ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ 129ನೇ ಜಯಂತಿಯನ್ನುಆಚರಿಸಿದ ದಕ್ಷಿಣ ಕನ್ನಡ ಜಿಲ್ಲಾಡಳಿತ

Tuesday, April 14th, 2020
Ambedkar-jayanti

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 129ನೇ ಜಯಂತಿಯಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಯವರು ದೀಪ ಬೆಳಗಿಸಿ ನಂತರ ಅಂಬೇಡ್ಕರ್ ರವರ ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಎಂಪಿ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಡಾಕ್ಟರ್ ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಸಿಂಧು ರೂಪೇಶ,ಜಿ. ಪಂ.ಕಾರ್ಯನಿರ್ವಹಣಾ ಅಧಿಕಾರಿ […]

ಅಂಬೇಡ್ಕರ್ ಅವರನ್ನು ಮರೆತರೆ ನಮಗೆ ನಾವೇ ಅನ್ಯಾಯ ಮಾಡಿಕೊಂಡಂತೆ : ಮಾಜಿ ಸಿಎಂ ಸಿದ್ದರಾಮಯ್ಯ

Monday, October 14th, 2019
saddaramaih

ಮೈಸೂರು : ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಅವರನ್ನು ಮರೆತರೆ ನಮಗೆ ನಾವೇ ಅನ್ಯಾಯ ಮಾಡಿಕೊಂಡಂತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ಟಿ.ನರಸೀಪುರದಲ್ಲಿ ಅಂಬೇಡ್ಕರ್ ಪುತ್ಥಳಿ ಅನಾವರಣ ಮಾಡಿ ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮಗೆ ರಾಜಕೀಯ ಸ್ವಾತಂತ್ರ್ಯ ಕೇವಲ ಮತ ಹಾಕುವಾಗ ಮಾತ್ರ ಇರುತ್ತದೆ. ನಾವೆಲ್ಲ ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ದೇಶದಲ್ಲಿ ಸಂವಿಧಾನ ಬದಲಾವಣೆ ಮಾಡಲು ಯಾರಾದರೂ ಹೋದರೆ ರಕ್ತಪಾತವಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಅಂಬೇಡ್ಕರ್ ಒಂದು ಜಾತಿಗೆ ಸಿಮೀತವಾಗಿಲ್ಲ. […]

ಅಂಬೇಡ್ಕರ್ ಸಮಾನತೆಯ ಪ್ರಜ್ಞೆ ಭಾರತಕ್ಕೆ ಬಲಿಷ್ಠ ಸಂವಿಧಾನವನ್ನು ನೀಡುವಂತೆ ಪ್ರೇರೆಪಿಸಿತು

Monday, April 22nd, 2019
Alvas

ಮೂಡಬಿದಿರೆ: ಅಂಬೇಡ್ಕರ್ ಎಂಬ ಮಹಾನ್ ಚೇತನ ಸಂಘರ್ಷದ ಅನುಭವದಿಂದ ಹುಟ್ಟಿಕೊಂಡ ವ್ಯಕಿತ್ವ. ಅವರ ಮನಸ್ಸಿನಲ್ಲಿ ಅಂದು ಮೂಡಿದ ಸಮಾನತೆಯ ಪ್ರಜ್ಞೆ ,ಭವ್ಯ ಭಾರತಕ್ಕೆ ಬಲಿಷ್ಠ ಸಂವಿಧಾನವನ್ನು ನೀಡುವಂತೆ ಪ್ರೇರೆಪಿಸಿತು ಎಂದು ಆಳ್ವಾಸ್ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಪಕ ಡಾ ಯೋಗೀಶ್ ಕೈರೋಡಿ ನುಡಿದರು. ಅವರು ಆಳ್ವಾಸ್ ಪದವಿ ಕಾಲೇಜಿನ ಐಕ್ಯೂಎಸಿವತಿಯಿಂದ ಆಯೋಜಿಸಲಾಗಿದ್ದ ಅಂಬೇಡ್ಕರ್ ಜಯಂತಿ ಕಾರ‍್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ನಮ್ಮ ಇಂದಿನ ದಿನ ನಿತ್ಯದ ಜೀವನ ನಮ್ಮ ಸಂವಿಧಾನದ ತಳಹದಿಯ ಮೇಲೆ ನಿಂತಿದೆ. ಅಂದು ಅಂಬೇಡ್ಕರ್ […]

ವಿಧಾನಪರಿಷತ್ ಅಭ್ಯರ್ಥಿಯಿಂದ ನಕಲಿ ಅಂಚೆ ಚೀಟಿ ಬಳಕೆ ಆರೋಪ!

Thursday, June 7th, 2018
election

ಮಂಗಳೂರು: ವಿಧಾನಪರಿಷತ್ ನೈಋತ್ಯ ಶಿಕ್ಷಕ ಕ್ಷೇತ್ರದ ಅಭ್ಯರ್ಥಿಯಾಗಿರುವ ಒಬ್ಬರು ಅಂಚೆ ಇಲಾಖೆಯನ್ನೆ ಯಾಮಾರಿಸಿ ಮತದಾರರನ್ನು ತಲುಪಲು ಯತ್ನಿಸಿರುವ ಘಟನೆಯೊಂದು ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಅಭ್ಯರ್ಥಿ ಮತದಾರರಿಗೆ ಕಳುಹಿಸಿದ ಮನವಿ ಪತ್ರಗಳಿಗೆ ನಕಲಿ ಅಂಚೆ ಚೀಟಿಗಳನ್ನು ಬಳಸಿದ್ದು, ಈ ಕುರಿತು ಮಂಗಳವಾರ ಬಲ್ಮಠದ ಅಂಚೆ ವಿಭಾಗೀಯ ಕಚೇರಿಗೆ ಬೆಂಗಳೂರಿನ ಪ್ರಾದೇಶಿಕ ಕಚೇರಿಯಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅವರ ಎಲ್ಲಾ ಮನವಿ ಪತ್ರಗಳನ್ನು ತಡೆಹಿಡಿಯಲಾಗಿದೆ. ವಿಧಾನ ಪರಿಷತ್ ನೈಋತ್ಯ ಶಿಕ್ಷಕ ಪದವೀಧರ ಕ್ಷೇತ್ರಕ್ಕೆ ಜೂ.8ರಂದು ಚುನಾವಣೆ ನಡೆಯಲಿದೆ. ಮತದಾರರನ್ನು […]

ಮೋದಿಗೆ ಅಂಬೇಡ್ಕರ್ ಬಗ್ಗೆ ಮಾತಾಡಲು ನೈತಿಕ ಹಕ್ಕಿಲ್ಲ: ಕಾಂಗ್ರೆಸ್ ನಾಯಕಿ ಶೆಲ್ಜಾ

Saturday, May 5th, 2018
ambedkar

ಮಂಗಳೂರು: ಚುನಾವಣೆಯಲ್ಲಿ ಕೇಂದ್ರ ಸರ್ಕಾರದ ಸುಳ್ಳುಗಳು ಹೊರಬರುತ್ತಿವೆ. ಪ್ರಧಾನಿ ಮೋದಿಗೆ ಅಂಬೇಡ್ಕರ್ ಬಗ್ಗೆ ಮಾತಾಡಲು ನೈತಿಕ ಹಕ್ಕಿಲ್ಲ ಎಂದು ಕಾಂಗ್ರೆಸ್ ನಾಯಕಿ, ಮಾಜಿ ಸಚಿವೆ ಕುಮಾರಿ ಶೆಲ್ಜಾ ಮಂಗಳೂರಿನಲ್ಲಿ ಹೇಳಿದ್ದಾರೆ. ತಳಮಟ್ಟದಲ್ಲಿ ದಲಿತ ಸಮಸ್ಯೆಗಳು ಜ್ವಲಂತವಾಗಿ ಉಳಿದಿವೆ. ದಲಿತ ದೌರ್ಜನ್ಯ ಕಾಯ್ದೆಯನ್ನು ದುರ್ಬಲಗೊಳಿಸಲಾಗಿದೆ. 1989ರಲ್ಲಿ ರಾಜೀವ್ ಗಾಂಧಿ ತಂದ ಕಾನೂನನ್ನು ಯುಪಿಎ ಎರಡನೇ ಅವಧಿಯಲ್ಲಿ ಮತ್ತಷ್ಟು ಪ್ರಬಲಗೊಳಿಸಲಾಯಿತು. ಆದರೆ ಮೋದಿ ಸರ್ಕಾರ 13 ಅಧ್ಯಾದೇಶ ಜಾರಿಗೊಳಿಸಿದೆ. ಇದರಿಂದ ದಲಿತ ದೌರ್ಜನ್ಯ ಕಾಯ್ದೆ ಹಲ್ಲಿಲ್ಲದ ಹಾವಾಗಿದೆ. ಮೋದಿಯವರದ್ದು ದಲಿತರ […]

ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೇ ಮಾಡಿದ್ದಲ್ಲ : ಪೇಜಾವರ ಶ್ರೀ

Saturday, November 25th, 2017
pejavar seer

ಉಡುಪಿ :  ಕೇವಲ ಅಲ್ಪಸಂಖ್ಯಾತರು ಹಾಗೂ ಬಹುಸಂಖ್ಯಾತರ ನಡುವೆ ಇರುವ ತಾರತಮ್ಯವನ್ನು ತೊಡೆದು ಹಾಕಲು ಸಂವಿಧಾನದ ತಿದ್ದುಪಡಿ ಮಾಡುವಂತೆ ಸೂಚಿಸಿದ್ದೇನೆಯೇ ಹೊರತು ಸಂವಿಧಾನವನ್ನು ಬದಲಾಯಿಸುವಂತೆ ಕರೆ ನೀಡಿಲ್ಲ ಎಂದು ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಧರ್ಮ ಸಂಸದ್‌ನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಅಲ್ಪಸಂಖ್ಯಾತರಿಗೆ ಹಾಗೂ ಬಹುಸಂಖ್ಯಾತರಿಗೆ ಬೇರೆ ಬೇರೆ ನಿಯಮಗಳಿರುವುದನ್ನು ಟೀಕಿಸಿ, ಅಲ್ಪಸಂಖ್ಯಾತರಿಗೆ ಸಿಗುವ ಎಲ್ಲಾ ಸೌಲಭ್ಯಗಳು ಬಹುಸಂಖ್ಯಾತರಿಗೂ ಸಿಗುವಂತಾಗಬೇಕು. ಇದಕ್ಕಾಗಿ ಸಂವಿಧಾನದಲ್ಲಿ ಬದಲಾವಣೆಯಾಗಬೇಕು ಎಂದು ಉಡುಪಿಯಲ್ಲಿ ನಡೆದಿರುವ ಧರ್ಮ ಸಂಸದ್‌ನ ಉದ್ಘಾಟನಾ […]

ಉಡುಪಿ ಜಿಲ್ಲೆಯ 100 ದಲಿತ ಕುಟುಂಬಗಳಿಗೆ ಬೌದ್ಧ ಧಮ್ಮ ದೀಕ್ಷೆ ನೀಡುವ ಸಂಕಲ್ಪ

Saturday, October 14th, 2017
Narayana manoor

ಉಡುಪಿ: ಮುಂದಿನ ಅ.14ರೊಳಗೆ ಉಡುಪಿ ಜಿಲ್ಲೆಯ 100 ದಲಿತ ಕುಟುಂಬಗಳಿಗೆ ಬೌದ್ಧ ಧಮ್ಮ ದೀಕ್ಷೆ ನೀಡುವ ಸಂಕಲ್ಪ ಹೊಂದಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ(ಪ್ರೊ.ಕೃಷ್ಣಪ್ಪ ಸ್ಥಾಪಿತ) ಉಡುಪಿ ಜಿಲ್ಲಾ ಸಮಿತಿಯ ಸಂಚಾಲಕ, ದಲಿತ ಚಿಂತಕ ನಾರಾಯಣ ಮಣೂರು ತಿಳಿಸಿದ್ದಾರೆ. ಕರ್ನಾಟಕ ದಲಿತ ಸಂಘರ್ಷ ಸಮಿತಿಯ(ಪ್ರೊ.ಕೃಷ್ಣಪ್ಪ ಸ್ಥಾಪಿತ) ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಐತಿಹಾಸಿಕ ಧಮ್ಮ ದೀಕ್ಷಾ ದಿನದ ಅಂಗವಾಗಿ ಶನಿವಾರ ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾದ ‘ಬೌದ್ಧ ದಮ್ಮದೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ […]

“ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಮಾದರಿಯಾಗಲಿ’’

Friday, March 17th, 2017
Govinda Das college

ಮಂಗಳೂರು :- ಅತ್ಯಂತ ಕಷ್ಟ ಹಾಗೂ ಸಾಮಾಜಿಕವಾಗಿ ತಳಸ್ತರದಿಂದ ಮೇಲೆದ್ದು ಬಂದು ಉನ್ನತ ಶಿಕ್ಷಣ ಪಡೆದ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಇಂದಿನ ವಿದ್ಯಾರ್ಥಿಗಳಿಗೆ ಅನುಕರಣೀಯ ವ್ಯಕ್ತಿಯಾಗಬೇಕು ಎಂದು ಮಂಗಳೂರು ಮಹಾನಗರಪಾಲಿಕೆ ಸದಸ್ಯೆ ಪ್ರತಿಭಾ ಕುಳಾಯಿ ಕರೆ ನೀಡಿದ್ದಾರೆ. ಅವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಗೋವಿಂದದಾಸ ಕಾಲೇಜು ಸುರತ್ಕಲ್ ರಾಜ್ಯಶಾಸ್ತ್ರ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ 125ನೇ ಜನ್ಮ ವರ್ಷಾಚರಣೆ ಅಂಗವಾಗಿ ಕಾಲೇಜಿನ […]