ಆಳ್ವಾಸ್ ವಿದ್ಯಾರ್ಥಿಯಿಂದ ಸ್ಯಾನಿಟರಿ ಪ್ಯಾಡ್ ಕಂಪೆನಿ ಸ್ಥಾಪನೆ
Wednesday, February 28th, 2018ಮಂಗಳೂರು: ಮೂಡಬಿದ್ರೆ ಆಳ್ವಾಸ್ ಪದವಿ ಕಾಲೇಜಿನ ತೃತೀಯ ಬಿ.ಕಾಮ್ ವಿದ್ಯಾರ್ಥಿ ಕಿರಣ್ ರೆಡ್ಡಿ ಚೆನ್ನೈನ ಸೂರ್ಯ ಎಂಬುವವರ ಸಹಯೋಗದಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ತಯಾರಿಕಾ ಕಂಪನಿಯನ್ನು ಆರಂಭಿಸಿದ್ದು, ಆಳ್ವಾಸ್ ಶಿಕ್ಷಣ ಪ್ರತಿಪ್ಠಾನದ ಕುವೆಂಪು ಸಭಾಂಗಣದಲ್ಲಿ ‘ಬೆಸ್ಟಿ'(ಸ್ಯಾನಿಟರ್ ನ್ಯಾಪ್ಕಿನ್) ಎಂಬ ಹೊಸ ಪ್ರೊಡಕ್ಟ್ ಬಿಡುಗಡೆಯಾಗಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಢಾನದ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ಉತ್ಪನ್ನವನ್ನು ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು, ಸಂಸ್ಥೆಯ ಹೋರಾಟ ಮನೋಭಾವ, ಇಚ್ಛಾಶಕ್ತಿ ಹಾಗೂ ಸೃಜನಾತ್ಮಕ ಚಿಂತನೆಗಳು ಇದ್ದಲ್ಲಿ ಯಾರು ಬೇಕಾದರೂ ಸಾಧಿಸಬಹುದು […]