Blog Archive

ಬಂಟ್ವಾಳ ಕ್ಷೇತ್ರ : ರಮಾನಾಥ ರೈ v/s ಬಿಜೆಪಿ ಕದನ!

Wednesday, January 31st, 2018
ramanath-rai

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಕುತೂಹಲ ಕೆರಳಿಸಿರುವ ಕ್ಷೇತ್ರ ಬಂಟ್ವಾಳ. ಕ್ಷೇತ್ರದ ಶಾಸಕರು ರಾಜ್ಯ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಬಿ ರಮಾನಾಥ ರೈ. ಹಲವಾರು ವಿವಾದಗಳಿಂದ ಸುದ್ದಿ ಮಾಡಿದ್ದ ಸಚಿವ ರಮಾನಾಥ ರೈ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ತೀವ್ರ ಪೈಪೋಟಿ ನೀಡುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟ್ವಾಳ ಕ್ಷೇತ್ರ ಬಿಜೆಪಿ ಹಾಗೂ ಸಂಘಪರಿವಾರಕ್ಕೆ ಪ್ರಮುಖ ಟಾರ್ಗೆಟ್. ಕಲ್ಲಡ್ಕ ಪ್ರಭಾಕರ ಭಟ್ ರ ಶಾಲೆಗೆ ರಾಜ್ಯ ಸರ್ಕಾರದ […]

ಸ್ವಚ್ಛ ಭಾರತ: ನಿರ್ಮಲ ಬಂಟ್ವಾಳ ಅಭಿಯಾನ

Friday, January 26th, 2018
swaccha-bharat

ಬಂಟ್ವಾಳ: ಸ್ವಚ್ಛತೆ ಎಂಬುದು ಪ್ರತಿಯೊ ಬ್ಬರಲ್ಲಿಯೂ ಸ್ವಂ ಪ್ರೇರಣೆಯಿಂದ ಮೂಡಿ ಬರಬೇಕು. ಆ ಮೂಲಕ ಸ್ವಚ್ಛ ಪರಿಸರ ಮತ್ತು ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಮೊಡಂಕಾಪು ಕಾರ್ಮೆಲ್‌ ಕಾಲೇಜಿನ ಪ್ರಾಂಶುಪಾಲರಾದ ಸುಪ್ರಿಯಾ ಎ.ಸಿ.ಹೇಳಿದ್ದಾರೆ. ತಾಲ್ಲೂಕಿನ ಮೊಡಂಕಾಪು ಕಾರ್ಮೆಲ್‌ ಕಾಲೇಜಿನ ಬಳಿ ಗುರು ವಾರ ನಡೆದ ‘ಸ್ವಚ್ಛ ಭಾರತ-ನಿರ್ಮಲ ಬಂಟ್ವಾಳ ಅಭಿಯಾನ’ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಸದಸ್ಯರಾದ ಇಕ್ಬಾಲ್ ನಂದರಬೆಟ್ಟು, […]

ಸ್ನೇಹಿತನ ಸಾವಿನ ಸುದ್ದಿಯಿಂದ ಶಾಕ್‌… ಸಿಪಿಐ ಮುಖಂಡ ವಿಶ್ವನಾಥ್‌ ನಿಧನ

Thursday, January 18th, 2018
vishwanath-nayak

ಮಂಗಳೂರು: ಸಿಪಿಐ ಮುಖಂಡ ಪಿ. ಸಂಜೀವ ಅವರ ನಿಧನ ಸುದ್ದಿ ಕೇಳಿದ ಶಾಕ್‌ನಲ್ಲೇ ಆಸ್ಪತ್ರೆ ಸೇರಿದ್ದ ಹಿರಿಯ ಸಿಪಿಐ ಮುಖಂಡ ವಿಶ್ವನಾಥ್ ನಾಯಕ್ ಕೂಡ ನಿನ್ನೆ ರಾತ್ರಿ ಆಸ್ಪತ್ರೆಯಲ್ಲೇ ನಿಧನರಾಗಿದ್ದಾರೆ. ಕಮ್ಯುನಿಸ್ಟ್ ಚಳವಳಿಯ ಹಿರಿಯ ಮುಖಂಡ ಪಿ.ಸಂಜೀವ ನಿನ್ನೆ ಬೆಳಗ್ಗೆ ನಿಧನರಾಗಿದ್ದರು. ಆತ್ಮೀಯ ಗೆಳೆಯನ ಅಗಲಿಕೆಯ ವಿಚಾರವನ್ನು ಕೇಳಿದ ಶಾಕ್‌ನಿಂದ ವಿಶ್ವನಾಥ್ ನಾಯಕ್ (75) ಅಸ್ವಸ್ಥರಾಗಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ. ಪಿ ಸಂಜೀವ ಹಾಗೂ ವಿಶ್ವನಾಥ್ ನಾಯಕ್ ಅವರು […]

ಬಂಟ್ವಾಳ ತಾಲೂಕಿನಲ್ಲಿ “ಪರಿವರ್ತನೆಗೆ ಗ್ರಾಮದೆಡೆಗೆ ಬಿಜೆಪಿ ನಡಿಗೆ”ಯ ಮೂರನೆ ದಿನದ ಪಾದಯಾತ್ರೆ

Wednesday, January 17th, 2018
Bantwala

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ನೇತೃತ್ವದಲ್ಲಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಮುಂದಾಳತ್ವದಲ್ಲಿ ಜ.14ರಂದು ಆರಂಭವಾದ 13 ದಿನಗಳ ಬಂಟ್ವಾಳದ “ಪರಿವರ್ತನೆಗೆ ಗ್ರಾಮದೆಡೆಗೆ ಬಿಜೆಪಿ ನಡಿಗೆ”ಯ ಮೂರನೆ ದಿನದ ಪಾದಯಾತ್ರೆಯು ಮಂಗಳವಾರ ರಾಯಿ ಪೇಟೆಯಲ್ಲಿ ಮತ್ತೆ ಆರಂಭವಾಯಿತು. ಕೈತ್ರೋಡಿ ಕ್ವಾಟ್ರಸ್‍ರಸ್ತೆಯಲ್ಲಿ ಪಂಜಿಕಲ್ಲಿನ ಬಾಲೇಶ್ವರಗರಡಿಗೆ ತಲುಪಿದಾಗ ಅಲ್ಲಿ ನೆರೆದಿದ್ದ ಪಂಜಿಕಲ್ಲಿನ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ರಾಜೇಶ್ ನಾಯ್ಕ್ ಉಳಿಪ್ಪಾಡಿಯವರಿಗೆ ಹೂ ಹಾರ ಹಾಕುವ ಮೂಲಕ ಸ್ವಾಗತಿಸಿದರು. ಅಲ್ಲಿಂದ ಪಾದಯಾತ್ರೆಯು ಮುಂದುವರಿದು ರಸ್ತೆಯ […]

ರೈಗಳೇ ನಿಮ್ಮ ಹೆಸರು ‘ರಸತ್ತುಲ್ಲಾ’ ಅಂತ ಬದಲಾಯಿಸಿಕೊಳ್ಳಿ

Friday, December 29th, 2017
jaggesh

ಬೆಂಗಳೂರು: ‘ಅಲ್ಲಾಹು ಕೃಪೆ ಮತ್ತು ಬಂಟ್ವಾಳದ ಮುಸ್ಲಿಮರ ಜಾತ್ಯಾತೀತ ನಿಲುವಿನಿಂದ ನಾನು 6 ಬಾರಿ ಶಾಸಕನಾಗಿ ಆಯ್ಕೆಯಾಗಲು ಸಾಧ್ಯವಾಯಿತು’ ಎಂದು ಹೇಳಿಕೆ ನೀಡಿದ ಸಚಿವ ರಮನಾಥ ರೈ ಅವರಿಗೆ ಬಿಜೆಪಿ ನಾಯಕ,ನವರಸ ನಾಯಕ ಜಗ್ಗೇಶ್‌ ಹೆಸರು ಬದಲಾಯಿಸಿಕೊಳ್ಳಲು ಸಲಹೆ ನೀಡಿ ಟಾಂಗ್‌ ನೀಡಿದ್ದಾರೆ. ‘ದಯಮಾಡಿ ಈಗಲೆ ಮುಲ್ಲಾ ಕರೆಸಿ ಕತ್ನ ಮಾಡಿಸಿಕೊಂಡು..ಮುಸಲ್ಮಾನರಿಗಾದರೂ ವಿಧೇಯರಾಗಿ..!5 ಬಾರಿ ನಮಾಜ್‌ ಶುರುಮಾಡಿ..!ಯಾವುದೇ ಕಾರಣಕ್ಕೂ ಹಿಂದುಗಳ ಮತ ಕೇಳಬೇಡಿ..ನಿಮ್ಮ ಹೆಸರು ರಸತ್ತುಲ್ಲಾ ಅಂತ ಬದಲಾಯಿಸಿಕೊಂಡು ಚನ್ನಾಗಿ ಬಾಳಿ!’ ಎಂದು ಜಗ್ಗೇಶ್‌ ಟ್ವೀಟ್‌ ಮಾಡಿದ್ದಾರೆ […]

ಬಂಟ್ವಾಳ ತಾಲ್ಲೂಕಿನ ನಾವೂರು: ಗಂಡು ಕರು ಸಾಗಣೆ- ಗುಂಪಿನಿಂದ ಇಬ್ಬರ ಮೇಲೆ‌ ಹಲ್ಲೆ

Thursday, December 21st, 2017
bantwal-taluk

ಮಂಗಳೂರು: ಬಂಟ್ವಾಳ ತಾಲ್ಲೂಕಿನ ನಾವೂರು ಗ್ರಾಮದ ಹಳೆಗೇಟು ಎಂಬಲ್ಲಿ ದನದ ಗಂಡು ಕರುವೊಂದನ್ನು ಸರಕು ಸಾಗಣೆ ರಿಕ್ಷಾ ಸಾಗಿಸುತ್ತಿದ್ದ ಇಬ್ಬರ ಮೇಲೆ‌ ಗುಂಪೊಂದು ಮಂಗಳವಾರ ರಾತ್ರಿ ಹಲ್ಲೆ‌ ನಡೆಸಿದೆ. ಸಮೀಪದ ಕಕ್ಕೆಪದವು ಉಳಿ ನಿವಾಸಿ ಪೂವಪ್ಪ ನಾಯ್ಕ ಮತ್ತು ರಿಕ್ಷಾ ಚಾಲಕ ಸೈಯದ್ ಇಬ್ರಾಹಿಂ ಹಲ್ಲೆಗೊಳಗಾದವರು. ರಿಕ್ಷಾದಲ್ಲಿ ಕರು ಸಾಗಿಸುತ್ತಿರುವುದನ್ನು ಕಂಡ ಸ್ಥಳೀಯ 25 ಕ್ಕೂ ಹೆಚ್ಚು ಮಂದಿಯ ಗುಂಪು ವಾಹನ ತಡೆದು ಹಲ್ಲೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಬ್ಬರ ಮೇಲೆ ಹಲ್ಲೆ ನಡೆಸಿದ ಗುಂಪು […]

ಆಶ್ರಫ್, ಶರತ್ ಕುಟುಂಬಕ್ಕೆ ತಲಾ 5 ಲಕ್ಷ ರೂ

Thursday, December 14th, 2017
u-t-kader

ಮಂಗಳೂರು: ಬಂಟ್ವಾಳ ತಾಲೂಕಿನಲ್ಲಿ ಕೆಲವು ತಿಂಗಳ ಹಿಂದೆ ಕೊಲೆಯಾಗಿರುವ ಮುಹಮ್ಮದ್ ಅಶ್ರಫ್ ಮತ್ತು ಶರತ್ ಮಡಿವಾಳ ಕುಟುಂಬಕ್ಕೆ ರಾಜ್ಯ ಸರಕಾರ ತಲಾ ಐದು ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಿದೆ ಎಂದು ಆಹಾರ ಮತ್ತು ನಾಗರಿಕ‌ ಸರಬರಾಜು ಸಚಿವ ಯು.ಟಿ.ಖಾದರ್ ಹೇಳಿದರು. ಪರಿಹಾರದ ಮೊತ್ತವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಮೂಲಕ ಎರಡೂ ಕುಟುಂಬಗಳಿಗೆ ವಿತರಿಸಲಾಗುವುದು ಎಂದು ಅವರು ತಿಳಿಸಿದರು. ಬಂಟ್ವಾಳದಲ್ಲಿ ಇಬ್ಬರು ಅಮಾಯಕರ ಹತ್ಯೆ ನಡೆದಾಗ ಪರಿಹಾರ ಕೊಡಿಸುತ್ತೇನೆ ಎಂದು ಹೇಳಿದ್ದೆ. ಸರಕಾರದ […]

ಬಿ.ಸಿ. ರೋಡ್‌ನಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ;ಅದ್ಧೂರಿ ಸ್ವಾಗತ

Saturday, November 11th, 2017
parivarthana yathre

ಮಂಗಳೂರು: ಬಿಜೆಪಿ ಮುಖಂಡರಿಗೆ ಹುಲಿ ವೇಷಧಾರಿ ಹಾಗೂ ಕಹಳೆಯ ಮೂಲಕ ಅದ್ಧೂರಿ ಸ್ವಾಗತ,ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್‌ನಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ಆರಂಭ. ಪರಿವರ್ತನಾ ಯಾತ್ರೆಯಲ್ಲಿ ಭಾರೀ ಸಂಖ್ಯೆಯ ಕಾರ್ಯಕರ್ತರೊಂದಿಗೆ ವೇದಿಕೆಯತ್ತ ಆಗಮಿಸಿದ ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್‌‌ ಕಟೀಲ್‌, ನಾಗರಾಜ ಶೆಟ್ಟಿ, ರಾಜೇಶ್‌ ನಾಯ್ಕ್‌ ಸೇರಿದಂತೆ ಸಾವಿರಾರು ಕಾರ್ಯಕರ್ತರು ಸಾಥ್‌ ನೀಡಿದರು. ಸುಳ್ಯ ತಲುಪಿದಾಗ ಬಿಜೆಪಿ ಪರಿವರ್ತನಾ ಯಾತ್ರೆ ಜನಸಾಗರ ಯಾತ್ರೆಯಾಗಿ ಪರಿವರ್ತನೆಗೊಂಡಿತ್ತು. ಈ ವೇಳೆ ಮಾತನಾಡಿದ […]

ಈಜಲು ತೆರಳಿದ್ದ ಐವರು ಮಕ್ಕಳು ನೀರುಪಾಲು! ಫಲ್ಗುಣಿ ನದಿಯಲ್ಲಿ ಘಟನೆ

Tuesday, November 7th, 2017
palguni river

ಮಂಗಳೂರು: ಬಂಟ್ವಾಳ ತಾಲೂಕಿನ ಮೂಲರಪಟ್ಣದಲ್ಲಿ ಫಲ್ಗುಣಿ ನದಿಗೆ ಸ್ನಾನ ಮಾಡಲು ತೆರಳಿದ್ದ ಐವರು ಮಕ್ಕಳು ನೀರುಪಾಲದ ಘಟನೆ ನಡೆದಿದೆ. ಸೋಮವಾರ ಸಂಜೆ ಮನೆಯಿಂದ ಹೋದವರು ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಮಕ್ಕಳ ಪೋಷಕರು ಹುಡುಕಾಟ ನಡೆಸಿದ ವೇಳೆ ನದಿಯ ದಡದ ಮೇಲೆ ಮಕ್ಕಳ ಬಟ್ಟೆಗಳು ಪತ್ತೆಯಾಗಿವೆ. ಅಸ್ಲಾಮ್ ( 17), ರಮೂಜ್ (17), ಅಜಮಾತ್ (18), ಮುಬಾಶಿರ್ (17) ಹಾಗೂ ಸಮಾದ್ (17) ನೀರುಪಾಲಾದ ಮಕ್ಕಳು. ಮುಂಜಾನೆ ಸಮಾದ್ ಮೃತದೇಹ ಪತ್ತೆಯಾಗಿದ್ದು, ಇನ್ನುಳಿದ ನಾಲ್ವರ ಮಕ್ಕಳ […]

ಟಿಪ್ಪು ಜಯಂತಿ ಸರ್ಕಾರದ ವತಿಯಿಂದ ಮಾಡುತ್ತೇವೆ: ಸಿದ್ದರಾಮಯ್ಯ

Monday, October 23rd, 2017
tippu jayanthi

ಮಂಗಳೂರು:  ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಮಾಡಿಯೇ ಮಾಡುತ್ತೇವೆ,  ಬಿಜೆಪಿ ರಾಜಕೀಯ ಕಾರಣದಿಂದ ಟಿಪ್ಪು ಜಯಂತಿ ವಿರೋಧಿಸುತ್ತಿದೆಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ವಿವಿಧ ಯೋಜನೆಗಳ ಉದ್ಘಾಟನೆಗಾಗಿ ಆಗಮಿಸಿದ ಅವರು ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿ, ಯಡಿಯೂರಪ್ಪ ಕೆಜೆಪಿಯಲ್ಲಿದ್ದಾಗ ಟಿಪ್ಪು ಜಯಂತಿ ಆಚರಿಸಿದ್ದಾರೆ. ಶೋಭಾ ಕೂಡಾ ಅವರಿಗೆ ಸಾಥ್ ನೀಡಿದ್ದರು. ಟೊಪ್ಪಿ ಹಾಕಿ ಖಡ್ಗ ಝಳಪಿಸಿ ಅಂದು ಯಡಿಯೂರಪ್ಪ ಫೋಸ್ ನೀಡಿದ್ದರು ಎಂದು ವ್ಯಂಗ್ಯವಾಡಿದರು. ಸಚಿವ ಹೆಗಡೆ ಹೇಳಿಕೆಗೆ ಪ್ರತಿಕ್ರಿಯಿಸಿ ಪ್ರೋಟೊಕಾಲ್ ಪ್ರಕಾರ […]