ವಿದ್ಯಾರ್ಥಿ ದೆಸೆಯಲ್ಲೇ ಚಾರಿತ್ರಿಕ ಜೀವನಕ್ಕೆ ಬುನಾದಿ ರೂಪಿಸಿಕೊಳ್ಳಿ: ಡಾ. ಕುಮಾರ್

Tuesday, November 30th, 2021
Alvas Nss

ಮೂಡುಬಿದಿರೆ: ಪೋಷಕರು, ಶಿಕ್ಷಕರು ವಿದ್ಯಾರ್ಥಿಗಳಿಗೆ ದಾರಿ ತೋರಿಸಬಹುದು ಆದರೆ ವಿದ್ಯಾರ್ಥಿಗಳೇ ತಮ್ಮ ಭವಿಷ್ಯದ ಶಿಲ್ಪಿಗಳು. ವಿದ್ಯಾರ್ಥಿ ದಿಸೆಯಿಂದಲೇ ತಮ್ಮ ಚಾರಿತ್ರಿಕ ಜೀವನಕ್ಕೆ ಬುನಾದಿ ರೂಪಿಸಿಕೊಳ್ಳಬೇಕು ಎಂದು ದ.ಕ. ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಹೇಳಿದರು. ಆಳ್ವಾಸ್ ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ಆಳ್ವಾಸ್  ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 2021-22 ಸಾಲಿನ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಎನ್‌ಎಸ್‌ಎಸ್ ಧ್ಯೇಯಗಳನ್ನು ಅಳವಡಿಸಿಕೊಳ್ಳವ ಮೂಲಕ ಉತ್ತಮ ವೈಯಕ್ತಿಕ ಬದುಕನ್ನು ರೂಪಿಸಿಕೊಳ್ಳುವುದರೊಂದಿಗೆ ಸಾಮಾಜಿಕ ಜವಾಬ್ದಾರಿಯಿಂದ ಜೀವನದ ನಡೆಸಬಹುದು.  ಇದರಿಂದ […]

ಬಸ್ಸು ಕಾರು ಅಪಘಾತ – ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಮೃತ್ಯು

Saturday, December 28th, 2019
Bus-car accident

ಮಂಗಳೂರು :  ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆತ್ತಿಕಲ್ ನಲ್ಲಿ ಮಂಗಳೂರಿನಿಂದ ಮೂಡಬಿದಿರೆಯ ಕಡೆ  ಚಲಿಸುತ್ತಿದ್ದ ಬಸ್ಸು ಚಾಲಕ ನಿಯಂತ್ರಣ ತಪ್ಪಿಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಡಿ.28 ರ ಶನಿವಾರ ಸಂಜೆ ನಡೆದಿದೆ. ಅಪಘಾತದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಮೃತರನ್ನು ಡಾ.ವೆರ್ನಾನ್ ಡಿ ಸಿಲ್ವಾ, ಪ್ರಾಂಶುಪಾಲರು, ಎಂಎಲ್ಟಿ (ಮೆಡಿಕಲ್ ಲ್ಯಾಬ್ ಟೆಕ್ನಾಲಜಿ) ಆಳ್ವಾಸ್  ಕಾಲೇಜು, ಮೂಡಬಿದ್ರಿ ಎಂದು ಗುರುತಿಸಲಾಗಿದೆ. ಶ್ರೀರಾಮ್ ಟ್ರಾವೆಲ್ಸ್ ಗೆ ಸೇರಿದ ಬಸ್ ಇದಾಗಿದ್ದು ಮಂಗಳೂರಿನಿಂದ […]

ಶಿಕ್ಷಣ ಎಂಬುದು ಪ್ರಭಾವಶಾಲಿ ಆಯುಧ: ಪ್ರೊ. ಪ್ರೀತಿ ಕೀರ್ತಿ ಡಿಸೋಜ

Thursday, March 28th, 2019
Alvas

ಮೂಡಬಿದಿರೆ: ಶಿಕ್ಷಣ ಎಂಬುದು ಪ್ರಭಾವಶಾಲಿ ಆಯುಧ. ವಿದ್ಯಾರ್ಥಿ ಜೀವನದಿಂದಲೇ ಮುಂದಿನ ಭವಿಷ್ಯದ ಯೋಜನೆಯೊಂದಿಗೆ ಹೆಜ್ಜೆ ಹಾಕಿದರೆ ಪ್ರತಿಯೊಬ್ಬರು ಕೂಡ ಗುರಿಯನ್ನು ಸಾಧಿಸಬಹುದು ಎಂದು ರಾಯಲ್ ವಿಶ್ವವಿದ್ಯಾಲಯದ ಪ್ರೊ. ಪ್ರೀತಿ ಕೀರ್ತಿ ಡಿಸೋಜ ತಿಳಿಸಿದರು. ಆಳ್ವಾಸ್ ಕಾಲೇಜಿನ ಮ್ಯಾನೆಂಜ್‌ಮೆಂಟ್ ಮತ್ತು ಹೆಚ್‌ಆರ್‌ಡಿ ವಿಭಾಗದ ವತಿಯಿಂದ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ತರಭೇತಿಯಲ್ಲಿ ಮಾತನಾಡಿದ ಅವರು ಕೇವಲ ಗುರಿ ಇದ್ದರೆ ಸಲಾದು ಸರಿಯಾದ ಯೋಜನೆಯು ಮುಖ್ಯ. ಸ್ಪಷ್ಟ ಗುರಿಯೊಂದಿಗೆ ಪರಿಶ್ರಮವು ಮೇಳೈಸಿದರೆ ಗುರಿಯನ್ನು ಸುಲಭವಾಗಿ ತಲಪಬಹುದು. ಪ್ರತಿಯೊಬ್ಬ ವಿದ್ಯಾರ್ಥಿಯು ಇತರರ ಸಂಸ್ಕೃತಿ […]

ಆಳ್ವಾಸ್ ಕಾಲೇಜಿನ ವಾರ್ಷಿಕೋತ್ಸವ

Thursday, March 21st, 2019
Alvas college

ವಿದ್ಯಾಗಿರಿ: ಜಗತ್ತಿನಲ್ಲಿ ಬದುಕಲು ಕೇವಲ ಶಿಕ್ಷಣ ಸಾಕಾಗುತ್ತದೆ, ಆದರೆ ಬಾಳಲು ಶಿಕ್ಷಣದ ಜೊತೆಗೆ ಸಂಸ್ಕೃತಿ ಅವಶ್ಯ ಎಂದು ಆಳ್ವಾಸ್ ಕಾಲೇಜಿನ ನುಡಿಸಿರಿ ವೇದಿಕೆಯಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಕುದಿ ವಸಂತ್ ಶೆಟ್ಟಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಬದುಕು ಎನ್ನುವುದು ಅತ್ಯಮೂಲ್ಯ. ಅದರ ಹಾದಿಯಲ್ಲಿ ಸಾಗುವಾಗ ಪ್ರಮಾದಗಳು ಸಹಜ, ಅವುಗಳನ್ನು ತಿದ್ದಿ ನಡೆಯುವುದೇ ಜೀವನ. ಜೀವನದಲ್ಲಿ ಸಾಧನೆ ಅತ್ಯಗತ್ಯ. ಪೋಷಕರ ಹಾಗೂ ಶಿಕ್ಷಕರ ಆಶಿರ್ವಾದವಿಲ್ಲದೇ ಸಾಧನೆ ಮಾಡಲು ಆಸಾಧ್ಯ. ವಿಜ್ಞಾನಕ್ಕೆ ನಿಲುಕದ್ದು, ಪ್ರಜ್ಞಾನಕ್ಕೆ ಲಭಿಸುತ್ತದೆ. […]

ಮಹಿಳೆಯರು ಧ್ವನಿ ಎತ್ತಿದಾಗಲೇ ಮಹಿಳಾ ಸಬಲೀಕರಣ ಆರಂಭ : ಡಾ. ಮೌಲ್ಯಾಜೀವನ

Saturday, March 9th, 2019
woman

ಮೂಡಬಿದ್ರಿ : ಮಹಿಳೆಯರು ತಮಗಾದ ತೊಂದರೆಯ ಬಗ್ಗೆ ಧ್ವನಿ ಎತ್ತಿದಾಗಲೇ ಮಹಿಳಾ ಸಬಲೀಕರಣವು ಆರಂಭವಾಗುತ್ತದೆ. ನಾವು ವಾಸ್ತವದಲ್ಲಿ ಬದುಕುತ್ತಿಲ್ಲ ಆದ್ದರಿಂದ ಬದುಕಿನ ವಾಸ್ತವಿಕತೆಗೆ ಹೊಂದಿಕೊಳ್ಳಲು ಹಿಂಜರಿಯುತ್ತಿದ್ದೇವೆ ಎಂದು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ ಮೌಲ್ಯಾಜೀವನ ಹೇಳಿದರು. ಅವರು ಮಹಿಳಾ ದಿನಾಚರಣೆಯ ಅಂಗವಾಗಿ ಆಳ್ವಾಸ್ ಸ್ನಾತಕೋತ್ತರ ಎಮ್.ಕಾಂಎಚ್.ಆರ್.ಡಿ ವಿಭಾಗದ ವತಿಯಿಂದ “ಮಹಿಳಾ ಸಬಲೀಕರಣ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಪೋಷಕರು ತಮ್ಮ ಮಕ್ಕಳನ್ನು ಗಂಡು ಹೆಣ್ಣು ಭೇದವಿಲ್ಲದೇ ಸಮಾನವಾಗಿ ಬೆಳೆಸುವುದರಿಂದ ಮಹಿಳಾ ಸಬಲೀಕರಣ ಸಾಧ್ಯ. […]

ಆಯುಧಗಳಿಗಿಂತ ಮನುಷ್ಯನ ಹಿಂಸಾತ್ಮಕ ಮನಸ್ಸು ಅಪಾಯಕಾರಿ: ಡಾ. ಕುರಿಯನ್

Wednesday, February 20th, 2019
Alvas Condolence

ಮೂಡುಬಿದಿರೆ: ನಮ್ಮಲ್ಲಿರುವ ಬಾಂಬ್, ಗನ್, ಚಾಕು ಚೂರಿಗಳು ಅಪಾಯಕಾರಿಗಳಲ್ಲ. ಆದರೆ ನಮ್ಮ ಮನಸ್ಸಿನಲ್ಲಿರುವ ಹಿಂಸಾ ಮನೋಭಾವ ಬಹಳಷ್ಟು ಅಪಾಯಕಾರಿ. ಮನುಷ್ಯ ಮನುಷ್ಯನ್ನು ಕೊಲ್ಲಬೇಕು ಎನ್ನುವ ಆಲೋಚನೆಗಳನ್ನು ತರುವ ಸಿದ್ಧಾಂತ ಹಾಗೂ ವ್ಯವಸ್ಥೆಯನ್ನು ನಮ್ಮ ಮನಸ್ಸಿನಿಂದ ತೆಗೆದುಹಾಗಬೇಕಾದ ಅಗತ್ಯವಿದೆ. ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಹೇಳಿದರು. ಪುಲ್ವಾಮಾದಲ್ಲಿ ನಡೆದ ಉಗ್ರನ ದಾಳಿಯಲ್ಲಿ ಪ್ರಾಣತ್ಯಾಗ ಮಾಡಿದ ಯೋಧರ ಸ್ಮರಣಾರ್ಥ ಆಳ್ವಾಸ್ ಕಾಲೇಜಿನಲ್ಲಿ ಜರುಗಿದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಮನುಷ್ಯನ ಮನಸ್ಸು ಹಿಂಸಾತ್ಮಕ ರೂಪತಾಳಿದಾಗ ಅದು ಸಮಾಜದ […]

ಮನುಷ್ಯತ್ತ್ವ ಬೆಳೆಯಲು ಭಾಷೆಗಳು ಪೂರಕ: ಸುನೀಲ್ ಪಂಡಿತ್

Saturday, September 22nd, 2018
Hindi-diwas

ಮೂಡಬಿದ್ರೆ : ಹಿಂದಿ ಭಾಷೆಯು ಜನರನ್ನು ಒಂದುಗೂಡಿಸುತ್ತದೆ ಹೊರತು ಬೇರ್ಪಡಿಸುವುದಿಲ್ಲ. ಯಾವುದೇ ಭಾಷೆಯನ್ನು ಪ್ರೀತಿಯಿಂದ ಕಲಿತು ಅದರಲ್ಲಿ ನಿರರ್ಗಳತೆಯನ್ನು ಹೊಂದುವುದರಿಂದ ಮನುಷ್ಯತ್ತ್ವ ಬೆಳೆಯುತ್ತದೆ ಎಂದು ಎಸ್. ಡಿ. ಎಂ ಕಾಲೇಜಿನ ಹಿಂದಿ ವಿಭಾಗದ ಉಪನ್ಯಾಸಕ ಸುನೀಲ್ ಪಂಡಿತ್ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಹಿಂದಿ ವಿಭಾಗವು ಆಯೋಜಿಸಿದ್ದ ಹಿಂದಿ ದಿವಸ್‌ನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಮನುಷ್ಯತ್ತ್ವ ಕಡಿಮೆಯಾಗಿ ಸ್ವಾರ್ಥಿಗಳಾಗುತ್ತಿದ್ದಾರೆ, ಆದ್ದರಿಂದ ಮನುಷ್ಯತ್ತ್ವ ಬೆಳೆಯಲು ಭಾಷೆಗಳು ಪೂರಕವಾಗಿವೆ. ವ್ಯಕ್ತಿಯ ಬರವಣಿಗೆಯ ಮೂಲಕ ವ್ಯಕ್ತಿತ್ತ್ವವನ್ನು ತಿಳಿದುಕೊಳ್ಳಬಹುದು. […]

ಬರವಣಿಗೆ ಒಳಗಿನ ನೋವಿನ ಬಿಡುಗಡೆಯ ಹಾದಿ: ಡಾ. ಸುಲತಾ ವಿದ್ಯಾಧರ್

Monday, August 6th, 2018
Sulatha

ಮೂಡಬಿದಿರೆ: “ಬರವಣಿಗೆ ನಮ್ಮೊಳಗಿನ ನೋವಿನ ಬಿಡುಗಡೆಯ ಹಾದಿ ಹಾಗೂ ನಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲು ಇರುವ ಆಯುಧ. ಹಾಗಾಗಿ ಹೆಣ್ಣುಮಕ್ಕಳು ಇದನ್ನು ರೂಢಿಸಿಕೊಂಡು, ಹೆಚ್ಚೆಚ್ಚು ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವಂತಾಗಬೇಕು” ಎಂದು ಲೇಖಕಿ ಡಾ. ಸುಲತಾ ವಿದ್ಯಾಧರ್ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಕನ್ನಡ ಸಂಸ್ಕೃತಿ ಅಧ್ಯಯನ ಕೇಂದ್ರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಕನ್ನಡ ಲೇಖಕಿಯರು’ ಎಂಬ ವಿಷಯದ ಕುರಿತು ಅವರು ಮಾತನಾಡಿದರು. “12ನೇ ಶತಮಾನ ವಚನ ಸಾಹಿತ್ಯ ಲೇಖಕಿ ಪರಂಪರೆಯನ್ನು ಹುಟ್ಟುಹಾಕುವಲ್ಲಿ ಕಾರಣವಾಯಿತು. ಆ ಕಾಲಘಟ್ಟದಿಂದ ಹೆಣ್ಣುಮಕ್ಕಳು ಒಬ್ಬೊಬ್ಬರಾಗಿ […]

ಆಳ್ವಾಸ್ ಕಾಲೇಜು ಸತತ 11ನೇ ಬಾರಿ ಪ್ರಶಸ್ತಿ

Wednesday, March 14th, 2018
alwas-college

ಮೂಡುಬಿದ್ರೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಮಂಗಳೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಅಂತರ್ ಕಾಲೇಜು ಮಹಿಳೆಯರ ಕಬ್ಬಡ್ಡಿ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜು ಮೂಡುಬಿದಿರೆ ತಂಡವು ಎಸ್.ಡಿ.ಎಮ್ ಕಾಲೇಜು ಉಜಿರೆ ತಂಡವನ್ನು ಮಣಿಸುವುದರೊಂದಿಗೆ ಸತತ 11ನೇ ಬಾರಿಗೆ ಫಿಲೋಮಿನಾ ಪತ್ರವೊ ಮೆಮೊರಿಯಲ್’ ಪರ್ಯಾಯ ಫಲಕವನ್ನು ತನ್ನದಾಗಿಸಿಕೊಂಡಿತು. ಸೆಮಿಫೈನಲ್‍ನಲ್ಲಿ ಆಳ್ವಾಸ್ ತಂಡವು ಮಂಗಳೂರು ರಥಬೀದಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡವನ್ನು ಮತ್ತು ಎಸ್‍ಡಿಎಮ್ ಕಾಲೇಜು ತಂಡವು ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ಮೂಡುಬಿದಿರೆ ತಂಡವನ್ನು […]

ಮಂಗಳೂರು ವಿ.ವಿ ಪದವಿ ಫಲಿತಾಂಶ ಆಳ್ವಾಸ್ ಕಾಲೇಜಿಗೆ 21 ರ್ಯಾಂಕ್

Saturday, January 21st, 2017
Alwas rank

ಮೂಡುಬಿದಿರೆ: 2016 ಮೇ ತಿಂಗಳಲ್ಲಿ ನಡೆದ ಮಂಗಳೂರು ವಿ.ವಿ ಪದವಿ ಪರೀಕ್ಷೆಯ ರ್ಯಾಂಕ್ ಪ್ರಕಟಗೊಂಡಿದ್ದು, ಮೂಡುಬಿದಿರೆಯ ಆಳ್ವಾಸ್ ಪದವಿ ಕಾಲೇಜಿನ 21 ವಿದ್ಯಾರ್ಥಿಗಳು ರ್ಯಾಂಕ್ ಪಡೆಯುವುದರ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ. ಆಳ್ವಾಸ್ ಕಾಲೇಜು ಕಳೆದ ಮೂರು ವರ್ಷಗಳಲ್ಲಿ ಸರಾಸರಿ ಮೂವತ್ತಕ್ಕೂ ಹೆಚ್ಚು ರ್ಯಾಂಕ್‍ಗಳನ್ನು ಪಡೆಯುವುದರೊಂದಿಗೆ ದಾಖಲೆ ಮೆರೆದಿದೆ. ವಿವಿಧ ವಿಭಾಗಗಳಲ್ಲಿ ಒಟ್ಟು ಆರು ಪ್ರಥಮ ರ್ಯಾಂಕ್‍ಗಳು ಆಳ್ವಾಸ್ ಪಾಲಾಗಿದೆ. ಮೂವರು ದ್ವಿತೀಯ ರ್ಯಾಂಕ್, ಐವರು ತೃತೀಯ ರ್ಯಾಂಕ್, ಇಬ್ಬರು 5ನೇ ರ್ಯಾಂಕ್, ಇಬ್ಬರು ಆರನೇ ರ್ಯಾಂಕ್, […]