ಇಸ್ರೋದ ನೂತನ ಸ್ವದೇಶಿ ನಿರ್ಮಿತ ಉಪಗ್ರಹ ಜಿಸ್ಯಾಟ್ -30 ಯಶಸ್ವಿ ಉಡಾವಣೆ

Friday, January 17th, 2020
ISRO

ನವದೆಹಲಿ : ಭಾರತದ ಹೆಮ್ಮೆಯ ಸಂಸ್ಥೆ ಇಸ್ರೋದ ನೂತನ ಸ್ವದೇಶಿ ನಿರ್ಮಿತ ಉಪಗ್ರಹ ಜಿಸ್ಯಾಟ್ -30ಯನ್ನು ಫ್ರೆಂಚ್ ಗಯಾನದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. ಫ್ರೆಂಚ್ ಗಯಾನದ ಕರೌ ಉಡಾವಣಾ ನೆಲೆಯಿಂದ ‘ಎರಿಯಾನ್-5 ವಿಎ-251’ ರಾಕೆಟ್ ಮೂಲಕ ಶುಕ್ರವಾರ ಮುಂಜಾನೆ ಉಡಾವಣೆ ಮಾಡಲಾಗಿದೆ. ದೂರದರ್ಶನ ಪ್ರಸಾರ, ಟಿಲಿಕಮ್ಯುನಿಕೇಶನ್ಸ್, ಡಿಟಿಎಚ್ ಮತ್ತು ಇತರ ಪ್ರಸಾರ ಕ್ಷೇತ್ರಗಳ ಗುಣಮಟ್ಟ ಹೆಚ್ಚಿಸಲು ಈ ಉಪಗ್ರಹ ನೆರವಾಗಲಿದೆ. ಶುಕ್ರವಾರ ನಸುಕಿನ 2.35ರ ಸಮಯದಲ್ಲಿ ಯಶಸ್ವಿ ಉಡಾವಣೆ ಮಾಡಲಾಗಿದ್ದು, ಇಸ್ರೋದ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ. ಏರಿಯಾನ್ ಸ್ಪೇಸ್ […]

ಹೈದರಬಾದ್ ನಲ್ಲಿ ಇಸ್ರೋ ವಿಜ್ಞಾನಿ ಎಸ್.ಸುರೇಶ್ ಕೊಲೆ

Wednesday, October 2nd, 2019
suresh-s

ಹೈದರಬಾದ್ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯ ರಾಷ್ಟ್ರೀಯ ರಿಮೋಟ್ ಸೆನ್ಸಿಂಗ್ ಸೆಂಟರ್ (ಎನ್‌ಆರ್‌ಎಸ್‌ಸಿ) ವಿಜ್ಞಾನಿ ಮಂಗಳವಾರ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಸ್ರೋ ವಿಜ್ಞಾನಿ 56 ವರ್ಷದ ಎಸ್.ಸುರೇಶ್ ಅವರನ್ನು ಹೈದರಬಾದ್ ನಗರದ ಹೃದಯಭಾಗದಲ್ಲಿರುವ ಅಮೀರ್‌ಪೇಟೆ ಪ್ರದೇಶದ ಅನ್ನಪೂರ್ಣ ಅಪಾರ್ಟ್‌ಮೆಂಟ್‌ನಲ್ಲಿರುವ ಅವರು ವಾಸವಾಗಿದ್ದ ಫ್ಲ್ಯಾಟ್‌ನಲ್ಲಿ ಅಪರಿಚಿತ ವ್ಯಕ್ತಿಗಳು ಹತ್ಯೆ ಮಾಡಲಾಗಿದೆ. ಸುರೇಶ್ ಅವರು ಕೇರಳ ಮೂಲದವರಾಗಿದ್ದು, ಫ್ಲ್ಯಾಟ್ ನಲ್ಲಿ ಒಬ್ಬರೇ ವಾಸವಾಗಿದ್ದರು. ಅವರ ಪತ್ನಿ ಚೆನ್ನೈ ನಲ್ಲಿ […]

ಚಂದ್ರಯಾನ-2ಕ್ಕೆ ಆತಂಕ : ಪ್ರಧಾನಿ ಮೋದಿಯನ್ನು ತಬ್ಬಿ ಕಣ್ಣೀರಿಟ್ಟ ಇಸ್ರೋ ಮುಖ್ಯಸ್ಥ ಕೆ.ಶಿವನ್

Saturday, September 7th, 2019
shivan

ಬೆಂಗಳೂರು : ತನ್ನ ಗುರಿ ತಲುಪುವ ಕೆಲವೇ ಕಿಲೋ ಮೀಟರ್ ಅಂತರದಲ್ಲಿ ಚಂದ್ರಯಾನ- 2 ನೌಕೆ ಸಂವಹನ ಕಳೆದುಕೊಳ್ಳುತ್ತಿದ್ದಂತೆಯೇ ಬೆಂಗಳೂರಿನ ಇಸ್ರೋದ ಕಂಟ್ರೋಲ್ ಸೆಂಟರ್ ನಲ್ಲಿ ದುಗುಡ ಮನೆ ಮಾಡಿತ್ತು. ಈ ಹೆಮ್ಮೆಯ ಕ್ಷಣಕ್ಕಾಗಿ ಉಸಿರುಬಿಗುಹಿಡಿದು ಕಾದಿದ್ದ ಭಾರತೀಯರ ಮನಸ್ಸಿನಲ್ಲೂ ಬೇಸರ ಮನೆ ಮಾಡಿತ್ತು. ಆದರೆ ಎಲ್ಲಕ್ಕಿಂತ ಭಾವುಕ ಅನಿಸಿದ ಕ್ಷಣವೆಂದರೆ ತಮ್ಮ ಕನಸಿನ ಕೂಸು ಚಂದ್ರಯಾನ 2 ಕೊನೆಯ ಕ್ಷಣದಲ್ಲಿ ಕಂಡ ಅನಿರೀಕ್ಷಿತ ತಿರುವನ್ನು ನೆನೆದು ಇಸ್ರೋ ಅಧ್ಯಕ್ಷ ಕೆ. ಶಿವನ್ ಕಣ್ಣೀರಿಟ್ಟಿದ್ದಾರೆ. ಇಸ್ರೋ ಕಂಟ್ರೋಲ್ […]

ಭಾರತದ ಮಂಗಳಯಾನ ಯಶಸ್ವಿ

Wednesday, November 6th, 2013
ISRo

ಶ್ರೀಹರಿಕೋಟ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ ಮಂಗಳಯಾನ ಆರಂಭಗೊಂಡಿದೆ. ಮಂಗಳನ ಅಂಗಳದಲ್ಲಿ ಜೀವ ಕಣ ಪತ್ತೆಗೆ ಇಸ್ರೋ ದೇಶಿ ನಿರ್ಮಿತ ಮಾರ್ಸ್ ಆರ್ಬಿಟರ್ ನೌಕೆ(ಪಿಎಸ್ ಎಲ್ ವಿ ಸಿ25)ಯಲ್ಲಿ ಮಂಗಳನೆಡೆಗೆ ಉಪಗ್ರಹ ಹಾರಿಸಲಾಗಿದೆ. ಸುಮಾರು 40 ನಿಮಿಷಗಳ ಕಾಲದ ಉಸಿರುಬಿಗಿ ಹಿಡಿದ ವಾತಾವರಣದ ನಂತರ 44.4 ಮೀ ಎತ್ತರದ ರಾಕೆಟ್ ನಿಂದ ನೌಕೆ ಪ್ರತ್ಯೇಕಗೊಂಡು ಪಥ ಕಂಡುಕೊಂಡಿದೆ. ಈ ಮೂಲಕ ಮಂಗಳಯಾತ್ರೆ ಕೈಗೊಂಡ ವಿಶ್ವದ 6ನೇ ರಾಷ್ಟ್ರ ಹಾಗೂ ಏಷ್ಯಾದ ಪ್ರಥಮ ದೇಶವಾಗಿ […]