ಅತ್ತಾವರ ದೈವಸ್ಥಾನದ ಹುಂಡಿಯಲ್ಲಿ“ಹಿಂದೂಗಳನ್ನು ಸಾಯಿಸಬೇಕು” ಎಂಬ ಬರಹಗಳಿರುವ ನಕಲಿ ನೋಟು ಪತ್ತೆ

Sunday, January 3rd, 2021
note

ಮಂಗಳೂರು  : ಅತ್ತಾವರದಲ್ಲಿರುವ ಬಬ್ಬುಸ್ವಾಮಿ ದೈವಸ್ಥಾನ ದಲ್ಲಿ ದುಷ್ಕರ್ಮಿಗಳು ಪ್ರವೇಶಿಸಿ ದೇವರ ಹುಂಡಿಯಲ್ಲಿ “ಪ್ರಭು ಏಸು ಕ್ರಿಸ್ತನು ಮಾತ್ರ ಆರಾಧನೆ ಹೊಂದಲು ಸೂಕ್ತ ವ್ಯಕ್ತಿ”, “ಹಿಂದೂಗಳನ್ನು ಸಾಯಿಸಬೇಕು” ಎಂಬ ಬರಹಗಳಿರುವ ನಕಲಿ ನೋಟುಗಳನ್ನು ಹಾಕಿರುವಂತಹ ಆಘಾತಕಾರಿ ಘಟನೆ ನಡೆದಿದೆ. ಹಿಂದೂಗಳ ಧಾರ್ಮಿಕ ಭಾವನೆಗೆ ನೋಯಿಸುವ ದುರುದ್ದೇಶದಿಂದಲೇ ಈ ರೀತಿ ದುಷ್ಕೃತ್ಯ ಮಾಡಲಾಗಿದೆ, ಯಾವುದೇ ಚರ್ಚ್ ಅಥವಾ ಮಸೀದಿಯಲ್ಲಿ ಇಂತಹ ಘಟನೆಗಳು ನಡೆದಿದ್ದಲ್ಲಿ ಸರ್ಕಾರವು ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳುತ್ತದೆ ಮತ್ತು ಮಾಧ್ಯಮಗಳು ಧ್ವನಿ ಎತ್ತುತ್ತವೆ. ಈ ಸಂದರ್ಭದಲ್ಲಿಯೂ ಸರ್ಕಾರವು ದುಷ್ಕರ್ಮಿಗಳ […]

ಆದಾಯ ತೆರಿಗೆ ಕಚೇರಿ ಗೋವಾಕ್ಕೆ ಸ್ಥಳಾಂತರ ಪ್ರಸ್ತಾಪಗಳು ಸರಕಾರದ ಮುಂದಿಲ್ಲ: ಶಾಸಕ ಕಾಮತ್ ಸ್ಪಷ್ಟನೆ

Wednesday, September 16th, 2020
Income tax Road

ಮಂಗಳೂರು: ಮಂಗಳೂರಿನಲ್ಲಿರುವ ಆದಾಯ ತೆರಿಗೆ ಇಲಾಖೆಯ ಕಚೇರಿಯನ್ನು ಗೋವಾಕ್ಕೆ ಸ್ಥಳಾಂತಗೊಳಿಸುವ ಅಥವಾ ಗೋವಾದ ಕಚೇರಿ ಜತೆಯಲ್ಲಿ ವಿಲೀನಗೊಳಿಸುವ ಯಾವುದೇ ಪ್ರಸ್ತಾಪಗಳು ಸರಕಾರದ ಮುಂದಿಲ್ಲ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಸ್ಪಷ್ಟಪಡಿಸಿದ್ದಾರೆ. ಮಂಗಳೂರಿನ ಆದಾಯ ತೆರಿಗೆ ಕಚೇರಿಯಲ್ಲಿ ಆದಾಯ ತೆರಿಗೆ ಪ್ರಧಾನ ಆಯುಕ್ತರ ಹುದ್ದೆ ಇದೆ. ಅದೇ ರೀತಿ ಗೋವಾದಲ್ಲೂ ಪ್ರಧಾನ ಆಯುಕ್ತರ ಹುದ್ದೆ ಇದೆ. ಈ ಎರಡು ಕಚೇರಿಯ ಹುದ್ದೆಯನ್ನು ಸೇರಿಸಿ ಒಂದೇ ಪ್ರಧಾನ ಆಯುಕ್ತರನ್ನು ನಿಯೋಜನೆ ಮಾಡಬೇಕು ಎಂಬ ಪ್ರಸ್ತಾಪ ಇದೆ. […]

ಅತ್ತಾವರ ಚಕ್ರಪಾಣಿ ಸೇವಾ ಸಮಿತಿಯಿಂದ ಬಡಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ

Sunday, April 26th, 2020
chakrapani

ಮಂಗಳೂರು :  ಕೊರೊನಾ ಮಹಾ ಸಂಕ್ರಾಮಿಕ ರೋಗವನ್ನು ತಡೆಗಟ್ಟುವ ದ್ರಷ್ಠಿಯಿಂದ ಜಿಲ್ಲಾಡಾಳಿತವು ಅನಿವಾರ್ಯವಾಗಿ ವಿಧಿಸಿರುವ ಲಾಕ್ ಡೌನ್ ನಿಂದ ತೊಂದರೆಗೊಳಗಾಗಿರುವ ಆಯ್ದ 100 ಬಡ ಕುಟುಂಬಗಳಿಗೆ ಸುಮಾರು 81,000/- ಮೌಲ್ಯದ ಆಹಾರ ಸಾಮಾಗ್ರಿಗಳನ್ನು ಚಕ್ರಪಾಣಿ ಗೋಪಿನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸಹಕಾರದೊಂದಿಗೆ ಚಕ್ರಪಾಣಿ ಸೇವಾ ಸಮಿತಿಯ ವತಿಯಿಂದ ವಿತರಿಸಲಾಯಿತು. ಸೇವಾ ಸಮಿತಿಯ ಅಧ್ಯಕ್ಷರಾದ ಗೋಪಾಲಕ್ರಷ್ಣ ಕೋಟ್ಯಾನ್, ಆಡಳಿತಾಧಿಕಾರಿಗಳಾದ ಶ್ರೀಧರ್ ಶೆಟ್ಟಿ, ಲೆಕ್ಕ ಪರಿಶೋಧಕರಾದ ನರೇಂದ್ರ ಪೈ, ದೇವಸ್ಥಾನದ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ಭಟ್, ಸದಸ್ಯರಾದ ವಿಕ್ರಂ ಪೈ, […]

ಅತ್ತಾವರದ ಪ್ಲ್ಯಾಟ್ ನಲ್ಲಿ ನರ್ಸಿಂಗ್ ವಿದಾರ್ಥಿನಿ ಆತ್ಮಹತ್ಯೆ

Saturday, October 26th, 2019
Anupama

ಮಂಗಳೂರು : ಅತ್ತಾವರ ಮಂಜುಶೆಟ್ಟಿ ಕಾಂಪೌಂಡಿನ ಶ್ರೀ ದೇವಿ ಅಪಾರ್ಟ್‌ಮೆಂಟಿನ ಎರಡನೇ ಮಹಡಿಯ ರೂಂ ಒಂದರಲ್ಲಿ ವಿದಾರ್ಥಿನಿಯ ಮೃತದೇಹ ಪತ್ತೆಯಾಗಿದೆ. ಶುಕ್ರವಾರ ರಾತ್ರಿ ಸುಮಾರು 11ರ ವೇಳೆಗೆ ವಿದ್ಯಾರ್ಥಿನಿ ವಾಸವಿರುವ ರೂಂ ಬಾಗಿಲನ್ನು ತೆರೆದುನೋಡಿದಾಗ ವಿದ್ಯಾರ್ಥಿನಿ ಮೃತದೇಹ ಪ್ಯಾನಿಗೆ ನೇಣುಹಾಕಿದ ಸ್ಥಿತಿಯಲ್ಲಿಕಂಡುಬಂದಿತ್ತು. ಮೃತಪಟ್ಟ ಯುವತಿಯನ್ನು ಕೇರಳ ಮೂಲದ ಅನುಪಮಾ 23ವ. ಎಂದು ಗುರುತಿಸಲಾಗಿದೆ. ಯುವತಿಯ ತಾಯಿ ವಿದೇಶದಲ್ಲಿದ್ದು ಅನುಪಮಾ ಫಾದರ್ ಮುಲ್ಲರ‍್ಸ್ ನಲ್ಲಿ ನರ್ಸಿಂಗ್ ಕಲಿಯುತ್ತಿದ್ದಳು. ಅತ್ತಾವರ ಮಂಜುಶೆಟ್ಟಿ ಕಾಂಪೌಂಡಿನ ಶ್ರೀ ದೇವಿ ಅಪಾರ್ಟ್‌ಮೆಂಟಿನಲ್ಲಿ ಕಳೆದ ಒಂದು […]

ಕದ್ರಿ ಮತ್ತು ಅತ್ತಾವರದಲ್ಲಿ ಮೊಸರು ಕುಡಿಕೆ ಉತ್ಸವ

Tuesday, September 4th, 2018
shree-krishna

ಮಂಗಳೂರು: ಶ್ರೀಕೃಷ್ಣ ಜನ್ಮ ಮಹೋತ್ಸವ ಸಮಿತಿಯ ಅತ್ತಾವರ ಮುಂಡತ್ತಾಯ ದೇವಸ್ಥಾನದಲ್ಲಿ ಟೇಬಲ್ಯೂಕ್ಸ್ ಮತ್ತು ಇತರ ಮನರಂಜನಾ ತಂಡಗಳೊಂದಿಗೆ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಯಿತು. 109 ನೇ ಮೊಸರು ಕುಡಿಕೆಯನ್ನು ಸಂಗೀತ ರಾತ್ರಿ ಮತ್ತು ಇತರ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆ ಯಿಂದ ಆಚರಿಸಲಾಯಿತು.  ಮಂಗಳೂರಿನಲ್ಲಿ ಶ್ರೀ ಕೃಷ್ಣ ಜನ್ಮದಿನದ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ನಡೆಯಿತು. ಕದ್ರಿಯಲ್ಲಿ ಶ್ರೀಕೃಷ್ಣ ಜನ್ಮ ಮಹೋತ್ಸವ ಸಮಿತಿ ಆಶ್ರಯದಲ್ಲಿ ಮೊಸರು ಕುಡಿಕೆ ಉತ್ಸವ ನಡೆಯಿತು. ಕದ್ರಿ ಮಂಜುನಾಥ ದೇವಸ್ಥಾನದ ವಠಾರ, ಉತ್ಸವ ನಡೆದ ರಸ್ತೆಗಳು, ಬೀದಿಗಳು ಶೃಂಗಾರಗೊಂಡಿದ್ದವು. ದಾರಿಯುದ್ದಕ್ಕೂ ಎತ್ತರದ […]

ಮಂಗಳೂರಲ್ಲಿ ಗಾಳಿ ಮಳೆಗೆ ಉರುಳಿ ಬಿದ್ದ ಬೃಹತ್ ಮರ, ನಾಲ್ಕು ಕಾರು ಜಖಂ..!

Friday, May 18th, 2018
floods-mangaluru

ಮಂಗಳೂರು: ಮಂಗಳೂರಲ್ಲಿ ನಿನ್ನೆ ತಡರಾತ್ರಿ ಸುರಿದ ಗಾಳಿ ಮಳೆಗೆ ಬೃಹತ್ ಮರವೊಂದು ಉರುಳಿ ಬಿದ್ದು, ನಾಲ್ಕು ಕಾರು ಜಖಂಗೊಂಡಿದೆ. ಮಂಗಳೂರಿನ ಅತ್ತಾವರದ ಬಾಬುಗುಡ್ಡೆಯಲ್ಲಿ ಘಟನೆ ನಡೆದಿದ್ದು, ಮರದ ಬಳಿ ಇದ್ದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಹಾಗೂ ಮೂರು ವಿದ್ಯುತ್ ಕಂಬ ಕೂಡ ಉರುಳಿ ಬಿದ್ದಿದೆ. ಇದರಿಂದಾಗಿ ಮರದ ಬಳಿ ನಿಲ್ಲಿಸಿದ್ದ ನಾಲ್ಕು ಕಾರು ಜಖಂಗೊಂಡಿವೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಮರ ತೆರವು ಕಾರ್ಯ ನಡೆಸುತ್ತಿದ್ದಾರೆ.

ರೈಲುಗಳಿಗೆ ನಿಲ್ಲಲು ಜಾಗವಿಲ್ಲ

Wednesday, December 27th, 2017
manglore-central

ಮಂಗಳೂರು: ವಿಶ್ವದರ್ಜೆಗೇರುವ ಕನಸಿನ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ನಾಲ್ಕನೇ ಪ್ಲಾಟ್‌ಫಾರಂ ನಿರ್ಮಾಣಕ್ಕೆ ಮಂಜೂರಾತಿ ದೊರೆತು, ಟೆಂಡರ್‌ ಪ್ರಕ್ರಿಯೆಯೂ ಮುಗಿದಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು. ಇದರೊಂದಿಗೆ ನೇತ್ರಾವತಿ- ಮಂಗಳೂರು ಸೆಂಟ್ರಲ್‌ 1.5 ಕಿ.ಮೀ. ರೈಲು ಮಾರ್ಗದ ದ್ವಿಪಥ ಕಾಮಗಾರಿಯ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಇತ್ತೀಚೆಗೆ ಪಾಲ್ಘಾಟ್‌ನಲ್ಲಿ ನಡೆದ ರೈಲು ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ದಕ್ಷಿಣ ರೈಲ್ವೇ ಪಾಲ್ಘಾಟ್‌ ವಿಭಾಗದ ಮಹಾ ಪ್ರಬಂಧಕ ನರೇಶ್‌ ಲಾಲ್ವಾನಿ ಅವರು ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣ ಹಾಗೂ ಕಣ್ಣೂರಿನಲ್ಲಿ ತಲಾ […]

ಜಿಎಸ್ ಟಿ ತೆರಿಗೆ ದರದಲ್ಲಿ ಗ್ರಾಹಕರಿಗೆ ವಂಚನೆ, ಮಂಗಳೂರಿನಲ್ಲಿ ದಾಳಿ

Monday, November 27th, 2017
gst

ಮಂಗಳೂರು :  ನವೆಂಬರ್ 15ರಿಂದಲೇ ಜಿಎಸ್ ಟಿ ಕೌನ್ಸಿಲ್ ಆಹಾರ ಉತ್ಪನ್ನ ಹಾಗೂ ಸಾಬೂನು ಸೇರಿದಂತೆ 177 ವಸ್ತುಗಳ ಮೇಲಿನ ಜಿಎಸ್ ಟಿ ದರವನ್ನು ಶೇಕಡಾ 28 ರಿಂದ ಶೇಕಡಾ 18ಕ್ಕೆ ಇಳಿಸಿದರೂ  ನಗರದ  ವಿವಿಧೆಡೆ ಕೆಲ ವ್ಯಾಪಾರ ಮಳಿಗೆಗಳಲ್ಲಿ ಜಿಎಸ್ ಟಿ ತೆರಿಗೆ ದರದಲ್ಲಿ ಗ್ರಾಹಕರಿಗೆ ವಂಚನೆ ಮಾಡುತ್ತಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ತೂಕ, ಅಳತೆ ಮತ್ತು ಕಾನೂನು ಮಾಪನ ಇಲಾಖಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯ ಹದಿನೈದು ಮಳಿಗೆಗಳ ಮೇಲೆ ದಾಳಿ ನಡೆಸಿದ್ದಾರೆ. ಹಾಗೆಯೇ ಮಂಗಳೂರಿನ […]

ಅತ್ತಾವರ: ಬ್ಯಾಟರಿ ಕಳವು, ಇಬ್ಬರು ಆರೋಪಿಗಳ ಬಂಧನ

Saturday, October 28th, 2017
battary case

ಮಂಗಳೂರು: ಮೈದಾನದಲ್ಲಿ ನಿಲ್ಲಿಸಿದ್ದ ಲಾರಿ ಹಾಗೂ ಜೆಸಿಬಿಗಳ ಒಟ್ಟು 6 ಬ್ಯಾಟರಿಗಳನ್ನು ನಗರದ ಅತ್ತಾವರ ಅಯ್ಯಪ್ಪ ಗುಡಿಯ ಎದುರು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪಾಂಡೇಶ್ವರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಇರಾ ಗ್ರಾಮದ ಕುಕ್ಕಾಜೆಬೈಲು ನಿವಾಸಿಗಳಾದ ಮುಹಮ್ಮದ್ ಆಸಿಫ್ ಯಾನೆ ಆಸಿಫ್ (24), ಬೆಂಜನಪದವು ಅಬ್ಬೆಟ್ಟು ಕ್ರಾಸ್ ನಿವಾಸಿ ಹಬೀಬ್ ರಹ್ಮಾನ್ ಯಾನೆ ಹಬೀಬ್ (36) ಎಂದು ಗುರುತಿಸಲಾಗಿದೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾದ 3 ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 12 ಬ್ಯಾಟರಿ […]

ಅತ್ತಾವರದಲ್ಲಿ ಆಟೋ ಚಾಲಕನ ಕೈ ಕಡಿದ ಪ್ರಕರಣ : ಮಹತ್ವದ ದಾಖಲೆ ಪತ್ತೆ ಹಚ್ಚಿದ ಪೊಲೀಸರು

Thursday, August 27th, 2015
Driver Attack

ಮಂಗಳೂರು : ಅತ್ತಾವರದಲ್ಲಿ ಆಗಸ್ಟ್ 24 ರಂದು ಮುಸ್ಲಿಂ ಯುವಕನನ್ನು ಬಟ್ಟೆ ಬಿಚ್ಚಿಸಿ ಅರೆನಗ್ನ ಗೊಳಿಸಿ ಥಳಿಸಿದ ಎರಡು ದಿನದ ಬಳಿಕ ಅದೇ ಸ್ಥಳದಲ್ಲಿ ಆಟೋ ಚಾಲಕನೊಬ್ಬನನ್ನು ಮಾರಕಾಯಯಧಗಳಿಂದ ಕೈ ಮತ್ತು ಬೆನ್ನಿಗೆ ಕಡಿದು ಪರಾರಿಯಾದ ಘಟನೆ ಆಗಸ್ಟ್ 26 ರಾತ್ರಿ 10.45ರ ವೇಳೆಗೆ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಬಂಟ್ವಾಳ ತಾಲೂಕು ಪಾಣೆಮಂಗಳೂರು ಸಮೀಪದ ನಂದಾವರದ ನಿವಾಸಿ ಗುರುದತ್ತ್ 35 ಎಂದು ಗುರುತಿಸಲಾಗಿದೆ. ಮೂವರು ಅಪರಿಚಿತ ವ್ಯಕ್ತಿಗಳು ಬೈಕಿನಲ್ಲಿ ಬಂದು ಆಟೋ ಸ್ಟ್ಯಾಂಡಿನಲ್ಲಿ ಕುಳಿತಿದ್ದ ಅಮಾಯಕನ್ನು ತಲವಾರಿನಿಂದ […]