ ಎರಡೂ ಕುಟುಂಬಗಳಿಗೆ ವಿತರಿಸಲಾಗುವುದು ಎಂದು ಅವರು ತಿಳಿಸಿದರು. ಬಂಟ್ವಾಳದಲ್ಲಿ ಇಬ್ಬರು ಅಮಾಯಕರ ಹತ್ಯೆ ನಡೆದಾಗ ಪರಿಹಾರ ಕೊಡಿಸುತ್ತೇನೆ ಎಂದು ಹೇಳಿದ್ದೆ. ಸರಕಾರದ […]

ರಾಜ್ಯೋತ್ಸವ ದಿನ ಸಚಿವ ಯು.ಟಿ.ಖಾದರ್ ಕ್ಷೇತ್ರದಲ್ಲಿ ಅಪಚಾರ

Saturday, November 4th, 2017
rajyothsava

ಮಂಗಳೂರು: ಸಚಿವ ಯು.ಟಿ.ಖಾದರ್ ಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವ ದಿನ ಅಪಚಾರವೊಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕನ್ನಡ ಭುವನೇಶ್ವರಿ, ರಾಣಿ ಅಬ್ಬಕ್ಕ ಹಾಗೂ ಒನಕೆ ಓಬವ್ವ ವೇಷಧಾರಿಗಳನ್ನು ಉಳ್ಳಾಲ ಪುರಸಭೆ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ  ಕಸ ವಿಲೇವಾರಿ ಮಾಡುವ ವಾಹನದಲ್ಲಿ ಮೆರವಣಿಗೆ ಮಾಡಿರುವ ಚಿತ್ರ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಚಿತ್ರವನ್ನು ಕಂಡ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕೆಂಡಾಮಂಡಲವಾಗಿದ್ದು, ಇದರ ವಿರುದ್ಧ ನಾಳೆ ಉಳ್ಳಾಲ ಪುರಸಭೆ ಮುಂದೆ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಉಳ್ಳಾಲ ಪುರಸಭೆ ಹಾಗೂ ಕೆಲ […]

ನ.5 ರಂದು ಬಿ.ಸಿ.ರೋಡಿನಲ್ಲಿ ಹಿಜಾಮ ಚಿಕಿತ್ಸಾ ಉಚಿತ ಶಿಬಿರ

Friday, November 3rd, 2017
hijama treatment

ಮಂಗಳೂರು: ಜವಾನ್ ಫ್ರೆಂಡ್ಸ್ ಬಿ.ಸಿ.ರೋಡ್ ಹಾಗೂ ಯು.ಟಿ.ಖಾದರ್ ಅಭಿಮಾನಿಗಳ ಬಳಗ ಮಂಗಳೂರು ಜಂಟಿ ಆಶ್ರಯದಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಸಹಯೋಗದೊಂದಿಗೆ ಭಾನುವಾರ ನ.5 ರಂದು ಉಚಿತ ಹಿಜಾಮ ಚಿಕಿತ್ಸಾ ಶಿಬಿರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡಂಗೆ, ಬಿ.ಸಿ.ರೋಡ್ ನಲ್ಲಿ ನಡೆಯಲಿದೆ. ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಬಿ.ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸುವರು. ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಯು.ಟಿ.ಖಾದರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಯು.ಟಿ.ಖಾದರ್ ಅಭಿಮಾನಿಗಳ ಬಳಗ ಅಧ್ಯಕ್ಷ ಆಶಿಕ್ ಕುಕ್ಕಾಜೆ ಬಿ.ಸಿ.ರೋಡಿನ […]

ಮುಡಿಪು: ನೂತನ ಕಾಂಕ್ರೀಟ್‌ ರಸ್ತೆಗೆ ಶಿಲಾನ್ಯಾಸ

Wednesday, October 18th, 2017
mudipu

ಮಂಗಳೂರು: ಯು.ಟಿ.ಖಾದರ್, ಪಜೀರು ಗ್ರಾಮದ ವಜಲ ಗುಡ್ಡೆ ಪರಿಸರವು ಬಹಳಷ್ಟು ಹಿಂದುಳಿದ ಪ್ರದೇಶವಾಗಿದೆ. ಇಂದಿನ ಆಧುನಿ ಕತೆಯಲ್ಲೂ ಜನರು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದೇ, ಬಹಳಷ್ಟು ದೂರ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಇಲ್ಲಿಯದ್ದು ಎಂದು ಹೇಳಿದರು. ಪಜೀರು ಗ್ರಾಮದ ವಜಲಗುಡ್ಡೆಯ ನೂತನ ಕಾಂಕ್ರೀಟ್‌ ರಸ್ತೆಗೆ ಆಹಾರ ಸಚಿವ ಯು.ಟಿ.ಖಾದರ್ ಶಿಲಾನ್ಯಾಸ ನೆರವೇರಿಸಿದರು. ಕಳೆದ ಬಾರಿ ಇಲ್ಲಿಯ ಜನರಿಗೆ ನೀಡಿದ ಭರವಸೆಯಂತೆ ಇದೀಗ ಈ ರಸ್ತೆಗೆ ಸುಮಾರು ರೂ.25 ಲಕ್ಷ ವೆಚ್ಚದಲ್ಲಿ ಉತ್ತಮ ಕಾಂಕ್ರೀಟ್‌ ರಸ್ತೆ ನಿರ್ಮಾಣವಾಗಲಿದೆ. ಈ ಭಾಗದ ತಾಲ್ಲೂಕು […]

ಯು.ಟಿ.ಖಾದರ್ ಅವರ ಜನ್ಮ ದಿನ, ದರ್ಗಾದಲ್ಲಿ ಸಕ್ಕರೆ ತುಲಾಭಾರ

Thursday, October 12th, 2017
khader

ಮಂಗಳೂರು:  ಮಂಗಳೂರು ಶಾಸಕರೂ ಆದ ಯು.ಟಿ.ಖಾದರ್ ಅವರ ಜನ್ಮ ದಿನವಾದ ಗುರುವಾರ ಅವರ ಹಿತೈಶಿ, ಸ್ನೇಹಿತ ರಶೀದ್ ವಿಟ್ಲ ಅವರು ಉಳ್ಳಾಲ ಸೈಯದ್ ಮದನಿ ದರ್ಗಾದಲ್ಲಿ ಸಕ್ಕರೆ ತುಲಾಭಾರ ನಡೆಸಿ 87 ಕಿಲೋ ಗ್ರಾಂ ಸಕ್ಕರೆಯನ್ನು ದರ್ಗಾದ ಸಮಾಜ ಕಲ್ಯಾಣ ಕಾರ್ಯಕ್ಕಾಗಿ ದಾನ ಮಾಡಿದರು. ಈ ಸಂದರ್ಭ ಸಚಿವರು ದರ್ಗಾಕ್ಕೆ ಚಾದರ್ ಸಮರ್ಪಿಸಿ ನಾಡಿನಲ್ಲಿ ಶಾಂತಿ ಸ್ಥಾಪನೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ರಶೀದ್ ವಿಟ್ಲ, ಮಂಗಳೂರು ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು, ಉಳ್ಳಾಲ ನಗರಸಭೆ ಸದಸ್ಯ ಉಸ್ಮಾನ್ ಕಲ್ಲಾಪು, […]

ಈ ವರ್ಷದ ಅಂತ್ಯದೊಳಗೆ ಎಲ್ಲ ಅರ್ಹ ಫಲಾನುಭವಿಗಳಿಗೆ ‘94 ಸಿ ಮತ್ತು 94 ಸಿಸಿ’ಯಡಿ ಹಕ್ಕುಪತ್ರ : ಕಾಗೋಡು

Thursday, September 14th, 2017
Kagodu

ಮಂಗಳೂರು :  ವಾಸಿಸುವವನೇ ಆ ನೆಲದೊಡೆಯನಾಗಬೇಕು ಎಂಬ ಕನಸು ಕಂಡ ಫಲಾನುಭವಿಗಳಿಗೆ ನೆಲದ ಒಡೆತನ ನೀಡಿದ ಹೆಮ್ಮೆ ಕಾಂಗ್ರೆಸ್ ಸರಕಾರಕ್ಕೆ ಇದೆ, ಭೂಮಿ ನಿಮ್ಮ ಬೆನ್ನು ಹತ್ತಿ ಬರಲಾರದು. ನೀವೇ ಭೂಮಿಯನ್ನು ಬೆನ್ನು ಹತ್ತಿ ಹೋಗಬೇಕು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು. ಮುಡಿಪು ಸಮೀಪದ ಕುರ್ನಾಡು ಸರಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ‘ಅರ್ಹ ಫಲಾನುಭವಿಗಳಿಗೆ 94ಸಿ ಮತ್ತು 94 ಸಿಸಿ ಹಕ್ಕುಪತ್ರ ವಿತರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಕೊಟ್ಟ ಮಾತು-ದಿಟ್ಟ ಹೆಜ್ಜೆ- […]