ಜಸ್ಟೀಸ್ ಫಾರ್ ಕಾವ್ಯ ಹೋರಾಟ ಸಮಿತಿಯ ವತಿಯಿಂದ ಆಗಸ್ಟ್ 9ರಂದು ಧರಣಿ

Thursday, August 3rd, 2017
Justice for Kavya Forum

ಮಂಗಳೂರು : ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾ ಪೂಜಾರಿಯ ನಿಗೂಢ ಸಾವಿನ ಹಿನ್ನಲೆಯಲ್ಲಿ ಹುಟ್ಟಿಕೊಂಡಿರುವ ಜಸ್ಟೀಸ್ ಫಾರ್ ಕಾವ್ಯ ಹೋರಾಟ ಸಮಿತಿಯು ಆ.9ರಂದು ಮಂಗಳೂರಿನಲ್ಲಿ ಧರಣಿ ನಡೆಸಲು ನಿರ್ಧರಿಸಿದೆ. ಗುರುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಮಿತಿಯ ಮುಖಂಡ, ನ್ಯಾಯವಾದಿ ದಿನಕರ ಶೆಟ್ಟಿ, ವಿದ್ಯಾರ್ಥಿ ಸಂಘಟನೆಗಳು, ಸಂಘ ಸಂಸ್ಥೆಗಳ ಜೊತೆಗೂಡಿ ಆ.9ರಂದು ಹೋರಾಟ ತೀವ್ರಗೊಳಿಸಲಾಗುವುದು. ಅಂದು ಬೆಳಗ್ಗೆ 10ಕ್ಕೆ ನಗರದ ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ ಮತ್ತು ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂದೆ […]

ವೈಯಕ್ತಿಕವಾಗಿ ಹಾಗೂ ಸಂಸ್ಥೆಯ ತೇಜೋವಧೆ ಮಾಡುತ್ತಿರುವುದು ಸರ್ವತಾ ಅನಪೇಕ್ಷಣಿಯ : ಕಾರ್ಣಿಕ್

Wednesday, August 2nd, 2017
Ganesh Karnik

ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ದಿನಾಂಕ ಜುಲೈ 20 ರಂದು ನಡೆದ ಅತ್ಯಂತ ದುರಾದೃಷ್ಟಕರ ಘಟನೆಯ ಕುರಿತಾಗಿ ದಕ್ಷಿಣ ಕನ್ನಡ ಜಿಲ್ಲಾ ಭಾರತೀಯ ಜನತಾ ಪಾರ್ಟಿ ತೀವ್ರ ವಿಷಾದವನ್ನು ವ್ಯಕ್ತಪಡಿಸುತ್ತಿದೆ ಎಂದು ವಿರೋಧ ಪಕ್ಷದ ಮುಖ್ಯ ಸಚೇತಕರು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ. ಮಂಗಳೂರಿನಲ್ಲಿ ಪತ್ರಿಕಾಘೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಿ ಕಾವ್ಯ ಅತ್ಯಂತ ಪ್ರತಿಭಾನ್ವಿತ ಕ್ರೀಡಾ ಪಟುವಾಗಿ ರೂಪುಗೊಳ್ಳುತ್ತಿರುವ ಎಳೆ ವಯಸ್ಸಿನಲ್ಲಿ ನಮ್ಮೆಲ್ಲರನ್ನು ಅಗಲಿರುವುದು ಅತ್ಯಂತ ಖೇದಕರ. ಆಕೆಯ ಅಗಲುವಿಕೆಗೆ ಸಂತಾಪವನ್ನು ವ್ಯಕ್ತಪಡಿಸುತ್ತಾ ನೊಂದು ಬೆಂದಿರುವ ಹೆತ್ತವರಿಗೆ ಸಾಂತ್ವನ ಹೇಳುವುದರೊಂದಿಗೆ ಅಗಲುವಿಕೆಯ […]

ಕಾವ್ಯಳ ಅನುಮಾನಾಷ್ಪದ ಸಾವಿನ ನಿಷ್ಪಕ್ಷಪಾತ ತನಿಖೆಗೆ ಅ.ಭಾ.ವಿ.ಪ ಒತ್ತಾಯ

Saturday, July 29th, 2017
abvp

ಮಂಗಳೂರು : ಪ್ರತಿಭಾವಂತ ಕ್ರೀಡಾಪಟು, ಆಳ್ವಾಸ್ ಶಿಕ್ಷಣ ಸಂಸ್ಥೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಕಾವ್ಯಾ ಸಾವು ಹಲವು ಅನುಮಾನಗಳನ್ನು ಹುಟ್ಟಿಸಿದ್ದು. ಈ ಘಟನೆಯ ಹಿಂದಿರುವ ನಿಗೂಢತೆಯನ್ನು ಬಯಲಿಗೆಳೆದು ನಿಷ್ಪಕ್ಷಪಾತ ತನಿಖೆ ನಡೆಸಲು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ದ.ಕ. ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿತು. ಜುಲೈ 20 ಗುರುವಾರ ಬೆಳಗ್ಗೆ ಬ್ಯಾಡ್ಮಿಂಟನ್ ಪ್ರಾಕ್ಟಿಸ್ ಗೆ ಹೋಗುವಾಗಲು, ಶಾಲೆಗೆ ಹಾಜರಾದಗಲೂ ಲವಲವಿಕೆಯಿಂದ ಇದ್ದ ಕಾವ್ಯಾ, ತರಗತಿಯಿಂದ ಹಿಂತಿರುಗುವಾಗ ತೀವ್ರ ಖಿನ್ನತೆಗೆ ಒಳಗಾಗಿದ್ದು, ಅನುಮಾನಗಳನ್ನು ತಂದಿದೆ. ಆಕೆ ತರಗತಿಯಲ್ಲಿ ಶಿಕ್ಷಕರಿಂದ […]

ಆತ್ಮಹತ್ಯೆ ಮಾಡಿಕೊಂಡ ಕಾವ್ಯಾಳ ಪ್ರಕರಣ ತನಿಖೆಗೆ ಪೊಲೀಸ್ ಆಯುಕ್ತರಿಂದ ಆದೇಶ

Friday, July 28th, 2017
Kavyasree

ಮಂಗಳೂರು : ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಹಾಸ್ಟೆಲ್ ನಲ್ಲಿ ಆತ್ಮ ಹತ್ಯೆ ಮಾಡಿಕೊಂಡ  ವಿದ್ಯಾರ್ಥಿನಿ ಕಾವ್ಯಾ ಪ್ರಕರಣದ ಬಗ್ಗೆ ವಿಶೇಷ ತನಿಖೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಆದೇಶಿಸಿದ್ದಾರೆ. ಜುಲಾಯಿ 20 ರಂದು ಬೆಳಗ್ಗೆ 6.03 ನಿಮಿಷಕ್ಕೆ ಹಾಸ್ಟೆಲ್ ನಿಂದ ಬ್ಯಾಡ್ಮಿಂಟನ್ ಪ್ರಾಕ್ಟಿಸ್ ಗೆ ಬಂದಿದ್ದ ಕಾವ್ಯ ಆ ದಿನ ಶಾಲೆಗೂ ಹಾಜರಾದ ಸಿಸಿ ಟಿವಿ ಪೂಟೇಜ್ ಗಳು ಪೊಲೀಸರು ಪರೀಕ್ಷಿಸಿದ್ದು. ಸಂಜೆ ಆಕೆ ಸೀರೆಯಿಂದ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿದ್ದಳು. ಆದರೆ ಆಕೆಯ ಶವವನ್ನು […]

ನ.18ರಿಂದ 20ರವರೆಗೆ ಆಳ್ವಾಸ್ ನುಡಿಸಿರಿ

Thursday, September 1st, 2016
Alwas-nudisiri

ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಕನ್ನಡ ನಾಡು-ನುಡಿ-ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನವು ಈ ಬಾರಿ ನ.18, 19 ಮತ್ತು 20ರಂದು ಮೂರು ದಿನಗಳ ಕಾಲ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿರುವ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆಯಲಿದೆ. “ಕರ್ನಾಟಕ-ನಾಳೆಗಳ ನಿರ್ಮಾಣ” ಎಂಬ ಪರಿಕಲ್ಪನೆಯೊಂದಿಗೆ ನಡೆಯುವ 13ನೇ ವರ್ಷದ ಈ ನುಡಿಸಿರಿಯಲ್ಲಿ ಅತ್ಯುತ್ತಮ ವಿಚಾರಗೋಷ್ಠಿಗಳು, ಕವಿ ಸಮಯ-ಕವಿ ನಮನ ಸೇರಿದಂತೆ ಈ ಬಾರಿ “ನನ್ನ ಕಥೆ-ನಿಮ್ಮ ಜೊತೆ” ಎಂಬ ಹೊಸ ಶೀರ್ಷಿಕೆಯೊಂದಿಗೆ ಕಲಾವಿದರ ಜೀವನ ಚರಿತ್ರೆ ಪರಿಚಯವಾಗಲಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ […]