ಹತ್ತು ವರ್ಷಗಳ ಹಿಂದೆ ಆಧಾರ್ ಕಾರ್ಡ್ ಮಾಡಿಸಿಕೊಂಡವರು, ಡಿ.14ರ ಮೊದಲು ಅಪ್ಡೇಟ್ ಮಾಡವುದು ಕಡ್ಡಾಯ

Thursday, November 23rd, 2023
adhar-card

ಮಂಗಳೂರು: ಹತ್ತು ವರ್ಷಗಳ ಹಿಂದೆ ಆಧಾರ್ ಕಾರ್ಡ್ ಮಾಡಿಸಿಕೊಂಡವರು ಇದೀಗ ಡಿ.14ರ ಮೊದಲು ಅಪ್ಡೇಟ್ ಮಾಡಬೇಕಾಗಿರುವುದು ಕಡ್ಡಾಯವಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಕಚೇರಿಯ ಮೂಲಗಳು ತಿಳಿಸಿವೆ. 2011ರಿಂದ 2015ರೊಳಗೆ ಆಧಾರ್ ಕಾರ್ಡ್ ಮಾಡಿಸಿಕೊಂಡು ಒಮ್ಮೆಯೂ ಅಪ್ಡೇಟ್ ಮಾಡದವರಿಗೆ ಇದೀಗ ಅಪ್ಡೇಟ್ ಮಾಡುವಂತೆ ಸಂದೇಶ ರವಾನೆಯಾಗುತ್ತಿದೆ. ಅವರು ಸಮೀಪದ ಆಧಾರ ಕೇಂದ್ರದಲ್ಲಿ ಹೋಗಿ ತಮ್ಮ ಆಧಾರ್ ಕಾರ್ಡ್‌ನ್ನು ಅಪ್ಡೇಟ್ ಮಾಡಬೇಕಾಗಿದೆ ಆರಂಭದಲ್ಲಿ ಆಧಾರ್ ಮಾಡಿಸುವಾಗ ಇದ್ದ ವಿಳಾಸ ಆ ಬಳಿಕ ಬದಲಾವಣೆಯಾಗಿರುತ್ತದೆ. ಕೆಲವರ ವಿಳಾಸ ಸರಿಯಾಗಿರುವುದಿಲ್ಲ. ಹೀಗಾಗಿ ಅಪ್ಡೇಟ್ […]

ಸರ್ಕಾರಿ ಅನುಮತಿಯಿಲ್ಲದೆ ಆಧಾರ್ ಕಾರ್ಡ್ ತಿದ್ದುಪಡಿ..ಜೆಡಿಎಸ್ ಮುಖಂಡನ ಮನೆಯ ಮೇಲೆ ದಾಳಿ!

Thursday, July 12th, 2018
JDS-Party

ಮಂಗಳೂರು: ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಮತ್ತು  ಪೊಲೀಸರ ಸರ್ಕಾರಿ ಅನುಮತಿಯಿಲ್ಲದೆ ಆಧಾರ್ ಕಾರ್ಡ್ ತಿದ್ದುಪಡಿ ಮಾಡುತ್ತಿದ್ದ ಜೆಡಿಎಸ್ ಮುಖಂಡನೋರ್ವನ ಮನೆಯ ಮೇಲೆ ಬುಧವಾರ ದಾಳಿ ಮಾಡಿದ್ದಾರೆ. ಜೆಡಿಎಸ್ ಮುಖಂಡ ತನ್ನ  ಮನೆಯಲ್ಲಿ ಫ್ರಾನ್ಸಿಸ್ ಪ್ರಶಾಂತ್ ಒಳಮೊಗರು ಎಂಬ ಆಪರೇಟರ್ನನ್ನು ಬಳಸಿಕೊಂಡು ಆಧಾರ್ ತಿದ್ದುಪಡಿ ಮಾಡುತ್ತಿರುವುದು ಕಂಡುಬಂದಿದೆ. ಪ್ರಶಾಂತ್ ಆಧಾರ್ ಕಾರ್ಡ್ ನೋಂದಣಿ ಮಾಡುವ ಬಗ್ಗೆ ತರಬೇತಿ ಪಡೆದಿದ್ದ ಎನ್ನಲಾಗಿದೆ. ದಾಳಿ ವೇಳೆ ಪತ್ತೆಯಾದ ಆಧಾರ್ ತಿದ್ದುಪಡಿಗೆ ಬಳಸುತ್ತಿದ್ದ ಸಾಮಾಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದ.ಕ. ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತ […]

ಬೇಡಿಕೆಗಳಿಗೆ ಸ್ಪಂದಿಸುವಂತೆ ಆಗ್ರಹ… ಕಾರ್ಮಿಕ ಭವಿಷ್ಯ ನಿಧಿ ಕಚೇರಿಗೆ ಮುತ್ತಿಗೆ

Wednesday, March 14th, 2018
CIT-mangaluru

ಮಂಗಳೂರು: ಆಧಾರ್‌ ಕಾರ್ಡ್‌ನ್ನು ಯಾವುದೇ ಕಾರಣಕ್ಕೂ ಕಡ್ಡಾಯಗೊಳಿಸಬಾರದು, ಈಗಾಗಲೇ ಪಿಎಫ್‌ ಕಚೇರಿಯಲ್ಲಿ ದಾಖಲಾಗಿರುವ ಹುಟ್ಟಿದ ದಿನಾಂಕವನ್ನು ಅಧಿಕೃತಗೊಳಿಸಬೇಕು. ಪಿಂಚಣಿದಾರರಿಗೆ ಸೌಲಭ್ಯ ಪಡೆಯುವ ನಿಯಮವನ್ನು ಸರಳೀಕರಣಗೊಳಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಸ್ಪಂದಿಸುವಂತೆ ಆಗ್ರಹಿಸಿ ಕಾರ್ಮಿಕ ಭವಿಷ್ಯನಿಧಿ ಕಚೇರಿಗೆ ಸಿಐಟಿಯು ನೇತೃತ್ವದಲ್ಲಿ ಮುತ್ತಿ ಹಾಕಲಾಯಿತು. ಈ ವೇಳೆ ಕಾರ್ಮಿಕರನ್ನು ಉದ್ದೇಶಿಸಿ ಸಿಐಟಿಯು ಬೀಡಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷ ವಸಂತ ಆಚಾರಿ ಮಾತನಾಡಿ, ನವ ಉದಾರೀಕರಣ ನೀತಿಯನ್ನು ವೇಗವಾಗಿ ಜಾರಿ ಮಾಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕರ ಹಿತಾಸಕ್ತಿಗಿಂತಲೂ […]

ಮತದಾರರ ಪಟ್ಟಿಗೆ ಕೇರಳ ವಿದ್ಯಾರ್ಥಿಗಳ ಹೆಸರು ಸೇರಿಸಿರುವ ಬಗ್ಗೆ ದೂರು: ವೇದವ್ಯಾಸ ಕಾಮತ್

Wednesday, January 31st, 2018
kerala-student

ಮಂಗಳೂರು: ಮಹಾನಗರ ಪಾಲಿಕೆ ಚುನಾವಣಾ ಶಾಖೆಯಲ್ಲಿ ಅನಧಿಕೃತವಾಗಿ ಕೇರಳ ಮೂಲದ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಇಲ್ಲಿನ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಿದ ಕ್ರಮದ ವಿರುದ್ಧ ಜಿಲ್ಲಾ ಚುನಾವಣಾಧಿಕಾರಿ ಹಾಗೂ ರಾಜ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಲಾಗುವುದು ಎಂದು ಮಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ವೇದವ್ಯಾಸ ಕಾಮತ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳದ ಮತದಾರರ ಪಟ್ಟಿಯಲ್ಲಿ ಹೆಸರು ತೆಗೆದುಹಾಕಿರುವುದಕ್ಕೆ ಸೂಕ್ತ ಪುರಾವೆ ಒದಗಿಸದೆ ಇಲ್ಲಿ ಏಕಾಏಕಿ 3 ಸಾವಿರಕ್ಕೂ ಅಧಿಕ ಕೇರಳದ ಹಾಸ್ಟೆಲ್ ವಿದ್ಯಾರ್ಥಿಗಳ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು […]

ವಿದೇಶಿ ಪ್ರಜೆಗೆ ಮಂಗಳೂರಿನಲ್ಲಿ ಆಧಾರ್‌ ಕಾರ್ಡ್‌ !

Tuesday, January 30th, 2018
adhar-card

ಮಂಗಳೂರು: ಮಲೇಷ್ಯಾ ಮೂಲದ ವ್ಯಕ್ತಿಗೆ ಮಂಗಳೂರಿನಲ್ಲಿ “ಆಧಾರ್‌’ ಚೀಟಿ ಮಾಡಿಸಿಕೊಟ್ಟಿರುವ ಆತಂಕಕಾರಿ ವಿದ್ಯಮಾನ ಬೆಳಕಿಗೆ ಬಂದಿದೆ. ವಿದೇಶಿ ಪ್ರಜೆಗೆ ಬಹುಸುಲಭವಾಗಿ ಭಾರತದ ಗುರುತಿನ ಚೀಟಿ ನೀಡಿರುವ ಈ ದೇಶವಿರೋಧಿ ಚಟುವಟಿಕೆಗೆ ಸ್ಥಳೀಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಾಥ್‌ ನೀಡಿ ರುವ ಅನುಮಾನವೂ ಆರೋಪವೂ ಕೇಳಿಬಂದಿದೆ! ಮಂಗಳೂರಿನಲ್ಲಿ ವೈದ್ಯ ಶಿಕ್ಷಣ ಪಡೆಯುವುದಕ್ಕಾಗಿ “ಸ್ಟಡಿ ವೀಸಾ’ದಲ್ಲಿ ಬಂದಿರುವ ಮಲೇಷ್ಯಾದ ಹೋಹ್‌ ಜಿಯಾನ್‌ ಮೆಂಗ್‌ (25) ಆಧಾರ್‌ ಕಾರ್ಡ್‌ ಪಡೆದು ಕೊಂಡಿದ್ದಾನೆ. ಅಷ್ಟೇ ಅಲ್ಲ, ಈ ಮೂಲಕ ಅಕ್ರಮವಾಗಿ ಭಾರತೀಯ ಪ್ರಜೆ […]

ಅಶಕ್ತರ ಕಣ್ಣೀರಿಗೆ ಎ.ಸಿ.ವಿನಯರಾಜ್ ಉತ್ತರ ಕೊಡಲಿ- ಡಿ ವೇದವ್ಯಾಸ ಕಾಮತ್

Monday, December 11th, 2017
vedavyas

ಮಂಗಳೂರು : ಮನೆಯಲ್ಲಿ ಹಾಸಿಗೆಯಿಂದ ಏಳಲಾಗದಷ್ಟು ಅಶಕ್ತರಾದವರಿಗೆ, ವಯೋವೃದ್ಧರಿಗೆ ಅವರಿದ್ದಲ್ಲಿಗೆ ತೆರಳಿ ಆಧಾರ್ ಕಾರ್ಡ್ ಮಾಡಿಸಿದರೆ ಅದರಲ್ಲಿಯೂ ರಾಜಕೀಯವನ್ನು ಹುಡುಕಲು ಎ.ಸಿ ವಿನಯ್ ರಾಜ್ ರಂತಹ ಕಾಂಗ್ರೆಸ್ಸಿಗರಿಗೆ ಮಾತ್ರ ಸಾಧ್ಯ ಎಂದು ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಹೇಳಿದರು. ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್ ಸೆಂಟರ್ ಕಡೆ ಬರುವಷ್ಟು ಆರೋಗ್ಯ ಅಥವಾ ವಯಸ್ಸು ಇರುವುದಿಲ್ಲ. ಎಂಭತ್ತು ವರ್ಷ ದಾಟಿದವರ ದೈಹಿಕ ಸ್ಥಿತಿ, ಆರೋಗ್ಯದ ಸಮಸ್ಯೆ ಬಿಡಿಸಿ ಹೇಳಬೇಕಾಗಿಲ್ಲ. ಅಂತಹ ಸಂದರ್ಭದಲ್ಲಿ ಅವರಿರುವಲ್ಲಿಯೇ ಹೋಗಿ ಯಾರೇ […]

ರಾಜ್ಯಾದ್ಯಂತ ಜು.8ರಿಂದ ಕೆಜಿ ತೊಗರಿ ಬೇಳೆ 130 ರೂ.ಗೆ ಲಭ್ಯವಾಗಲಿದೆ: ಖಾದರ್

Thursday, July 7th, 2016
Khadar

ಮಂಗಳೂರು: ರಾಜ್ಯಾದ್ಯಂತ ಜು.8ರಿಂದ ಕೆಜಿ ತೊಗರಿ ಬೇಳೆ 130 ರೂ.ಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ. ತೊಗರಿ ದಾಸ್ತಾನಿಗೂ ಮಿತಿ ನಿಗದಿ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಬಗೆಯ ತೊಗರಿಗೂ ಮುಂದಿನ ಮೂರು ತಿಂಗಳವರೆಗೆ ಇದೇ ದರ ಅನ್ವಯವಾಗಲಿದೆ. ವ್ಯಾಪಾರಿಗಳಿಗೂ ಸ್ವಲ್ಪ ಲಾಭ ದೊರೆಯಲಿದೆ. ಬೆಂಗಳೂರಿನ ಯಶವಂತಪುರ ಎಪಿಎಂಸಿ ಯಾರ್ಡ್‌ನಲ್ಲಿ ಜು. 8ರಂದು ಸಭೆ ನಡೆಸಿ ನಂತರ ಈ ಕುರಿತು ಆದೇಶ ಹೊರಡಿಸಲಾಗುವುದು ಎಂದರು. […]

ಏಕ ಪೌರತ್ವದ ಕಾರ್ಡ್ ನೀಡಿ, ಸರ್ಕಾರಕ್ಕೆ ಎಂ.ಜಿ. ಹೆಗ್ಡೆ ಸೂಚನೆ

Friday, July 26th, 2013
card system

ಮಂಗಳೂರು : ಸರಕಾರದ ಬಗೆ ಬಗೆಯ ಕಾರ್ಡ್ ಬದಲು ಒಂದೇ ಕಾರ್ಡ್ ಮಾಡಿ ಗೊಂದಲ ನಿವಾರಿಸಲು  ಸಮಾನ ಮನಸ್ಕ ಸಂಘಟನೆಗಳಾದ ತುಳುನಾಡ ರಕ್ಷಣಾ ವೇದಿಕೆ, ಪ್ರೇಮ್ ಎಸೋಸಿಯೇಶನ್ ಸುರತ್ಕಲ್, ಕಡಲ ಸೇನೆ ಯುವ ಸೇವಾ ಟ್ರಸ್ಟ್ ಜಂಟಿಯಾಗಿ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿತು. ಆಧಾರ್ ಕಾರ್ಡ್ ಪಡೆಯಲು ಹರಸಾಹಸ ಪಡಬೇಕಿದೆ. ಸರ್ಕಾರವು ಕಾರ್ಡ್ ಪದ್ದತಿಗಳನ್ನು ಜಾರಿ ಮಾಡುತ್ತಿದ್ದರೂ ಯಾವುದೇ ಕಾರ್ಡ್ ವ್ಯವಸ್ಥೆಯ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಇದರಿಂದ ಜನತೆ ಕಾರ್ಡ್ ಪಡೆಯುವಲ್ಲಿ ಹರಸಾಹಸ […]